Asianet Suvarna News Asianet Suvarna News

ಶ್ರಾವಣದ ಕೊನೆಯ ಸೋಮವಾರ ವಿಶೇಷ ಯೋಗ; ಈ ಮೂರು ರಾಶಿಯವರಿಗೆ ಮುತ್ತಿನಂತ ಅದೃಷ್ಟ..!

ಶ್ರಾವಣ ಮಾಸದ ಕೊನೆಯ ಅಥವಾ ನಾಲ್ಕನೇ ಸೋಮವಾರದಂದು ಶಿವನನ್ನು ಪೂಜಿಸಲಾಗುತ್ತದೆ ಮತ್ತು ಇದು ಶ್ರಾವಣ ಮಾಸದ ಅಂತ್ಯವನ್ನು ಸೂಚಿಸುತ್ತದೆ. ಆ ದಿನದಂದು ಐದು ಶುಭ ಯೋಗಗಳು ಉಂಟಾಗುತ್ತದೆ. ಇದರಿಂದ ಕೆಲವು ರಾಶಿಗಳ ಅದೃಷ್ಟವು ಮುತ್ತುಗಳಂತೆ ಹೊಳೆಯುತ್ತದೆ. ಈ ಕುರಿತು ಇಲ್ಲಿದೆ ಮಾಹಿತಿ.

Last Monday of Shravan Good luck for these three zodiac signs suh
Author
First Published Aug 28, 2023, 3:14 PM IST | Last Updated Aug 28, 2023, 3:14 PM IST

ಶ್ರಾವಣ ಮಾಸದ ಕೊನೆಯ ಅಥವಾ ನಾಲ್ಕನೇ ಸೋಮವಾರದಂದು ಶಿವನನ್ನು ಪೂಜಿಸಲಾಗುತ್ತದೆ ಮತ್ತು ಇದು ಶ್ರಾವಣ ಮಾಸದ ಅಂತ್ಯವನ್ನು ಸೂಚಿಸುತ್ತದೆ. ಆ ದಿನದಂದು ಐದು ಶುಭ ಯೋಗಗಳು ಉಂಟಾಗುತ್ತದೆ. ಇದರಿಂದ ಕೆಲವು ರಾಶಿಗಳ ಅದೃಷ್ಟವು ಮುತ್ತುಗಳಂತೆ ಹೊಳೆಯುತ್ತದೆ. ಈ ಕುರಿತು ಇಲ್ಲಿದೆ ಮಾಹಿತಿ.

ಶ್ರಾವಣದ ಕೊನೆಯ ಸೋಮವಾರದಂದು ಅಪರೂಪದ ಯೋಗಗಳು ರೂಪಗೊಳ್ಳುತ್ತಿವೆ. ಈ ಬಾರಿ ಶ್ರಾವಣ ಕೊನೆಯ ಸೋಮವಾರ ಮತ್ತು ಶ್ರಾವಣ ಕೊನೆಯ ಪ್ರದೋಷ ವ್ರತವು ಒಟ್ಟಿಗೆ ಬಂದಿದೆ. ಇದರಿಂದ ಈ ದಿನದಂದು ಕೆಲವು ರಾಶಿಯವರಿಗೆ ಮಂಗಳಕರ ಯೋಗವು  ಉಂಟಾಗುತ್ತದೆ. ಇದು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. 

ಮಿಥುನ ರಾಶಿ (Gemini) 

ಶ್ರಾವಣ ಮಾಸದ ಕೊನೆಯ ಅಥವಾ ನಾಲ್ಕನೇ ಸೋಮವಾರ ಮಿಥುನ ರಾಶಿಯವರಿಗೆ ಮಂಗಳಕರವಾದ ದಿನವಾಗಿದೆ. ಶಿವನ ಪೂಜೆಯಿಂದ ಈ ರಾಶಿಯವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತದೆ. ಶಿವನ ಕೃಪೆಯಿಂದ ವ್ಯಾಪಾರ ಚೆನ್ನಾಗಿ ನಡೆಯುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯ ವಾತಾವರಣ ಇರುತ್ತದೆ. ವಿದ್ಯಾರ್ಥಿಗಳಿಗೆ ಈ ದಿನ ಶಕ್ತಿ ತುಂಬಲಿದೆ. ಶಿವನ ಆಶೀರ್ವಾದಕ್ಕಾಗಿ ಮಂಗಳಕರ ಸಮಯದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡಿ.

ವೃಶ್ಚಿಕ ರಾಶಿ (Scorpio) 

ವೃಶ್ಚಿಕ ರಾಶಿಯವರಿಗೆ ಈ ಯೋಗದಿಂದ ಪ್ರಯೋಜನವಾಗಲಿದೆ. ಕೆಲಸದ ಸ್ಥಳದಲ್ಲಿ ಉನ್ನತ ಅಧಿಕಾರಿಗಳ ಬೆಂಬಲ ಸಿಗಲಿದೆ. ಕುಟುಂಬ ಸದಸ್ಯರೊಂದಿಗಿನ ಭಿನ್ನಾಭಿಪ್ರಾಯವು ಕೊನೆಗೊಳ್ಳುತ್ತದೆ. ಶಿವನ ಕೃಪೆಯಿಂದ ವಿದ್ಯಾರ್ಥಿಗಳ ಮನಸ್ಸು ವಿದ್ಯಾಭ್ಯಾಸದಲ್ಲಿ ತೊಡಗುತ್ತದೆ. ಆರ್ಥಿಕ ಸ್ಥಿತಿಯೂ ಉತ್ತಮವಾಗಿರುತ್ತದೆ. ಮಹಾಮೃತ್ಯಂಜಯ ಪಠಣದಿಂದ ಶಿವನ ಅನುಗ್ರಹ ಉಳಿಯುತ್ತದೆ.

ಸೌಜನ್ಯ ಕೇಸ್‌ನಲ್ಲಿ ತಪ್ಪು ಮಾಡಿಲ್ಲವೆಂದು ಅಣ್ಣಪ್ಪ ಸ್ವಾಮಿ ಮುಂದೆ ಆಣೆ; ಈ ದೈವದ ಬಗ್ಗೆ ನಿಮಗೆಷ್ಟು ಗೊತ್ತು?

 

ಕುಂಭ ರಾಶಿ (Aquarius) 

ಈ ರಾಶಿಯವರಿಗೆ ಶ್ರಾವಣ ಕೊನೆಯ ಸೋಮವಾರವನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಜೀವನ ಸಂಗಾತಿಯ ಸಹಾಯದಿಂದ ನೀವು ಜೀವನದಲ್ಲಿ ಬರುವ ಸವಾಲುಗಳನ್ನು ಜಯಸುತ್ತೀರಿ. ಉದ್ಯೋಗಸ್ಥರಿಗೆ ದಿನವು ಉತ್ತಮವಾಗಿರಲಿದೆ ಜೊತೆಗೆ ಹೊಸ ಯೋಜನೆಯನ್ನು ಸಹ ಕಾಣಬಹುದು. ಈ ದಿನ ನಿಮ್ಮ ಜೀವನದಲ್ಲಿನ ಸಮಸ್ಯೆಗಳನ್ನು ತೊಡೆದುಹಾಕಲು, ಶಿವಲಿಂಗವನ್ನು ಗಂಗಾ ಜಲದಿಂದ ಅಭಿಷೇಕಿಸಿ ಮತ್ತು ಓಂ ನಮಃ ಶಿವಾಯವನ್ನು 108 ಬಾರಿ ಜಪಿಸಿ.

Latest Videos
Follow Us:
Download App:
  • android
  • ios