Asianet Suvarna News Asianet Suvarna News

Pitru Doshದಿಂದಾಗುವ ಸಮಸ್ಯೆಗಳೇನು? ಅದರಿಂದ ಮುಕ್ತರಾಗಲು ಏನೆಲ್ಲ ಮಾಡಬೇಕು?

ಪಿತೃ ದೋಷದಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜಾತಕದಲ್ಲಿ ಪಿತೃ ದೋಷವು ಹೇಗೆ ರೂಪುಗೊಳ್ಳುತ್ತದೆ, ಪಿತೃ ದೋಷ ವಿಮೋಚನೆಯ ಪರಿಹಾರಕ್ಕೆ ಏನು ಮಾಡಬೇಕು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. 

know which astrological measures to get rid of Pitru Dosh skr
Author
First Published Nov 28, 2022, 4:35 PM IST

ಜ್ಯೋತಿಷ್ಯ ಶಾಸ್ತ್ರವು ಗ್ರಹಶಾಂತಿ ಸೇರಿದಂತೆ ಅನೇಕ ವಿಷಯಗಳಿಗೆ ಪರಿಹಾರಗಳನ್ನು ನೀಡಿದೆ. ಪಿತೃ ದೋಷ ನಿವಾರಣೆಗೂ ಕ್ರಮ ಹೇಳಲಾಗಿದೆ. ಪಿತೃ ದೋಷ ಎಂದರೇನು ಮತ್ತು ಅದರಿಂದಾಗುವ ಹಾನಿ ಏನೆಂದು ತಿಳಿಯೋಣ. ಇದನ್ನು ಹೋಗಲಾಡಿಸಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಪರಿಹಾರಗಳೇನು ಎಂಬುದನ್ನು ಕೂಡಾ ತಿಳಿಸುತ್ತೇವೆ. 

ಪಿತೃ ದೋಷ ಎಂದರೇನು?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತಂದೆ ಅಥವಾ ಪೂರ್ವಜರ ಅತೃಪ್ತಿಯಿಂದಾಗಿ ಹೊಸ ತಲೆಮಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪೂರ್ವಜರ ಆತ್ಮಗಳು ಅವರ ಕುಟುಂಬವನ್ನು ಗಮನಿಸುತ್ತಿರುತ್ತವೆ. ಅವರ ಕುಟುಂಬದ ಸದಸ್ಯರು ಅವರನ್ನು ಗೌರವಿಸದಿದ್ದರೆ, ಸರಿಯಾದ ಹಾದಿಯಲ್ಲಿ ನಡೆಯದಿದ್ದರೆ ಅವರು ಕೋಪಗೊಳ್ಳುತ್ತಾರೆ ಮತ್ತು ಅವರ ಕುಟುಂಬ ಸದಸ್ಯರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜ್ಯೋತಿಷ್ಯದಲ್ಲಿ ಇದನ್ನು ಪಿತೃ ದೋಷ ಎಂದು ಕರೆಯಲಾಗುತ್ತದೆ.

ಕರ್ಪೂರವನ್ನು ಈ ರೀತಿ ಬಳಸಿದ್ರೆ, ಜೀವನ ಬದಲಾಗುತ್ತೆ ನೋಡಿ!

ಜಾತಕದಲ್ಲಿ ಪಿತೃದೋಷವು ಹೇಗೆ ರೂಪುಗೊಳ್ಳುತ್ತದೆ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಜಾತಕದ ಐದನೇ ಮನೆಯಲ್ಲಿ ಸೂರ್ಯ, ಮಂಗಳ ಮತ್ತು ಶನಿ ಇದ್ದರೆ ಮತ್ತು ರಾಹು ಮತ್ತು ಗುರು ಎಂಟನೇ ಮನೆಯಲ್ಲಿದ್ದರೆ, ಜಾತಕದಲ್ಲಿ ಪಿತೃ ದೋಷವು ರೂಪುಗೊಳ್ಳುತ್ತದೆ. ಮತ್ತೊಂದೆಡೆ, ರಾಹು ಮತ್ತು ಕೇತುಗಳು ಜಾತಕದ ಐದನೇ ಮನೆಗೆ ಸಂಬಂಧಿಸಿದ್ದರೆ, ಜಾತಕದಲ್ಲಿ ಪಿತೃ ದೋಷ ರೂಪುಗೊಳ್ಳುತ್ತದೆ. ಇದಲ್ಲದೆ, ಕುಟುಂಬದಲ್ಲಿ ದೈವಾಧೀನರಾದವರಿಗೆ ಅಂತ್ಯಕ್ರಿಯೆ, ಶ್ರಾದ್ಧ, ವಾರ್ಷಿಕ ತಿಥಿಗಳನ್ನು ಸರಿಯಾಗಿ ನಡೆಸದಿದ್ದರೆ, ಹಿರಿಯರಿಗೆ ಬೈಯ್ಯುವುದು, ಅವರ ಮಾತನ್ನು ಕೇಳದಿರುವುದು, ಅವರನ್ನು ನಿಂದಿಸುವುದು ಮಾಡಿದರೆ ನಮ್ಮ ರಾಶಿಯಲ್ಲಿ ಪಿತೃ ದೋಷ ಉಂಟಾಗುತ್ತದೆ. ಇದರೊಂದಿಗೆ, ಪವಿತ್ರ ಮರವನ್ನು ಕಡಿದಾಗ ಅದರ ದೋಷವು ನಮ್ಮನ್ನಷ್ಟೇ ಅಲ್ಲದೇ ಪಿತೃಗಳಿಗೂ ಅಂಟುವುದು. ಇದರಿಂದಲೂ ಪಿತೃಗಳ ಕೋಪ ಎದುರಿಸಬೇಕಾಗುವುದು. 

ಪಿತೃ ದೋಷದ ಲಕ್ಷಣಗಳು
ಪಿತೃ ದೋಷದಿಂದ ಮನೆಯಲ್ಲಿ ಸಂಕಷ್ಟ, ಉದ್ಯೋಗದಲ್ಲಿ ಸಮಸ್ಯೆ, ವ್ಯಾಪಾರದಲ್ಲಿ ನಷ್ಟ, ಧನಹಾನಿ, ನೆಮ್ಮದಿ ಇಲ್ಲದಿರುವುದು ಸೇರಿದಂತೆ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

December 2022: ವರ್ಷದ ಕೊನೆಯ ತಿಂಗಳು ಎಷ್ಟೆಲ್ಲ ವ್ರತ, ಹಬ್ಬ ಇದೆ ಗೊತ್ತಾ?

ಪಿತೃ ದೋಷಕ್ಕೆ ಪರಿಹಾರಗಳು

  • ಜ್ಯೋತಿಷ್ಯ ಶಾಸ್ತ್ರದಲ್ಲಿ ಪಿತೃ ದೋಷ ನಿವಾರಣೆಗೆ ಹಲವು ಉಪಾಯಗಳನ್ನು ನೀಡಲಾಗಿದೆ. ಈ ಕ್ರಮಗಳನ್ನು ಮಾಡುವುದರಿಂದ ಸ್ಥಳೀಯರು ಪಿತೃ ದೋಷದಿಂದ ಮುಕ್ತರಾಗುತ್ತಾರೆ ಎಂದು ನಂಬಲಾಗಿದೆ.
  • ಶನಿವಾರದಂದು ಹಸಿ ಹಾಲಿನಲ್ಲಿ ಕಪ್ಪು ಎಳ್ಳನ್ನು ಬೆರೆಸಿ ಮತ್ತು ಸೂರ್ಯೋದಯಕ್ಕೆ ಮೊದಲು ಅಶ್ವತ್ಥ ಮರಕ್ಕೆ ಅರ್ಪಿಸಿ. 
  • ಅಮಾವಾಸ್ಯೆಯಂದು ಸಂಜೆ ಹೊತ್ತಿನಲ್ಲಿ ಅಶ್ವತ್ಥ ಮರದ ಕೆಳಗೆ ಎಳ್ಳೆಣ್ಣೆ ದೀಪ ಹಚ್ಚಿ. ನಂತರ ಮರಕ್ಕೆ ಏಳು ಸುತ್ತು ಬನ್ನ. ಬಳಿಕ ಪಿತೃಗಳನ್ನು ನೆನಸಿಕೊಂಡು ಅವರಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಆದ ತಪ್ಪಿಗೆ ಕ್ಷಮೆ ಯಾಚಿಸಿ. ಪ್ರತಿ ಅಮಾವಾಸ್ಯೆ(no moon day)ಗೂ ಹೀಗೆ ಮಾಡುವುದರಿಂದ ಪಿತೃಗಳ ಆಶೀರ್ವಾದ ದೊರೆಯುವುದು. 
  • ಅಮವಾಸ್ಯೆಯ ದಿನದಂದು ಪೂರ್ವಜರ ಹೆಸರಿನಲ್ಲಿ ಆಹಾರವನ್ನು ಮಾಡಿ ಬಡಿಸಿ.
  • ಅಮವಾಸ್ಯೆಯ ದಿನದಂದು ಪೂರ್ವಜರ ಹೆಸರಿನಲ್ಲಿ ಬಡವರಿಗೆ ಆಹಾರ ನೀಡಿ. ನಾಯಿ, ಕಾಗೆ, ಹಸು, ಇರುವೆಗಳಿಗೆ ಆಹಾರ ನೀಡಿ. 
  • ಅಮವಾಸ್ಯೆಯ ದಿನ ಪೂರ್ವಜರ ಹೆಸರಿನಲ್ಲಿ ದಾನ ಮಾಡಿ.
  • ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಬ್ರೆಡ್ ನೀಡಿ.
  • ತಾಮ್ರದ ಪಾತ್ರೆಯೊಂದಿಗೆ ಸೂರ್ಯ ದೇವರಿಗೆ ನಿಯಮಿತವಾಗಿ ಅರ್ಘ್ಯವನ್ನು ಅರ್ಪಿಸಿ.
  • ನಿಮ್ಮ ನೆಚ್ಚಿನ ದೇವರನ್ನು ನಿಯಮಿತವಾಗಿ ಪೂಜಿಸಿ.
  • ಶಿವಾಲಯಕ್ಕೆ ಹೋಗಿ ಶಿವಲಿಂಗಕ್ಕೆ ಹಾಲು ಹಾಗೂ ಗಂಗಾ ತೀರ್ಥದಿಂದ ಅಭಿಷೇಕ ಮಾಡಿ. ನಿಮ್ಮ ಕೈಯ್ಯಾರೆ ಒಂದು ಅಶ್ವತ್ಥ ಗಿಡ(Peepal tree) ನೆಡಿ. ಈ ಗಿಡಕ್ಕೆ ಹಸುವಿನ ಹಾಲು ಹಾಗೂ ನೀರನ್ನು ಅರ್ಪಿಸಿ ದೀಪ ಹಚ್ಚಿ. ಪ್ರತಿ ದಿನ ಈ ಗಿಡಕ್ಕೆ ನೀರು, ಗೊಬ್ಬರ ಉಣಿಸಿ. ಅದು ಬೆಳೆದಂತೆಲ್ಲ ಪಿತೃಗಳ ಮನಸ್ಸಿಗೆ ನೆಮ್ಮದಿ ಸಿಗುವುದು. 
Follow Us:
Download App:
  • android
  • ios