Asianet Suvarna News Asianet Suvarna News

ಜೀವನ ಯಾರಿಗೂ ಹೂವಿನ ಹಾಸಿಗೆಯಲ್ಲ; ಕರ್ಣನಿಗೆ ಭಗವಾನ್ ಕೃಷ್ಣ ಹೇಳಿದ ಮಾತು ಯಾವುದು..?

ಪ್ರತಿಯೊಬ್ಬರ ಜೀವನದಲ್ಲಿಯೂ ಕಷ್ಟಗಳು ಬಂದೇ ಬರುತ್ತವೆ. ಯಾರ ಜೀವನದಲ್ಲಿ‌ ಕಷ್ಟವಿಲ್ಲ ಹೇಳಿ. ಆದರೆ ಕಷ್ಟಗಳನ್ನು ಕಷ್ಟ ಎಂದುಕೊಳ್ಳುವುದೇ ದೊಡ್ಡ ತಪ್ಪು. ಕರ್ಣ ತನ್ನ ಕಷ್ಟಗಳನ್ನು ಕೃಷ್ಣನಿಗೆ ಹೇಳಿಕೊಂಡಾಗ, ಕೃಷ್ಣ ಕರ್ಣನಿಗೆ ಅದ್ಭುತವಾದ ಮಾತುಗಳನ್ನು ಹೇಳುತ್ತಾನೆ. ಈ ಕುರಿತು ಇಲ್ಲಿದೆ ಮಾಹಿತಿ.

Mahabharat Lord Krishna words to Karna suh
Author
First Published Jul 19, 2023, 3:57 PM IST

ಪ್ರತಿಯೊಬ್ಬರ ಜೀವನದಲ್ಲಿಯೂ ಕಷ್ಟಗಳು ಬಂದೇ ಬರುತ್ತವೆ. ಯಾರ ಜೀವನದಲ್ಲಿ‌ ಕಷ್ಟವಿಲ್ಲ ಹೇಳಿ. ಆದರೆ ಕಷ್ಟಗಳನ್ನು ಕಷ್ಟ ಎಂದುಕೊಳ್ಳುವುದೇ ದೊಡ್ಡ ತಪ್ಪು. ಕರ್ಣ ತನ್ನ ಕಷ್ಟಗಳನ್ನು ಕೃಷ್ಣನಿಗೆ ಹೇಳಿಕೊಂಡಾಗ, ಕೃಷ್ಣ ಕರ್ಣನಿಗೆ ಅದ್ಭುತವಾದ ಮಾತುಗಳನ್ನು ಹೇಳುತ್ತಾನೆ. ಈ ಕುರಿತು ಇಲ್ಲಿದೆ ಮಾಹಿತಿ.

ಕುರುಕ್ಷೇತ್ರ ಯುದ್ಧ ಸಂದರ್ಭದಲ್ಲಿ ಕೃಷ್ಣ ಅರ್ಜುನನಿಗೆ ಹೇಳಿಕ ಮಾತುಗಳು ಸರ್ವಕಾಲಿಕವಾಗಿದೆ. ಅವು ಹಿಂದಿನ ಮತ್ತು ವರ್ತಮಾನವನ್ನು ಪ್ರೇರೇಪಿಸುವ ಜೀವನದ ಮೂಲಭೂತ ಸತ್ಯಗಳನ್ನು ಎತ್ತಿ ತೋರಿಸುತ್ತದೆ. ಅದೇ ರೀತಿ ಕರ್ಣನ ಜೊತೆ ನಡೆದ ಕೃಷ್ಣನ ಸಂವಾದ ಕೂಡ, ಸಾರ್ವಕಾಲಿಕ ಸತ್ಯ. ಈ ಕುರಿತು ಇಲ್ಲಿದೆ ಮಾಹಿತಿ.

ಕರ್ಣನು ಭಗವಾನ್ ಕೃಷ್ಣನನ್ನು ಒಮ್ಮೆ ಕೇಳುತ್ತಾನೆ, ನಾನು ಹುಟ್ಟಿದ ಕ್ಷಣದಲ್ಲಿ ನನ್ನ ತಾಯಿ ನನ್ನನ್ನು ತೊರೆದರು, ಅದು ನನ್ನ ತಪ್ಪೇ?. ನಾನು ಕ್ಷತ್ರಿಯನಲ್ಲ ಎಂದು ಹೇಳಿ, ನನಗೆ ದ್ರೋಣಾಚಾರ್ಯರು ಶಿಕ್ಷಣ ನೀಡಲಿಲ್ಲ. ಪರಶು ರಾಮನು ನನಗೆ ವಿದ್ಯೆ ಕಲಿಸಿ, ನಂತರ ಎಲ್ಲವನ್ನೂ ಮರೆತುಬಿಡುವಂತೆ ಶಾಪವನ್ನು ಕೊಟ್ಟನು. ದ್ರೌಪದಿಯ ಸ್ವಯಂವರದಲ್ಲಿ ನಾನು ಅವಮಾನಿತನಾದೆ. ನಾನು ಪಡೆದದ್ದೆಲ್ಲ ದುರ್ಯೋಧನನ ದಾನದಿಂದ. ಹಾಗಿರುವಾಗ ನಾನು ಅವನ ಪರವಾಗಿ ನಿಲ್ಲುವುದು ಹೇಗೆ ತಪ್ಪು ಎಂದು ಕೇಳುತ್ತಾನೆ.

ಕರ್ಣನ ಪ್ರಶ್ನೆಗೆ ಶ್ರೀಕೃಷ್ಣನು ಉತ್ತರಿಸುತ್ತಾ ತನ್ನ ಬದುಕಿನ ಪುಟ ತೆರೆಯುತ್ತಾನೆ. ಕರ್ಣ, ನಾನು ಜೈಲಿನಲ್ಲಿ ಜನಿಸಿದೆ. ಹುಟ್ಟುವ ಮೊದಲೇ ಸಾವು ನನಗೆ ಕಾದಿತ್ತು. ನಾನು ಹುಟ್ಟಿದ ರಾತ್ರಿಯೇ ನನ್ನ ತಂದೆ ತಾಯಿಯಿಂದ ಬೇರ್ಪಟ್ಟೆ. ಬಾಲ್ಯದಿಂದಲೂ, ನೀವು ಕತ್ತಿಗಳು, ರಥಗಳು, ಕುದುರೆಗಳು, ಬಿಲ್ಲು ಮತ್ತು ಬಾಣಗಳ ಶಬ್ದವನ್ನು ಕೇಳುತ್ತಾ ಬೆಳೆದಿದ್ದೀರಿ. ಆದರೆ ನನಗೆ ಸೈನ್ಯವಿಲ್ಲ, ಶಿಕ್ಷಣವಿಲ್ಲ ಎಂದು ತಿಳಿಸಿದನು.

ಸಿಂಹ ರಾಶಿಯಲ್ಲಿ ಮಂಗಳ ಸಂಚಾರ: ಈ ರಾಶಿಯವರಿಗೆ ಆಸ್ತಿ ಖರೀದಿ ಯೋಗ

 

ನಾನು ಋಷಿ ಸಾಂದೀಪನಿಯ ಗುರುಕುಲಕ್ಕೆ ಸೇರಿದ್ದು ಕೇವಲ 16ನೇ ವಯಸ್ಸಿನಲ್ಲಿ, ನಾನು ಪ್ರೀತಿಸಿದ ಹುಡುಗಿ ನನಗೆ ಸಿಗಲಿಲ್ಲ. ನಾನು ನನ್ನ ಇಡೀ ಸಮುದಾಯವನ್ನು ಯಮುನಾ ತೀರದಿಂದ ಜರಾಸಂಧದಿಂದ ದೂರದ ಸಮುದ್ರ ತೀರಕ್ಕೆ ಸ್ಥಳಾಂತರಿಸಬೇಕಾಗಿತ್ತು, ಓಡಿಹೋಗಿದ್ದಕ್ಕಾಗಿ ನನ್ನನ್ನು ಹೇಡಿ ಎಂದು ಕರೆಯಲಾಯಿತು. ದುರ್ಯೋಧನನು ಯುದ್ಧದಲ್ಲಿ ಜಯಗಳಿಸಿದರೆ ನಿನಗೆ ಬಹಳ ಶ್ರೇಯಸ್ಸು ದೊರೆಯುತ್ತದೆ. ಧರ್ಮರಾಜನು ಯುದ್ಧದಲ್ಲಿ ಗೆದ್ದರೆ ನನಗೆ ಏನು ಸಿಗುತ್ತದೆ ಎಂದು ಕೇಳಿದನು.

ಇದೆಲ್ಲಾ ಹೇಳಿದ ಕೃಷ್ಣನು, ಪ್ರತಿಯೊಬ್ಬರೂ ಜೀವನದಲ್ಲಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಜೀವನವು ನ್ಯಾಯಯುತವಾಗಿಲ್ಲ ಮತ್ತು ಯಾರಿಗೂ ಸುಲಭವಾಗಿಲ್ಲ. ಆದರೆ ಯಾವುದು ಧರ್ಮ ಎಂಬುದು ನಿಮ್ಮ ಆತ್ಮಸಾಕ್ಷಿಗೆ ತಿಳಿದಿದೆಯೋ ಅದೇ ನ್ಯಾಯ ಎಂದು ಹೇಳಿದನು. ನಾವು ಎಷ್ಟು ಬಾರಿ ಅವಮಾನಕ್ಕೊಳಗಾಗಿದ್ದೇವೆ, ನಾವು ಬೀಳುತ್ತೇವೆ, ಆ ಸಮಯದಲ್ಲಿ ನೀವು ಹೇಗೆ ಪ್ರತಿಕ್ರಿಯಿಸಿದ್ದೀರಿ ಎಂಬುದು ಮುಖ್ಯ ಎಂದು ತಿಳಿಸಿದನು.

ನಿಂಬೆ ಹಣ್ಣಿನ 'ಈ ತಂತ್ರ'ದಿಂದ ಸಮಸ್ಯೆ ದೂರ; ಅದೃಷ್ಟದ ಆಗಮನ

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios