Hanuman Jayantiಯಂದಿನಿಂದ ಈ ರಾಶಿಗಳಿಗೆ ಮಹಾ 'ಲಕ್'ಶ್ಮಿ ಯೋಗ!
ಹನುಮ ಜಯಂತಿಯ ದಿನದಂದು ಮಹಾಲಕ್ಷ್ಮಿ ಯೋಗ ರೂಪುಗೊಳ್ಳುತ್ತಿದೆ. ಗುರುವಾರವಾಗಿರುವುದರಿಂದ ಈ ದಿನ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಒಟ್ಟಿಗೆ ಪಡೆಯಬಹುದು. ಜೊತೆಗೆ, ಹನುಮ ಮತ್ತು ರಾಮನ ಆಶೀರ್ವಾದವೂ ದಕ್ಕುತ್ತದೆ.
ಚೈತ್ರ ಮಾಸದ ಹುಣ್ಣಿಮೆಯನ್ನು ಹನುಮ ಜನ್ಮೋತ್ಸವ ಎಂದು ಆಚರಿಸಲಾಗುವುದು.. ಈ ದಿನ, ಭಕ್ತರು ಭಜರಂಗಬಲಿ ಹೆಸರಿನಲ್ಲಿ ಉಪವಾಸವನ್ನು ಆಚರಿಸುತ್ತಾರೆ ಮತ್ತು ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಬಾರಿ ಹನುಮ ಜಯಂತಿಯನ್ನು ಏಪ್ರಿಲ್ 6 ರಂದು ಆಚರಿಸಲಾಗುವುದು. ಈ ದಿನದಂದು ಭಜರಂಗಬಲಿಯ ಆಶೀರ್ವಾದ ಪಡೆಯಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಈ ಬಾರಿಯ ಹನುಮ ಜಯಂತಿ (Hanuma Jayanti) ಬಹಳ ವಿಶೇಷವಾಗಿರಲಿದೆ. ಏಕೆಂದರೆ ಈ ದಿನದಂದು ಬಹಳ ಸಂತೋಷದ ಶುಭ ಯೋಗ ಸಂಭವಿಸುತ್ತಿದೆ.
ಹನುಮ ಜಯಂತಿಯಂದು ಮಹಾಲಕ್ಷ್ಮಿ ಯೋಗ (Mahalakshmi Yoga)
ಹನುಮ ಜಯಂತಿಯ ದಿನದಂದು ಮಹಾಲಕ್ಷ್ಮಿ ಯೋಗವು ರೂಪುಗೊಳ್ಳುತ್ತಿದೆ. ಗುರುವಾರವಾಗಿರುವುದರಿಂದ ಈ ದಿನ ವಿಷ್ಣುವಿನ ದಿನವೂ ಹಾಗಿದೆ. ಹಾಗಾಗಿ ಇಂದು ಕೇವಲ ಹನುಮ, ರಾಮನ ಆಶೀರ್ವಾದವಷ್ಟೇ ಅಲ್ಲದೆ, ವಿಷ್ಣು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಒಟ್ಟಿಗೆ ಪಡೆಯಬಹುದು.
Lucky Zodiac Till 2025: 3 ವರ್ಷಗಳ ಕಾಲ ಈ ರಾಶಿಗಳಿಗಿದೆ ಶನಿ ಆಶೀರ್ವಾದ!
ಎಲ್ಲಾ ಮಂಗಳಕರ ಯೋಗಗಳಲ್ಲಿ, ಮಹಾಲಕ್ಷ್ಮಿ ಯೋಗವನ್ನು ಅತ್ಯುತ್ತಮ ಯೋಗವೆಂದು ಪರಿಗಣಿಸಲಾಗಿದೆ. ಜ್ಯೋತಿಷಿಗಳ ಪ್ರಕಾರ, ಈ ಮಹಾಲಕ್ಷ್ಮಿ ಯೋಗವು ಅದೃಷ್ಟವನ್ನು ಬದಲಾಯಿಸುವ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ.
ಜಾತಕದಲ್ಲಿ ಎರಡನೇ ಮನೆಗೆ ಶುಭ ಗ್ರಹ ಇದ್ದರೆ ಅದನ್ನು ಮಹಾಲಕ್ಷ್ಮಿ ಯೋಗ ಎಂದು ಕರೆಯಲಾಗುತ್ತದೆ. ಯಾರ ಜಾತಕದಲ್ಲಿ (Horoscope) ಈ ಯೋಗವು ರೂಪುಗೊಳ್ಳುತ್ತದೆಯೋ ಅಂತಹ ಜನರು ಅದೃಷ್ಟವಂತರಾಗುತ್ತಾರೆ. ಹನುಮ ಜಯಂತಿಯಂದು ಮಹಾಲಕ್ಷ್ಮಿ ಯೋಗದ ಜೊತೆಗೆ, ಸಂತೋಷ ಮತ್ತು ಸಮೃದ್ಧಿಯ ಅಂಶಗಳು ಈ ದಿನದಂದು ಮಂಗಳಕರ ಯೋಗವನ್ನು ಸೃಷ್ಟಿಸುತ್ತವೆ. ಶುಕ್ರ ಮತ್ತು ಮಹಾಲಕ್ಷ್ಮಿಯ ಈ ಸಂಯೋಗವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ (zodiac signs) ಬಹಳ ಲಾಭದಾಯಕವಾಗಲಿದೆ. ಜನ್ಮ ಕುಂಡಲಿಯಲ್ಲಿ ಮಹಾಲಕ್ಷ್ಮಿ ಯೋಗವು ವ್ಯಕ್ತಿಯು ತನ್ನ ಜೀವನದಲ್ಲಿ ಲಕ್ಷ್ಮಿಯ ಸಂಪೂರ್ಣ ಆಶೀರ್ವಾದವನ್ನು ಪಡೆಯುತ್ತಾನೆ ಎಂದು ಸೂಚಿಸುತ್ತದೆ. ಅವರು ಗಣನೀಯ ಆರ್ಥಿಕ ಲಾಭವನ್ನು ಹೊಂದುತ್ತಾರೆ ಮತ್ತು ಬಹಳ ಶ್ರೀಮಂತರಾಗಿರುತ್ತಾರೆ. ಹಣವು ಇದ್ದಕ್ಕಿದ್ದಂತೆ ಎಲ್ಲಿಂದಲಾದರೂ ಸಿಗುತ್ತದೆ; ಅವರು ತಮ್ಮ ಮನೆಯಲ್ಲಿ ಅನೇಕ ಆದಾಯದ ಮೂಲಗಳನ್ನು ಹೊಂದಿರುತ್ತಾರೆ.
Zodiac Signs and Money: ಹಣ ನಿಭಾಯಿಸುವಲ್ಲಿ ಹುಟ್ಟಾ ಸಾಮರ್ಥ್ಯ ಹೊಂದಿರೋ ರಾಶಿಗಳಿವು..
ಈ ರಾಶಿಚಕ್ರ ಚಿಹ್ನೆಗಳ ಅದೃಷ್ಟವು ಹೊಳೆಯುತ್ತದೆ
ಹನುಮ ಜಯಂತಿಯ ದಿನ ಶುಕ್ರ ಗೋಚಾರವಾಗುತ್ತಿದೆ. ಶುಕ್ರನನ್ನು ಸಂತೋಷ, ವೈಭವ, ಪ್ರಣಯ, ಭೋಗ ಮತ್ತು ಐಷಾರಾಮಿ ಅಂಶವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದಲೇ ಹನುಮ ಜಯಂತಿಯಂದು ಶುಕ್ರ ಮತ್ತು ಮಹಾಲಕ್ಷ್ಮಿ ಯೋಗವು ರೂಪುಗೊಳ್ಳುವುದರಿಂದ ಸಂಪತ್ತಿನ ಜೊತೆಗೆ ಎಲ್ಲಾ ರೀತಿಯ ಸಂತೋಷ ಮತ್ತು ವೈಭವವನ್ನು ನೀಡುತ್ತದೆ. ಏಪ್ರಿಲ್ 6 ರಂದು ರಚನೆಯಾಗಲಿರುವ ಮಹಾಲಕ್ಷ್ಮಿ ರಾಜಯೋಗವು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ, ಆದರೆ ಕೆಲ ರಾಶಿಯ ಸ್ಥಳೀಯರು ಅದರಿಂದ ವಿಶೇಷ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಈ ಮಹಾಲಕ್ಷ್ಮಿ ಯೋಗವು ವೃಷಭ (Taurus), ಕನ್ಯಾ (Virgo), ಮಕರ (capricorn) ಮತ್ತು ಕುಂಭ (Aquarius) ರಾಶಿಯವರಿಗೆ ಶುಭ ಮತ್ತು ಫಲಪ್ರದವಾಗುವುದು. ಈ ಯೋಗದ ಪ್ರಭಾವದಿಂದ ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ವಿವಿಧ ಮೂಲಗಳಿಂದ ಧನಲಾಭವಾಗುವುದು. ಕೈ ಹಾಕಿದ ಕೆಲಸಗಳಲ್ಲಿ ಲಾಭದ ಮುದ್ರೆ ದಕ್ಕುವುದು. ಹಣಕಾಸಿನ ಬಲದಿಂದಾಗಿ ಅವರು ಹೆಚ್ಚುು ಪ್ರಭಾವಿಗಳಾಗಬಹುದು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.