Asianet Suvarna News Asianet Suvarna News

Venus Transit 2022: ಏ.27ಕ್ಕೆ ಈ ನಾಲ್ಕು ರಾಶಿಗಳಿಗೆ ಶುರುವಾಗಲಿದೆ ಅದೃಷ್ಟ

ಶುಕ್ರ ಗ್ರಹವು ಸಮೃದ್ಧಿದಾಯಕ. ಈಗ ಈ ಗ್ರಹ ಏಪ್ರಿಲ್ 27ರಂದು ಮೀನ ರಾಶಿಯನ್ನು ಪ್ರವೇಶಿಸುತ್ತಿದೆ. ಅಲ್ಲಾಗಲೇ ಗುರುವೂ ಕುಳಿತಿರುತ್ತಾನೆ. ಇದರಿಂದ 4 ರಾಶಿಗಳಿಗೆ ಆರ್ಥಿಕವಾಗಿ ಸಾಕಷ್ಟು ಲಾಭಗಳಾಗಲಿವೆ. 

These 4 Zodiac Signs will Have Financial Benefits on Shukra Gochar skr
Author
Bangalore, First Published Apr 23, 2022, 11:00 AM IST

ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಮತ್ತು ಗುರು ಗ್ರಹಗಳು(Venus and Jupiter) ಬಹಳ ಪ್ರಮುಖವಾಗಿವೆ. ಏಕೆಂದರೆ ಅವೆರಡೂ ಒಳ್ಳೆಯ ಗ್ರಹಗಳು. ಒಳಿತನ್ನುಂಟು ಮಾಡುವವು. ಶುಕ್ರವು ಸಮೃದ್ಧಿಯನ್ನು ಕೊಡುವವನಾಗಿದ್ದರೆ ಗುರುವು ಅದೃಷ್ಟದ ಗ್ರಹವಾಗಿದೆ. ಈಗ ಅಪರೂಪದ ವಿದ್ಯಮಾನದಲ್ಲಿ ಈ ಎರಡೂ ಗ್ರಹಗಳು ಮೀನ ರಾಶಿಯಲ್ಲಿ ಒಟ್ಟಿಗೇ ಕೂರಲಿವೆ. 

ಜ್ಯೋತಿಷ್ಯದಲ್ಲಿ, ಶುಕ್ರನನ್ನು ಸಂಪತ್ತಿನ ಕಾರಕ ಗ್ರಹ ಎಂದು ಹೇಳಲಾಗುತ್ತದೆ. ಶುಕ್ರನು ಶುಭವಾಗಿದ್ದಾಗ ಲಕ್ಷ್ಮಿದೇವಿಯು ವಿಶೇಷ ಆಶೀರ್ವಾದವನ್ನು ನೀಡುತ್ತಾಳೆ.  ಶುಕ್ರನು ಕುಂಡಲಿಯಲ್ಲಿ ಪ್ರಬಲನಾಗಿದ್ದರೆ ಜೀವನ ಯಾವುದೇ ಕಷ್ಟವಿಲ್ಲದೇ ಸರಾಗವಾಗಿ ಮುನ್ನಡೆಯುತ್ತದೆ. ಶುಕ್ರನ ಪ್ರಭಾವದಿಂದ ಸಂಬಂಧದಲ್ಲಿ ಸಾಮರಸ್ಯ, ಆತ್ಮವಿಶ್ವಾಸ, ಆಕರ್ಷಣೆ(attraction), ಶ್ರೀಮಂತಿಕೆ,ಕಲಾತ್ಮಕತೆ, ಸೃಜನಶೀಲತೆ(creativity) ಹೆಚ್ಚುತ್ತದೆ.

ಶುಕ್ರ ಮತ್ತು ಗುರುವಿನ ಈ ಜೋಡಣೆಯು ಏಪ್ರಿಲ್ 27ರಂದು ಸಂಭವಿಸಿ, ಮೇ.23ರವರೆಗೆ ಇರುತ್ತದೆ. ಇದರಿಂದ 4 ರಾಶಿಯವರಿಗೆ ಸಾಕಷ್ಟು ಆರ್ಥಿಕ ಲಾಭಗಳಾಗುತ್ತಿವೆ. ಆದಾಯ ಹೆಚ್ಚಲಿದೆ. ಅಂಥ ಆದೃಷ್ಟವಂತ ರಾಶಿ ಚಕ್ರಗಳಲ್ಲಿ ನಿಮ್ಮ ರಾಶಿಯೂ ಇದೆಯೇ ನೋಡಿ. 

ವೃಷಭ(Taurus): ಶುಕ್ರ ಮತ್ತು ಗುರುವಿನ ಹೊಂದಾಣಿಕೆಯು ವೃಷಭ ರಾಶಿಯವರ ಆದಾಯವನ್ನು ಸುಧಾರಿಸುತ್ತದೆ. ಹೆಚ್ಚಿದ ಆದಾಯದಿಂದಾಗಿ ಈ ರಾಶಿಯವರ ಆರ್ಥಿಕತೆಯ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ನೀವು ಸಾಲಗಳನ್ನು(debts) ಮರು ಪಾವತಿಸಲು ಸಾಧ್ಯವಾಗುತ್ತದೆ. ನಿಮ್ಮ ವೃತ್ತಿಪರ ಜೀವನದಲ್ಲಿ, ನೀವು ಯಶಸ್ವಿಯಾಗುತ್ತೀರಿ ಮತ್ತು ಜೀವನದ ಐಷಾರಾಮಿ ಸಂಗತಿಗಳನ್ನು ಆನಂದಿಸಲು ಸಾಧ್ಯವಾಗುತ್ತದೆ. ನಿಮ್ಮ ಆಸ್ತಿಯೇ ಆದಾಯ ತರಲು ಆರಂಭಿಸಲಿದೆ. ಆತ್ಮವಿಶ್ವಾಸ ಬಲವಾಗಿ ಹೆಚ್ಚಾಗುತ್ತದೆ. 

Solar Eclipse 2022: ಸೂರ್ಯಗ್ರಹಣದಂದು ಮಾಡಬೇಕಾದ್ದು, ಮಾಡಬಾರದ್ದು ಏನು?

ಮಿಥುನ(Gemini): ಮಿಥುನ ರಾಶಿಯಲ್ಲಿ ಜನಿಸಿದವರು ಈ ಸಂಯೋಜನೆಯ ಪರಿಣಾಮವಾಗಿ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಮುನ್ನಡೆಯುತ್ತಾರೆ. ನಿರುದ್ಯೋಗಿಗಳಿಗೆ ಕೆಲಸ ದೊರಕುತ್ತದೆ. ಆಗಲೇ ಉದ್ಯೋಗದಲ್ಲಿದ್ದು ಬದಲಿಸುವ ಯೋಚನೆಯಲ್ಲಿರುವವರಿಗೆ ಹೊಸ ಉದ್ಯೋಗ(new job) ದೊರಕುತ್ತದೆ. ಉದ್ಯೋಗದಲ್ಲಿ ಬಡ್ತಿ, ಸಂಬಳ ಹೆಚ್ಚಳ ಸಾಧ್ಯವಾಗುತ್ತದೆ. ನಿಮ್ಮ ಕಾರ್ಯವೈಖರಿಗೆ ಮೇಲಧಿಕಾರಿಗಳ ಮೆಚ್ಚುಗೆ ಕೇಳಿಬರಲಿದೆ. ವ್ಯಾಪಾರಸ್ಥರ ಆದಾಯ ಹೆಚ್ಚಾಗುತ್ತದೆ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ. ಯಾವುದೇ ರೀತಿಯ ಹೊಸ ಸಾಹಸಕ್ಕೆ ಕೈ ಹಾಕಲು ಈ ಸಮಯ ಬಹಳ  ಅನುಕೂಲಕರವಾಗಿರುತ್ತದೆ. 

ಕರ್ಕಾಟಕ ರಾಶಿ(Cancer): ಕರ್ಕಾಟಕ ರಾಶಿಯವರಿಗೆ ಗುರು ಮತ್ತು ಶುಕ್ರ ಗ್ರಹಗಳ ಸಂಯೋಗವು ವಿದೇಶ ಪ್ರಯಾಣಕ್ಕೆ ಅವಕಾಶವನ್ನು ನೀಡುತ್ತದೆ. ನೀವು ಮಾಡುತ್ತಿರುವ ವ್ಯವಹಾರಕ್ಕೆ ವಿದೇಶದ ಲಿಂಕ್ ಇದ್ದರೆ ವಿದೇಶದಿಂದಲೂ ಸಾಕಷ್ಟು ಹಣ ಗಳಿಸಬಹುದು. ಆದಾಯವನ್ನು ಹೆಚ್ಚಿಸುವ ಬಲವಾದ ಅವಕಾಶಗಳಿವೆ. ಪರೀಕ್ಷೆಯ ಸಂದರ್ಶನಕ್ಕೆ ಹಾಜರಾಗಲಿರುವವರಿಗೆ ಯಶಸ್ಸು ಸಿಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಈ ಸಂದರ್ಭದಲ್ಲಿ ಸಾಕಷ್ಟು ಲಾಭ, ಉನ್ನತಿ ಹೊಂದಬಹುದು. ನೀವು ಆರಂಭಿಸಿದ ಹೊಸ ಕೆಲಸವು ಲಾಭದಾಯಕವಾಗಿ ಬದಲಾಗಲಿದೆ. ವೈವಾಹಿಕ ಜೀವನವು ಚೆನ್ನಾಗಿರಲಿದೆ. 

Solar Eclipse 2022: ವರ್ಷದ ಮೊದಲ ಸೂರ್ಯ ಗ್ರಹಣ ಯಾವಾಗ? ಭಾರತದಲ್ಲಿ ಕಾಣುವುದೇ?

ಕುಂಭ ರಾಶಿ(Aquarius): ಈ ಸಮಯದಲ್ಲಿ ಈ ರಾಶಿಯವರ ಆತ್ಮವಿಶ್ವಾಸ(confidence) ಅಪಾರವಾಗಿ ಹೆಚ್ಚಲಿದೆ. ಉದ್ಯೋಗವು ಉನ್ನತಿಯ ಮುಖ ನೋಡಲಿದೆ. ಸ್ವಂತ ಉದ್ಯಮಗಳು ಪ್ರಗತಿ ಪಡೆಯಲಿವೆ. ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಈ ಸಮಯ ವರವಾಗಲಿದೆ. ಮನೆಯಲ್ಲಿ ಶುಭ ಕಾರ್ಯಗಳು ಜರುಗಲಿವೆ. ಮನಸ್ಸು ಸಂತೋಷದಿಂದ ಕೂಡಿರಲಿದೆ. ಬಹಳಷ್ಟು ದಿಕ್ಕಿಗಳಿಂದ ಹಣ ಇವರತ್ತ ಹರಿದು ಬರಲಿದೆ. ರೈತರು, ಉದ್ಯಮಿಗಳು ಹಣದ ಹೊಸ ಹರಿವನ್ನು ಅನುಭವಿಸಲಿದ್ದಾರೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios