ಹುಡುಗರೊಂದಿಗೆ ಮಿಂಗಲ್ ಆಗೋ ಹುಡುಗಿಯರಿಗೆ ಭಯ, ಭೀತಿ ಕಮ್ಮಿ!

ಕೆಲ ಹುಡುಗಿಯರು ಹುಡುಗರೊಂದಿಗೆ ಸುಲಭವಾಗಿ ಸ್ನೇಹ ಮಾಡುತ್ತಾರೆ, ಯಾವುದೇ ಹಿಂಜರಿಕೆಯಿಲ್ಲದೆ ಬೆರೆಯುತ್ತಾರೆ. ಆದರೆ, ಕೆಲವು ಹುಡುಗಿಯರು ಹುಡುಗರ ಸ್ನೇಹಕ್ಕೆ ಮನಸ್ಸು ಮಾಡುವುದಿಲ್ಲ. ಇದಕ್ಕೆ ಅವರ ರಾಶಿಚಕ್ರದ ಪ್ರಭಾವ ಇರುತ್ತದೆ. ನಾಲ್ಕು ರಾಶಿಗಳ ಮಹಿಳೆಯರು ಪುರುಷರೊಂದಿಗೆ ಉತ್ತಮ ಸ್ನೇಹಬಾಂಧವ್ಯ ಹೊಂದಬಲ್ಲರು.
 

leo gemini aries women can easily make friendship with men sum

ಕೆಲ ಹೆಣ್ಣುಮಕ್ಕಳು ತಮ್ಮದೇ ವಾರಗೆಯ ಅಥವಾ ಕ್ಲಾಸ್ ಮೇಟ್ ಹುಡುಗರೊಂದಿಗೆ ಸುಲಭವಾಗಿ ಬೆರೆಯುವುದಿಲ್ಲ, ಆದರೆ, ಕೆಲವು ಹುಡುಗಿಯರು ಗಂಡುಮಕ್ಕಳೊಂದಿಗೆ ಅತ್ಯಂತ ಸಹಜವಾಗಿ ಬೆರೆತು, ಸುಂದರ, ಸದೃಢ ಸ್ನೇಹ ಬಾಂಧವ್ಯವನ್ನು ನಿರ್ಮಿಸಿಕೊಳ್ಳುತ್ತಾರೆ. ಹುಡುಗರೊಂದಿಗಿನ ಸ್ನೇಹಕ್ಕೆ ಹಲವರು ಹಿಂಜರಿಯುತ್ತಾರೆ, ಕೆಲವರಿಗೆ ಹಿಂಜರಿಕೆ ಇರುವುದಿಲ್ಲ. ಇದು ಅವರವರ ಮನೋಭೂಮಿಕೆಯನ್ನು ಆಧರಿಸಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಗುಣಕ್ಕೆ ಅವರ ರಾಶಿಚಕ್ರವೇ ಕಾರಣವಾಗಿರುತ್ತದೆ. ಕೆಲವು ರಾಶಿಗಳ ಮಹಿಳೆಯರು ಪುರುಷರೊಂದಿಗೆ ಉತ್ತಮ ಸ್ನೇಹ ಹೊಂದುವುದರಲ್ಲಿ ಮುಂಚೂಣಿಯಲ್ಲಿರುತ್ತಾರೆ. ಕೆಲವರಿಗೆ ಪುರುಷರ ಸ್ನೇಹವೆಂದರೆ ಅಷ್ಟಕ್ಕಷ್ಟೇ. ಒಂದೊಮ್ಮೆ ಸ್ನೇಹವುಂಟಾದರೂ ಅದು ದೀರ್ಘಕಾಲದ, ಸದೃಢ ಬಂಧವಾಗಿರುವುದಿಲ್ಲ. ಕೆಲವು ಮಹಿಳೆಯರು ಪುರುಷರ ಸ್ನೇಹವನ್ನು ಅತ್ಯಂತ ಕಂಫರ್ಟ್ ಆಗಿ ಸ್ವೀಕಾರ ಮಾಡುತ್ತಾರೆ. ಅವರಲ್ಲಿರುವ ಕಾಸ್ಮಿಕ್ ಎನರ್ಜಿಯ ಪ್ರಭಾವದಿಂದ, ಮಹಿಳೆಯರೊಂದಿಗೆ ಒಡನಾಡುವಷ್ಟೇ ಸಹಜವಾಗಿ, ಆಪ್ತವಾಗಿ ಪುರುಷರೊಂದಿಗೆ ಸ್ನೇಹದಿಂದ ಇರಲು ಅವರಿಗೆ ಸಾಧ್ಯವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೇವಲ ನಾಲ್ಕು ರಾಶಿಗಳ ಮಹಿಳೆಯರಲ್ಲಿ ಈ ಗುಣವನ್ನು ಧಾರಾಳವಾಗಿ ಕಾಣಬಹುದು. 

•    ಮೇಷ (Aries)
ಮೇಷ ರಾಶಿಯ ಮಹಿಳೆಯರು (Women) ತಮ್ಮ ಅತ್ಯುತ್ಸಾಹಕ್ಕೆ ಹೆಸರುವಾಸಿ. ಧೈರ್ಯದ (Bold) ನಡೆನುಡಿ ಹೊಂದಿರುತ್ತಾರೆ. ಇವರಲ್ಲಿ ಅಂಜಿಕೆ (Fearless), ಮುಜುಗರ ಇಂಥವೆಲ್ಲ ಗುಣಗಳಿರುವುದಿಲ್ಲ. ಮುನ್ನುಗ್ಗುವ ಎನರ್ಜಿ (Energy) ಅಧಿಕವಾಗಿರುತ್ತದೆ. ಸಾಹಸಮಯ ಧೋರಣೆಯಿಂದ ಕೂಡಿರುತ್ತಾರೆ. ಸದಾಕಾಲ ಏನಾದರೊಂದು ಕಾರ್ಯದಲ್ಲಿ ತಲ್ಲೀನರಾಗಿರುತ್ತಾರೆ. ಇವರ ಈ ಗುಣ, ಪುರುಷರೊಂದಿಗೆ (Male) ಸ್ನೇಹವನ್ನು ಸೃಷ್ಟಿಸುತ್ತದೆ. ಡೈನಮಿಕ್ ಮತ್ತು ಖುಷಿಯಾದ ಸ್ನೇಹ (Friendship) ಬಯಸುವ ಹುಡುಗರು ಮೇಷ ರಾಶಿಯ ಹುಡುಗಿಯರತ್ತ ಆಕರ್ಷಣೆ ಹೊಂದುವುದು ಹೆಚ್ಚು. ಅಲ್ಲದೆ, ಮೇಷ ರಾಶಿಯ ಮಹಿಳೆಯರು ನೇರವಾದ ನಡೆನುಡಿ ಹೊಂದಿದ್ದು, ಸ್ನೇಹವನ್ನು ಉತ್ತಮ ಭಾವನೆಯಿಂದ ನೋಡುತ್ತಾರೆ.

ಶನಿ-ಬುಧ ಮೈತ್ರಿಯಿಂದ ಒಂದು ವರ್ಷದಲ್ಲಿ ಈ ರಾಶಿಗೆ ಶ್ರೀಮಂತಿಕೆ ಭಾಗ್ಯ, ಫೆಬ್ರವರಿಯಿಂದ ಒಳ್ಳೆ ದಿನ ಆರಂಭ

•    ವೃಷಭ (Taurus)
ವೃಷಭ ರಾಶಿಯ ಮಹಿಳೆಯರು ಸ್ಥಿರತೆ (Stability) ಮತ್ತು ಸೂಕ್ಷ್ಮತೆ ಹೊಂದಿರುತ್ತಾರೆ. ಸಹಜವಾಗಿ ಎಲ್ಲರೊಂದಿಗೆ ಬೆರೆಯುವ ಗುಣದಿಂದ ಕೂಡಿರುತ್ತಾರೆ. ಇವರಲ್ಲಿರುವ ಪ್ರಾಮಾಣಿಕ ಧೋರಣೆ ಇವರನ್ನು ಪುರುಷಸ್ನೇಹಿಯನ್ನಾಗಿ ರೂಪಿಸುತ್ತದೆ. ಸ್ನೇಹದಲ್ಲಿ ಬದ್ಧತೆ, ಅವಲಂಬನೆ ಬಯಸುವ ಪುರುಷರು ವೃಷಭದ ಮಹಿಳೆಯರನ್ನು ಇಷ್ಟಪಡುವುದರಲ್ಲಿ ಅನುಮಾನವಿಲ್ಲ. ಈ ಮಹಿಳೆಯರು ಆಳವಾದ ಬಾಂಧವ್ಯಕ್ಕೆ (Relationship) ಬೆಲೆ ನೀಡುತ್ತಾರೆ. ಇವರು ಸ್ನೇಹಿತರನ್ನು ಅರ್ಥ ಮಾಡಿಕೊಳ್ಳುತ್ತಾರೆ. ಸ್ಥಿರವಾಗಿ ಅವರೊಂದಿಗೆ ನಿಲ್ಲುತ್ತಾರೆ. ಪುರುಷ ಸ್ನೇಹಿತರೊಂದಿಗೆ ಖುಷಿಯಾಗಿ (Happy) ಬೆರೆಯುತ್ತಾರೆ. ಈ ಎಲ್ಲ ಗುಣಗಳು ವೃಷಭದ ಮಹಿಳೆಯರನ್ನು ಅತ್ಯುತ್ತಮ ಸ್ನೇಹಿತೆಯರನ್ನಾಗಿ ಮಾಡುತ್ತದೆ.

•    ಮಿಥುನ (Gemini)
ಮಿಥುನ ರಾಶಿಯ ಮಹಿಳೆಯರು ಸೋಷಿಯಲ್ ಬಟರ್ ಫ್ಲೈ ಆಗಿರುತ್ತಾರೆ. ಅಪ್ರಯತ್ನಪೂರ್ವಕವಾಗಿ ಇವರು ಎಲ್ಲರ ಸ್ನೇಹ ಮಾಡುತ್ತಾರೆ. ವಿಭಿನ್ನ ಸಾಮಾಜಿಕ ವಲಯದೊಂದಿಗೆ ಸಂಪರ್ಕ (Connection) ಹೊಂದಿರುತ್ತಾರೆ. ಹೊಂದಿಕೊಳ್ಳುವ, ಅಳವಡಿಸಿಕೊಳ್ಳುವ ಗುಣ ಹೊಂದಿರುತ್ತಾರೆ. ಚುರುಕು ಬುದ್ಧಿ, ವರ್ಚಸ್ಸು (Charm) ಇವರಲ್ಲಿರುತ್ತದೆ. ಖುಷಿಯಾದ ಮಾತುಕತೆ ಬಯಸುವ ಹುಡುಗರು ಈ ರಾಶಿಯ ಹುಡುಗಿಯರನ್ನು ಇಷ್ಟಪಡುವುದು ಗ್ಯಾರೆಂಟಿ. ಇವರು ತಮ್ಮ ಅನುಭವಗಳನ್ನು ರೋಚಕವಾಗಿ ಸ್ನೇಹಿತರೊಂದಿಗೆ ಹಂಚಿಕೊಳ್ಳಬಲ್ಲರು. ಸ್ನೇಹವನ್ನು ರಿಫ್ರೆಶ್ ಮಾಡುವ ಶಕ್ತಿಯೂ ಇವರಲ್ಲಿರುತ್ತದೆ. ಬೌದ್ಧಿಕವಾಗಿ ಉತ್ತೇಜನ ನೀಡುವಂತಹ ಚಟುವಟಿಕೆ ಇವರಿಗೆ ಇಷ್ಟ. 

ದೇವರಿಗಷ್ಟೇ ಅಲ್ಲ ಮನುಷ್ಯರಿಗೂ ಪ್ರಭೆಯಿದೆ; ನಿಮ್ಮ ಪ್ರಭೆಯ ಬಣ್ಣ ಯಾವ್ದು ಗೊತ್ತಾ?

•    ಸಿಂಹ (Leo)
ಸಿಂಹ ರಾಶಿಯ ಜನ ನಿಸರ್ಗ ಸಹಜವಾಗಿ ನಾಯಕತ್ವದ (Leadership) ಗುಣ ಹೊಂದಿದ್ದಾರೆ. ಸಿಂಹ ರಾಶಿಯ ಮಹಿಳೆಯರು ಸಹ ವರ್ಚಸ್ಸು, ನಾಯಕತ್ವದ ಗುಣದಿಂದ ಸೆಳೆಯುತ್ತಾರೆ. ಸ್ನೇಹದಲ್ಲೂ ಇವರ ಮೇಲುಗೈ ಇರುತ್ತದೆ. ಇವರ ಆತ್ಮವಿಶ್ವಾಸದ (Confidence) ವ್ಯಕ್ತಿತ್ವ ಹುಡುಗರನ್ನು ಸೆಳೆಯುತ್ತದೆ. ತಾವು ಕೇಂದ್ರಬಿಂದುವಾಗಲು ಯತ್ನಿಸುತ್ತಾರೆ ಹಾಗೆಯೇ, ಮತ್ತೊಬ್ಬರ ಅಭಿಪ್ರಾಯಗಳಿಗೂ ಮನ್ನಣೆ ನೀಡುತ್ತಾರೆ. ಸ್ಫೂರ್ತಿ ನೀಡುವ, ಮನಸ್ಥಿತಿ ಉತ್ತೇಜಿಸುವ (Uplift) ಮಹಿಳೆಯರ ಸ್ನೇಹ ಬಯಸುವ ಪುರುಷರಿಗೆ ಸಿಂಹ ರಾಶಿಯವರ ಸ್ನೇಹ ಅತ್ಯಂತ ಸೂಕ್ತ. 

Latest Videos
Follow Us:
Download App:
  • android
  • ios