ಮೌನಿ ಅಮವಾಸ್ಯೆಯನ್ನು ಮೌನದಲ್ಲೇ ಆಚರಿಸಿ
ಮೌನವಾಗಿದ್ದುಕೊಂಡು ಉಪವಾಸ(Fasting) ಮಾಡುವುದೇ ಮೌನಿ ಅಮವಾಸ್ಯೆಯ ವಿಶೇಷತೆ. ಈ ದಿನ ಋಷಿ ಮನುವಿನ(Saint Manu) ಜನ್ಮದಿನವೆಂದೂ(Birth) ಸಹ ಕರೆಯುಲಾಗುತ್ತದೆ. ಈ ಮೌನಿ ಅಮವಾಸ್ಯೆಯಂದು ಏನೆಲ್ಲಾ ಕೆಲಸಗಳನ್ನು ಮಾಡಿದರೆ ಒಳಿತು, ಮಹತ್ವ ಹಾಗೂ ಹಿನ್ನಲೆ ಏನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಹಿಂದೂ ಕ್ಯಾಲೆಂಡರ್ ಪ್ರಕಾರ ಮಾಘ ಮಾಸದಲ್ಲಿ ಬರುವ ಅಮವಾಸ್ಯೆ ಮೌನಿ ಅಮವಾಸ್ಯೆ. ಗ್ರೆಗೋರಿಯನ್(Gregorien) ಕ್ಯಾಲೆಂಡರ್(Calender) ಪ್ರಕಾರ ಇದು ಜನವರಿ(January) ಅಥವಾ ಫೆಬ್ರವರಿ(February) ತಿಂಗಳಲ್ಲಿ ಬರುತ್ತದೆ. ಮೌನಿ ಪದವು ಮೌನವನ್ನು(Silent) ಸೂಚಿಸುವುದರಿಂದ ಮೌನವಾಗಿದ್ದು ಆಚರಿಸುವುದೇ ಇದರ ವಿಶೇಷ. ಪುರಾಣಗಳ ಪ್ರಕಾರ, ಈ ದಿನವನ್ನು ಋಷಿ ಮನುವಿನ ಜನ್ಮದಿನವೆಂದು ಆಚರಿಸುತ್ತಾರೆ. ಅಲ್ಲದೆ ಪರಿಪೂರ್ಣ ಮಾತಿನ ಗುಣಮಟ್ಟ ಪಡೆಯಲು ಮೌನವ್ರತವನ್ನು ಆಚರಿಸುತ್ತಾರೆ. ತಪಸ್ಸು ಮಾಡಲು ಹಾಗೂ ದೇವರಿಂದ ಕ್ಷಮೆಗಾಗಿ ಪ್ರಾರ್ಥಿಸಲು ಈ ದಿನ ಬಹಳ ಒಳ್ಳೆಯದು. ನಿರ್ದಿಷ್ಟ ಕೆಲಸಗಳನ್ನು ಮಾಡುವುದನ್ನು ತಪ್ಪಿಸಲು ನಕಾರಾತ್ಮಕ ಶಕ್ತಿಗಳಿಂದ(Negative Energy) ನೇರವಾಗಿ ರಕ್ಷಿಸುತ್ತದೆ.
ಮಾಘ ಮಾಸದ(Maga Masa) ಮಧ್ಯದಲ್ಲಿ ಮೌನಿ ಅಮವಾಸ್ಯೆ ಬರುತ್ತದೆ. ಈ ಬಾರಿ 2023 21ರಂದು ಬಂದಿದ್ದು, ಇದನ್ನು ಮಾಘಿ ಅಮವಾಸ್ಯೆ ಎಂದೂ ಸಹ ಕರೆಯಲಾಗುತ್ತದೆ. ಸಾಮಾನ್ಯವಾಗಿ ಮಾಘ ಮಾಸದಲ್ಲಿ ಗಂಗಾ ಸ್ನಾನ(Ganga) ಪವಿತ್ರ ಎಂದು ಹೇಳಲಾಗುತ್ತದೆ. ಈ ಮಾಸದಲ್ಲಿ ಗಂಗಾ ಸ್ನಾನ ಮಾಡುವುದರಿಂದ ಮೋಕ್ಷ(Moksha) ಮತ್ತು ಪಾಪಗಳಿಂದ ಮುಕ್ತಿ ಪಡೆಯಬಹುದು ಎನ್ನಲಾಗುತ್ತದೆ. ಪೌಷ ಪೂರ್ಣಿಮೆಯಂದು ಗಂಗಾ ನದಿಯ ಸ್ನಾನ ಪ್ರಾರಂಭವಾಗುತ್ತದೆ ಮತ್ತು ಮಾಘ ಪೂರ್ಣಿಮೆಯಂದು ಕೊನೆಗೊಳ್ಳುತ್ತದೆ. ಮೌನಿ ಅಮಾವಾಸ್ಯೆಯಂದು, ಗಂಗಾನದಿಯ ನೀರು ಕುಡಿಯುವುದು ಮತ್ತು ಸ್ನಾನ ಮಾಡುವವರಿಗೆ ಜ್ಞಾನೋದಯವನ್ನು ಪಡೆಯಲು ಸಹಾಯ ಮಾಡುತ್ತದೆ ಎಂಬ ನಂಬಿಕೆ ಇದೆ.
ಮೌನಿ ಅಮವಾಸ್ಯೆ 2023 ಯಾವಾಗ?
ಹಿಂದೂ ಕ್ಯಾಲೆಂಡರ್ ಪ್ರಕಾರ, ಮೌನಿ ಅಮವಾಸ್ಯೆಯು ಜನವರಿ 21, 2023 ರಂದು 06:17 ಸಂಜೆ ಪ್ರಾರಂಭವಾಗಿ ಜನವರಿ 22 ರಂದು ಮಧ್ಯಾಹ್ನ 02:22 ಕ್ಕೆ ಕೊನೆಗೊಳ್ಳುತ್ತದೆ. ಈ ದಿನಕ್ಕೆ ಸಂಬAಧಿಸಿದ ಮತ್ತೊಂದು ಪ್ರಮುಖ ಆಚರಣೆ ಎಂದರೆ ಅದು ಗಂಗಾ ಸ್ನಾನ. ಕುಂಭಮೇಳ(Kumbamela) ಮತ್ತು ಮಾಘ ಮೇಳಗಳು(Magha Mela) ಈ ಸಂದರ್ಭಕ್ಕೆ ಸೂಕ್ತವಾಗಿವೆ. ಉತ್ತರ ಭಾರತದಲ್ಲಿ, ವಿಶೇಷವಾಗಿ ಪ್ರಯಾಗ್‌ರಾಜ್‌ನಲ್ಲಿ, ಜನರು ಗಂಗಾ ಸ್ನಾನ ಮಾಡುವುದು ಇದೇ ಕಾರಣಕ್ಕೆ. ಈ ಘಟನೆಯನ್ನು ಕುಂಭ ಪರ್ವ್ ಅಥವಾ ಅಮೃತ ಯೋಗದ ದಿನ ಎಂದು ಕರೆಯಲಾಗುತ್ತದೆ. ಆಂಧ್ರಪ್ರದೇಶದಲ್ಲಿ ಮೌನಿ ಅಮವಾಸ್ಯೆಯಂದು ಜನರು ಚೋಳಂಗಿ ಅಮವಾಸ್ಯೆ(Cholangi Amavasye) ಎಂದು ಆಚರಿಸುತ್ತಾರೆ. ಅಲ್ಲದೆ ಭಾರತದ ಇತರೆ ಪ್ರದೇಶಗಳಲ್ಲಿ ದರ್ಶ ಅಮವಾಸ್ಯೆ(Darsh Amavasye) ಎಂದೂ ಜನಪ್ರಿಯವಾಗಿದೆ.
1337 ವರ್ಷಗಳಲ್ಲೇ ಭೂಮಿಗೆ ಅತಿ ಸಮೀಪ ಬರಲಿರುವ ಚಂದ್ರ! ಇಂದೇ ಈ ಖಗೋಳ ಕೌತುಕ
ಅಮವಾಸ್ಯೆ ಆಚರಣೆ ಹೇಗಿರಬೇಕು?
1. ಹಿಂದೂ ಪಂಚಾAಗದ ಪ್ರಕಾರದ ಸೂರ್ಯೋದಯದ ಸಮಯದಲ್ಲಿ ಬೇಗ ಎದ್ದು ಗಂಗಾ ಸ್ನಾನ ಮಾಡಬೇಕು. ಯಾತ್ರಾ ಸ್ಥಳಕ್ಕೆ ಹೋಗಲಾಗದಿದ್ದಲ್ಲಿ ಮನೆಯಲ್ಲೇ ನೀರಿಗೆ ಗಂಗಾ ಜಲವನ್ನು ಹಾಕಿಕೊಂಡು ಸ್ನಾನ ಮಾಡಬಹುದು.
2. ಸ್ನಾನ ಮಾಡುವಾಗ ಶಾಂತವಾಗಿರುವುದು(Silent) ಬಹಳ ಮುಖ್ಯ. ಹಾಗಾಗಿ ಸ್ನಾನ ಮಾಡುವಾಗ ಬ್ರಹ್ಮ ದೇವರನ್ನು(Lord Brahma) ಪೂಜಿಸಬೇಕು ಮತ್ತು ಗಾಯತ್ರಿ ಮಂತ್ರವನ್ನು ಪಠಿಸಬೇಕು.
3. ಸ್ನಾನದ ನಂತರ ಮಾತನಾಡದೇ ಧ್ಯಾನಕ್ಕೆ(Meditation) ಕುಳಿತುಕೊಳ್ಳಿ. ಈ ಧ್ಯಾನದಲ್ಲಿ ನಿಮ್ಮ ಗಮನವನ್ನು ಕೇಂದ್ರೀಕರಿಸಲು(Concentrate) ಮತ್ತು ಆಂತರಿಕ ಶಾಂತಿಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಅಲ್ಲದೆ ಈ ಮೌನಿ ಅಮವಾಸ್ಯೆಯಂದು ಯಾವುದೇ ತಪ್ಪು ಮಾಡುವುದನ್ನು ತಪ್ಪಿಸಿ.
4. ಮೌನಿ ಅಮವಾಸ್ಯೆಯಂದು ಮೌನ ವ್ರತವನ್ನು ಮಾಡುವುದರಿಂದ ಮಾತನಾಡುವುದರಿಂದ ದೂರವಿರಬಹುದು.
5. ಇಡೀ ದಿನ ಮೌನವನ್ನು ಆಚರಿಸಲು ಸಾಧ್ಯವಾಗದಿದ್ದರೆ, ಅವನು ಪೂಜಾ ವಿಧಿವಿಧಾನಗಳು ಮುಗಿಯುವವರೆಗೂ ಮೌನವಾಗಿರಬೇಕು.
6. ಹಿಂದೂ ಧರ್ಮದಲ್ಲಿ, ಮೌನಿ ಅಮವಾಸ್ಯೆಯ ದಿನದಂದು ಪಿತೃ ದೋಷ(Pithru Dosha) ನಿವಾರಣೆಗೆ ಸೂಕ್ತವಾಗಿದೆ. ಹೀಗಾಗಿ, ಕ್ಷಮೆ(Sorry) ಮತ್ತು ಆಶೀರ್ವಾದವನ್ನು(Blessings) ಪಡೆಯಲು ಅವರ ಪಿತೃಗಳಿಗೆ ಅಥವಾ ಪೂರ್ವಜರಿಗೆ ತರ್ಪಣವನ್ನು ಅರ್ಪಿಸಿ. ಇದಲ್ಲದೆ, ಜನರಿಗೆ, ನಾಯಿಗಳು, ಕಾಗೆಗಳು(Crow), ಹಸುಗಳು(Cow) ಮತ್ತು ಕುಷ್ಠರೋಗಿಗಳಿಗೆ ಆಹಾರವನ್ನು ನೀಡಬಹುದು.
7. ಈ ದಿನ ದಾನ ನೀಡುವುದು ಪ್ರಮುಖ ಆಚರಣೆಯಾಗಿದೆ. ಬಡವರು ಮತ್ತು ನಿರ್ಗತಿಕರಿಗೆ ಆಹಾರ, ಬಟ್ಟೆ(Cloths) ಮತ್ತು ಇತರೆ ಅಗತ್ಯ ವಸ್ತುಗಳನ್ನು ದಾನ ಮಾಡಿ. ಶನಿದೇವನಿಗೆ ಎಳ್ಳೆಣ್ಣೆ ಅರ್ಪಿಸುವ ನಂಬಿಕೆಯೂ ಇದೆ.
ಮೌನಿ ಅಮವಾಸ್ಯೆಯ ಮಹತ್ವ
ಹಿಂದೂ ಧರ್ಮದಲ್ಲಿ, ಮೌನದ ಅಭ್ಯಾಸವು ಆಧ್ಯಾತ್ಮಿಕ ಶಿಸ್ತಿನ ಅವಿಭಾಜ್ಯ ಅಂಗವಾಗಿದೆ. ಮೌನಿ ಎಂಬ ಪದವು ಮತ್ತೊಂದು ಹಿಂದಿ ಪದ ಮುನಿಯಿಂದ ಬಂದಿದೆ, ಅಂದರೆ ಸನ್ಯಾಸಿ(Saint) (ಸಂತ), ಮೌನವಾಗಿರುವವನು. ಆದ್ದರಿಂದ ಮೌನ ಎಂಬ ಪದವು ಆತ್ಮದೊಂದಿಗೆ ಏಕತೆಯನ್ನು ಸಾಧಿಸುವುದನ್ನು ಸೂಚಿಸುತ್ತದೆ.
ಗುರು ಆದಿ ಶಂಕರಾಚಾರ್ಯರು(Adi Shankaracharya) ಸನ್ಯಾಸಿಯ ಮೂರು ಪ್ರಮುಖ ಗುಣಗಳಲ್ಲಿ ಮೌನವೂ ಒಂದೆAದು ವಿವರಿಸಿದ್ದಾರೆ. ಆಧುನಿಕ ಕಾಲದಲ್ಲಿ, ರಮಣ ಮಹರ್ಷಿ, ಹಿಂದೂ ಗುರು, ಆಧ್ಯಾತ್ಮಿಕ ಸಾಧನೆಗಾಗಿ ಮೌನ ಅಭ್ಯಾಸವನ್ನು ಬೋಧಿಸಿದರು. ಅವನಿಗೆ, ಮೌನವು ಆಲೋಚನೆ ಅಥವಾ ಮಾತಿಗಿಂತ ಹೆಚ್ಚು ಶಕ್ತಿಯುತವಾಗಿದೆ. ಇದು ವ್ಯಕ್ತಿಯನ್ನು ತನ್ನೊಂದಿಗೆ ಸಂಪರ್ಕಿಸುತ್ತದೆ. ಚಂಚಲ ಮನಸ್ಸನ್ನು ಶಾಂತಗೊಳಿಸಲು ಮೌನಿ ಅಮವಾಸ್ಯೆಯನ್ನು ಅಭ್ಯಾಸ ಮಾಡಬೇಕು. ಮೌನಿ ಅಮವಾಸ್ಯೆಯ ದಿನ ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಬಹಳ ಮುಖ್ಯ. ಏಕೆಂದರೆ ಈ ದಿನದಂದು ಗಂಗಾ ನದಿಯ ನೀರು ಅಮೃತವಾಗುತ್ತದೆ. ಪೌಶ್ ಪೂರ್ಣಿಮೆಯಿಂದ ಮಾಘ ಪೂರ್ಣಿಮೆಯವರೆಗಿನ ಸಂಪೂರ್ಣ ಮಾಘ ಮಾಸವು ಗಂಗಾ ಸ್ನಾನಕ್ಕೆ ಸೂಕ್ತವಾಗಿದೆ.
ಏನು ದಾನ ಮಾಡಬೇಕು?
ಗಂಗಾ ಸ್ನಾನ ಮಾಡಿದ ನಂತರ ಮೌನವನ್ನು ಆಚರಿಸಬೇಕು. ಸದ್ಗುಣದ ಫಲಿತಾಂಶಗಳನ್ನು ಹೆಚ್ಚಿಸುತ್ತದೆ. ಹೆಚ್ಚು ಧಾರ್ಮಿಕ ಮಹತ್ವವನ್ನು ಹೊಂದಿದ್ದು, ದಾನವೂ ಅಷ್ಟೇ ಪ್ರಾಧಾನ್ಯ ಪಡೆದಿದೆ. ಈ ದಿನದಂದು ಪೂರ್ವಜರ ಹೆಸರಿನಲ್ಲಿ ದಾನ ಮಾಡುವುದರಿಂದ ಪೂರ್ವಜರಿಗೆ ಶಾಂತಿ ಸಿಗುತ್ತದೆ. ಉಪವಾಸ ಮಾಡಿ ಹಣ, ವಸ್ತç, ಗೋವು, ಭೂಮಿ, ಚಿನ್ನ, ಧಾನ್ಯ, ಎಳ್ಳು ಮತ್ತು ಇತರೆ ಪ್ರಿಯ ವಸ್ತುಗಳನ್ನು ದಾನ ಮಾಡಬೇಕು.
Shani Amavasya 2023: ಇಂದು ಶನಿ ಚಾಲೀಸಾ ಪಠಣದಿಂದ ದೋಷಮುಕ್ತಿ.. ಇಲ್ಲಿದೆ ಶನಿ ಚಾಲೀಸಾ ಪಠ್ಯ
ಜ್ಯೋತಿಷ್ಯದೊಂದಿಗೆ ಸಂಬಂಧ
ಮೌನಿ ಅಮಾವಾಸ್ಯೆಯ ಮಹತ್ವವು ಧರ್ಮ ಮತ್ತು ಜ್ಯೋತಿಷ್ಯಕ್ಕೆ ಸಂಬAಧಿಸಿದೆ. ಮಾಘ ಮಾಸದಲ್ಲಿ ಚಂದ್ರ(Moon) ಮತ್ತು ಸೂರ್ಯನ(Sun) ಮಕರ ಸಂಕ್ರಾAತಿಯು ಮೌನಿ ಅಮವಾಸ್ಯೆಗೆ ಸೂಕ್ತವಾಗಿದೆ ಎಂದು ವೈದಿಕ ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಈ ದಿನದಂದು, ಚಂದ್ರ ಮತ್ತು ಸೂರ್ಯನ ಸಂಯೋಜಿತ ಶಕ್ತಿ ಹೆಚ್ಚಾಗಿರುತ್ತದೆ. ಮಕರ ರಾಶಿಯು ಹತ್ತನೇ ರಾಶಿಯಾಗಿದ್ದು, ಜಾತಕದ ಹತ್ತನೇ ಮನೆಯಲ್ಲಿ ಸೂರ್ಯನು ಬಲಶಾಲಿಯಾಗಿದ್ದಾನೆ. ಜ್ಯೋತಿಷ್ಯದಲ್ಲಿ, ಸೂರ್ಯನು ತಂದೆ ಮತ್ತು ಧರ್ಮದ ಅಂಶವಾಗಿದೆ. ಹಾಗಾಗಿ ಮಕರ ಸಂಕ್ರಾAತಿಯಲ್ಲಿ ಸೂರ್ಯ ಮತ್ತು ಚಂದ್ರರ ಸಂಗಮವೇ ಮೌನಿ ಅಮವಾಸ್ಯೆಯ ಹಬ್ಬ. ಆದ್ದರಿಂದ, ಈ ದಿನದಂದು ದಾನ ಮಾಡುವುದರಿಂದ ಹೆಚ್ಚಿನ ಲಾಭ ಪಡೆಯಬಹುದು.