Asianet Suvarna News Asianet Suvarna News

ಸಂಬಂಧದಲ್ಲಿ ಮೇಷ ರಾಶಿಯ ಮಹಿಳೆಯರು ಮಾಡುವ 8 ಸಾಮಾನ್ಯ ತಪ್ಪುಗಳು

ಯಾರೂ ದೋಷರಹಿತರಲ್ಲ, ವಿಶೇಷವಾಗಿ ಪ್ರೀತಿಯ ವಿಷಯಕ್ಕೆ ಬಂದಾಗ ಎಲ್ಲರೂ ಒಂದಿಲ್ಲೊಂದು ತಪ್ಪು ಮಾಡುತ್ತಾರೆ. ಮೇಷ ರಾಶಿಯ ಮಹಿಳೆಯರು ಸಾಮಾನ್ಯವಾಗಿ ಸಂಬಂಧದಲ್ಲಿ ಮಾಡುವ ತಪ್ಪುಗಳಿವು.

Mistakes Aries women tend to make in relationships skr
Author
First Published Apr 15, 2023, 4:28 PM IST | Last Updated Apr 15, 2023, 4:28 PM IST

ಸಂಬಂಧಗಳ ವಿಷಯಕ್ಕೆ ಬಂದಾಗ ತಪ್ಪು ಮಾಡದವರಿಲ್ಲ. ಹಲವರು ತಪ್ಪು ಮಾಡುತ್ತಲೇ ಅದರಿಂದ ಪಾಠ ಕಲಿತುಕೊಳ್ಳುತ್ತಾರೆ. ಮತ್ತೆ ಕೆಲವರು ತಪ್ಪನ್ನು ಪುನರಾವರ್ತಿಸುತ್ತಾ ಸಂಬಂಧವನ್ನೇ ಕಳೆದುಕೊಳ್ಳುತ್ತಾರೆ. ಮೇಷ ರಾಶಿಯವರ ವಿಷಯಕ್ಕೆ ಬಂದರೆ ಅವರು ಸಂಬಂಧದಲ್ಲಿ ಮಾಡಬಹುದಾದ ತಪ್ಪುಗಳ ಪಟ್ಟಿ ಇಲ್ಲಿದೆ. ಅದರಲ್ಲೂ ವಿಶೇಷವಾಗಿ ಮೇಷ ರಾಶಿಯ ಮಹಿಳೆಯರು ಸಂಬಂಧದಲ್ಲಿ ಮಾಡುವ ತಪ್ಪುಗಳು ಏನೆಂದು ನೋಡೋಣ| 

1. ಟೇಕನ್ ಫಾರ್ ಗ್ರಾಂಟೆಡ್
ಮೇಷ ರಾಶಿಯ ಮಹಿಳೆ ಹಠಾತ್ ಪ್ರವೃತ್ತಿಯವಳು ಮತ್ತು ಸಂಬಂಧಗಳಲ್ಲಿ ಮುನ್ನಡೆ ಸಾಧಿಸಲು ಇಷ್ಟಪಡುತ್ತಾಳೆ. ಆದರೆ ಆಗಾಗ್ಗೆ ಆಕೆ ತನ್ನ ಪಾಲುದಾರರ ಆದ್ಯತೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ಮತ್ತು ಸಂಭಾಷಣೆಯ ವಿಷಯಕ್ಕೆ ಅವರ ಕೊಡುಗೆಗಳನ್ನು ಒಪ್ಪಿಕೊಳ್ಳಲು ಮರೆತುಬಿಡುತ್ತಾಳೆ. ತನ್ನ ತೀರ್ಮಾನವೇ ಅಂತಿಮ ಎಂಬ ನಿಲುವು ಹೆಚ್ಚಿನ ಬಾರಿ ಆಕೆಯದ್ದಾಗಿರುತ್ತದೆ. 

2. ಸಿಲ್ಲಿ ಫೈಟ್ಸ್‌
ಪ್ರತಿಯೊಬ್ಬರೂ ತಾವು ಪ್ರೀತಿಸುವವರೊಂದಿಗೆ ಆಗಾಗ್ಗೆ ಜಗಳವಾಡಿ ನೋವನುಭವಿಸುತ್ತಾರೆ. ಎಲ್ಲಾ ದಂಪತಿಗಳು ವಾದಿಸುತ್ತಾರೆ. ಆದರೆ ಮೇಷ ರಾಶಿಯ ಮಹಿಳೆಯರು ಮಾತ್ರ ಸಂಗಾತಿಯೊಂದಿಗೆ ವಿವಾದ ಉಂಟಾದರೆ ಬಂಡಾಯಗಾರರಾಗುವ ಮೂಲಕ ಕೋಪವನ್ನು ಜಾಸ್ತಿ ಎಳೆಯುತ್ತಾರೆ. ಅವರ ಪಾಲುದಾರರ ಭಾವನೆಗಳಿಗೆ  ಸಾಕಷ್ಟು ಹಾನಿ ಉಂಟು ಮಾಡುತ್ತಾರೆ.

3. ಪಾಲುದಾರರ ವಿರುದ್ಧ ಸ್ಪರ್ಧಿಸುವುದು
ಸಂಬಂಧದಲ್ಲಿ ಸ್ಪರ್ಧೆ ಇರಕೂಡದು. ಒಬ್ಬರ ಏಳ್ಗೆಯನ್ನು ಮತ್ತೊಬ್ಬರು ಬಯಸಬೇಕು. ಆದರೆ, ಮೇಷ ರಾಶಿಯ ಮಹಿಳೆಯ ಸ್ಪರ್ಧಾತ್ಮಕ ಮನೋಭಾವಕ್ಕೆ ಇದು ಅರ್ಥವಾಗುವುದಿಲ್ಲ. ಆಕೆ ತನ್ನ ಸಂಗಾತಿಯೊಂದಿಗೆ ಪ್ರತಿ ವಿಷಯದಲ್ಲೂ ಸ್ಪರ್ಧೆಗೆ ಬೀಳುತ್ತಾಳೆ. ಇದರಿಂದ ಎಲ್ಲವನ್ನೂ ಸೋಲು, ಗೆಲುವಾಗಿ ನೋಡುತ್ತಾಳೆ. ಅದು ಸಂಬಂಧದಲ್ಲಿ ಸಮಸ್ಯೆ ಉದ್ಭವಿಸಲು ಕಾರಣವಾಗುತ್ತದೆ. 

Akshaya Tritiya 2023ಯಂದು ಈ ಕೆಲ್ಸ ಮಾಡಿದ್ರೆ ಆಸ್ತಿ ಅಕ್ಷಯವಾಗುವುದು!

4. ತಾಳ್ಮೆಯ ಕೊರತೆ
ಮೇಷ ರಾಶಿಯ ಮಹಿಳೆಯರು ಕೆಲವೊಮ್ಮೆ ಸುಲಭವಾಗಿ ನಿರಾಶೆಗೊಳ್ಳುತ್ತಾರೆ ಮತ್ತು ಬೇಗ ಕಿರಿಕಿರಿಗೊಳ್ಳುತ್ತಾರೆ. ಬಲವಾದ ಬಂಧಗಳನ್ನು ಉತ್ತೇಜಿಸಲು ಅಥವಾ ಸರಳವಾಗಿ ಪ್ರೀತಿಯಲ್ಲಿರುವ ಸಂವೇದನೆಯನ್ನು ಆನಂದಿಸಲು ಬೇಕಾದ ತಾಳ್ಮೆ ಮೇಷ ರಾಶಿಯ ಮಹಿಳೆಯಲ್ಲಿ ಕಡಿಮೆ ಇರುತ್ತದೆ.

5. ಪಾಲುದಾರರೊಂದಿಗೆ ವಾದಿಸುವುದು
ಮಂಗಳ ಗ್ರಹದಿಂದ ಆಳಲ್ಪಡುವ ಮೇಷ ರಾಶಿಯು ನಿರಂತರವಾಗಿ ಸಂಘರ್ಷಕ್ಕೆ ಸಿದ್ಧವಾಗಿರುತ್ತದೆ. ಈ ಮಹಿಳೆಯರು ಆಗಾಗ್ಗೆ ಸಂಬಂಧದ ಮೇಲೆ ನಿಯಂತ್ರಣವನ್ನು ಪಡೆಯಲು ಹೋರಾಟವನ್ನು ಮಾಡುತ್ತಾರೆ ಮತ್ತು ತಾವು ಮೇಲುಗೈ ಹೊಂದಿದ್ದೇವೆ ಎಂದು ತಮ್ಮ ಸಂಗಾತಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಾರೆ. 

6. ಅಸುರಕ್ಷಿತ ಭಾವನೆ
ಮಹಿಳೆಯರಲ್ಲರಲ್ಲೂ ಅಸೂಯೆ ಸಾಮಾನ್ಯ. ಆದರೆ, ಮೇಷ ರಾಶಿಯ ಮಹಿಳೆಯರಲ್ಲಿ ಅದು ಹೆಚ್ಚು.  ಈ ಭಾವನೆಗಳು ಮೇಷಕ್ಕೆ ತಮ್ಮ ಪ್ರೇಮಿಯ ಮೇಲಿನ ಪ್ರೀತಿಗಿಂತ ಹೆಚ್ಚಾಗಿ ಬಯಕೆ ಮತ್ತು ಅಭದ್ರತೆಯಿಂದ ಉಂಟಾಗುತ್ತವೆ. 

7. ಭರವಸೆಗಳನ್ನು ಲಘುವಾಗಿ ತೆಗೆದುಕೊಳ್ಳುವುದು
ಮೇಷ ರಾಶಿಯವರು ಹೆಚ್ಚು ಹಠಾತ್ ಪ್ರವೃತ್ತಿಯನ್ನು ಹೊಂದಿರುತ್ತಾರೆ ಮತ್ತು ತಕ್ಷಣದ ಉತ್ಸಾಹದಲ್ಲಿ ಅವರು ಅನುಸರಿಸಲು ಸಾಧ್ಯವಿಲ್ಲದ ಬದ್ಧತೆಗಳನ್ನು ಮಾಡಬಹುದು. 

Panchak 2023: ಏ.15ರಿಂದ ಮೃತ್ಯು ಪಂಚಕ, ಈ ಕೆಲಸಗಳನ್ನು ಮಾಡಿದ್ರೆ ತೊಂದರೆ ತಪ್ಪಿದ್ದಲ್ಲ..

8. ಶಾರ್ಟ್-ಟೆಂಪರ್ಡ್
ಮೇಷ ರಾಶಿಯ ಮಹಿಳೆಯರೊಂದಿಗಿನ ಸಂಬಂಧಗಳಲ್ಲಿ ಸಂಗಾತಿಗೆ ದೊಡ್ಡ ಸವಾಲೇ ಅವರ ಕೋಪ. ಸದಾ ಮೂಗಿನ ಮೇಲೇ ಅವರ ಕೋಪ ಇರುತ್ತದೆ. ಅವರು ಕೋಪಗೊಂಡಾಗ ಕಿರುಚಲು, ಪಾತ್ರೆಗಳನ್ನು ಎತ್ತಿ ಹಾಕಲು ಹಿಂಜರಿಯುವವರಲ್ಲ. ಅವರ ಕೋಪ ಸಂಬಂಧವನ್ನು ಎಷ್ಟು ಹದಗೆಡಿಸುತ್ತದೆಂಬ ಕಲ್ಪನೆ ಅವರಿಗಿಲ್ಲ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios