Mahashivratri 2022: ಈ ದೇವಸ್ಥಾನದಲ್ಲಿ ಯಂತ್ರದ ಮೂಲಕ ನಡೆಯಲಿದೆ ಶಿವನ ಜಲಾಭಿಷೇಕ
ಶಿವರಾತ್ರಿಯಂದು ಶಿವನ ಭಕ್ತರು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸುತ್ತಾರೆ. ದೇವಸ್ಥಾನಗಳಲ್ಲಿ ಭಕ್ತರಿಗಾಗಿ ಅನೇಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಕೊರೊನಾ ಗಮನದಲ್ಲಿಟ್ಟುಕೊಂಡು ದೇವಸ್ಥಾನ ಆಡಳಿತ ಮಂಡಳಿಗಳು ಕೆಲವೊಂದು ಮುನ್ನೆಚ್ಚರಿಕೆ ತೆಗೆದುಕೊಂಡಿವೆ.
ಮಾರ್ಚ್ ಒಂದರಂದು ಈ ಬಾರಿ ಮಹಾಶಿವರಾತ್ರಿ (Mahashivaratri ) ಆಚರಿಸಲಾಗುವುದು. ಶಿವ (Shiva)ನ ಭಕ್ತರು ಮಹಾ ಶಿವರಾತ್ರಿಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ದೇವಸ್ಥಾನ (Temple)ಗಳಲ್ಲಿ ತಯಾರಿ ಭರದಿಂದ ಶುರುವಾಗಿದೆ. ಶಿವರಾತ್ರಿಯಂದು ಭಕ್ತರು ಉಪವಾಸ (Fasting)ವಿದ್ದು, ರಾತ್ರಿ ಜಾಗರಣೆ ಮಾಡಿ ಭೋಲೇನಾಥನನ್ನು ಒಲಿಸಿಕೊಳ್ಳುತ್ತಾರೆ. ಶ್ರದ್ಧೆಯಿಂದ ಬೇಡಿದ ಭಕ್ತರಿಗೆ ಶಿವ ಎಲ್ಲವನ್ನೂ ನೀಡುತ್ತಾನೆಂದು ಜನರು ನಂಬಿದ್ದಾರೆ. ಭಗವಂತ (Lord ) ಶಿವನ ಆರಾಧನೆಯ ಅತಿ ದೊಡ್ಡ ಹಬ್ಬವೆಂದ್ರೆ ಶಿವರಾತ್ರಿ. ಧಾರ್ಮಿಕ ನಂಬಿಕೆ (Faith)ಗಳ ಪ್ರಕಾರ, ಮಹಾಶಿವರಾತ್ರಿಯ ದಿನ ಶಿವನಿಗೆ ಬಿಲ್ವಪತ್ರೆ, ಪಂಚಾಮೃತ, ಗಂಗಾಜಲ, ನೀರು, ಹಾಲು, ಗಾಂಜಾ, ಭಸ್ಮ ಇತ್ಯಾದಿಗಳನ್ನು ಅರ್ಪಿಸಲಾಗುತ್ತದೆ. ಅಂದು ಅಭಿಷೇಕಕ್ಕೆ ಹೆಚ್ಚಿನ ಮಹತ್ವವಿದೆ. ಅನೇಕ ದೇವಸ್ಥಾನಗಳಲ್ಲಿ ಭಕ್ತರಿಗೆ ಶಿವಲಿಂಗದ ಮೇಲೆ ಜಲಾಭಿಷೇಕ ಮಾಡುವ ಅವಕಾಶವನ್ನು ನೀಡಲಾಗುತ್ತದೆ. ಅಕ್ಷತೆ, ಬಿಳಿ ಎಳ್ಳು, ಬಾರ್ಲಿ, ಜೋಳ, ಗೋಧಿ ಸೇರಿದಂತೆ ಸಪ್ತಧಾನ್ಯಗಳನ್ನು ಶಿವನಿಗೆ ಅರ್ಪಿಸಲಾಗುತ್ತದೆ.
ಇನ್ನು ದೇವಸ್ಥಾನಗಳಲ್ಲಿ ಕೂಡ ಶಿವನಿಗೆ ವಿಶೇಷ ಪೂಜೆಯನ್ನು ಏರ್ಪಡಿಸಲಾಗುತ್ತದೆ. ಕೆಲವೆಡೆ ಶಿವ ಮತ್ತು ಪಾರ್ವತಿ (Parvati)ಗೆ ಚಿನ್ನದ ಕಿರೀಟವನ್ನು ಧರಿಸಿ ಪೂಜೆ ಮಾಡಲಾಗುತ್ತದೆ. ಮತ್ತೆ ಕೆಲ ದೇವಸ್ಥಾನಗಳಲ್ಲಿ ವಿಶೇಷ ಹೂಗಳಿಂದ ಶಿವನ ಅಲಂಕಾರ ಮಾಡಲಾಗುತ್ತದೆ. ಭಾರತದಲ್ಲಿ ಸಾವಿರಾರು ಶಿವನ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯವೂ ಅದರದೇ ಆದ ವಿಶೇಷತೆಯನ್ನು ಹೊಂದಿದೆ. ಕೆಲವು ಕಡೆ ಶಿವನಿಗೆ ಹೂವಿನ ಬದಲು ಗಾಂಜಾ ಅರ್ಪಿಲಾಗುತ್ತದೆ. ಮಹಾಶಿವರಾತ್ರಿಯ ದಿನದಂದು ದೇವಸ್ಥಾನಗಳಲ್ಲಿ ಜಲಾಭಿಷೇಕವನ್ನು ಏರ್ಪಡಿಸಲಾಗುತ್ತದೆ. ಆದ್ರೆ ಬಾರಿ ಜಲಾಭಿಷೇಕ ಮಾಡುವ ಬದಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಯಂತ್ರ (Machine)ಗಳ ಮೂಲಕ ಜಲಾಭಿಷೇಕ ನೆರವೇರಿಸುವ ವ್ಯವಸ್ಥೆ ಮಾಡಲಾಗಿದೆ.
ಎಲ್ಲಿ ನಡೆಯಲಿದೆ ಯಂತ್ರದ ಮೂಲಕ ಜಲಾಭಿಷೇಕ : ದೆಹಲಿ (Delhi )ಯ ಚಾಂದಿನಿ ಚೌಕ್ (Chandni Chowk)ನಲ್ಲಿ ಗೌರಿ ಶಂಕರ (Gauri Sankara) ದೇವಸ್ಥಾನವಿದೆ. ಇದು ಸುಮಾರು 800 ವರ್ಷಗಳಷ್ಟು ಹಳೆಯದು. ಇಲ್ಲಿ ಶಿವನ ಅರ್ಧನಾರೀಶ್ವರ (Ardhanariswara) ರೂಪವಿದೆ. ಭಗವಂತ ಭೋಲೇನಾಥ ಐದು ಅಶ್ವತ್ಥ ಮರಗಳ ಮಧ್ಯದಲ್ಲಿ ನೆಲೆಸಿದ್ದು, ಭಕ್ತರ ಎಲ್ಲಾ ಆಸೆಗಳನ್ನು ಈಡೇರಿಸುತ್ತಾನೆ ಎಂದು ನಂಬಲಾಗಿದೆ. 1761 ರಲ್ಲಿ, ಮರಾಠ ಸೈನಿಕ ಅಪ ಗಂಗಾಧರ (Gangadhar )ಈ ದೇವಾಲಯದ ಕಟ್ಟಡವನ್ನು ನಿರ್ಮಿಸಿದರು ಎನ್ನಲಾಗಿದೆ.
Powerful Zodiac Signs: ಕನ್ನಡತಿಯ ಭುವಿ ಪಾತ್ರದಂತೋರು ಯಾವ ರಾಶಿಯಲ್ಲಿ ಹುಟ್ಟಿರುತ್ತಾರೆ ಗೊತ್ತಾ?
ಗರ್ಭಗುಡಿಗೆ ಭಕ್ತರ ಪ್ರವೇಶ ನಿಷಿದ್ಧ : ಕೊರೊನಾ (Corona) ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಕೆಲವೊಂದು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಅಲ್ಲಿನ ವ್ಯವಸ್ಥಾಪಕ ತೇಜ್ ಪ್ರಕಾಶ್ ಶರ್ಮಾ ಪ್ರಕಾರ, ದೇವಸ್ಥಾನದಲ್ಲಿ ಭಕ್ತರಿಗಾಗಿ ಬ್ಯಾರಿಕೇಡ್ (Barricade) ಹಾಕಲಾಗುತ್ತಿದೆ. ಭಕ್ತರಿಗೆ ಗರ್ಭಗುಡಿ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಯಂತ್ರದ ಸಹಾಯದಿಂದ ಭಕ್ತರು ಜಲಾಭಿಷೇಕ ನಡೆಸಲಿದ್ದಾರೆ. ಜಲಾಭಿಷೇಕದಿಂದ ರುದ್ರಾಭಿಷೇಕದವರೆಗೆ ಭಕ್ತರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಜೊತೆಗೆ ಭಕ್ತರು ಶಿವನ ಅರ್ಧನಾರೀಶ್ವರ ಅವತಾರವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
PANCHANGA: ಇಂದು ಸೋಮಪ್ರದೋಷ, ಅಮೃತಸಿದ್ಧಿ ಯೋಗವೂ ಇದೆ, ಈಶ್ವರನ ಆರಾಧನೆ ಮಾಡಿ
ದೇವಸ್ಥಾನಕ್ಕೆ ವಿಶೇಷ ಅಲಂಕಾರ : ಮಾರ್ಚ್ ಒಂದರಂದು ನಡೆಯುವ ಮಹಾಶಿವರಾತ್ರಿಗೆ ಚಾಂದನಿ ಚೌಕ್ ನಲ್ಲಿರುವ ಗೌರಿ ಶಂಕರ ದೇವಸ್ಥಾನದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಸಂಕೀರ್ಣವನ್ನು ಹೂವು, ಒಣ ಹಣ್ಣುಗಳು, ನವಿಲು ಗರಿಗಳು ಮತ್ತು ಮುತ್ತುಗಳಿಂದ ಅಲಂಕರಿಸಲಾಗುತ್ತಿದೆ. ದೇವಸ್ಥಾನದ ಹೊರ ಭಾಗ ವರ್ಣರಂಜಿತ ದೀಪಗಳಿಂದ ಬೆಳಗಲಿದೆ ಎಂದು ಅಲ್ಲಿನ ವ್ಯವಸ್ಥಾಪಕರು ಹೇಳಿದ್ದಾರೆ.
ದೇವಸ್ಥಾನಕ್ಕೆ ಹರಿದು ಬರುತ್ತೆ ಭಕ್ತರ ದಂಡು: ಈ ದೇವಸ್ಥಾನದಲ್ಲಿ ಸದಾ ಭಕ್ತರ ದಂಡಿರುತ್ತದೆ. ಶಿವರಾತ್ರಿಯಂದು ಮತ್ತಷ್ಟು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಬರ್ತಾರೆ. ಸಾಮಾನ್ಯ ದಿನಗಳಲ್ಲಿ ಗೌರಿ ಮತ್ತು ಶಿವನ ಆರಾಧನೆಗಾಗಿ ಭಕ್ತರು ಬೆಳಿಗ್ಗೆ 5 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತಿರುತ್ತಾರೆ.