Asianet Suvarna News Asianet Suvarna News

ಕೃಷ್ಣ ಜನ್ಮಾಷ್ಟಮಿ: ಈ ರಾಶಿಯವರಿಗೆ ಅದೃಷ್ಟ ಮಳೆಗರೆಯಲಿದ್ದಾನೆ ಶ್ರೀಕೃಷ್ಣ

ಕೃಷ್ಣಜನ್ಮಾಷ್ಠಮಿಯಂದು ಭಕ್ತರು ಮುರಾರಿಯ ಸ್ಮರಣೆಯಲ್ಲಿ ನಿರತರಾಗ್ತಾರೆ. ಬಾಲಗೋಪಾಲನ ಕೃಪೆಗೆ ಪಾತ್ರರಾಗಲು ಪರಿಪರಿ ಪೂಜೆ ಮಾಡ್ತಾರೆ. ಈ ಬಾರಿ ಕೃಷ್ಣಾಷ್ಠಮಿ ವಿಶೇಷವಾಗಿದ್ದು, ಕೆಲವರ ಅದೃಷ್ಟದ ಬಾಗಿಲು ತೆರೆಯಲಿದೆ.
 

Krishna Janmashtami These Zodiac Signs May Be Lucky roo
Author
First Published Sep 5, 2023, 6:06 PM IST

ಶ್ರೀಕೃಷ್ಣನ ಜನ್ಮಾಷ್ಠಮಿಯನ್ನು ಪ್ರತಿ ಬಾರಿ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಆಚರಿಸಲಾಗುತ್ತದೆ. ನಾಡಿನೆಲ್ಲೆಡೆ ಶ್ರೀಕೃಷ್ಣನ ಜನ್ಮಾಷ್ಠಮಿ ಸಂಭ್ರಮ ಮನೆ ಮಾಡಿದೆ. ಕೃಷ್ಣನ ದೇವಸ್ಥಾನಗಳಲ್ಲಿ ಪೂಜೆಗೆ ಸಕಲ ಸಿದ್ಧತೆಯಾಗಿದೆ. ಗೋಪಾಲನ ಭಕ್ತರು, ಕೃಷ್ಣ ಜನ್ಮಾಷ್ಠಮಿ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 

ಈ ಬಾರಿ ಜನ್ಮಾಷ್ಟಮಿಯ (Janmashtami) ದಿನದಂದು ಗ್ರಹ ಮತ್ತು ನಕ್ಷತ್ರಗಳ ಅಪರೂಪದ ಸಂಯೋಜನೆ ನಡೆಯುತ್ತಿದೆ. 30 ವರ್ಷಗಳ ನಂತರ  ಈ ವರ್ಷ ಜನ್ಮಾಷ್ಟಮಿಯ ದಿನ, ಶನಿಯು ತನ್ನ ರಾಶಿಯಾದ ಕುಂಭ ರಾಶಿಯನ್ನು ಪ್ರವೇಶ ಮಾಡ್ತಿದ್ದಾನೆ. ಇದಲ್ಲದೆ ಜನ್ಮಾಷ್ಟಮಿಯ ದಿನದಂದು ಸರ್ವಾರ್ಥ ಸಿದ್ಧಿ ಯೋಗವು ರೂಪುಗೊಳ್ಳುತ್ತಿದೆ.  ಈ ಬಾರಿ ಕೃಷ್ಣ ಜನ್ಮಾಷ್ಠಮಿ ದಿನ ಚಂದ್ರನು ವೃಷಭ ರಾಶಿಯಲ್ಲಿರುತ್ತಾನೆ. ಹಾಗೆಯೇ ಶ್ರೀಕೃಷ್ಣನ ಜನ್ಮ ನಕ್ಷತ್ರ ರೋಹಿಣಿ ನಕ್ಷತ್ರವಾಗಿರಲಿದೆ. ಈ ಎಲ್ಲ ಶುಭ ಸಂಯೋಜನೆಯಲ್ಲಿ ಕೆಲ ರಾಶಿಯವರಿಗೆ ಲಾಭವಾಗಲಿದೆ. ಅದೃಷ್ಟ (good luck) ದ ಮಳೆಯಾಗಲಿದೆ. ಕೃಷ್ಣ ಜನ್ಮಾಷ್ಠಮಿಯಂದು ಯಾವ ರಾಶಿಯವರಿಗೆ ಕೃಷ್ಣನ ಕೃಪೆ ಸಿಗಲಿದೆ ನೋಡೋಣ.

JANMASHATAMI 2023: ತುಳಸಿಗೆ ಈ ರೀತಿ ಮಾಡಿದರೆ ದೋಷ ಖಚಿತ, ಎಷ್ಟೇ ಸಂಪಾದಿಸಿದರೂ ನಿಲ್ಲಲ್ಲ ಹಣ

ವೃಷಭ ರಾಶಿ : ವೃಷಭ ರಾಶಿಯವರಿಗೆ ಇದು ಶುಭ ಸಮಯ. ಭಾಗ್ಯದ ಬಾಗಿಲು ತೆರೆಯಲಿದೆ.  ಕೃಷ್ಣ ಜನ್ಮಾಷ್ಠಮಿಯಂದು ವೃಷಭ ರಾಶಿಯವರಿಗೆ ಅಚಾನಕ್ ಹಣ ಪ್ರಾಪ್ತಿಯಾಗುವ ಸಾಧ್ಯತೆ ಹೆಚ್ಚಿದೆ. ದೊಡ್ಡ ಕೆಲಸದಲ್ಲಿ ಸಫಲತೆ ಪ್ರಾಪ್ತಿಯಾಗುವ ಸಂಭವವಿದೆ. ನೌಕರಿ ಕ್ಷೇತ್ರದಲ್ಲಿ ನೀವು ಮಾಡುವ ಕೆಲಸ ಉನ್ನತವಾಗಿರುವ ಕಾರಣ ನಿಮಗೆ ಪ್ರಮೋಷನ್ ಸಿಗುವ ಸಾಧ್ಯತೆಗಳಿವೆ. ನೀವು ವ್ಯಾಪಾರಿ ಕ್ಷೇತ್ರದಲ್ಲಿದ್ದರೆ ವ್ಯಾಪಾರದಲ್ಲಿ ಪ್ರಗತಿಯಾಗುವ ಜೊತೆಗೆ ನಿಮ್ಮ ಆದಾಯದಲ್ಲಿ ಹೆಚ್ಚಳವನ್ನು ನೀವು ಕಾಣಬಹುದು.

ಸಿಂಹ ರಾಶಿ : ಸಿಂಹ ರಾಶಿಯವರ ಮೇಲೆ ಶ್ರೀಕೃಷ್ಣ ಕೃಪೆ ತೋರಲಿದ್ದಾನೆ. ಮುಕುಂದನ ಆಶೀರ್ವಾದ ನಿಮಗೆ ಸಿಗಲಿದೆ. ಆದಾಯದ ಮೂಲ ತೆರೆದುಕೊಳ್ಳಲಿದೆ. ಇದ್ರಿಂದ ಜೀವನೋಪಾಯ ಸುಲಭವಾಗಲಿದೆ. ವ್ಯಾಪಾರಸ್ಥರಿಗೆ ಈ ಸಮಯ ಬಹಳ ಒಳ್ಳೆಯದಾಗಲಿದೆ. ಸಂಗಾತಿ ಜೊತೆ ವೈಮನಸ್ಸಿದ್ದಲ್ಲಿ ಅದು ದೂರವಾಗುವ ಜೊತೆಗೆ ನಿಮ್ಮ ದಾಂಪತ್ಯದಲ್ಲಿ ಸುಖ ಪ್ರಾಪ್ತಿಯಾಗಲಿದೆ. ನಿಮ್ಮ ಒಳಿತಿಗಾಗಿ ನೀವು ದೊಡ್ಡ ಹಾಗೂ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಸಂಭವವಿದೆ.

ಕೃಷ್ಣ ಜನ್ಮಾಷ್ಟಮಿ 2023 ಶುಭ ಮುಹೂರ್ತ,ಮಹತ್ವ

ಮಕರ ರಾಶಿ : ಮಕರ ರಾಶಿಯವರನ್ನು ಈ ದಿನ ಅದೃಷ್ಟ ಹಿಂಬಾಲಿಸಲಿದೆ. ಅಚಾನಕ್ ನಿಮಗೆ ಧನ ಪ್ರಾಪ್ತಿಯಾಗಲಿದೆ. ಅನೇಕ ದಿನಗಳಿಂದ ನಿಮ್ಮ ಕೈಗೆ ಸಿಗದೆ ಕಿರಿಕಿರಿ ನೀಡ್ತಿದ್ದ ಹಣವೊಂದು ಕೃಷ್ಣ ಜನ್ಮಾಷ್ಟಮಿ ದಿನ ನಿಮ್ಮ ಕೈ ಸೇರಲಿದೆ. ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಇದು ಉತ್ತಮ ದಿನವಾಗಿದೆ. ಕೆಲಸದಲ್ಲಿ ಯಶಸ್ಸು ಕಾಣುವ ನೀವು ಬಡ್ತಿ ಪಡೆಯುವ ಸಾಧ್ಯತೆಯಿದೆ.

ಕೃಷ್ಣ ಜನ್ಮಾಷ್ಠಮಿ ದಿನ ಕೃಷ್ಣನ ಕೃಪೆಗೆ ಪಾತ್ರರಾಗಲು ರಾಶಿ ಪ್ರಕಾರ ದಾನ ಮಾಡಿ : ಕೃಷ್ಣ ಜನ್ಮಾಷ್ಠಮಿ ದಿನದಂದು ಇನ್ನಷ್ಟು ಮಂಗಳವಾಗ್ಬೇಕೆಂದ್ರೆ ನೀವು ದಾನ ಮಾಡಬೇಕು. ನಿಮ್ಮ ರಾಶಿಗೆ ತಕ್ಕಂತೆ ನೀವು ದಾನ ಮಾಡಿದ್ರೆ ಲಾಭ ಹೆಚ್ಚು.
• ಮೇಷ ರಾಶಿಯವರು ಗೋಧಿ ಮತ್ತು ಬೆಲ್ಲವನ್ನು ದಾನ ಮಾಡಿ. 
• ವೃಷಭ ರಾಶಿಯವರು ಬೆಣ್ಣೆ, ಸಕ್ಕರೆ ಮಿಠಾಯಿ ಮತ್ತು ಸಕ್ಕರೆಯನ್ನು ದಾನ ಮಾಡಬೇಕು. 
• ಮಿಥುನ ರಾಶಿಯವರು ಅನ್ನದಾನ ಮಾಡಬೇಕು.
• ಕರ್ಕಾಟಕ ರಾಶಿಯವರು ಹಾಲು, ಮೊಸರು, ಅನ್ನ ಮತ್ತು ಸಿಹಿತಿಂಡಿ ದಾನ ಮಾಡಬೇಕು. 
• ಸಿಂಹ ರಾಶಿಯವರು ಬೆಲ್ಲ, ಜೇನುತುಪ್ಪ ಮತ್ತು ಉದ್ದಿನಬೇಳೆಯನ್ನು ದಾನ ಮಾಡಿ.
• ಕನ್ಯಾ ರಾಶಿಯವರು ಕೊಟ್ಟಿಗೆ ಇರುವವರಿಗೆ ಮೇವು ಅಥವಾ ಹಣವನ್ನು ದಾನ ಮಾಡಿ. 
• ತುಲಾ ರಾಶಿಯವರು ಬಿಳಿ ಮತ್ತು ನೀಲಿ ಬಣ್ಣದ ಬಟ್ಟೆ ದಾನ ಮಾಡಬೇಕು.  
• ವೃಶ್ಚಿಕ ರಾಶಿಯವರು  ಗೋಧಿ, ಬೆಲ್ಲ ಮತ್ತು ಜೇನುತುಪ್ಪ  ದಾನ ಮಾಡಿ.
• ಧನು ರಾಶಿಯವರು ಅವರ ಆರ್ಥಿಕ ಸ್ಥಿತಿಗೆ ತಕ್ಕಂತೆ ಗೀತೆ ಪುಸ್ತಕವನ್ನು ದಾನ ಮಾಡಬೇಕು.
• ಮಕರ ರಾಶಿಯವರು  ನೀಲಿ ಬಣ್ಣದ ಬಟ್ಟೆಗಳನ್ನು ದಾನ ಮಾಡಬೇಕು. 
• ಕುಂಭ ರಾಶಿಯವರು ಹಣವನ್ನು ದಾನ ಮಾಡಬೇಕು.  
• ಮೀನ ರಾಶಿಯವರು ಬಾಳೆಹಣ್ಣು, ಬೇಸನ್ ಲಡ್ಡು, ಸಕ್ಕರೆ ಮಿಠಾಯಿ, ಬೆಣ್ಣೆ  ದಾನ ಮಾಡಬೇಕು. 
 

Follow Us:
Download App:
  • android
  • ios