ಅದ್ವೈತಿಗಳಾದ ನಾವು ವೈವಿಧ್ಯತೆಯನ್ನು ಬಯಸುವವರು. ಸಮಾಜದಲ್ಲಿ ಸಾಮರಸ್ಯ ನೆಲೆಸೋವರೆಗೂ ವಿಶ್ರಮಿಸಲ್ಲ ಎಂದು ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿ ಹೇಳಿದ್ದಾರೆ.
ಭಾರತೀಯ ಸಂಸ್ಕೃತಿ(Indian Culture)ಯ ನಂಬಿಕೆ ಮತ್ತು ಆಚಾರ ವಿಚಾರಗಳಿಗೆ ಶಕ್ತಿ ತುಂಬುವ ಕೆಲಸ ಧಾರ್ಮಿಕ ಕೇಂದ್ರಗಳಿಂದ ಆಗುತ್ತಿದೆ ಎಂದು ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರು ನುಡಿದರು.
ಶುಕ್ರವಾರ ಹರಿಹರಪುರ ಮಠ(Hariharapura mutt)ದಲ್ಲಿ ಮಹಾ ಕುಂಭಾಭಿಷೇಕ ಕಾರ್ಯಕ್ರಮದ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಅದ್ವೈತ ಸಿದ್ಧಾಂತದ ಪ್ರಕಾರ ಸಮಾನತೆಯನ್ನು ಕಾಪಾಡುವುದು ಧರ್ಮಗಳನ್ನು ಉಳಿಸುವುದು ಮಠ ಮತ್ತು ಧಾರ್ಮಿಕ ಕೇಂದ್ರ(religious centeres)ಗಳ ಕೆಲಸವಾಗಬೇಕು ಎಂದರು.
ಭಗವಂತನು ಎಲ್ಲರಲ್ಲೂ ಇದ್ದಾನೆ. ಅವರವರ ಸೇವೆಗೆ ಅನುಗುಣವಾಗಿ ಫಲಾಫಲಗಳನ್ನು ಕೊಡುವವನು ಭಗವಂತ. ಬುದ್ಧನ ಹೃದಯ ಆದಿಶಂಕರಾಚಾರ್ಯರ ಮೆದುಳು. ಇವೆರಡು ಸೇರಿದಲ್ಲಿ ಸುಸಂಸ್ಕೃತಿಯ ಸಮಾಜ ಸೃಷ್ಠಿಯಾಗಲಿದೆ ಎಂದ ಶ್ರೀಗಳು, ವೈವಿಧ್ಯತೆಯಲ್ಲಿ ಏಕತೆ ಇರುವ ನಾಡು ನಮ್ಮದಾಗಿದೆ. ಕೆಲವರು ವೈವಿಧ್ಯತೆಯನ್ನೇ ನಕಾರಾತ್ಮಕವಾಗಿ ಬಿಂಬಿಸಿ ಸಮಾಜದಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಠಿಸುತ್ತಿದ್ದಾರೆ. ಸಮುದಾಯದ ಸಂಘಟನೆಗಳು ಸಾಮರಸ್ಯವನ್ನು ಮಾತಾಡಲು ಮುಂದಾಗಿದೆ. ಧರ್ಮ ಎಂದರೆ ಪರಸ್ಪರ ಜೋಡಿವುದೇ ಹೊರತು, ತುಂಡರಿಸುವುದಲ್ಲ. ತಾರತಮ್ಯ ಭಾವನೆಯಿಂದ ಹೊರಬಂದು ಸಾಮರಸ್ಯ ಸೌಹಾರ್ದತೆ ಮೆರೆಯಲು ಮುಂದಾಗಬೇಕು ಎಂದು ಹೇಳಿದರು.
ಅದ್ವೈತಿಗಳಾದ ನಾವು ವೈವಿಧ್ಯತೆಯನ್ನು ಬಯಸುವವರು. ಸಮಾಜದಲ್ಲಿ ಶಾಂತಿ ಸಾಮರಸ್ಯ ನೆಲೆ ನಿಲ್ಲುವವರೆಗೂ ನಾವು ವಿಶ್ರಮಿಸುವುದಿಲ್ಲ. ಮುಂದಿನ ದಿನಗಳಲ್ಲಿ ಶ್ರೀ ಮಠದಲ್ಲಿ ಸೌಹಾರ್ದತೆಯನ್ನು ಸಾರುವ ಅನೇಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಶ್ರೀ ಮಠಕ್ಕೆ ಸಾಮರಸ್ಯದಿಂದ ಬೇಧಭಾವವಿಲ್ಲದೇ ಎಲ್ಲರೂ ಬರಬಹುದಾಗಿದೆ. ಶ್ರೀ ಮಠಕ್ಕೆ ಬರುವವರು ಜಾತಿ ಮತ್ತು ಪಕ್ಷವನ್ನು ಮಠದ ಹೊರಗೆ ಬಿಟ್ಟು ಬನ್ನಿ. ಭಗವಂತನ ಸನ್ನಿಧಿಯಲ್ಲಿ ಎಲ್ಲರೂ ಸಮಾನರು ಎಂದರು.
ಕುಂಭಾಭಿಷೇಕ ಕಾರ್ಯಕ್ರಮವು ಪರಮಾತ್ಮನ ಪ್ರೇರಣೆಯಂತೆ ಐತಿಹಾಸಿಕ ಕಾರ್ಯಕ್ರಮವಾಗಿ ನಡೆದಿದೆ. ಸಂಕಲ್ಪ ನಮ್ಮದು ಪ್ರೇರಣೆ ಭಗವಂತನದ್ದು, ಆತನ ಪ್ರೇರಣೆಯಂತೆ ಸಹಸ್ರಾರು ಭಕ್ತಾದಿಗಳ ಸೇವೆ ಮತ್ತು ಶ್ರಮ ಇದರಲ್ಲಿ ಅಡಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಅವರ ಆಶಯದಂತೆ ಸ್ವಸಹಾಯ ಸಂಘದ ಎಲ್ಲ ಸದಸ್ಯರು ಕಾರ್ಯಕ್ರಮದ ಏಳಿಗೆಗಾಗಿ ಶ್ರಮ ವಹಿಸಿದ್ದಾರೆ. ಅನೇಕರು ಸ್ವಯಂಪ್ರೇರಣೆಯಿಂದ ಪಾಲ್ಗೊಂಡಿದ್ದಾರೆ. ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂದವರಿಗೆ ಶ್ರೀಲಕ್ಷ್ಮೀನರಸಿಂಹ ದೇವರ ಹಾಗೂ ಶಾರದಾ ಪರಮೇಶ್ವರಿಯ ಪರಿಪೂರ್ಣ ಆಶೀರ್ವಾದವಿರಲಿ ಎಂದರು.
ಹರಿಹರಪುರ ಕುಂಭಾಭಿಷೇಕಕ್ಕೆ ಶುಭಕೋರಿ ಸೌಹಾರ್ದತೆ ತೋರಿದ ಮುಸ್ಲಿಂ ಬಾಂಧವರು
ಶುಕ್ರವಾರ ಕುಂಭಾಭಿಷೇಕದ ಒಂದು ಹಂತ ಮುಕ್ತಾಯವಾಗಿದೆ. ಶನಿವಾರದಿಂದ ಏ.24ರವರೆಗೂ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು, ಹೋಮ, ಯಾಗಾದಿಗಳು ನಡೆಯುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಮಹಾಕುಂಭಾಭಿಷೇಕ ಸಂಭ್ರಮ
ಅಗಸ್ತ್ಯ ಮಹರ್ಷಿಗಳು ಶ್ರೀಲಕ್ಷ್ಮೀ ನರಸಿಂಹ ಸ್ವಾಮಿಯ ಪ್ರತ್ಯಕ್ಷ ದರ್ಶನವನ್ನು ಪಡೆದಿರುವ ತಪೋಭೂಮಿ ಹಾಗೂ ಆದಿಶಂಕರ ಭಗವತ್ಪಾದರು ಶಾರದಾ ಪರಮೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿರುವ ಜ್ಞಾನಭೂಮಿ, ತುಂಗೆಯ ತಟದಲ್ಲಿರುವ ದಿವ್ಯಕ್ಷೇತ್ರ ಹರಿಹರಪುರ ಮಠಕ್ಕೆ ಶುಭ ಶುಕ್ರವಾರ ಅವಿಸ್ಮರಣೀಯ ದಿನ.
ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಸಂಕಲ್ಪಿಸಿರುವ ಈ ಧರ್ಮಪೀಠದ ದೇವಾಲಯಗಳ ಪುನರ್ ನಿರ್ಮಾಣ ಮಹಾಕಾರ್ಯ ಕಳೆದ ಹಲವು ವರ್ಷಗಳಿಂದ ಜರುಗುತ್ತಿದ್ದು, ಇದೀಗ ಈಶ್ವರಾನುಗ್ರಹದಿಂದ ಈ ಮಹತ್ಕಾರ್ಯವು ಸಾಂಗವಾಗಿ ಶುಕ್ರವಾರ ಸಂಪನ್ನಗೊಂಡಿತು.
ಅಗಸ್ತ್ಯ ಮಹರ್ಷಿ ಕರಾರ್ಚಿತ ಶ್ರೀಲಕ್ಷಿ ್ಮೕನರಸಿಂಹಸ್ವಾಮಿ ಮತ್ತು ಜಗದ್ಗುರು ಆದಿಶಂಕರ ಭಗವತ್ಪಾದರು ಪ್ರತಿಷ್ಠಾಪಿಸಿರುವ ಶ್ರೀಶಾರದಾ ಪರಮೇಶ್ವರಿ ದೇವಸ್ಥಾನಗಳ ಪುನಃಪ್ರತಿಷ್ಠಾ, ಮಹಾಕುಂಭಾಭಿಷೇಕವು ಶ್ರದ್ಧಾಭಕ್ತಿಗಳಿಂದ ನೆರವೇರಿತು. ಮಹಾಕುಂಭಾಭಿಷೇಕದ ಪ್ರಯುಕ್ತ ದೇವತಾ ಪ್ರತಿಷ್ಠೆ, ಪ್ರತಿಷ್ಠಾಂಗ ಹೋಮ, ಪೂಜಾ ಹೋಮ, ಮಹಾ ಕುಂಭಾಭಿಷೇಕ, ಮಹಾಮಂಗಳಾರತಿ, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರೀಗಳ ನೇತೃತ್ವದಲ್ಲಿ ನೆರವೇರಿತು. 100ಕ್ಕೂ ಹೆಚ್ಚು ಪುರೋಹಿತರು ಧಾರ್ಮಿಕ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.
ಶ್ರೀಲಕ್ಷ್ಮೀ ನರಸಿಂಹ ಮತ್ತು ಶಾರದಾ ಪರಮೇಶ್ವರಿ ದೇವಸ್ಥಾನದ ಕಲಶಗಳಿಗೆ ಕುಂಭಾಭಿಷೇಕ ನೆರವೇರಿಸಿದ ಶ್ರೀಗಳು, ನಂತರ ಆಂಜನೇಯಮೂರ್ತಿಗೆ ಪೂಜೆ ಸಲ್ಲಿಸಿ ಭಕ್ತಾಧಿಗಳನ್ನು ಹರಸಿದರು. ಮಹಾದ್ವಾರದ ಗೋಪುರ ಕಳಶಗಳಿಗೆ ಕ್ರೇನ್ ಮೂಲಕ ಕುಂಭಾಭಿಷೇಕ ಮಾಡಲಾಯಿತು. ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ ಸಹಸ್ರಾರು ಭಕ್ತಾಧಿಗಳು ಕುಂಭಾಭಿಷೇಕದ ಅವಿಸ್ಮರಣೀಯ ಕ್ಷಣಗಳನ್ನು ಕಣ್ತುಂಬಿಕೊಂಡರು.
Chikkamagaluru: ಹರಿಹರಪುರ ಮಠದಲ್ಲಿ ಮಹಾ ಕುಂಭಾಭಿಷೇಕ ಸಂಭ್ರಮ
ಹೆಲಿಕಾಪ್ಟರ್ ಮೂಲಕ ಪುಷ್ಟವೃಷ್ಟಿ
ಕುಂಭಾಭಿಷೇಕಕ್ಕೂ ಮುನ್ನ ದೇವಸ್ಥಾನಕ್ಕೆ ಅಳವಡಿಸಿದ ಕಳಶ, ಶ್ರೀಮಠದ ಆವರಣದಲ್ಲಿ ಪ್ರತಿಷ್ಠಾಪಿಸಿದ ಆಂಜನೇಯ ಮೂರ್ತಿಗೆ, ರಾಜಗೋಪುರದ ಕಳಶಗಳಿಗೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಠಿಯನ್ನು ಸುರಿಸಲಾಯಿತು. ಈ ಕ್ಷಣವನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು.
