Asianet Suvarna News Asianet Suvarna News

ಇನ್ನೆರಡು ದಿನದಲ್ಲಿ ಬುಧ ಗೋಚಾರ; ಈ ಸಂಚಾರವು ನಿಮ್ಮ ಪಾಲಿಗೇನು ತರಲಿದೆ?

ಬುಧ ಎಂದರೆ ಬುದ್ದಿವಂತಿಕೆ, ಸಂವಹನ, ತಾರ್ಕಿಕತೆ ಕಾರಕ. ಆತ ಏಪ್ರಿಲ್ 25ರಂದು ವೃಷಭ ರಾಶಿಗೆ ಸಂಚರಿಸುತ್ತಿದ್ದಾನೆ. ಇದರಿಂದ 12 ರಾಶಿಚಕ್ರಗಳ ಮೇಲೆ ಏನೆಲ್ಲ ಪರಿಣಾಮಗಳಾಗಲಿವೆ ನೋಡೋಣ. 

Mercury Transit In Taurus 2022 How it might impact you skr
Author
Bangalore, First Published Apr 23, 2022, 12:33 PM IST

ಬುಧ ಗ್ರಹವು ಬುದ್ಧಿಕಾರಕ. ಬುದ್ಧಿವಂತಿಕೆ, ತಾರ್ಕಿಕತೆ, ಸಂವಹನ, ಉದ್ಯಮಗಳ ಅಧಿಪತಿ. ಈತ ಏಪ್ರಿಲ್ 25ರಂದು ವೃಷಭ ರಾಶಿಗೆ ಸಂಚರಿಸುತ್ತಿದ್ದಾನೆ. ಬುಧನ ಸ್ನೇಹಿತ ಗ್ರಹವಾದ ಶುಕ್ರದ ನಿಯಂತ್ರಣದಲ್ಲಿರುವ ರಾಶಿ ವೃಷಭವಾಗಿದೆ. ಹೀಗಾಗಿ, ಬುಧನ ಈ ಸಂಚಾರ ಉತ್ತಮವೇ ಆಗಿರಲಿದೆ. ಈ ಬುಧ ಗೋಚಾರದಿಂದ ಯಾವ ರಾಶಿಗಳ ಮೇಲೆ ಏನು ಪರಿಣಾಮ ಬೀರುತ್ತದೆ ನೋಡೋಣ. 

ಮೇಷ(Aries): ಆರ್ಥಿಕವಾಗಿ ನೀವು ಹೆಚ್ಚಿನ ಉಳಿತಾಯವನ್ನು ನಿರೀಕ್ಷಿಸುವಂತಿಲ್ಲ ಮತ್ತು ಯಾವುದೇ ಕಾಗದವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಸಹಿ ಮಾಡಬೇಡಿ. ಈ ಸಂದರ್ಭದಲ್ಲಿ ನೀವು ಆಹ್ಲಾದಕರ ನಡವಳಿಕೆಯನ್ನು ಹೊಂದಿರುತ್ತೀರಿ ಮತ್ತು ನಿಮ್ಮ ಸಮಯವನ್ನು ಪರಿಣಾಮಕಾರಿಯಾಗಿ ಬಳಸುತ್ತೀರಿ. ಯಾರಿಗಾದರೂ ಮಾನಸಿಕ ಆರೋಗ್ಯ ಸಲಹೆಗಾರರಾಗಲು ಇದು ಉತ್ತಮ ಸಮಯ. ನೀವು ಪ್ರೀತಿಯಲ್ಲಿದ್ದರೆ, ವಿವಾಹವಾಗಿದ್ದರೆ ನಿಮ್ಮ ಸಂಗಾತಿಗಾಗಿ ಸಮಯವನ್ನು ಮೀಸಲಿಡಬೇಕು ಹಾಗೂ ಈ ಸಂಬಂಧ ಉಳಿಸಿಕೊಳ್ಳಲು ಹೆಚ್ಚು ಪ್ರಯತ್ನ ಹಾಕಬೇಕು. 

ವೃಷಭ(Taurus): ಉದ್ಯೋಗದಲ್ಲಿರುವ ಜನರು ತಮ್ಮ ವೃತ್ತಿಜೀವನವನ್ನು ಮುನ್ನಡೆಸಲು ಸಹಾಯ ಮಾಡುವ ಹೊಸ ಅವಕಾಶಗಳನ್ನು ಹುಡುಕುವ ಸಾಧ್ಯತೆಯಿದೆ. ಸ್ವಂತ ಸಂಸ್ಥೆಯನ್ನು ಹೊಂದಿರುವವರಿಗೆ ಲಾಭವು ಅಧಿಕವಾಗಿರುತ್ತದೆ. ನೀವು ಹೊಸ ಮನೆಯನ್ನು ನಿರ್ಮಿಸಲು ಅಥವಾ ನಿಮ್ಮ ಮನೆಯನ್ನು ನವೀಕರಿಸಲು ಬಯಸಿದರೆ, ಆರ್ಥಿಕವಾಗಿ ಅದನ್ನು ಮಾಡಲು ಇದು ಉತ್ತಮ ಸಮಯ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ಸಂಗಾತಿಯೊಂದಿಗೆ ಪರಸ್ಪರ ಬೆಂಬಲ ಮತ್ತು ಪರಸ್ಪರ ಗೌರವದೊಂದಿಗೆ ಸುಂದರವಾದ ಸಮಯ ಕಳೆಯುವಿರಿ.

ಮಿಥುನ(Gemini): ಕಚೇರಿಯಲ್ಲಿ ಪ್ರತಿಕೂಲತೆಯನ್ನು ಎದುರಿಸಿದಾಗ,  ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ದಣಿಯಬಹುದು. ಆರ್ಥಿಕವಾಗಿ, ಹೊಸ ಯೋಜನೆಗಳಿಂದ ದೂರವಿರಿ ಮತ್ತು ನಿಮ್ಮ ಖರ್ಚಿನ ಮೇಲೆ ನಿಗಾ ಇರಿಸಿ. ನಿಮ್ಮ ಕೆಲಸದ ಜೀವನದಲ್ಲಿ, ಏರಿಳಿತಗಳು ಇರಬಹುದು. ಉದ್ಯಮಿಗಳು ತಮ್ಮ ದಿನನಿತ್ಯದ ಕಾರ್ಯಗಳಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ಯಾವುದೇ ಹೊಸ ಯೋಜನೆಗಳನ್ನು ಈಗ ಪ್ರಾರಂಭಿಸಬಾರದು. ಸಂಬಂಧಗಳು ಚೆನ್ನಾಗಿರಬೇಕೆಂದರೆ ನಿಮ್ಮ ಅನಗತ್ಯ ಕೋಪ ಮತ್ತು ಹಗೆತನವನ್ನು ನಿಯಂತ್ರಿಸಲು ಕಲಿಯಿರಿ.

ಕರ್ಕಾಟಕ(Cancer): ನಿಮ್ಮ ಪ್ರೀತಿಪಾತ್ರರ ಜೊತೆಗೆ  ಉತ್ತಮ ಸಂಬಂಧ ಕಳೆಯಿರಿ. ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯಲು ಪ್ರಯತ್ನಿಸಿ. ಈ ಸಂದರ್ಭದಲ್ಲಿ ನೀವು ಹೊಸ ಹೊಸ ಜನರನ್ನು ಭೇಟಿಯಾಗುವಿರಿ. ಉದ್ಯೋಗ ಸ್ಥಳದಲ್ಲಿರುವ ಹಿರಿಯರು ಹಾಗೂ ಸ್ನೇಹಿತರು ನಿಮಗೆ ಪ್ರೋತ್ಸಾಹಕರಾಗಿ ನಿಲ್ಲಲಿದ್ದಾರೆ. ಉದ್ಯೋಗದಲ್ಲಿ ಆದಾಯ ಹೆಚ್ಚಳ, ಬಡ್ತಿ ಇರುತ್ತದೆ. ಅಲ್ಪಾವಧಿಯ ಮತ್ತು ದೀರ್ಘಾವಧಿಯ ಹೂಡಿಕೆಗಳು ನಿಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.

Venus Transit 2022: ಏ.27ಕ್ಕೆ ಈ ನಾಲ್ಕು ರಾಶಿಗಳಿಗೆ ಶುರುವಾಗಲಿದೆ ಅದೃಷ್ಟ

ಸಿಂಹ(Leo): ನಿಮ್ಮೆಲ್ಲ ಅದ್ಭುತವಾದ ಆಲೋಚನೆಗಳ ಪರಿಣಾಮವಾಗಿ ನೀವು ಹೆಚ್ಚು ಶಾಂತಿಯುತವಾದ ಗೃಹ ಜೀವನವನ್ನು ಹೊಂದಿರುತ್ತೀರಿ. ನಿಮ್ಮ ದಾಂಪತ್ಯದಲ್ಲಿ ಕೆಲವು ಸಕಾರಾತ್ಮಕ ಫಲಿತಾಂಶಗಳನ್ನು ನೋಡುತ್ತೀರಿ. ನೀವು ಮತ್ತು ನಿಮ್ಮ ಸಂಗಾತಿ ಅತ್ಯುತ್ತಮ ಸಾಮರಸ್ಯದಿಂದ ಇರುತ್ತೀರಿ. ಈ ಸಂದರ್ಭ ನಿಮ್ಮ ವೃತ್ತಿಜೀವನಕ್ಕೆ ಸಂತೋಷದಾಯಕವಾಗಿರಲಿದೆ. ಏಕೆಂದರೆ ನೀವು ಉದ್ಯೋಗಸ್ಥಳದಲ್ಲಿ ಗುರುತಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಹಾಕಲಿದ್ದೀರಿ. ನಿಮ್ಮೆಲ್ಲ ಯೋಜನೆಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ಆಸ್ತಿಯಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯವಾಗಿದೆ.

ಕನ್ಯಾ(Virgo): ಉನ್ನತ ಹುದ್ದೆಯಲ್ಲಿರುವವರು ನಿಮ್ಮ ವರ್ತನೆಯಿಂದ ಸಂತುಷ್ಟರಾಗುತ್ತಾರೆ. ಖರ್ಚು ಹೆಚ್ಚಾದರೂ ಆದಾಯದಲ್ಲೂ ಏರಿಕೆ ಇರಲಿದೆ. ವೃತ್ತಿ ಜೀವನ ಚೆನ್ನಾಗಿರಲಿದೆ. ನಿಮ್ಮ ಸಾಮರ್ಥ್ಯವನ್ನು ಸಾಧ್ಯವಾದಷ್ಟು ಹಿಗ್ಗಿಸಿ ಒರೆಗೆ ಹಚ್ಚಿ. ನಿಮ್ಮ ಪೋಷಕರನ್ನು ಗೌರವಿಸಿ ಮತ್ತು ಸಹೋದರರೊಂದಿಗೆ ಆಪ್ತತೆ ಕಾಪಾಡಿಕೊಳ್ಳಿ. ಸಂಬಂಧದ ವಿಷಯಕ್ಕೆ ಬಂದಾಗ ತಾಳ್ಮೆ ನಿಮ್ಮೊಂದಿಗೆ ಸದಾ ಇರುವಂತೆ ನೋಡಿಕೊಳ್ಳಿ. 

ತುಲಾ(Libra): ಕೆಲಸದ ಸ್ಥಳದಲ್ಲಿ ಅಂತರರಾಷ್ಟ್ರೀಯ ಮೂಲಗಳೊಂದಿಗೆ ಕೆಲಸ ಮಾಡುವುದು ಲಾಭದಾಯಕವಾಗಲಿದೆ. ಯೋಜನೆಯು ಪ್ರಗತಿಯಲ್ಲಿರುವಾಗ, ನಿಮ್ಮಲ್ಲಿ ಕೆಲವರು ದೂರ ಪ್ರಯಾಣಿಸಲು ಸಾಧ್ಯವಾಗಬಹುದು. ಕೆಲವು ಅನಿರೀಕ್ಷಿತ ಆರ್ಥಿಕ ಲಾಭಗಳಿದ್ದರೂ ಸಹ, ಆದಾಯವು ಅನಿಯಮಿತವಾಗಿರುತ್ತದೆ. ನಿಕಟ ಕುಟುಂಬದ ಸದಸ್ಯರೊಂದಿಗೆ ಇರುವ ಭಿನ್ನಾಭಿಪ್ರಾಯ ಸರಿಯಾಗಲಿದೆ. ಪೋಷಕರೊಂದಿಗೆ ಜಗಳವಾಡಬೇಡಿ. ಪೂರ್ವಿಕರ ಜಮೀನಿನ ವಿಚಾರದಲ್ಲಿ ಕೌಟುಂಬಿಕ ಕಲಹದ ಸಂಭವವಿದೆ.

ವೃಶ್ಚಿಕ(Scorpio): ನೀವು ಮತ್ತು ನಿಮ್ಮ ಸಂಗಾತಿಯ ನಡುವೆ ಕೆಲ ಇಗೋ ಜಗಳಗಳು ಹೆಚ್ಚಿ ಸನ್ನಿವೇಶ ಕಷ್ಟಕರವಾಗುತ್ತದೆ. ಮೂರನೆಯವರನ್ನು ನಿಮ್ಮ ಮಧ್ಯೆ ಮೂಗು ತೂರಿಸಲು ಬಿಡಬೇಡಿ. ಉದ್ಯೋಗದಲ್ಲಿ ಒಳ್ಳೆಯ ಹೆಸರು ಸಂಪಾದಿಸಲಿದ್ದೀರಿ. ಇತರರು ನಿಮ್ಮನ್ನಿ ಕೆಳ ತಳ್ಳದಂತೆ ನಿಮ್ಮ ಹಿಡಿತ ಕಾಪಾಡಿಕೊಳ್ಳಬೇಕೆಂದರೆ ಸದಾ ವಿನಯದಿಂದ ವರ್ತಿಸಿ. ಕುಟುಂಬದೊಂದಿಗೆ ಘರ್ಷಣೆಯ ಕ್ಷಣ ಕಳೆಯಲಿದ್ದೀರಿ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಉತ್ತಮ ಸಮಯವಾಗಿದೆ. 

ಧನು(Sagittarius): ನಿಮ್ಮ ಸಂಸ್ಥೆಯನ್ನು ಬೆಳೆಸಲು ಗಡಿಬಿಡಿ. ಅದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳಿ. ಈ ಸಂದರ್ಭದಲ್ಲಿ ದೊಡ್ಡ ದೊಡ್ಡ ಹೂಡಿಕೆಗಳು ಬೇಡ. ನಿಮ್ಮ ಕೆಲಸಗಳಲ್ಲಿ ಯಶಸ್ಸು ಲಭಿಸಲಿದೆ ಮತ್ತು ಇನ್ನೊಬ್ಬರ ಮೇಲೆ ಧನಾತ್ಮಕ ಪರಿಣಾಮ ಬೀರಲಿದ್ದೀರಿ. ಬಡ್ತಿಯ ಅವಕಾಶಗಳೂ ಇವೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಬಹಳಷ್ಟು ಮೋಜು ಮಾಡಲಿದ್ದೀರಿ. ನಿಮ್ಮ ಸಂಗಾತಿಯ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವು ನಿಮ್ಮ ಮೊದಲ ಕಾಳಜಿಯಾಗಿರಬೇಕು.

ವಿಶ್ವ ಶಾಂತಿಗಾಗಿ 18 ಕೋಟಿ ಜಪಯಜ್ಞ: ಹೊಸ ದಾಖಲೆಗೆ ಸಾಕ್ಷಿಯಾದ ವಿಜಯಪುರ!

ಮಕರ(Capricorn): ನಿಮ್ಮ ಪ್ರಾಜೆಕ್ಟ್‌ಗಾಗಿ ಹೊಸ ಹೊಸ ಆಲೋಚನೆಗಳೊಂದಿಗೆ ಬರಲು ಸಾಧ್ಯವಾಗುತ್ತದೆ. ಅದು ನಿಮ್ಮ ವೃತ್ತಿಜೀವನಕ್ಕೆ ಪ್ರಯೋಜನವನ್ನು ನೀಡುತ್ತದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಮೇಲೆ ಉತ್ತಮವಾಗಿ ಗಮನ ಹರಿಸಬಹುದು. ಅವರು ತಮ್ಮ ಸವಾಲುಗಳನ್ನು ಹೆಚ್ಚು ವೇಗವಾಗಿ ಮತ್ತು ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ. ಜೋಡಿಗಳು ಮದುವೆಯಾಗುವ ಅವಕಾಶವನ್ನು ಪಡೆಯುತ್ತಾರೆ. ಪ್ರೀತಿಪಾತ್ರರ ಜೊತೆ ಜಗಳವಾಡಬೇಡಿ.

ಕುಂಭ(Aquarius): ನಿಮ್ಮ ವೈಯಕ್ತಿಕ ಬೆಳವಣಿಗೆಗೆ ಗಮನ ಹರಿಸಿ. ಒಂಟಿಯಾಗಿರುವವರಿಗೆ ವಿವಾಹಕ್ಕೆ ಶುಭ ಸಮಯ, ದಾಂಪತ್ಯ ಜೀವನ ಚೆನ್ನಾಗಿರಲಿದೆ. ನಿಮ್ಮ ಅತ್ತೆ ಮಾವಂದಿರೂ ಸಂತೋಷವಾಗಿರಲಿದ್ದಾರೆ. ಅವರ ಬೆಂಬಲದ ಲಾಭ ನಿಮಗೆ ದೊರಕಲಿದೆ. ಕೆಲಸದ ಮೇಲೆ ಏಕಾಗ್ರತೆ ಸಾಧಿಸಲು ಕೊಂಚ ಕಷ್ಟವಾಗಬಹುದು. ಕೆಲಸ ಪೂರ್ಣಗೊಳಿಸಲು ಸಾಕಷ್ಟು ಪ್ರಯತ್ನ ಹಾಕಬೇಕಾಗುತ್ತದೆ. 

ಮೀನ(Pisces): ಧೀರ್ಘಾವಧಿ ಹೂಡಿಕೆಗಳನ್ನು ಮಾಡುವುದು ಈ ಸಂದರ್ಭದ ಅತ್ಯುತ್ತಮ ಆರ್ಥಿಕ ನಿರ್ಧಾರವಾಗಲಿದೆ. ಆತ್ಮವಿಶ್ವಾಸ ಹೆಚ್ಚಿರಲಿದೆ. ತಾರ್ಕಿಕತೆಯೂ ಚೆನ್ನಾಗಿ ಕೆಲಸ ಮಾಡಲಿದೆ. ಇನ್ನೊಬ್ಬರಿಂದಿಗೆ ಚೆನ್ನಾಗಿ ಸಂವಹನ ನಡೆಸಲಿದ್ದೀರಿ. ಪ್ರಯಾಣದ ಮೂಲಕ ಉತ್ತಮ ಅನುಭವಗಳನ್ನೂ, ಹಣವನ್ನೂ ಪಡೆಯಲಿದ್ದೀರಿ. ದಂಪತಿಯು ಜೊತೆಯಾಗಿ ಹೆಚ್ಚು ಸಮಯ ಕಳೆವ ಅಗತ್ಯವಿದೆ. 

Follow Us:
Download App:
  • android
  • ios