ಈ ರಾಶಿಯ ಹೆಣ್ಮಕ್ಕಳನ್ನು ತಂಗಿಯಾಗಿ ಪಡೆಯೋಕೆ ಪುಣ್ಯ ಮಾಡಿರಬೇಕು!
ಸಹೋದರಿಯರು ಎಷ್ಟೇ ಜಗಳವಾಡಲಿ, ಸಹೋದರನೆಂದರೆ ಪಂಚಪ್ರಾಣ ಅವರಿಗೆ. ಅದರಲ್ಲೂ ಈ 6 ರಾಶಿಯ ಅಕ್ಕ ತಂಗಿಯರು ಬಹಳ ಅಕ್ಕರೆಯ ಸೋದರಿಯರು.
ಅಕ್ಕನಾಗಲೀ, ತಂಗಿಯಾಗಲಿ ಅಣ್ಣಂದಿರ ಜೊತೆ ಇಡೀ ದಿನ ಜಗಳವಾಡಿದರೂ, ಅಗತ್ಯದ ಸಮಯದಲ್ಲಿ ಆಸರೆಯಾಗಬಲ್ಲರು. ತಾಯಿಯಂತೆ ಅಕ್ಕರೆ ತೋರಬಲ್ಲರು. ತಮ್ಮ ಸಹೋದರಗಾಗಿ ಸಾಧ್ಯವಾದ ಎಲ್ಲ ಸಹಾಯ ಮಾಡಲು ನಿಲ್ಲಬಲ್ಲರು. ಎಲ್ಲರೊಂದಿಗೆ ಸೋದರನ ಪರವಾಗಿ ವಾದಿಸಿ ನಿಲ್ಲಬಲ್ಲರು. ಹೀಗಾಗಿ, ಅಕ್ಕನೋ, ತಂಗಿಯೋ ಇದ್ದಾಳೆಂದರೆ ಅದು ಜೀವನದ ಅತ್ಯಂತ ಸುಂದರ ವರಗಳಲ್ಲಿ ಒಂದಾಗಿದೆ. ಅವರು ಎಂದಿಗೂ ಸೋದರನನ್ನು ಕಷ್ಟದ ಸಂದರ್ಭದಲ್ಲಿ ಒಂಟಿಯಾಗಿ ಬಿಡಲಾರರು. ಎಲ್ಲ ಸಹೋದರಿಯರೂ ಉತ್ತಮರೇ ಆದರೂ ಈ 6 ರಾಶಿ ಚಕ್ರದ ಸಹೋದರಿಯರು ಅತ್ಯುತ್ತಮ ಅಕ್ಕ ಇಲ್ಲವೇ ತಂಗಿ ಎನಿಸಿಕೊಳ್ಳಬಲ್ಲರು. ಯಾವ ರಾಶಿಯವರು, ಸೋದರಿಯಾಗಿ ಅವರ ವಿಶೇಷತೆಯೇನು ನೋಡಿ.
ಮಿಥುನ ರಾಶಿ(Gemini)
ಮಿಥುನ ರಾಶಿಯ ಸಹೋದರಿಯರು ಉತ್ತಮರು. ಅವರು ವಿನೋದ ಸ್ವಭಾವದವರು. ಸದಾ ಹರ್ಷಚಿತ್ತದಿಂದ ಕೂಡಿರುತ್ತಾರೆ. ಯಾವಾಗಲೂ ನಿಮ್ಮ ಮಾತನ್ನು ಕೇಳಿಸಿಕೊಳ್ಳುತ್ತಾರೆ ಮತ್ತು ನಿಮಗೆ ಜೀವನ ಸಲಹೆಯನ್ನು ನೀಡುತ್ತಾರೆ. ನಿಮ್ಮ ಜೀವನವು ಎಷ್ಟೇ ಕಷ್ಟಕರವೆಂದು ತೋರಿದರೂ, ಮಿಥುನದ ಸಹೋದರಿಯು ಜೀವನದ ಹೆಚ್ಚಿನ ವಿಷಯಗಳನ್ನು ಒಪ್ಪಿಕೊಳ್ಳುವಂತೆ ನಿಮ್ಮನ್ನು ಒಲಿಸುತ್ತಾರೆ ಮತ್ತು ಈ ಮೂಲಕ ನಿಮ್ಮ ಜೀವನವನ್ನು ಸರಳಗೊಳಿಸುತ್ತಾರೆ. ಅವರು ಅತ್ಯುತ್ತಮ ಗೆಳತಿಯಂತೆ ವರ್ತಿಸುತ್ತಾರೆ.
Astro Remedy: ಭೂ ವಿವಾದ ಬಗೆಹರಿಯಲು ಈ ಪರಿಹಾರ ಕೈಗೊಳ್ಳಿ..
ಕರ್ಕಾಟಕ(Cancer)
ನಿಮಗೆ ಕರ್ಕಾಟಕ ರಾಶಿಯ ಸಹೋದರಿ ಇದ್ದರೆ, ಆಕೆಗೆ ನಿಮ್ಮ ಪ್ರೀತಿ ಮತ್ತು ಕಾಳಜಿಯನ್ನು ಸದಾ ತೋರಿ. ಅವಳು ನಿಮಗಿಂತ ಚಿಕ್ಕವಳಾಗಿರಲಿ ಅಥವಾ ದೊಡ್ಡವಳಾಗಿರಲಿ, ಅವಳು ನಿಮಗೆ ಉತ್ತಮವಾದ ವಿಷಯಗಳನ್ನು ಧಾರೆ ಎರೆಯುತ್ತಾಳೆ ಮತ್ತು ಎಂದಿಗೂ ನೀವು ಯಾವುದರಿಂದಲೂ ವಂಚಿತರಾಗದಂತೆ ನೋಡಿಕೊಳ್ಳುತ್ತಾಳೆ. ರಕ್ತಸಂಬಂಧದ ಅರ್ಥವನ್ನು ಚೆನ್ನಾಗಿ ಅರ್ಥ ಮಾಡಿಸುವ ಮಾತೃ ಹೃದಯ ಇವರದು.
ತುಲಾ ರಾಶಿ(Libra)
ತುಲಾ ರಾಶಿಯ ಸಹೋದರಿಯರು ಸಮತೋಲಿತ ಮನಸ್ಸನ್ನು ಹೊಂದಿದ್ದಾರೆ. ಕಷ್ಟದ ಸಂದರ್ಭಗಳಲ್ಲಿ ತಮ್ಮ ಒಡಹುಟ್ಟಿದವರನ್ನು ಬೆಂಬಲಿಸುವುದರ ಜೊತೆಗೆ, ಅವರು ಆತ್ಮಾವಲೋಕನದ ಕಲೆಯನ್ನು ಸಹ ಕಲಿಸುತ್ತಾರೆ. ಆದಾಗ್ಯೂ, ಅವರ ಒಡಹುಟ್ಟಿದವರು ತಪ್ಪಾಗಿರುವ ಸಮಯದಲ್ಲಿ, ದೂರುತ್ತಾ ಕೂರುವುದಿಲ್ಲ. ಬದಲಿಗೆ ಎಲ್ಲರೆದುರು ಸಹೋದರನ ಬೆಂಬಲಕ್ಕೆ ನಿಂತು, ವೈಯಕ್ತಿಕವಾಗಿ ಬುದ್ಧಿ ಹೇಳುತ್ತಾರೆ. ಸೋದರನನ್ನು ಬಹಳ ಹಚ್ಚಿಕೊಂಡು ಅವರ ಒಳಿತಿಗಾಗಿ ಸದಾ ಹಾರೈಸುತ್ತಾರೆ.
ಧನು ರಾಶಿ(Sagittarius)
ಧನು ರಾಶಿಯ ಸಹೋದರಿಯರಲ್ಲಿ ವಿನೋದ-ಪ್ರೀತಿ ಮತ್ತು ಸಾಹಸ ಗುಣ ಹೆಚ್ಚು. ನಿಮ್ಮ ಮೂಡ್ ಕೆಟ್ಟಾಗಲೆಲ್ಲ ಧನು ರಾಶಿಯ ಅಕ್ಕ ಇಲ್ಲವೇ ತಂಗಿ ನಿಮ್ಮಲ್ಲಿ ಮತ್ತೆ ಚೈತನ್ಯದ ಬುಗ್ಗೆ ಉಕ್ಕಿಸಬಲ್ಲರು. ಅವರು ಬಹಳ ಧನಾತ್ಮಕ ಚಿಂತನೆಯುಳ್ಳವರಾಗಿದ್ದು, ನಿಮ್ಮನ್ನು ಕೂಡಾ ಸಕಾರಾತ್ಮಕ ಹಾದಿಯಲ್ಲಿ ನಡೆಸುತ್ತಾರೆ.
ಕುಂಭ ರಾಶಿ(Aquarius)
ಕುಂಭ ರಾಶಿಯ ಅಕ್ಕ ಇಲ್ಲವೇ ತಂಗಿ ನಿಮಗಿದ್ದರೆ ಅವರಲ್ಲಿ ನಿಮ್ಮೆಲ್ಲ ಗುಟ್ಟುಗಳನ್ನೂ ಚಾಚೂ ತಪ್ಪದೆ ಹೇಳಬಹುದು. ಅವರೊಂದು ಲಾಕರ್ ಹಾಗೆ ನಿಮ್ಮ ಗುಟ್ಟುಗಳನ್ನು ಸುರಕ್ಷಿತವಾಗಿರಿಸುತ್ತಾರೆ. ನಿಮ್ಮೊಂದಿಗೆ ಎಷ್ಟೇ ಜಗಳ ಮಾಡಲಿ, ಅವರಷ್ಟು ನಿಮ್ಮನ್ನು ಇಷ್ಟ ಪಡುವವರು ಮತ್ತೊಬ್ಬರು ಇಲ್ಲದಿರಬಹುದು. ಇವರು ನಿಮ್ಮ ಮನಸ್ಸಿನ ಸೂಕ್ಷ್ಮಗಳನ್ನು ಅರಿತು ಅದಕ್ಕೆ ತಕ್ಕಂತೆ ವರ್ತಿಸಬಲ್ಲರು. ಸದಾ ನಿಮ್ಮ ಸಂತೋಷಕ್ಕಾಗಿ ಹಾರೈಸುತ್ತಾ, ತಮ್ಮ ಕೈಯಿಂದಾದುದನ್ನು ಮಾಡಬಲ್ಲರು.
https://kannada.asianetnews.com/festivals/4-zodiacs-who-make-best-brothers-skr-rcsdtm
ಮೀನ ರಾಶಿ(Pisces)
ಮೀನ ರಾಶಿಯ ಸಹೋದರಿಯರು ತುಂಬಾ ಅರ್ಥಗರ್ಭಿತ ಮಾತುಗಳನ್ನಾಡುತ್ತದೆ. ಮತ್ತು ನಿಮ್ಮ ಭಾವನೆಗಳನ್ನು ನೀವು ಮರೆ ಮಾಡಿದರೂ ಸಹ, ಅವರದನ್ನು ಅರಿಯುತ್ತಾರೆ. ಅವರು ನಿಮ್ಮ ಜೀವನವನ್ನು ಸುಲಭಗೊಳಿಸುತ್ತಾರೆ. ನಿಮ್ಮೆಲ್ಲ ಸಮಸ್ಯೆಗಳಿಗೆ ಕೈಲಾದ ಸಹಾಯ ಮಾಡುತ್ತಾರೆ. ಅತ್ಯಂತ ಭಾವುಕರಾದ ಅವರು ಸೋದರನನ್ನು ಬಹಳ ಹಚ್ಚಿಕೊಳ್ಳುತ್ತಾರೆ.
ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.