"ನಾಗಾಸಾಧು ಹೇಗೆ ಆಗ್ತಾರೆ? ನಾಗಾಸಾಧುಗಳು ಅಘೋರಿಗಳಿಗಿಂತ ಹೇಗೆ ಡಿಪ್ರೆಂಟ್ ಅಂತ ಕೇಳಿದಾಗ, ಮುಕೇಶ ಗಿರಿ ಬಾಬಾ ಕಿವಿ ಹತ್ತಿರಕ್ಕೆ ಬಂದು ನಮಗೆ ಸಂಭೋಗ ಶಕ್ತಿ ಇಲ್ಲ ಎಂದ್ರು. ಕಾರಣ ಎನಂದ್ರೆ ಕಲಿಕೆಯ ಆರಂಭದಲ್ಲಿ ನಾವು ಬಾಬಾಗಳೇ ಆಗಿರ್ತಿವಿ‌. ಆದ್ರೆ ನಮ್ಮ ಗುಪ್ತಾಂಗಕ್ಕೆ ಜಟ್ಕಾ (ಬಲವಾಗಿ ಹೊಡೆಯೋದು) ಹೊಡೆಯಲಾಗತ್ತೆ. ಈ ಮೂಲಕ ನಮಗಿದ್ದ ಲೈಂಗಿಕ ಕ್ರಿಯೆ ನಡೆಸುವ ಶಕ್ತಿಯನ್ನ ಕಸಿಯಲಾಗುತ್ತೆ. ಆಗ ನಾವು ನಾಗಾ ಆಗ್ತೇವೆ" 

ಸಂದರ್ಶನ : ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ಪ್ರಯಾಗರಾಜ್: ನೀರಿನ ಮೂಲ, ಹೆಣ್ಣಿನ ಮೂಲ, ಋಷಿ ಮೂಲ ಗೊತ್ತಾಗೊಲ್ಲಾ ಎನ್ತಾರೆ‌. ಮಾತು ನಿಜ ಅದ್ರಲ್ಲೂ ಋಷಿ ಮೂಲಕ ಕೆದಕಬಾರದು ಎನ್ನುವ ಮಾತಿದೆ. ಇಂಥದ್ರಲ್ಲಿ ನಾನು ಪ್ರಯಾಗರಾಜ್ ಪೂರ್ಣಮಹಾ ಕುಂಭಮೇಳದ ಸೆಕ್ಟರ್ ನಂಬರ್ 20ರಲ್ಲಿ ನಾಗಾಸಾಧುಗಳ ನಿಗೂಢ ಬದುಕಿನ ಜಾಡು ಹಿಡಿದು ಹೊರಟಿದ್ದೆ. ಆಗ ಸಿಕ್ಕವರು ಕೂಲಿಂಗ್ ಗ್ಲಾಸ್ ಬಾಬಾ.. ಅವರ ಬಳಿ ನಾಗಾಸಾಧು ಹೇಗೆ ಆಗ್ತಾರೆ? ನಾಗಾಸಾಧು ಆಗಬೇಕಾದ್ರೆ ಕಠಿಣ ನಿಯಮಗಳೇನು? ಅವರ ಬಳಿ ಇರೋ ಅಗೋಚರ ಶಕ್ತಿಗಳೇನು? ನಾಗಾಗಳು- ಅಘೋರಿಗಳ ನಡುವಿನ ವ್ಯತ್ಯಾಸಗಳೇನು? ಪ್ರಾಣಕ್ಕೆ ಸಂಚಕಾರ ಎನ್ನಬಹುದಾದ ಹಠಯೋಗ ಯಾಕೆ? ಅಘೋರಿಗಳ ಸಾಧನಾ ಕ್ರಮಗಳೇನು? ಶಾಬರಿ ಮಂತ್ರಗಳ‌ ಪ್ರಯೋಗ, ಮಂತ್ರಗಳ ಮಹತ್ವದ ಬಗ್ಗೆ ಇನ್ ಡಿಲೇಟ್ ಆಗಿ ಮಾತನಾಡಿಸಿದೆ.. "ಆಫ್ ದಿ ರೆಕಾರ್ಡ್" ಅವರು ಹಂಚಿಕೊಂಡ ಕೆಲ ಮಾಹಿತಿಗಳಂತು ಎಂಥವರು ಬೆಚ್ಚಿ ಬೀಳುವಂತಿತ್ತು. ಸಾಮಾನ್ಯ ಮನುಷ್ಯರ ಕಲ್ಪನೆಗು ನಿಲುಕದ್ದು, ಸಂಜೆ ಶುರುವಾದ ಇಬ್ಬರ ನಡುವಿನ ಮಾತುಕತೆ ಮಧ್ಯರಾತ್ರಿಯವರೆಗೂ ಮುಂದುವರೆದಿತ್ತು..!! ಅಷ್ಟೂ ಸಮಯ ಸೇರಿ ಒಟ್ಟು ಎಂಟತ್ತು ಸಾರಿ ಚಹಾ ಮಾಡಿಸಿ ಕುಡಿಸಿದ್ರು ನಾಗಾಬಾಬಾ....

ಅಂದಹಾಗೇ ಇವ್ರ ಹೆಸ್ರು "ಮಹಾಂತ ಮುಕೇಶ ಗಿರಿಜೀ" ಬಾಬಾ ಅಂತ. ನರ್ಮದಾ ನದಿ ಹುಟ್ಟಿರೋ ಸ್ಥಳ ಇವ್ರ ಸಾಧನೆಯ ಮೂಲ ಸ್ಥಳ. ಅಂದ್ರೆ ಮಧ್ಯಪ್ರದೇಶದ ಅಮರಕಂಟಕ್. ದೇಶದ ಕಡಿಮೆ ಪ್ರಖ್ಯಾತಿ ಹೊಂದಿರೋ ಪವಿತ್ರ ಸ್ಥಳ. ನರ್ಮದಾ ಹುಟ್ಟಿ ಸಂಗಮದತ್ತ ದಾಪುಗಾಲಿಟ್ಟ ಸ್ಥಳ ಇದೆ ಅಮರಕಂಟಕ್. ಅಲ್ಲಿಗೊಮ್ಮೆ ಬಂದು ಬಿಡಿ ಇಂಟರ್ವ್ಯೂ ಕೊಡ್ತೀನಿ ಎಂದಿದ್ರು ಬಾಬಾ ಮಹಾಂತ ಮುಕೇಶಿ ಗಿರಿ. ಹಾಗಂತ 1500 ಕಿ.ಮೀ ದೂರ ಸಾಗಿ ಬಂದ ನನಗೆ ನಿರಾಶೆಯಂತು ಮಾಡಲಿಲ್ಲ. ಸಧ್ಯ ಆಫ್ ದಿ ರೆಕಾರ್ಡ್ ಪ್ರಶ್ನೆ ಕೇಳಿ ಉತ್ತರಿಸ್ತೀನಿ ಎಂದು ಹಿಂದಿಯಲ್ಲೆ ಹೇಳಿದ್ರು.. ಥಟ್ ಅಂತ ನನ್ನ ಬಾಯಲ್ಲಿ ಬಂದ ಮೊದಲ ಪ್ರಶ್ನೆಯೆ ನಾಗಾಗಳಿಗೂ ಅಘೋರಿಗಳಿಗೂ ಏನ್ ವ್ಯತ್ಯಾಸ ಎನ್ನುವುದು..?? ಈ ಪ್ರಶ್ನೆ ಕೇಳಿದ ಬಳಿಕ ಗೊತ್ತಾಗಿದ್ದು, ನಾನಾಸಾಧುಗಳಿಗೆ ಅಘೋರಿಗಳ ಬಗ್ಗೆ ಮಾತನಾಡೋಕೆ ಅಷ್ಟೊಂದು ಇಷ್ಟವಿಲ್ಲ ಅನ್ನೋದು. ಆದ್ರೂ ನನ್ನ ಮೊದಲ ಪ್ರಶ್ನೆಗೆ ನಕಾರ ಎನ್ನದೆ ಮಹಾಂತ ಮುಕೇಶ್ ಗಿರಿ ಬಾಬಾ ಉತ್ತರಿಸ ತೊಡಗಿದ್ರು.. 

ಅಘೋರಿಗಳು ಶವ ಮಾಂಸ ಭಕ್ಷಕರು, ಸಂಭೋಗಿಸಲು ಶಕ್ಯರು..!

ಅಘೋರಿಗಳ ಬಗ್ಗೆ ಸ್ವಲ್ಪವೇ ಹೇಳಿ ಬಿಡ್ತೀನಿ ಎಂದು ಮಾತು ಶುರು ಮಾಡಿದ ಮಹಾಂತ ಮುಕೇಶ ಗಿರಿ ಬಾಬಾ, ಅವರು ಮಾಂಸ ತಿನ್ತಾರೆ, ಅದ್ರಲ್ಲೂ ಮನುಷ್ಯರ ಶವಗಳ ಮಾಂಸ ಭಕ್ಷಿಸುತ್ತಾರೆ. ಲೈಂಗಿಕ ಸಂಭೋಗ ನಡೆಸಲು ಸಮರ್ಥರಿರ್ತಾರೆ. ಶವಗಳ ಜೊತೆಗೂ ಸಂಭೋಗ ಮಾಡ್ತಾರೆ. ಶವ ಸಾಧನೆ ಮಾಡ್ತಾರೆ. ಶವಗಳ ಮೇಲೆ ಕುಂತು ತಾಸುಗಟ್ಟಲೆ ಅಘೋರ ಸಾಧನೆ ಮಾಡ್ತಾರೆ. ಅವರಿಗೆ ಇದು ಆಗಲ್ಲ ಅನ್ನೋ ಮಾತೆ ಇಲ್ಲ. ಸಾಮಾನ್ಯರಿಗೆ ಘೋರ ಎನ್ನುವುದೆಲ್ಲವೂ ಅವರಿಗೆ ಅಘೋರ.. ಅವರು ಹೆಚ್ಚಾಗಿ ಕಾಳಿಯ ಆರಾಧಕರು. ಕಾಳಿಯನ್ನ ಪೂಜಿಸ್ತಾರೆ. ಕಾಳಿಗೆ ಸಂಬಂಧಿಸಿದ ಮಂತ್ರಗಳ ಪಠಣೆ, ಆರಾಧನೆ ಮೂಲಕ ಸಿದ್ಧಿ ಸಾಧನೆ ಅವರ ಗುರಿ. ತಂತ್ರ-ಮಂತ್ರ, ವಾಮಾಚಾರ ವಿದ್ಯೆ ಬಲ್ಲರೂ, ಅಂತೀಂದ್ರಿ ಶಕ್ತಿಗಳ ಸಾಧನೆಗೆ ನಿರಂತರ ಪ್ರಯತ್ನದಲ್ಲಿ ಇರ್ತಾರೆ ಎಂದರು..

ಅಘೋರಿಗಳ ವಾಸ ಕಾಶಿ, ಶವ ಸಂಸ್ಕಾರ ನಡೆಯೋ ಘಾಟ್‌ಗಳು..!

ಅವರು ಸಿಗೋದೆಲ್ಲಿ, ಇಲ್ಲಿ ಟೆಂಟಲ್ಲಿ ನಮಗೆ ಸಿಗಬಹುದಾ ಎಂದಿದ್ದಕ್ಕೆ ಮಹಾಂತ ಮುಕೇಶ ಗಿರಿ ಬಾಬಾ ಹೇಳಿದ್ದು ಕಾಶಿಗೆ ಹೋಗಬೇಕು ಅಂತಾ. ಕಾಶಿ ಸೇರಿ ಗಂಗಾ ನದಿ ತಟ, ಶವ ಸಂಸ್ಕಾರ ನಡೆಯೋ ಘಾಟ್‌ಗಳಲ್ಲಿ ಅಘೋರಿಗಳು ಸಿಗಬಲ್ಲರು. ಅವರು ಬಯಸುವ ಶವಗಳ ಆಗಮನಕ್ಕೆ ಕಾಯುತ್ತಿರುತ್ತಾರೆ. ಅವು ಸಿಕ್ಕ ಮೇಲೆ ಅವರ ಸಾಧನೆ ಶುರುವಾಗುತ್ತೆ. ಸಾಮಾನ್ಯರು ನೋಡಲಸಾಧ್ಯ ಎಂದು ಟಾಫಿಕ್ ಚೆಂಜ್ ಮಾಡುವ ತವಕದಲ್ಲಿದ್ರು ಮುಕೇಶ್ ಗಿರಿ ಬಾಬಾ..!!

ಆಗ ಪ್ರಶ್ನೆ ಬದಲಿಸಿದ ನಾನು ಕೇಳಿದ್ದು ಹಾಗಿದ್ರೆ ನೀವು ನಾಗಾಸಾಧುಗಳು ಹೇಗೆ? ಆಗ ನಕ್ಕು ಮತ್ತೆ ಮಾತು ಶುರು ಮಾಡಿದ್ದರು ಮಹಾಂತ ಮುಕೇಶ ಗಿರಿ ಬಾಬಾ.. ನಾಗಾಗಳ ಬಗ್ಗೆ ಹೇಳಲು, ಅವರ ಸಾಹಸಗಳ ಬಗ್ಗೆ ತಿಳಿಸಲು ಕೂಲಿಂಗ್ ಗ್ಲಾಸ್ ಬಾಬಾ ಉತ್ಸುಕರಾಗಿದ್ದಂತೆ ಕಂಡಿತು.

ಶಾಖಾಹಾರಿಗಳು, ಮದ್ಯ ಮುಟ್ಟಲ್ಲ, ಸಂಭೋಗ ಶಕ್ತಿ ಇರಲ್ಲ..!

ನಾಗಾಸಾಧು ಹೇಗೆ ಆಗ್ತಾರೆ? ನಾಗಾಸಾಧುಗಳು ಅಘೋರಿಗಳಿಗಿಂತ ಹೇಗೆ ಡಿಪ್ರೆಂಟ್ ಅಂತ ಕೇಳಿದಾಗ, ಮುಕೇಶ ಗಿರಿ ಬಾಬಾ ಕಿವಿ ಹತ್ತಿರಕ್ಕೆ ಬಂದು ಹೇಳಿದ್ದು ನಮಗೆ ಸಂಭೋಗ ಶಕ್ತಿ ಇಲ್ಲ ಎಂದು. ಕಾರಣ ಎನಂದ್ರೆ ಕಲಿಕೆಯ ಆರಂಭದಲ್ಲಿ ನಾವು ಬಾಬಾಗಳೇ ಆಗಿರ್ತಿವಿ‌. ಆದ್ರೆ ನಮ್ಮ ಗುಪ್ತಾಂಗಕ್ಕೆ ಜಟ್ಕಾ (ಬಲವಾಗಿ ಹೊಡೆಯೋದು) ಹೊಡೆಯಲಾಗತ್ತೆ. ಈ ಮೂಲಕ ನಮಗಿದ್ದ ಲೈಂಗಿಕ ಕ್ರಿಯೆ ನಡೆಸುವ ಶಕ್ತಿಯನ್ನ ಕಸಿಯಲಾಗುತ್ತೆ. ಆಗ ನಾವು ನಾಗಾ ಆಗ್ತೇವೆ. ಈ ಪ್ರಕ್ರಿಯೆ ಬಳಿಕ ಬರೀ ಸಾಧುಗಳಾಗಿದ್ದ ನಾವು ನಾಗಾ ಸಾಧುಗಳು ಆಗ್ತೇವೆ. ಇದಕ್ಕೆಲ್ಲ ಒಬ್ಬ ಗುರು ಇರ್ತಾನೆ. ಅವರನ್ನ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಮ್ಮದಿರುತ್ತೆ. ಮುಂದೆ ಗುರು ಹೇಳಿದ ಆಜ್ಞೆ ಪಾಲಿಸೋದು ಹಠಯೋಗದತ್ತ ಸಾಗೋದು ನಮ್ಮ ಕರ್ತವ್ಯವಾಗಿರುತ್ತೆ.

ಏನೀ ಹಠಯೋಗ.?! ಜೀವಕ್ಕೆ ಅಪಾಯ ಎನ್ನುವಂತ ಕ್ರಿಯೆ ಯಾಕೆ.?

ಪೂರ್ಣ ಮಹಾಕುಂಭ ಮೇಳದಲ್ಲಿ ನನ್ನನ್ನ ಸೆಳೆದಿದ್ದೆ ನಾಗಾಗಳ ಹಠ ಯೋಗ.. ಅವರ ಹಠಯೋಗ ಕಂಡು ಬಹುತೇಕರು ಇವರೇ ಇರಬಹುದು ಎಂದುಕೊಂಡಿದ್ದರೂ ಅದು ಅವರ ತಪ್ಪಲ್ಲ ಬಿಡಿ. ನಾಗಾಗಳ ಹಠವೇ ಹಂತದ್ದು.. ಹಠಯೋಗ ಎಂದರೆ ಆತ್ಮವನ್ನ ದೃಢನಿಶ್ಚಯವಾಗಿಸೋದು. ಸಿಂಪಲ್ಲಾಗಿ ಹೇಳೊದಾದ್ರೆ ಮಾಡಬೇಕು ಎಂದು ಕೈಗೆತ್ತಿಕೊಂಡಿದ್ದನ್ನ ಪೂರ್ಣವಾಗೊ ವರೆಗೂ ಬಿಡದೆ ಇರೋದು, ಅದು ಎಷ್ಟೇ ನೋವಾದರು, ಅದು ಎಷ್ಟೇ ಕಷ್ಟವೆನಿಸಿದರು ಅಷ್ಟೇ.. ಹೀಗೆ ಹಠಯೋಗಿಗಳಲ್ಲಿ ದಶಕಗಳಿಂದ ಒಂದು ಕಯ್ಯನ್ನ ಮೇಲೆ ಎತ್ತಿ ಹಿಡಿದ ಚಿಮುಟಾ ಬಾಬಾ, ಹಠಯೋಗ ತೊಟ್ಟದಿನದಿಂದ ಒಂದು ದಿನವೂ ಸ್ನಾನವನ್ನೆ ಮಾಡದ ಬಾಬಾ, ಅದೆಷ್ಟೋ ವರ್ಷದಿಂದ ಒಂದು ಕಾಲನ್ನ ನೆಲಕ್ಕೆ ತಾಗೀಸದ ಬಾಬಾ., ಆಟವನ್ನೆ ಮಾಡದೆ ಬರೀ ನೀರು ಕುಡಿದು ಬದುಕುತ್ತಿರೋ ಬಾಬಾ, ಗಾಳಿಯನ್ನೆ ಸೇವಿಸುತ್ತ ಜೀವಂತವಾಗಿರೋ ಹವಾ ಬಾಬಾ.. ಹೀಗೆ ಹಠಯೋಗ ನಾನಾ ತರಹದಲ್ಲಿವೆ. ಈ ಬಗ್ಗೆ ವಿವರಿಸಿದ ಮಹಾಂತ ಮುಕೇಶ ಗಿರಿ ಬಾಬಾ ನಾವು ಪರಮಾತ್ಮನ ಕಾಣಲು ಹುಡಕಿಕೊಂಡ ದಾರಿ ಈ ಹಠಯೋಗ ಎನ್ನುವುದು. ಹಠದಿಂದ ದೇವರನ್ನೆ ಗೆಲ್ಲುವ ಪರಿ ನಮ್ಮ ಹಠಯೋಗ. ಎಷ್ಟೇ ಕಷ್ಟವಾದರು ಹಠಯೋಗ ಪುರೈಸುತ್ತೇವೆ ಎಂದು ಮಹಾಂತ ಮುಕೇಶ ಗಿರಿ ಬಾಬಾ ಮಾತು ಮುಂದುವರೆಸಿದ್ದರು..

ಮುಕೇಶ ಗಿರಿ ಬಾಬಾ ಸಹ ಹಠಯೋಗಿಯೇ..!

ನನಗೆ ಅತ್ಯಾಕರ್ಷಕ ನೋಟದ ಮೂಲಕ ಕಂಡ ಕೂಲಿಂಗ್ ಗ್ಲಾಸ್ ಬಾಬಾ ಮಹಾಂತ ಮುಕೇಶ ಗಿರಿ ಬಾಬಾ ಸಹ ಹಠಯೋಗಿಯೆ. ದೇವರನ್ನ ಕಾಣಲು, ಪರಮಾತ್ಮನ ದರ್ಶನ ಮಾಡಲು ಒಬ್ಬೊಬ್ಬರದ್ದು ಒಂದೊಂದು ರೀತಿಯ ಹಠಯೋಗ. ಹಾಗೇ ಮಹಾಂತ ಮುಕೇಶ ಗಿರಿ ಬಾಬಾ ಮಾಡಿದ ಹಠಯೋಗದ ಬಗ್ಗೆ ಕೇಳಿ ಆರಂಭದಲ್ಲಿ ನಾನು ಗಾಭರಿ ಬಿದ್ದೆ. ಬಾಬಾ ಹಠಯೋಗದ ಬಗ್ಗೆ ಕೇಳಿದಾಗ ಅವರನ್ನ ನಾ ಭೇಟಿಯಾಗಿದ್ದು, ಅವರು ನನ್ನೊಂದಿಗೆ ಮಾತನಾಡ್ತಿರೋದು ಸತ್ಯವಾ ಅಂತಾ ಒಂದು ಸಾರಿ ನನ್ನ ಕೈ ಚಿವುಟಿ ಪರೀಕ್ಷಿಸಿಕೊಳ್ಳಬೇಕು ಎನಿಸಿತ್ತು. ಅಷ್ಟೂ ರಣರೋಚಕ ಮುಕೇಶ ಗಿರಿ ಬಾಬಾ ಹಠಯೋಗ.. ತಮ್ಮ ಹಠಯೋಗದ ಬಗ್ಗೆ ಹೇಳುತ್ತಲೇ ಬಾಬಾ ಮತ್ತೆ ಒಂದು ಸಾರಿ ಟೀ ಮಾಡುವಂತೆ ತಮ್ಮ ಚೇಲಾಗೆ ಹೇಳಿದ್ರು, ಆಗ ಸಹ ಅದರಕ್ ಹಾಕು ಅಂತಾ ಹೇಳೋಕೆ ಮರೆಯಲಿಲ್ಲ ಕೂಲಿಂಗ್ ಗ್ಲಾಸ್ ಬಾಬಾ ಮುಕೇಶ್ ಗಿರಿ ಬಾಬಾ...

ಮುಂದುವರೆಯುವುದು...