Asianet Suvarna News Asianet Suvarna News

ಉತ್ತರ ಕನ್ನಡ: ಮಳಗಿ ಮಾರಿಕಾಂಬಾ ದೇವಿಯ ಸಂಭ್ರಮದ ರಥೋತ್ಸವ

ಎರಡು ವರ್ಷಕ್ಕೊಂದು ಬಾರಿ ನಡೆಯುವ ನೂರಾರು ವರ್ಷ ಇತಿಹಾಸವುಳ್ಳ ತಾಲೂಕಿನ ಮಳಗಿ ಗ್ರಾಮ ದೇವತೆ ಶ್ರೀ ಮಾರಿಕಾಂಬಾ ದೇವಿಯ 26ನೇ ಜಾತ್ರಾ ಮಹೋತ್ಸವಕ್ಕೆ ಶಾಸೊತ್ರೕತ್ತರವಾಗಿ ಚಾಲನೆ ದೊರೆತಿದ್ದು, ಬುಧವಾರ ಭಾರೀ ಜನಸ್ತೋಮದೊಂದಿಗೆ ದೇವಿಯ ರಥೋತ್ಸವ ಅದ್ಧೂರಿಯಾಗಿ ಜರುಗಿತು.

Malagi marikambadevi rathotsav at mundagoda uttarakannada rav
Author
First Published Mar 2, 2023, 9:16 AM IST | Last Updated Mar 2, 2023, 9:16 AM IST

ಮುಂಡಗೋಡ (ಮಾ.2) : ಎರಡು ವರ್ಷಕ್ಕೊಂದು ಬಾರಿ ನಡೆಯುವ ನೂರಾರು ವರ್ಷ ಇತಿಹಾಸವುಳ್ಳ ತಾಲೂಕಿನ ಮಳಗಿ ಗ್ರಾಮ ದೇವತೆ ಶ್ರೀ ಮಾರಿಕಾಂಬಾ ದೇವಿಯ 26ನೇ ಜಾತ್ರಾ ಮಹೋತ್ಸವಕ್ಕೆ ಶಾಸೊತ್ರೕತ್ತರವಾಗಿ ಚಾಲನೆ ದೊರೆತಿದ್ದು, ಬುಧವಾರ ಭಾರೀ ಜನಸ್ತೋಮದೊಂದಿಗೆ ದೇವಿಯ ರಥೋತ್ಸವ ಅದ್ಧೂರಿಯಾಗಿ ಜರುಗಿತು.

ಬೆಳಗ್ಗೆ ದೇವಾಲಯದಿಂದ ಹೊರಟ ದೇವಿಯ ರಥೋತ್ಸವ(Marikambadevi rathotsav) ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಪಂಚವಾದ್ಯ, ಡೊಳ್ಳು ಕುಣಿತ, ಚಂಡಿ ವಾದ್ಯ, ಗೊಂಬೆ ಕುಣಿತ, ನೃತ್ಯ ಮತ್ತು ವೇಷಭೂಷಣಗಳ ಜೊತೆಗೆ ಜಾಂಜ್‌ ಮೇಳ ಮುಂತಾದ ಸಾಂಸ್ಕೃತಿಕ ವೈಭವ ಹಾಗೂ ಭಕ್ತರ ಜಯ ಘೋಷದೊಂದಿಗೆ ವಿಜೃಂಬಣೆಯಿಂದ ಸಾಗಿತು.

Assembly election: ಚುನಾವಣೆ ಬಂದಾಗ ಮಾತ್ರ ಬಿಜೆಪಿಗೆ ಮಠ, ಮಂದಿರ ನೆನಪು: ಕಾಂಗ್ರೆಸ್ ಕಿಡಿ

ಮಾರ್ಗದುದ್ದಕ್ಕೂ ಸಹಸ್ರ ಸಹಸ್ರ ಭಕ್ತಾಧಿಗಳು ರಥದ ಮೇಲೆ ಬಾಳೆ ಹಣ್ಣು, ಉತ್ತುತ್ತಿ, ದವಸ ದಾನ್ಯ ಸೇರಿದಂತೆ ವಿವಿಧ ಹಣ್ಣು ಹಂಪಲುಗಳನ್ನು ಎಸೆದು ಭಕ್ತಿ ಸಮರ್ಪಿಸಿದರು. ಕೆಲ ಭಕ್ತರು ಕೋಳಿ ಮರಿಗಳನ್ನು ರಥದ ಮೇಲೆ ತೂರಿ ತಮ್ಮ ಹರಕೆ ತೀರಿಸಿದರು. ರಥ ಬೀದಿಯುದ್ದಕ್ಕೂ ಸಾಮಾಜಿಕ ಕಾರ್ಯಕರ್ತರಿಂದ ಶರಬತ್‌, ಮಜ್ಜಿಗೆ, ಕುಡಿಯುವ ನೀರು ಸೇರಿದಂತೆ ವಿವಿಧ ಪಾನಿಯಗಳನ್ನು ಭಕ್ತರಿಗೆ ಪೂರೈಕೆ ಮಾಡಲಾಯಿತು. ಪುರುಷರು, ಮಹಿಳೆಯರು, ವೃದ್ಧರು, ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಮಧ್ಯಾಹ್ನ 2 ಗಂಟೆಗೆ ಚೌತ ಮನೆ ಪ್ರವೇಶಿಸಿದ ರಥೋತ್ಸವ ಮೆರವಣಿಗೆ ದೇವಿಗೆ ಸೇವಾ ರೂಪದಲ್ಲಿ ಬಂದಂತಹ ಸೀರೆ ಮುಂತಾದ ವಸ್ತುಗಳ ಹರಾಜು ಪ್ರಕ್ರಿಯೆ ನಡೆಯಿತು. ಬಳಿಕ ಧಾರ್ಮಿಕ ಪೂಜಾ ವಿಧಿ ವಿಧಾನದೊಂದಿಗೆ ಜಾತ್ರಾ ಗದ್ದುಗೆಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ತದನಂತರ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು.

ಮಾಂಗಲ್ಯ ಧಾರಣೆ:

ಇದಕ್ಕೂ ಮುನ್ನ ಮಂಗಳವಾರ ರಾತ್ರಿ ದೇವಿಯ ಪ್ರತಿಷ್ಟಾಪನಾ ಪೂಜೆ ವಿನಿಯೋಗಗಳು ಲಗ್ನ ಕಾರ್ಯಕ್ರಮ ಮಾಂಗಲ್ಯ ಧಾರಣ ಜರುಗಿತು. ದೇವಿಯ ಗದ್ದುಗೆಯ ಸುತ್ತ ಸುಂದರವಾದ ಚೌತ ಮನೆ ನಿರ್ಮಾಣ ಮಾಡಲಾಗಿದ್ದು, ಭಕ್ತಾಧಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಮಾರ್ಚ 25 ರಿಂದ ಮಾರ್ಚ 30 ರವರೆಗೆ ಹಣ್ಣು ಕಾಯಿ, ಕಾಣಿಕೆ, ಹರಕೆ, ಬೇವಿನ ಉಡಿಗೆ, ತುಲಾಭಾರ ಮುಂತಾದ ಸೇವೆಗಳು ಜರುಗಲಿದ್ದು, ನಿತ್ಯ ರಾತ್ರಿ ಮನೋರಂಜನಾ ಕಾರ್ಯಕ್ರಮ ನಡೆಯಲಿವೆ ಎಂದು ದೇವಾಲಯ ಟ್ರಸ್ಟ್‌ ಕಮಿಟಿ ಅಧ್ಯಕ್ಷ ನಾಗರಾಜ ಅಂಡಗಿ ತಿಳಿಸಿದ್ದಾರೆ.

ರೈತರ ಬದುಕು ಹಸನಾಗಲಿ: ಸಚಿವ ಹೆಬ್ಬಾರ

ಲೋಕ ಕಲ್ಯಾಣಕ್ಕಾಗಿ ನೆರವೇರಿಸಲಾಗುವ ಜಾತ್ರಾ ಮಹೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕಲ್ಲದೇ, ಉತ್ತಮ ಮಳೆ ಬೆಳೆಯಿಂದ ದೇಶಕ್ಕೆ ಅನ್ನ ನೀಡುವ ರೈತನ ಬದುಕು ಹಸನವಾಗಬೇಕು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ(Shivaram Hebbar) ಹೇಳಿದರು.

ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿಗೆ ಒತ್ತಾಯ

ಬುಧವಾರ ತಾಲೂಕಿನ ಮಳಗಿ ಗ್ರಾಮ ದೇವತೆ ಶ್ರೀ ಮಾರಿಕಾಂಬಾ ದೇವಿಯ 26ನೇ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಗೆ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಹೆಚ್ಚೆಚ್ಚು ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸುವುದರಿಂದ ಮನುಷ್ಯನ ಮನಸ್ಸು ಕೂಡ ಅಧ್ಯಾತ್ಮಿಕವಾಗಿ ಗಟ್ಟಿಗೊಳ್ಳುತ್ತದೆ ಎಂದು ಹೇಳಿದರು

Latest Videos
Follow Us:
Download App:
  • android
  • ios