Asianet Suvarna News Asianet Suvarna News

Griha Pravesh Muhurat 2023: ಹೊಸ ವರ್ಷದಲ್ಲಿ ಹೊಸ ಮನೆ ಪ್ರವೇಶಕ್ಕೆ ಮುಹೂರ್ತ ಯಾವಾಗಿದೆ?

ಹೊಸ ವರ್ಷದಲ್ಲಿ ಗೃಹಪ್ರವೇಶ ಮಾಡಲು ಯೋಜಿಸಿರುವವರಿಗೆ ಮುಹೂರ್ತಗಳು ಯಾವಾಗೆಲ್ಲ ಇವೆ ಎಂಬ ಪಟ್ಟಿ ಇಲ್ಲಿದೆ. ಈ ಮೂಲಕ ನೀವು ಮನೆಯನ್ನು ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಜೋಡಿಸಿಕೊಂಡು ಗೃಹಪ್ರವೇಶಕ್ಕೆ ಸಜ್ಜಾಗಬಹುದು. 

Monthwise Griha Pravesh Muhurat 2023 skr
Author
First Published Dec 12, 2022, 10:51 AM IST

ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಸುಂದರವಾದ ಮನೆಯನ್ನು ಖರೀದಿಸಲು ಬಯಸುತ್ತಾರೆ. ಅದು ಸಣ್ಣದೋ, ದೊಡ್ಡದೋ ಎಂಬುದಕ್ಕಿಂತ ಸ್ವಂತ ಗೂಡು ಎಂಬ ಸಮಾಧಾನವೇ ದೊಡ್ಡದು. ತಮ್ಮೆಲ್ಲ ಅಗತ್ಯಗಳು, ಹಣಕಾಸಿನ ಶಕ್ತ್ಯಾನುಸಾರ ಯೋಜಿಸಿ ಬಹಳ ಕನಸು ಕಟ್ಟಿಕೊಂಡು ಮನೆ ನಿರ್ಮಿಸುತ್ತಾರೆ. ಇಷ್ಟೆಲ್ಲ ಒಪ್ಪ ಓರಣವಾಗಿ ನಿರ್ಮಿಸಿದ ಮನೆ ಎಂದ ಮೇಲೆ ಅದಕ್ಕೆ ಅತ್ಯಂತ ಶುಭ ಮುಹೂರ್ತದಲ್ಲೇ ಪ್ರವೇಶ ಮಾಡಬೇಕು. ಏಕೆಂದರೆ, ಜೀವನಪೂರ್ತಿ ಇರುವ ಮನೆ ಸದಾ ಒಳ್ಳೆಯದನ್ನು ಮಾಡಲೆಂದು ಬಯಸಿ ಶುಭ ಮುಹೂರ್ತದಲ್ಲಿ ಗೃಹಪ್ರವೇಶ ಮಾಡುವುದು ಶ್ರೇಯಸ್ಕರ.  ಶಾಸ್ತ್ರಗಳ ಪ್ರಕಾರ ಯಾವುದೇ ಶುಭ ಕಾರ್ಯವನ್ನು ಮಾಡುವ ಮೊದಲು ಸರಿಯಾದ ಪೂಜೆಯನ್ನು ಮಾಡಬೇಕು. ಪೂಜಿಸುವುದರಿಂದ ದೇವಾನುದೇವತೆಗಳ ಆಶೀರ್ವಾದ ದೊರೆಯುತ್ತದೆ, ಇದರಿಂದ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ. ನೀವು ಕೂಡ 2023ರ ಹೊಸ ವರ್ಷದಲ್ಲಿ ಗೃಹಪ್ರವೇಶ ಮಾಡುವ ಯೋಜನೆ ಹೊಂದಿದ್ದರೆ ಅದಕ್ಕಾಗಿ ಯಾವೆಲ್ಲ ಶು ಮುಹೂರ್ತಗಳು ಲಭ್ಯವಿವೆ ಎಂಬ ಪಟ್ಟಿ ಇಲ್ಲಿದೆ. ಇದನ್ನು ನೋಡಿಕೊಂಡು ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಮನೆಯ ಪ್ರವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದು. 

2023ರಲ್ಲಿ ಮನೆ ಗೃಹಪ್ರವೇಶಕ್ಕೆ ಮುಹೂರ್ತ

  • ಜನವರಿ 25, 2023, ಬುಧವಾರ - 8:05 pmರಿಂದ ಜನವರಿ 26, 7:12 am
  • 27 ಜನವರಿ 2023, ಶುಕ್ರವಾರ ಬೆಳಿಗ್ಗೆ 9.10ರಿಂದ ಸಂಜೆ 6.37 ರವರೆಗೆ
  • ಜನವರಿ 30, 2023, ಸೋಮವಾರ ರಾತ್ರಿ 10.15 ನಿಮಿಷದಿಂದ ಜನವರಿ 31 ಬೆಳಿಗ್ಗೆ 7.10 ನಿಮಿಷಗಳು.

ಫೆಬ್ರವರಿ 2023 ರಲ್ಲಿ ಗೃಹ ಪ್ರವೇಶ ಮುಹೂರ್ತ

  • 1 ಫೆಬ್ರವರಿ 2023, ಬುಧವಾರ ಬೆಳಿಗ್ಗೆ 7.10 ರಿಂದ ಮಧ್ಯಾಹ್ನ 2.01 ರವರೆಗೆ
  • 8 ಫೆಬ್ರವರಿ 2023, ಬುಧವಾರ ರಾತ್ರಿ 8.15 ರಿಂದ 9 ಫೆಬ್ರವರಿ ಬೆಳಿಗ್ಗೆ 6.23 ರವರೆಗೆ
  • ಫೆಬ್ರವರಿ 10, 2023, ಶುಕ್ರವಾರ ಬೆಳಿಗ್ಗೆ 00:18 ರಿಂದ ಫೆಬ್ರವರಿ 11 ಬೆಳಿಗ್ಗೆ 7:30 ರವರೆಗೆ
  • 22 ಫೆಬ್ರವರಿ 2023, ಬುಧವಾರ 6:54 ರಿಂದ 23 ಫೆಬ್ರವರಿ 3:24 ರವರೆಗೆ

    Yearly Horoscope 2023: ಧನು ರಾಶಿಗೆ ವರ ತರುವ ವರುಷ 2023

ಮಾರ್ಚ್ 2023ರಲ್ಲಿ ಗೃಹ ಪ್ರವೇಶ ಮುಹೂರ್ತ

  • ಮಾರ್ಚ್ 8, 2023, ಬುಧವಾರ ಬೆಳಗ್ಗೆ 6:39 ರಿಂದ ಮಾರ್ಚ್ 9ರ ಬೆಳಗ್ಗೆ 4:20ರವರೆಗೆ
  • ಮಾರ್ಚ್ 10, 2023, ಶುಕ್ರವಾರ ಬೆಳಿಗ್ಗೆ 6.37ರಿಂದ ರಾತ್ರಿ 9.42ರವರೆಗೆ
  • ಮಾರ್ಚ್ 13, 2023, ಸೋಮವಾರ ರಾತ್ರಿ 9:27ರಿಂದ ಮಾರ್ಚ್ 14, ಬೆಳಗ್ಗೆ 6:33ರವರೆ
  • ಮಾರ್ಚ್ 17, 2023, ಶುಕ್ರವಾರ 6:29ರಿಂದ ಮಾರ್ಚ್ 18, 2:46ರವರೆಗೆ

ಮೇ 2023ರಲ್ಲಿ ಗೃಹ ಪ್ರವೇಶ ಮುಹೂರ್ತ

  • ಮೇ 6, 2023, ಶನಿವಾರ ರಾತ್ರಿ 9.13ರಿಂದ ಮೇ 7ರ ಬೆಳಿಗ್ಗೆ 5.36 ರವರೆಗೆ
  • ಮೇ 15, 2023, ಸೋಮವಾರ ಬೆಳಗ್ಗೆ 9:08ರಿಂದ ಮೇ 16 ರಾತ್ರಿ 1:30ರವರೆಗೆ
  • ಮೇ 20, 2023, ಶನಿವಾರ ರಾತ್ರಿ 9:30ರಿಂದ ಮೇ 21ರ ಬೆಳಿಗ್ಗೆ 5:27ರವರೆಗೆ
  • 22 ಮೇ 2023, ಸೋಮವಾರ ಬೆಳಗ್ಗೆ 5.27ರಿಂದ 10.37ರವರೆಗೆ
  • 29 ಮೇ 2023, ಸೋಮವಾರ 11:49AM ರಿಂದ 30 ಮೇ 4:29 AMವರೆಗೆ
  • 31 ಮೇ 2023, ಬುಧವಾರ ಬೆಳಿಗ್ಗೆ 6ರಿಂದ ಮಧ್ಯಾಹ್ನ 1.45ರವರೆಗೆ

    Dream Interpretation: ಕನಸಲ್ಲಿ ಹಲ್ಲಿ ಕಂಡರೆ ಬರಲಿರುವ ಕೆಟ್ಟದ್ದರ ಮುನ್ಸೂಚನೆ!

ಜೂನ್ 2023 ರಲ್ಲಿ ಗೃಹ ಪ್ರವೇಶ ಮುಹೂರ್ತ

  • ಜೂನ್ 12, 2023, ಸೋಮವಾರ 10:34ರಿಂದ ಜೂನ್ 13, 5:23ರವರೆಗೆ

ನವೆಂಬರ್ 2023ರಲ್ಲಿ ಗೃಹ ಪ್ರವೇಶ ಮುಹೂರ್ತ

ಡಿಸೆಂಬರ್ 2023 ರಲ್ಲಿ ಗೃಹ ಪ್ರವೇಶ ಮುಹೂರ್ತ

  • 8 ಡಿಸೆಂಬರ್ 2023 ಶುಕ್ರವಾರ ಬೆಳಿಗ್ಗೆ 8:54 ರಿಂದ 9 ಡಿಸೆಂಬರ್ 6:31 ರವರೆಗೆ
  • ಶುಕ್ರವಾರ 15 ಡಿಸೆಂಬರ್ 2023 ಬೆಳಿಗ್ಗೆ 8:10 ರಿಂದ ರಾತ್ರಿ 10:30 ರವರೆಗೆ
  • 21 ಡಿಸೆಂಬರ್ 2023 ಗುರುವಾರ ಬೆಳಗ್ಗೆ 9:37 ರಿಂದ ರಾತ್ರಿ 9:09 ರವರೆಗೆ
Follow Us:
Download App:
  • android
  • ios