ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವವನ್ನು ಆ.29ರಿಂದ ಸೆ.4ರವರೆಗೆ ಮಠದಲ್ಲಿ ನಡೆಸುತ್ತಿದ್ದು, ಅದ್ಧೂರಿ ಆಚ​ರ​ಣೆಗೆ ಅಗತ್ಯವಾದ ಎಲ್ಲ ರೀತಿಯ ತಯಾ​ರಿಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ತಿಳಿಸಿದರು.

ರಾಯಚೂರು (ಆ.17) :ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವವನ್ನು ಆ.29ರಿಂದ ಸೆ.4ರವರೆಗೆ ಮಠದಲ್ಲಿ ನಡೆಸುತ್ತಿದ್ದು, ಅದ್ಧೂರಿ ಆಚ​ರ​ಣೆಗೆ ಅಗತ್ಯವಾದ ಎಲ್ಲ ರೀತಿಯ ತಯಾ​ರಿಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ತಿಳಿಸಿದರು.

ಮಠದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರಾ​ಧನಾ ಮಹೋ​ತ್ಸವ ಹಿನ್ನೆಲೆಯಲ್ಲಿ ಮಠದಲ್ಲಿ ಸಪ್ತ​ರಾ​ತ್ರೋ​ತ್ಸ​ವ​ ಜರು​ಗ​ಲಿದ್ದು ನಿತ್ಯ ಧಾರ್ಮಿಕ, ಆಧ್ಯಾ​ತ್ಮಿ​ಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆಂಧ್ರಪ್ರದೇಶ ರಾಜ್ಯಪಾಲ ನ್ಯಾಯಮೂರ್ತಿ ಅಬ್ದುಲ್‌ ನಜೀರ್‌ ಕಾರ್ಯಕ್ರಮದಲ್ಲಿ ಭಾಗ​ವ​ಹಿ​ಸ​ಲಿದ್ದಾರೆ. ವಿದ್ವಾನ್‌ ಶ್ರೀರಾಮ ವಿಠ್ಠಲಚಾರ್ಯ, ವಿದ್ವಾನ್‌ ಗರಿಕಪಾ​ಟಿ ನರಸಿಂಹರಾವ್‌, ಎನ್‌. ಚಂದ್ರಶೇಖರನ್‌ ಹಾಗೂ ಎಂಐಟಿ ಸಂಸ್ಥಾಪಕ ಡಾ.ವಿಶ್ವನಾಥ್‌ ಡಿ.ಕಾರತ್‌ ಅವರಿಗೆ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾ​ನಿ​ಸ​ಲಾ​ಗು​ತ್ತದೆ ಎಂದು ಹೇಳಿ​ದರು.

ಗುರುವಾರ ರಾಯರ ನೆನೆಯಮ್ಮ.... ಮಂತ್ರಾಲಯದಲ್ಲಿ ರಥೋತ್ಸವದ ದಿನವಿದು

ಶಕ್ತಿ ಯೋಜನೆ ಬಗ್ಗೆ ಗಮನ ಅಗತ್ಯ: ಇದೇ ವೇಳೆ, ರಾಜ್ಯ​ ಸರ್ಕಾರದ ಗ್ಯಾರಂಟಿ ‘ಶಕ್ತಿ’ ಯೋಜ​ನೆ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಯೋಜನೆಯ ಪರಿ​ಣಾ​ಮ-ದುಷ್ಪ​ರಿ​ಣಾ​ಮ​ಗ​ಳನ್ನು ನಾವು ಗಮ​ನಿ​ಸ​ಬೇಕು. ಸರ್ಕಾ​ರದ ಮೇಲೆ ಯೋಜನೆಯಿಂದ ಆರ್ಥಿಕ ಆಗುತ್ತದೆ. ಆದರೆ ಮಹಿಳೆಯರು ಹೊರಗಡೆ ಓಡಾಡುವ ಸೌಲಭ್ಯವೂ ಇದೆ. ಇದರಿಂದಾಗಿ ಮನೆ​ಯಲ್ಲಿರುವ ಪುರು​ಷ​ರಿಗೆ ಕೆಲ ತೊಂದ​ರೆ​ಗ​ಳಾ​ಗು​ತ್ತಿವೆ. ಈ ಎಲ್ಲ​ವನ್ನು ಫಲಾ​ನು​ಭ​ವಿ​ಗಳು ಹಾಗೂ ಸರ್ಕಾ​ರ​ಗಳು ಗಮ​ನ​ದ​ಲ್ಲಿ​ಟ್ಟು​ಕೊಳ್ಳಬೇಕು ಎಂದು ಅಭಿ​ಪ್ರಾಯ ವ್ಯಕ್ತ​ಪ​ಡಿ​ಸಿ​ದರು.


ಬೆಂಗಳೂರಿನ ಭಕ್ತರೊಬ್ಬರು ಮಂತ್ರಾಲಯದಲ್ಲಿ 100 ಕೊಠಡಿಗಳ ವಸತಿ ಸಮುಚ್ಚಯ ನಿರ್ಮಾಣ ಮಾಡಲು ಮುಂದಾಗಿದ್ದು, ಅದಕ್ಕೆ ಆ.21ರಂದು ಅಡಿಗಲ್ಲು ಹಾಕಲಾಗುವುದು. ಅಲ್ಲದೆ, 200 ಕಾರುಗಳಿಗೆ ಸ್ಥಳಾವಕಾಶ ಇರುವ ಪಾರ್ಕಿಂಗ್‌ ವ್ಯವಸ್ಥೆ, 3 ಭಾಗಗಳಲ್ಲಿ ಇಂಟರ್‌ ಲಾಕಿಂಗ್‌ ವ್ಯವಸ್ಥೆ, ಬೃಂದಾವನ ಗಾರ್ಡನ್‌ ಹಿಂಭಾಗದಲ್ಲಿ ವಸತಿ ಸಮುದಾಯ ಭವನ, ಮಂಚಾಲಮ್ಮ ದೇವಸ್ಥಾನ ಪಕ್ಕದ ನದಿ​ಗೆ ತೆರ​ಳುವ ದಾರಿ​ಯಲ್ಲಿ ಕಾರಿಡಾರ್‌, ಹರಿ​ಕ​ಥಾ​ಮೃತ ಸಂಪೂರ್ಣ ಮಾಹಿ​ತಿ​ ಒ​ಳ​ಗೊಂಡ ಮ್ಯೂಸಿಯಂ ಉದ್ಘಾ​ಟನೆ ಸೇರಿ ಹತ್ತು ಹಲವು ಯೋಜನೆಗಳನ್ನು ರೂಪಿ​ಸಿದ್ದು, ಅವು​ಗ​ಳಿ​ಗೆ ಶೀಘ್ರ ಚಾಲನೆ ನೀಡÜಲಾಗುವುದು ಎಂದು ಹೇಳಿದರು.

ಮಂತ್ರಾಲಯದಲ್ಲಿ ಸಾಮೂಹಿಕ ಅಷ್ಟೋತ್ತರ ಪಾರಾಯಣ

ತುಂಗಭದ್ರಾ ನದಿ ಖಾಲಿ!

ಪ್ರತಿ ವರ್ಷ ‌ರಾಯರ ಆರಾಧನಾ ವೇಳೆ ತುಂಬಿ ಹರಿಯುತ್ತಿದ್ದ ತುಂಗಭದ್ರಾ ನದಿ ಈ ವರ್ಷ ಮಳೆ ಕೊರತೆಯಿಂದ ಖಾಲಿ ಖಾಲಿಯಾಗಿದೆ. ತುಂಗಭದ್ರಾ ನದಿಯಲ್ಲಿ ಮಿಂದು ರಾಯರ ದರ್ಶನ ಪಡೆಯಲೆಂದು ಬರುತ್ತಿದ್ದ ಭಕ್ತರು. ಈ ಬಾರಿ ಮಂತ್ರಾಲಯ ಬಳಿ ಇರುವ ತುಂಗಭದ್ರಾ ನದಿ ಖಾಲಿಯಾಗಿ ನಿರಾಶೆ ಮೂಡಿಸಿದೆ. ಎತ್ತ ನೋಡಿದ್ರೂ ಬರೀ ಕಲ್ಲುಬಂಡೆಗಳ ದರ್ಶನ. ನದಿಯಲ್ಲಿ ಅಲ್ಪಸ್ವಲ್ಪ ನೀರು ಲಭ್ಯವಿದ್ದು. ಭಕ್ತರು ಪುಣ್ಯಸ್ನಾನಕ್ಕಾಗಿ ತುಂಗಭದ್ರಾ ನದಿಯಲ್ಲಿ ಅಲೆದಾಡುವಂತಾಗಿದೆ. ಹರಿಯುವ ನೀರಿನಲ್ಲಿ ಭಕ್ತರು ಸ್ನಾನ ಮಾಡಲು ಹರಸಾಹಸ ಪಡುತ್ತಿದ್ದಾರೆ.