Asianet Suvarna News Asianet Suvarna News

Akshaya Tritiya 2023ಯಂದು ಈ ಕೆಲ್ಸ ಮಾಡಿದ್ರೆ ಆಸ್ತಿ ಅಕ್ಷಯವಾಗುವುದು!

ಅಕ್ಷಯ ತೃತೀಯ ದಿನಕ್ಕಾಗಿ ನೀವು ಈಗಾಗಲೇ ಉತ್ಸಾಹದಿಂದ ಸಿದ್ಧತೆಗಳನ್ನು ಮಾಡುತ್ತಿರಬಹುದು. ಈ ಮಂಗಳಕರ ದಿನದಂದು ನೀವು ಮಾಡಬೇಕಾದ ಕೆಲಸಗಳು ಮತ್ತು ನೀವು ಮಾಡುವುದನ್ನು ತಪ್ಪಿಸಬೇಕಾದ ವಿಷಯಗಳ ಪಟ್ಟಿ ಇಲ್ಲಿದೆ. 

Things You Must Do and not to do on Akshaya Tritiya 2023 skr
Author
First Published Apr 15, 2023, 4:02 PM IST | Last Updated Apr 15, 2023, 4:02 PM IST

ಅಕ್ಷಯ ತೃತೀಯವು, ಹಿಂದೂಗಳು ಮತ್ತು ಜೈನರು ಸಮಾನವಾಗಿ ಆಚರಿಸುವ ಅತ್ಯಂತ ಮಂಗಳಕರ ಹಬ್ಬವಾಗಿದೆ. ಭಗವಾನ್ ವಿಷ್ಣುವಿನ ಆರನೇ ಅವತಾರ ಪರಶುರಾಮನ ಜನ್ಮದಿನದ ಜೊತೆಗೆ, ಅಕ್ಷಯ ತೃತೀಯವನ್ನು ಅನ್ನಪೂರ್ಣಾ ದೇವಿಯ ಜನನ ದಿನ, ಸುಧಾಮ ಕೃಷ್ಣನ ಕರುಣೆಗೆ ಪಾತ್ರನಾದ ದಿನ, ತ್ರೇತಾಯುಗ ಆರಂಭದ ದಿನ, ಗಂಗೆ ಭೂಮಿಗಿಳಿದ ದಿನ ಮುಂತಾದ ವಿಶೇಷ ಪ್ರಮುಖ ಕಾರಣಗಳಿಗಾಗಿ ಆಚರಿಸಲಾಗುತ್ತದೆ. 

ಇದೊಂದು ಬಹಳ ಆಶೀರ್ವಾದದ ದಿನವಾಗಿದ್ದು, ಅಕ್ಷಯ ಎಂದರೆ ಎಂದಿಗೂ ಮುಗಿಯದ ಅಥವಾ ಶಾಶ್ವತ ಎಂದರ್ಥ. ಜನರು ಈ ದಿನದಂದು ಲಕ್ಷ್ಮಿ ದೇವಿ, ವಿಷ್ಣು ಮತ್ತು ಗಣೇಶನನ್ನು ಪೂಜಿಸುತ್ತಾರೆ, ದಾನಗಳನ್ನು ಮಾಡುತ್ತಾರೆ ಮತ್ತು ಪವಿತ್ರ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಇದರ ಹೊರತಾಗಿ ಈ ಅದೃಷ್ಟದ ದಿನ ನೀವು ಯಾವೆಲ್ಲ ಕೆಲಸಗಳನ್ನು ಮಾಡಬೇಕು ಎಂಬ ವಿವರ ಇಲ್ಲಿದೆ..

ಚಿನ್ನ ಖರೀದಿಸಿ
ಇದು ಬಹುಶಃ ಅಕ್ಷಯ ತೃತೀಯದಲ್ಲಿ ಮಾಡಬೇಕಾದ ಪ್ರಮುಖ ವಿಷಯವಾಗಿದೆ. ಈ ಹಬ್ಬವನ್ನು ನಿಜವಾಗಿ ಆಚರಿಸುತ್ತಾರೋ ಇಲ್ಲವೋ, ಆದರೂ ಪ್ರತಿಯೊಬ್ಬರೂ ಈ ದಿನದಂದು ಚಿನ್ನವನ್ನು ಖರೀದಿಸುತ್ತಾರೆ. ಈ ದಿನದಂದು ಪ್ರತಿಯೊಬ್ಬರೂ ಮಾಡಲು ಯೋಜಿಸುವ ಒಂದು ವಿಷಯ ಇದು. ಈ ದಿನ ಚಿನ್ನ ಖರೀದಿಸಿದರೆ ಬಂಗಾರ ಕೊಳ್ಳುವ ಶಕ್ತಿ ಹೆಚ್ಚುತ್ತದೆ ಮತ್ತು ಸಂಪತ್ತು ಕೂಡುತ್ತಾ ಹೋಗುತ್ತದೆ ಎಂಬ ನಂಬಿಕೆ ಇದೆ. 

ವ್ಯವಹಾರವನ್ನು ಪ್ರಾರಂಭಿಸಿ
ವ್ಯವಹಾರವನ್ನು ಪ್ರಾರಂಭಿಸಲು ಅಕ್ಷಯ ತೃತೀಯ ದಿನಕ್ಕಿಂತ ಉತ್ತಮವಾದ ದಿನವಿಲ್ಲ. ಈ ದಿನದಂದು ನೀವು ಹೊಸ ಉದ್ಯಮ ಅಥವಾ ವ್ಯವಹಾರವನ್ನು ಪ್ರಾರಂಭಿಸಿದರೆ ಅದು ಎಂದಿಗೂ ವಿಫಲವಾಗುವುದಿಲ್ಲ. ಹೆಚ್ಚಿನ ಜನರು ಅಕ್ಷಯ ತೃತೀಯದಲ್ಲಿ ಹೊಸ ವ್ಯಾಪಾರವನ್ನು ಪ್ರಾರಂಭಿಸುವ ಮೊದಲು ಗಣೇಶ ಮತ್ತು ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುತ್ತಾರೆ. ಈ ದಿನದಂದು ಹೊಸ ನಿರ್ಮಾಣ ಅಥವಾ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಎದುರು ನೋಡುತ್ತಾರೆ.

ದಾಂಪತ್ಯ ಜೀವನ ಸಾಮರಸ್ಯದಿಂದ ಕೂಡಿರಲು ಅಕ್ಷಯ ತೃತೀಯದಂದು ಈ ಕೆಲಸ ಮಾಡಿ

ವಿವಾಹ
ಇದು ಅತ್ಯಂತ ಮಂಗಳಕರ ದಿನವಾಗಿರುವುದರಿಂದ, ಅಕ್ಷಯ ತೃತೀಯವು ಯಾವುದೇ ವಿವಾಹವಾಗಲು ಉತ್ತಮ ದಿನವಾಗಿದೆ. ಈ ದಿನದಂದು ಸಾವಿರಾರು  ವಿವಾಹಕ್ಕೆ ದೇಶ ಸಾಕ್ಷಿಯಾಗುತ್ತದೆ. ಆದರೆ, ಈ ಬಾರಿ ಮಾತ್ರ  ಗುರು ಅಸ್ತನಾಗಿರುವುದರಿಂದ ವಿವಾಹಕ್ಕೆ ಅಕ್ಷಯ ತೃತೀಯವನ್ನು ಜ್ಯೋತಿಷಿಗಳು ಸಲಹೆ ಮಾಡುವುದಿಲ್ಲ.

ನಿರ್ಮಾಣ ಪ್ರಾರಂಭ ಅಥವಾ ಹೂಡಿಕೆ
ಹೊಸ ನಿರ್ಮಾಣವನ್ನು ಪ್ರಾರಂಭಿಸುವುದು ಅಥವಾ ಅಸ್ತಿತ್ವದಲ್ಲಿರುವ ನಿರ್ಮಾಣದ ಮೇಲೆ ಹೂಡಿಕೆ ಮಾಡುವುದು ಸಹ ಅಕ್ಷಯ ತೃತೀಯದಂದು ಮಾಡಲೇಬೇಕು. ಅಂತಹ ಒಂದು ಮನೆಯಲ್ಲಿ ಉಳಿದುಕೊಂಡರೆ ನೀವು ಶಾಶ್ವತವಾಗಿ ಸಮೃದ್ಧರಾಗುತ್ತೀರಿ.

Akshaya Tritiya 2023ಕ್ಕೂ ಮುನ್ನ ಈ ವಸ್ತುಗಳನ್ನು ಮನೆಯಿಂದ ಹೊರ ಹಾಕಿ, ಇಲ್ಲಾಂದ್ರೆ ಲಕ್ಷ್ಮೀ ಮನೆಗೆ ಕಾಲಿಡೋಲ್ಲ!

ಚಾರಿಟಿಗೆ ದೇಣಿಗೆ ನೀಡಿ
ದತ್ತಿ ಸಂಸ್ಥೆ ಅಥವಾ ಅಗತ್ಯವಿರುವ ವ್ಯಕ್ತಿಯನ್ನು ಆಯ್ಕೆ ಮಾಡಿ ಮತ್ತು ಅವರಿಗೆ ಈ ದಿನ ದಾನ ನೀಡಿ. ನೀವು ಎಷ್ಟು ಹೆಚ್ಚು ನೀಡುತ್ತೀರೋ ಅಷ್ಟು ಹೆಚ್ಚು ನೀವು ಆಶೀರ್ವದಿಸಲ್ಪಡುತ್ತೀರಿ. ಪ್ರಾಣಿಗಳಿಗೆ ಆಹಾರ ನೀಡುವುದನ್ನು ಸಹ ದತ್ತಿ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ. ಕೆಲವರು ಅಕ್ಷಯ ತೃತೀಯದಂದು ಗೋವನ್ನು ಪೂಜಿಸುತ್ತಾರೆ.

ಅಕ್ಷಯ ತೃತೀಯ ದಿನದಂದು ನಿಷಿದ್ಧ
ಜನಿವಾರ

ಈ ದಿನದಂದು ಹಿಂದೂ ಪವಿತ್ರ ದಾರವನ್ನು ಧರಿಸದಿರುವುದು ಒಳ್ಳೆಯದು, ಇದನ್ನು ದುರದೃಷ್ಟವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ನೀವು ಮನೆಯ ಹುಡುಗನಿಗೆ ಉಪನಯನ ಸಮಾರಂಭವನ್ನು ನಡೆಸಲು ಯೋಜಿಸುತ್ತಿದ್ದರೆ, ಈ ದಿನಕ್ಕೆ ಅದನ್ನು ಯೋಜಿಸಬೇಡಿ. ಈ ಆಚರಣೆಯನ್ನು ಮಾಡಲು ಈ ದಿನ ಶುಭವಲ್ಲ.

ಉಪವಾಸವನ್ನು ಮುರಿಯಬೇಡಿ
ನೀವು ಸಾಕಷ್ಟು ಸಮಯದವರೆಗೆ ಉಪವಾಸವನ್ನು ಆಚರಿಸುತ್ತಿದ್ದರೆ, ಈ ದಿನ ಅದನ್ನು ಮುರಿಯಬೇಡಿ. ಈ ದಿನದಂದು ಉಪವಾಸ ಮುರಿಯುವುದು ದುರಾದೃಷ್ಟ ಎಂದು ಪರಿಗಣಿಸಲಾಗುತ್ತದೆ.

ಮನೆಯನ್ನು ಕತ್ತಲೆಯಲ್ಲಿಡಬೇಡಿ
ಸಂಪ್ರದಾಯಗಳ ಪ್ರಕಾರ, ಈ ದಿನದಂದು ಮನೆಯ ಯಾವುದೇ ಭಾಗವು ಕತ್ತಲೆಯಾಗಿರಬಾರದು. ಮನೆಯಲ್ಲಿ ಕತ್ತಲೆ ಇದ್ದರೆ ದೀಪ ಹಚ್ಚಿ. ಇದರಿಂದ ಮನೆಯೊಳಗೆ ದೇವಿಯ ಆಶೀರ್ವಾದ ಉಳಿಯುತ್ತದೆ.

ಎಂಥ ಮಂಗಳಕರ ದಿನವಾದರೂ ಈ ಬಾರಿ Akshaya Tritiyaದಂದು ವಿವಾಹಕ್ಕಿಲ್ಲ ಮುಹೂರ್ತ!

ಇತರರ ಬಗ್ಗೆ ಕೆಟ್ಟದಾಗಿ ಯೋಚಿಸಬೇಡಿ
ಈ ಶುಭ ದಿನದಂದು ಭಕ್ತರು ಇತರರ ಬಗ್ಗೆ ನಕಾರಾತ್ಮಕವಾಗಿ ಯೋಚಿಸಬಾರದು. ಏಕೆಂದರೆ ಅಂತಹ ಆಲೋಚನೆಗಳು ದೇವರ ಆಶೀರ್ವಾದವನ್ನು ಪಡೆಯುವುದನ್ನು ತಡೆಯುತ್ತದೆ. 

Latest Videos
Follow Us:
Download App:
  • android
  • ios