Asianet Suvarna News Asianet Suvarna News

ಶ್ರೀ ಕೃಷ್ಣ ಜನ್ಮಾಷ್ಠಮಿ: ವಿಜಯಪುರದಲ್ಲಿ ಮೊಸರು ಮಡಿಕೆ ಒಡೆದು ಸಂಭ್ರಮಿಸಿದ ಯುವಕರು..!

ಮಕ್ಕಳಲ್ಲಿ ಪಾರಂಪರಿಕ ಹಾಗೂ ಸಾಂಸ್ಕೃತಿಕ ಮನೋಭಾವನೆ ಹಾಗೂ ಯುವಕ ಯುವತಿಯರಲ್ಲಿ ದೈರ್ಯ ಸಾಹಸದ ಮನೋಭಾವನೆ ಹೆಚ್ಚಿಸುವಲ್ಲಿ ಈ ಸಮಾರಂಭ ಗಮನ ಸೆಳೆಯಿತು. ಕಾರ್ಯಕ್ರಮದ ಸಾನಿಧ್ಯವನ್ನ ಸ್ವಾಮೀಜಿಗಳು ವಹಿಸಿದ್ದರೆ ವಿಜಯಪುರ ನಗರದ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸ್ಪರ್ಧಾಳುಗಳನ್ನ ಹುರಿದುಂಬಿಸಿದರು. 

Krishna Janmashtami Celebrated in Vijayapura grg
Author
First Published Sep 8, 2023, 4:35 AM IST | Last Updated Sep 8, 2023, 4:35 AM IST

- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ(ಸೆ.08):  ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ವಿಜಯಪುರ ನಗರದಲ್ಲಿ ಇಂದು ವಿಜಯಪುರ ನಗರದ ದರ್ಬಾರ ಶಾಲಾ ಮೈದಾನದಲ್ಲಿ ಮುದ್ದುಕೃಷ್ಣನ ಹಾಗೂ ರಾಧಾ ವೇಷಧಾರಿ ಮಕ್ಕಳ ಸ್ಪರ್ಧೆ ಮತ್ತು ಮೊಸರು ಗಡಿಗೆ ಒಡೆಯುವ ಸ್ಪರ್ಧೆಯನ್ನ ಏರ್ಪಡಿಸಲಾಗಿತ್ತು. ಶ್ರೀ ತುಳಸಿಗಿರೀಶ ಫೌಂಡೇಶನ್‌ಹಾಗೂ ದೇಶ ರಕ್ಷಕರ ಪಡೆ ವಿಜಯಪುರದ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮವನ್ನ ಏರ್ಪಡಿಸಲಾಗಿತ್ತು. ಮಕ್ಕಳಲ್ಲಿ ಪಾರಂಪರಿಕ ಹಾಗೂ ಸಾಂಸ್ಕೃತಿಕ ಮನೋಭಾವನೆ ಹಾಗೂ ಯುವಕ ಯುವತಿಯರಲ್ಲಿ ದೈರ್ಯ ಸಾಹಸದ ಮನೋಭಾವನೆ ಹೆಚ್ಚಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮಕ್ಕಳಲ್ಲಿ ಧೈರ್ಯ, ಪಾರಂಪರಿಕ ಮನೋಭಾವ ತುಂಬಲು ಕಾರ್ಯಕ್ರಮ..!

ಮಕ್ಕಳಲ್ಲಿ ಪಾರಂಪರಿಕ ಹಾಗೂ ಸಾಂಸ್ಕೃತಿಕ ಮನೋಭಾವನೆ ಹಾಗೂ ಯುವಕ ಯುವತಿಯರಲ್ಲಿ ದೈರ್ಯ ಸಾಹಸದ ಮನೋಭಾವನೆ ಹೆಚ್ಚಿಸುವಲ್ಲಿ ಈ ಸಮಾರಂಭ ಗಮನ ಸೆಳೆಯಿತು. ಕಾರ್ಯಕ್ರಮದ ಸಾನಿಧ್ಯವನ್ನ ಸ್ವಾಮೀಜಿಗಳು ವಹಿಸಿದ್ದರೆ ವಿಜಯಪುರ ನಗರದ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸ್ಪರ್ಧಾಳುಗಳನ್ನ ಹುರಿದುಂಬಿಸಿದರು. ಸಂಜೆವೇಳೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ವೇದಿಕೆ ಮೇಲೆ ಉಪಸ್ಥಿತರಿದ್ದ ಗಣ್ಯಮಾನ್ಯರಿಂದ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಮೊಸರು ಗಡಿಗೆ ಒಡೆಯುವ ಸ್ಫರ್ಧೆಗೂ ಮುನ್ನ ವೇದಿಕೆ ಮೇಲೆ ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಮುದ್ದುಕೃಷ್ಣನ ಹಾಗೂ ರಾಧಾ ವೇಷಧಾರಿ ಮಕ್ಕಳ ಸ್ಪರ್ಧೆಯನ್ನ ಏರ್ಪಡಿಸಲಾಗಿತ್ತು. ಕೃಷ್ಣ ಮತ್ತು ರಾಧಾ ವೇಷಧಾರಿ ಮಕ್ಕಳು ವೇದಿಕೆ ಮೇಲೆ ಮುದ್ದು ಮುದ್ದಾಗಿ ಹೆಜ್ಜೆ ಹಾಕಿ ಗಮನ ಸೆಳೆದರು. ವಿಜೇತ ಸ್ಪರ್ಧಾಳು ಮಕ್ಕಳಿಗೆ ವೇದಿಕೆ ಮೇಲೆ ಉಪಸ್ಥಿತರಿದ್ದ ಖ್ಯಾತ ಹಾಸ್ಯ ವಾಗ್ಮಿ ಗಂಗಾವತಿ ಪ್ರಾಣೇಶ ಅವರು ಪ್ರಶಸ್ತಿಯನ್ನ ವಿತರಿಸಿದರು. 

ಉಡುಪಿ: ಶ್ರದ್ಧಾ ಭಕ್ತಿಯ ಕೃಷ್ಣಜನ್ಮಾಷ್ಟಮಿ ಆಚರಣೆ; ಇಂದು ರಥಬೀದಿಯಲ್ಲಿ ಕೃಷ್ಣ ಲೀಲೋತ್ಸವ

ಮೊಸರು ಮಡಿಕೆ ಒಡೆದು ಸಂಭ್ರಮಿಸಿದ ಯುವಕರು..!

ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮದಲ್ಲಿ ಐದಾರು ತಂಡಗಳು ಪಾಲ್ಗೊಂಡಿದ್ದವು. ವಿಶೇಷವೆಂದರೆ ಈ ತಂಡಗಳಲ್ಲಿ ಒಂದು ಮಹಿಳಾ ತಂಡವಿದ್ದದ್ದು. ಮಹಿಳಾ ತಂಡ ಸಹ ಈ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಅದ್ಭುತ ಪ್ರದರ್ಶನ ನೀಡಿದರು.. ಮೊಸರು ಗಡಿಗೆ ಒಡೆಯಲು ಗುಂಪುಗಳು ಗೋಪುರ ನಿರ್ಮಿಸಿ ಪ್ರಯತ್ನಿಸುತ್ತಿದ್ದರೆ, ಸುತ್ತಲೂ ನೆರೆದ ಜನ ಸಿಳ್ಳೆ ಚಪ್ಪಾಳೆ ಹಾಕಿದ್ದು ಕಂಡು ಬಂತು..

ಕೃಷ್ಣರಾಧ ವೇಶದಲ್ಲಿ‌ ಜನರನ್ನ ಆಕರ್ಷಿಸಿದ ಪುಟಾಣಿಗಳು..!

ಇನ್ನು ಕಾರ್ಯಕ್ರಮದಲ್ಲಿ ಹತ್ತಾರು ಮಕ್ಕಳು‌‌ ರಾಧೆ ಹಾಗೂ ಕೃಷ್ಣನ ವೇಶದಲ್ಲಿ ಪಾಲ್ಗೊಂಡಿದ್ದು ಜನರ ಗಮನ ಸೆಳೆಯಿತು. ಕೃಷ್ಣನ ವೇಶದಲ್ಲಿ ಬಂದಿದ್ದ ಮಕ್ಕಳು ಮುದ್ದು ಮುದ್ದಾಗಿ ಕಂಡು ಬಂದವು‌. ಮಕ್ಕಳು ವೇದಿಕೆ ಮೇಲೆ ಬರ್ತಿದ್ದಂತೆ ಜನರು ಕೇಕೆ ಹಾಕಿ ಹುರಿದುಂಬಿಸಿದರು. ಈ ವೇಳೆ ಮಾತನಾಡಿದ ಮಕ್ಕಳ ಪೋಷಕರು ಸಂತಸ ಹಂಚಿಕೊಂಡರು. ಇಂತಹ ಇನ್ನಷ್ಟು ಕಾರ್ಯಕ್ರಮಗಳು ನಡೆಯಬೇಕು ಎಂದರು.

ಹಿಂದೂ ಧರ್ಮ ಟೀಕಿಸಿದವರಿಗೆ ಖಡ್ಗದಿಂದ ಉತ್ತರ ; ವೇದಿಕೆಯ ಮೇಲೆ ಎಚ್ಚರಿಕೆ..!

ಈ ಸಂದರ್ಭದಲ್ಲಿ ವೇದಿಕೆ  ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಮುಖ ಆಯೋಜಕ ಹಾಗೂ ಶ್ರೀ ತುಳಸಿಗಿರೀಶ ಫೌಂಡೇಶನ್‌ಅಧ್ಯಕ್ಷ ಮತ್ತು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ವಿಜಯಪುರ ಜಿಲ್ಲಾ ಸಂಚಾಲಕ ಡಾ.ಬಾಬು ರಾಜೇಂದ್ರ ನಾಯಕ ಅವರು ಹಿಂದೂ ಧರ್ಮ, ಸನಾತನ ಧರ್ಮ, ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವವರಿಗೆ ಅತ್ಯಂತ ಕಟು ಶಬ್ದಗಳಿಂದ ಎಚ್ಚರಿಕೆಯನ್ನ ನೀಡಿದರಲ್ಲದೇ, ಇಂಥವರಿಗೆ ಸೂಕ್ತ ರೀತಿಯಲ್ಲಿ ಪ್ರತ್ಯುತ್ತರ ನೀಡಲು ಹಿಂದೂ ಯುವ ದೇಶ ರಕ್ಷಕರ ಪಡೆಗೆ ಕ್ಷಾತ್ರ ತೇಜಸ್ಸು ಸಹಿತ  ಕ್ಷತ್ರೀಯರಂತೆ ಖಡ್ಗ ಎತ್ತುವುದು ಸಹ ಗೊತ್ತು ಎಂದು ಮತ್ತು ಇಂಥವರಿಗೆ ಉತ್ತರ ನೀಡಲು ನಮ್ಮ ಯುವಕರ ಪಡೆ ಸಮರ್ಥವಾಗಿದೆ ಎಂದು ಎಚ್ಚರಿಕೆಯನ್ನ ನೀಡಿದರು. 

ಮೈಸೂರಿನಲ್ಲಿ ಕಳೆಗಟ್ಟಿದ ದಸರಾ ವೈಭವ: ತೂಕದಲ್ಲೂ ಮೇಲುಗೈ ಸಾಧಿಸಿದ ಕ್ಯಾಪ್ಟನ್ ಅಭಿಮನ್ಯೂ..!

ವೇದಿಕೆ ಮುಖಾಂತರ ಇಂತಹ ಬಾಯಿಯ ಚಟಕ್ಕಾಗಿ ಪ್ರಚಾರದ ತೆವಲಿಗಾಗಿ ಹಿಂದೂ ಧರ್ಮದ ವಿಚಾರವಾಗಿ ಹಗುರವಾಗಿ ಮಾತನಾಡುವಂತಹವರಿಗೆ ನಾಯಿ ಕುನ್ನಿಗಳೆಂದು ಜರಿಯುವ ಮೂಲಕ ಕಟು ಶಬ್ದಗಳಿಂದ ಎಚ್ಚರಿಕೆಯನ್ನ ನೀಡಿದರು. 

ಪ್ರಚಾರಕ್ಕಾಗಿ ಸನಾತನ ಧರ್ಮದ ಬಗ್ಗೆ, ಮರ್ಯಾದಾ ಪುರುಷೋತ್ತಮನ ಬಗ್ಗೆ, ಶ್ರೀ ಕೃಷ್ಣನ ಬಗ್ಗೆ, ನಮ್ಮ ದೇವತೆಗಳ ಕುರಿತಾಗಿ ಅಪಹಾಸ್ಯ ಮಾಡಿದ್ದೇ ಆದಲ್ಲಿ ಸೂಕ್ತ ಉತ್ತರ ನೀಡಲು ನಮ್ಮ ಹಿಂದೂ ಧರ್ಮದ ಪಡೆಗಳು ರೆಡಿಯಾಗಿದ್ದಾವೆ ಎಚ್ಚರದಿಂದಿರಿ ಎಂದು ಜರಿದರು. ಶಾಂತಿ ಸಹಬಾಳ್ವೇಗೆ ನಮ್ಮ ದೇಶ ಹೆಸರುವಾಸಿ. ಹಾಗಂತ ನಮ್ಮದೇ ನೆಲದಲ್ಲಿ ನಿಂತು ನಮ್ಮದೇ ಗಾಳಿಯನ್ನ ಉಸಿರಾಡಿ, ನಮ್ಮದೇ ತಿಂದು, ನಮ್ಮ ಭಾರತ ಮಾತೆಯ ನೀರನ್ನ ಕುಡಿದು, ನಮ್ಮ ಸನಾತನ ಧರ್ಮದ ಬಗ್ಗೆ ಮಾತನಾಡುವವರನ್ನ ಅಟ್ಟಾಡಿಸಿ ಹೊಡೆಯಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನ ವೇದಿಕೆಯ ಮೇಲೆ ಡಾ.ಬಾಬು ರಾಜೇಂದ್ರ ನಾಯಕ ನೀಡಿದರು.

Latest Videos
Follow Us:
Download App:
  • android
  • ios