ಮಂತ್ರದಲ್ಲಿ ಅಪಾರ ಶಕ್ತಿಯಿದೆ. ಜನರು ಪ್ರತಿ ನಿತ್ಯ ಮಂತ್ರ ಜಪಿಸೋದ್ರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ಸಿಗುವುದು ಮಾತ್ರವಲ್ಲ ಕೆಲ ರೋಗ ಕಡಿಮೆಯಾಗುತ್ತದೆ. ಆರ್ಥಿಕ ವೃದ್ಧಿಗೂ ಇದು ಸಹಕಾರಿ. 

ಬದುಕೆಂದರೆ ಅನೇಕ ಕಷ್ಟ ನಷ್ಟಗಳು, ಏಳು ಬೀಳುಗಳು ಇದ್ದೇ ಇರುತ್ತೆ. ಎಲ್ಲ ಪರಿಸ್ಥಿತಿಗಳನ್ನೂ ಮೆಟ್ಟಿ ನಿಲ್ಲುವುದೇ ಜೀವನ. ಆದರೆ ಕಷ್ಟದ ಪರಿಸ್ಥಿತಿಗಳನ್ನು ಮೆಟ್ಟಿನಿಲ್ಲುವುದು ತಿಳಿದಷ್ಟು ಸುಲಭವಲ್ಲ. ಅಂತಹ ಸಮಯವನ್ನು ಎದುರಿಸಲು ಅಷ್ಟೇ ಧೈರ್ಯ, ಛಲ ಬೇಕು. ಒಂದಾದ ಮೇಲೆ ಒಂದರಂತೆ ಬರುವ ಕಷ್ಟಗಳು ಎಂತವರನ್ನೂ ಕುಗ್ಗುವಂತೆ ಮಾಡುತ್ತವೆ. ಸಾಯುವವನಿಗೆ ಹುಲ್ಲು ಕಡ್ಡಿಯ ಆಸರೆ ಎನ್ನುವ ಹಾಗೆ ಅಂತಹ ಸಮಯದಲ್ಲಿ ಯಾವುದಾದರೂ ಒಂದು ಶಕ್ತಿ ಜೊತೆಗಿದ್ದರೆ ಅದೇ ಎಷ್ಟೋ ಧೈರ್ಯ ನೀಡುತ್ತದೆ. 

Add Asianetnews Kannada as a Preferred SourcegooglePreferred

ಇಂದು ನಾವು ನಿಮಗೆ ಹೇಳಲಿರುವ ಈ ಮಂತ್ರ (Mantra) ಗಳು ಕೂಡ ಆರ್ಥಿಕ (Financial) ಸಂಕಷ್ಟದಲ್ಲಿರುವವರಿಗೆ ಊರುಗೋಲಾಗಿದೆ. ದೇವರ (God) ಈ ಮಂತ್ರಗಳಿಂದ ಧನವನ್ನು ನಿಮ್ಮೆಡೆ ಆಕರ್ಷಿಸಬಹುದಾಗಿದೆ. ಇಂತಹ ಮಂತ್ರೋಚ್ಛಾರಣೆಯಿಂದ ಜೀವನ (Life) ದಲ್ಲಿ ಎದುರಾದ ಆರ್ಥಿಕ ಕಷ್ಟಗಳು ದೂರವಾಗುತ್ತದೆ.

ಕಷ್ಟ ದೂರ ಮಾಡುತ್ತೆ ಈ ಮಂತ್ರ :
ಕುಬೇರನ ಮಂತ್ರ :
“ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ, ಧನ ಧಾನ್ಯಾಧಿಪತಯೇ ಧನ ಧಾನ್ಯ ಸಮೃದ್ಧಿಂ ಮೆ ದೇಹಿ ದಾಪಯ ಸ್ವಾಹಾ||”
ನೀವು ಹಣದ ಕೊರತೆಯಿಂದ ಬಳಲುತ್ತಿದ್ದರೆ ಪ್ರತಿನಿತ್ಯ ಕುಬೇರನ ಈ ಮಂತ್ರವನ್ನು 108 ಬಾರಿ ಪಠಿಸಬೇಕು. ಈ ಕುಬೇರ ಮಂತ್ರವನ್ನು ರಾವಣ ಕೂಡ ಜಪಿಸುತ್ತಿದ್ದ ಎಂದು ಹೇಳಲಾಗುತ್ತೆ.

Mahashivratri 2023: ಕನಸಿನಲ್ಲಿ ಹಾವು ಬರುತ್ತಾ? ಹಬ್ಬಕ್ಕೂ ಮುನ್ನ ಹಾವಿನ ಕನಸು ಬಿದ್ದರೆ ಸಂಪತ್ತಿನ ಸೂಚನೆ!

ಲಕ್ಷ್ಮಿಯ ಮಂತ್ರ : “ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ ಪ್ರಸೀದ ಶ್ರೀಂ ಹ್ರೀಂ ಶ್ರೀಂ ಓಂ ಮಹಾಲಕ್ಷ್ಮೈ ನಮಃ|”
ಇದು ಲಕ್ಷ್ಮಿ ದೇವಿಯ ಮೂಲಮಂತ್ರವಾಗಿದೆ. ಈ ಮಂತ್ರದ ಪಠನದಿಂದ ಜೀವನದಲ್ಲಿ ಸುಖ ಸಮೃದ್ಧಿ ನೆಲೆಸುತ್ತದೆ.

ಆರ್ಥಿಕ ಸಮಸ್ಯೆಯನ್ನು ದೂರ ಮಾಡುವ ಮಂತ್ರ :  “ಓಂ ಹ್ರೀಂ ಶ್ರೀ ಕ್ರೀಂ ಕ್ಲೀಂ ಲಕ್ಷ್ಮಿ ಮಮ ಗೃಹೇ ಧನ ಪೂರಯೇ, ಧನ ಪೂರಯೇ, ಚಿಂತಾಯೇ ದೂರಯೇ ದೂರಯೇ ಸ್ವಾಹಾಃ|”
ಈ ಮಂತ್ರವನ್ನು ಪ್ರತಿನಿತ್ಯ ಹೇಳುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗಿ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ.

ಧನ್ವಂತರಿ ಮಂತ್ರ : ಓಂ ನಮೋ ಭಗವತೇ ಮಹಾಸುದರ್ಶನಾಯ ವಾಸುದೇವಾಯ ಧನ್ವಂತರಾಯೇಃ
ಅಮೃತಕಲಶ ಹಸ್ತಾಯ ಸರ್ವಭಯ ವಿನಾಶಾಯ ಸರ್ವರೋಗನಿವಾರಣಾಯ
ತ್ರಿಲೋಕಪಥಾಯ ಶ್ರೀ ಮಹಾವಿಷ್ಣುಸ್ವರೂಪ
ಶ್ರೀ ಧನ್ವಂತರಿ ಸ್ವರೂಪ ಶ್ರೀ ಶ್ರೀ ಶ್ರೀ ಔಷಧಚಕ್ರ ನಾರಾಯಣಾಯ ನಮಃ||
ಇದು ವಿಷ್ಣು ಸ್ವರೂಪಿಯಾದ ಧನ್ವಂತರಿಯ ಪೌರಾಣಿಕ ಮಂತ್ರವಾಗಿದೆ. ಇದನ್ನು ನಿಯಮಿತವಾಗಿ ಪಠಿಸುತ್ತ ಬಂದರೆ ಧನ ಸಂಪತ್ತು ಹೆಚ್ಚುತ್ತದೆ.

ಗಣೇಶನ ಮಂತ್ರ : ಓಂ ಗಂ ಗಣಪತಯೇ ನಮಃ
ಲಕ್ಷ್ಮಿ ಗಣೇಶನಲ್ಲಿ ತನ್ನ ಮಗನನ್ನು ಕಾಣುತ್ತಾಳೆ. ಹಾಗಾಗಿ ಪ್ರತಿ ದಿನ ಗಣೇಶನ ಈ ಮಂತ್ರವನ್ನು 108 ಬಾರಿ ಪಠಿಸುವುದರಿಂದ ನಿಮಗೆ ಲಕ್ಷ್ಮಿ ಕಟಾಕ್ಷ ಸಿಗುತ್ತದೆ.

ವಿಷ್ಣು ಮಂತ್ರ : ಓಂ ಭೂರಿದಾ ಭೂರಿ ದೇಹಿನೋ, ಮಾ ದಭ್ರಂ ಭೂರ್ಯಾ ಭರ| ಭೂರಿ ಘೋದೀಂದ್ರ ದಿತ್ಸಸಿ|
ಓಂ ಭೂರಿದ ತ್ಯಸಿ ಶೃತಃ ಪುರೂತ್ರಾ ಶೂರ ವೃತಹನ್| 
ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ವಿಷ್ಣುವಿನ ಈ ಜಪವನ್ನು ನೀವು ನಿತ್ಯವೂ ಜಪಿಸಬಹುದು.

ಧನಲಾಭವನ್ನು ಹೆಚ್ಚಿಸುತ್ತೆ ಈ ಮಂತ್ರ : ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಮ್| ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್|| ಓಂ ಗ್ರಾಂ ಗ್ರೀಂ ಗ್ರೌ ಸಃ ಗುರವೇ ನಮಃ|
ಈ ಮಂತ್ರದಿಂದ ನಿಮ್ಮ ಜೀವನದಲ್ಲಿನ ಹಣದ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಜಾತಕದಲ್ಲೇ ಸಂಪತ್ತನ್ನು ಹೆಚ್ಚಿಸುವ ಗುರುವಿನ ಈ ಮಂತ್ರದ ಜಪವನ್ನು ಅವಶ್ಯವಾಗಿ ಮಾಡಬೇಕು.

ಹನುಮಾನ ಮಂತ್ರ : ಓಂ ಹನುಮತೇ ನಮಃ
ಪ್ರತಿದಿನ ಈ ಮಂತ್ರವನ್ನು ಹೇಳುವುದರಿಂದ ಹಣಕಾಸು ವಲಯದಲ್ಲಿ ನಿಮ್ಮ ಏಳ್ಗೆಯಾಗುತ್ತದೆ.

ಶನಿವಾರ ನಿಮ್ಮ ಕಣ್ಣಿಗೆ ಈ ವಿಷಯಗಳು ಬಿದ್ದರೆ ಶನಿಯ ಆಶೀರ್ವಾದ ಇದೆ ಎಂದರ್ಥ!

ಶಿವನ ಮಂತ್ರ : ಓಂ ನಮಃ ಶಿವಾಯ
ಅತ್ಯಂತ ಸರಳವಾದ ಈ ಮಂತ್ರವನ್ನು 108 ಬಾರಿ ಹೇಳುವುದರಿಂದ ನಿಮ್ಮ ಎಲ್ಲ ತೊಂದರೆಗಳೂ ನಿವಾರಣೆಯಾಗುತ್ತದೆ.

ಹಣದ ತೊಂದರೆಯನ್ನು ನೀಗಿಸುವ ಮಂತ್ರ : “ಧನಾಯ ನಮೋ ನಮಃ ಓಂ ಧನಾಯ ನಮಃ
ಈ ಎರಡು ಮಂತ್ರವನ್ನು ಮಾಲೆಯ ಜೊತೆ ಪಠಿಸಿದರೆ ಒಳ್ಳೆಯ ಫಲ ಸಿಗುತ್ತೆ.