Asianet Suvarna News Asianet Suvarna News

ನಾಳೆ ಚಂದ್ರಗ್ರಹಣ: ಕುಕ್ಕೆ ಸೇರಿದಂತೆ ಪ್ರಮುಖ ದೇವಸ್ಥಾನಗಳ ದರ್ಶನ ಸಮಯದಲ್ಲಿ ವ್ಯತ್ಯಯ

ಚಂದ್ರಗ್ರಹಣ ಹಿನ್ನೆಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸೇರಿದಂತೆ ಪ್ರಮುಖ ದೇವಸ್ಥಾನಗಳು ಅಕ್ಟೋಬರ್​ 28ರಂದು ಶನಿವಾರ ದೇವರ ದರ್ಶನದ ಸಮಯವನ್ನು ವ್ಯತ್ಯಯ ಮಾಡಿದೆ.

lunar eclipse 2023 pooja timings in temples on October 28 Saturday suh
Author
First Published Oct 27, 2023, 12:31 PM IST

Lunar eclipse 2023 : ಚಂದ್ರಗ್ರಹಣ ಹಿನ್ನೆಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸೇರಿದಂತೆ ಪ್ರಮುಖ ದೇವಸ್ಥಾನಗಳು ಅಕ್ಟೋಬರ್​ 28ರಂದು ಶನಿವಾರ ದೇವರ ದರ್ಶನದ ಸಮಯವನ್ನು ವ್ಯತ್ಯಯ ಮಾಡಿದೆ.ಕುಕ್ಕೆ  ಆಡಳಿತ ಮಂಡಳಿ ನಿರ್ದೇಶನದಂತೆ ಭಕ್ತರಿಗೆ ಶ್ರೀದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಅ. 28ರಂದು ಶನಿವಾರ ರಾತ್ರಿಯ ಮಹಾಪೂಜೆ ಸಾಯಂಕಾಲ 6.30ಕ್ಕೆ ಮುಕ್ತಾಯಗೊಳ್ಳಲಿದೆ. ಆ ಬಳಿಕ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಅಲ್ಲದೆ ಈ ದಿನ ಸಂಜೆಯ ಆಶ್ಲೇಷ ಬಲಿ ಸೇವೆ ನೆರವೇರುವುದಿಲ್ಲ. ರಾತ್ರಿ ಪ್ರಸಾದ ಭೋಜನದ ಪ್ರಸಾದ ವಿತರಣೆ ಇರುವುದಿಲ್ಲ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ. ಇನ್ನು ಧರ್ಮಸ್ಥಳದಲ್ಲಿ ದೇವರ ದರ್ಶನ, ಅನ್ನ ಪ್ರಸಾದ ಸೇವೆ ಯಥಾಸ್ಥಿತಿ ಇರುತ್ತದೆ.

 ಶ್ರೀ ಮಹಾಬಲೇಶ್ವರ ಕ್ಷೇತ್ರದಲ್ಲಿ ಸ್ಪರ್ಶ ದರ್ಶನದ ಅವಕಾಶ

ಗೋಕರ್ಣ ಶ್ರೀ ಮಹಾಬಲೇಶ್ವರ ಕ್ಷೇತ್ರದ ಆಡಳಿತ ಮಂಡಳಿ ಸೂಚನೆ ಮೇರೆಗೆ ಕ್ಷೇತ್ರದಲ್ಲಿ ಸಂಜೆ 4ರಿಂದ 5.30ರವರೆಗೆ ಮಾತ್ರ ಸ್ಪರ್ಶ ದರ್ಶನದ ಅವಕಾಶ ನೀಡಲಾಗುತ್ತಿದೆ.ರಾತ್ರಿ 1ಗಂಟೆಯಿಂದ ಚಂದ್ರಗ್ರಹಣ ಕಾಲ ಮುಗಿಯುವವರೆಗೆ ಅಂದ್ರೆ 2.30ರವರೆಗೆ ಸ್ಪರ್ಶ ದರ್ಶನದ ಅವಕಾಶವಿದೆ.ಗ್ರಹಣ ದಿನದಂದು ದೇವಸ್ಥಾನದಲ್ಲಿ ಊಟ ಪ್ರಸಾದವಿಲ್ಲ

ಬನಶಂಕರಿ ದೇವಿಗೆ ವಿಶೇಷ ಹುಣ್ಣಿಮೆ ಶಾಂತಿ ಪೂಜೆ

ಬೆಂಗಳೂರಿನ ಬನಶಂಕರಿ ದೇವಿಗೆ ವಿಶೇಷ ಹುಣ್ಣಿಮೆ ಶಾಂತಿ ಪೂಜೆ ನಾಳೆ ಮಾಡಲಾಗುತ್ತೆದ ನಂತರಶನಿವಾರ ಮಧ್ಯಾಹ್ನ 3 ಗಂಟೆಗೆ ಅಮ್ಮನವರ ದೇವಸ್ಥಾನ ಬಂದ್ ಆಗಲಿದೆ.ಶನಿವಾರ ಮಧ್ಯಾಹ್ನ 3 ಗಂಟೆಗೆ ಬಂದ್ ಆದ್ರೆ  ಭಾನುವಾರ  ಬೆಳಗ್ಗೆ 4ಗಂಟೆಗೆ ಪುನಃ ತೆರೆಯಲಾಗುತ್ತದೆ. ಹಾಗೆ ಶನಿವಾರ ಸಂಜೆ 6 ಗಂಟೆಗೆ ಬೆಂಗಳೂರಿನ ಕಾಡು ಮಲ್ಲಿಕಾರ್ಜುನ ದೇವಸ್ಥಾನವು ಬಂದ್ ಆಗಲಿದ್ದು ನಾಳೆ ಸಂಜೆ 6ಗಂಟೆ ನಂತರ ದರ್ಶನಕ್ಕೆ ಅವಕಾಶವಿಲ್ಲ. ಭಾನುವಾರ ಗ್ರಹಣ ಶುದ್ಧಿ, ಪುಣ್ಯಾಹ ನಂತರ ದರ್ಶನಕ್ಕೆ ಅವಕಾಶ.

ಶನಿ ನೇರ ಚಲನೆ,ಈ ರಾಶಿಯವರಿಗೆ ಕಷ್ಟ ಕಷ್ಟ

ನಾಳೆ ಸಂಜೆ 6 ಗಂಟೆಗೆ ಚಾಮುಂಡಿ ಬೆಟ್ಟ ಬಂದ್‌

 ಶನಿವಾರ ಚಂದ್ರ ಗ್ರಹಣವಿರುವ ಹಿನ್ನೆಲೆ, ಮೈಸೂರಿನ ಚಾಮುಂಡಿ ಬೆಟ್ಟದ ದೇವಸ್ಥಾನ ಅವಧಿಗೂ ಮುಂಚಿತವಾಗಿ ಬಂದ್ ಆಗಲಿದ್ದು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.ನಾಳೆ ಸಂಜೆ‌ 6 ಗಂಟೆಗೆ ತಾಯಿ  ಚಾಮುಂಡೇಶ್ವರಿ ದೇವಸ್ಥಾನ ಬಂದ್ ಆಗಲಿದೆ.  ನಾಳೆ ಸಂಜೆ‌ 5 ಗಂಟೆಗೆ ಚಾಮುಂಡಿ ತೆಪ್ಪೊತ್ಸವ ನಡೆಯಲಿದ್ದು, 6 ಗಂಟೆಗೆ ಉತ್ಸವ ಮೂರ್ತಿ ದೇವಸ್ಥಾನಕ್ಕೆ ವಾಪಸ್ ಆಗಲಿದೆ. ಮೂರ್ತಿ ದೇವಸ್ಥಾನಕ್ಕೆ ಬರುತ್ತಿದ್ದಂತೆ ದೇವಸ್ಥಾನ ಬಂದ್ ಆಗಲಿದೆ.ಗ್ರಹಣ ಕಾಲದಲ್ಲಿ ದೇವಾಲಯದಲ್ಲಿ ಪೂಜಾ ಕಾರ್ಯ ಜರುಗಲಿದ್ದು,  ನಂತರ ಭಾನುವಾರ ಬೆಳಿಗ್ಗೆ 7.30ಕ್ಕೆ ಜನರಿಗೆ ದರ್ಶನಕ್ಕೆ ದೇವಸ್ಥಾನ ತೆರೆಯಲಿದೆ.

Follow Us:
Download App:
  • android
  • ios