Asianet Suvarna News Asianet Suvarna News

December 2022: ವರ್ಷದ ಕೊನೆಯ ತಿಂಗಳು ಎಷ್ಟೆಲ್ಲ ವ್ರತ, ಹಬ್ಬ ಇದೆ ಗೊತ್ತಾ?

2022ರ ಕೊನೆಯ ತಿಂಗಳು ಡಿಸೆಂಬರ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ತಿಂಗಳಲ್ಲಿ ಅನೇಕ ಪ್ರಮುಖ ಉಪವಾಸ-ಉತ್ಸವಗಳನ್ನು ಆಚರಿಸಲಾಗುತ್ತದೆ. ಅದಕ್ಕಾಗಿಯೇ ಈ ತಿಂಗಳು ಧಾರ್ಮಿಕ ದೃಷ್ಟಿಕೋನದಿಂದ ಬಹಳ ವಿಶೇಷವಾಗಿರುತ್ತದೆ. 

December 2022 Festival Calendar skr
Author
First Published Nov 28, 2022, 3:59 PM IST

ಡಿಸೆಂಬರ್ 2022ರಲ್ಲಿ, ಅನೇಕ ಪ್ರಮುಖ ಉಪವಾಸಗಳು ಮತ್ತು ಹಬ್ಬಗಳನ್ನು ಆಚರಿಸಲಾಗುತ್ತದೆ. ಹನುಮ ಜಯಂತಿ, ಮೋಕ್ಷದ ಏಕಾದಶಿ, ಗೀತಾ ಜಯಂತಿ, ದತ್ತಾತ್ರೇಯ ಜಯಂತಿ, ರುಕ್ಮಿಣಿ ಅಷ್ಟಮಿ, ಸಫಲ ಏಕಾದಶಿ, ಪೌಷ ಅಮಾವಾಸ್ಯೆ ಮುಂತಾದ ಪ್ರಮುಖ ಹಬ್ಬಗಳನ್ನು ಡಿಸೆಂಬರ್ 2022ರಲ್ಲಿ ಆಚರಿಸಲಾಗುತ್ತದೆ. ಡಿಸೆಂಬರ್ 2022ರಲ್ಲಿ ಆಚರಿಸಲಾಗುವ ಹಬ್ಬಗಳ ಸಂಪೂರ್ಣ ವಿವರಗಳನ್ನು ಇಲ್ಲಿ ನೀಡಿದ್ದೇವೆ. 

ಡಿಸೆಂಬರ್ 2022ರ ಹಬ್ಬಹರಿದಿನಗಳು
ಡಿಸೆಂಬರ್ 4, ಭಾನುವಾರ - ಮೋಕ್ಷದ ಏಕಾದಶಿ / ಗೀತಾ ಜಯಂತಿ
ಡಿಸೆಂಬರ್ 5, ಸೋಮವಾರ - ಹನುಮ ಜಯಂತಿ(ಕರ್ನಾಟಕದಲ್ಲಿ)
ಪ್ರದೋಷ ವ್ರತ / ಅನಂಗ್ ತ್ರಯೋದಶಿ
ಡಿಸೆಂಬರ್ 7, ಮಂಗಳವಾರ - ದತ್ತ ಪೂರ್ಣಿಮಾ
ಡಿಸೆಂಬರ್ 8, ಬುಧವಾರ - ಸ್ನಾನ-ದಾನ ಹುಣ್ಣಿಮೆ
ಡಿಸೆಂಬರ್ 11, ಭಾನುವಾರ - ಗಣೇಶ ಚತುರ್ಥಿ ಉಪವಾಸ
ಡಿಸೆಂಬರ್ 16, ಶುಕ್ರವಾರ - ರುಕ್ಮಿಣಿ ಅಷ್ಟಮಿ, ಧನು ಸಂಕ್ರಾಂತಿ
ಡಿಸೆಂಬರ್ 19, ಸೋಮವಾರ - ಸಫಲ ಏಕಾದಶಿ
ಡಿಸೆಂಬರ್ 20, ಮಂಗಳವಾರ - ಸುರುಪ್ ದ್ವಾದಶಿ
ಡಿಸೆಂಬರ್ 21, ಬುಧವಾರ - ಪ್ರದೋಷ ವ್ರತ / ಶಿವ ಚತುರ್ದಶಿ ವ್ರತ
ಡಿಸೆಂಬರ್ 23, ಶುಕ್ರವಾರ - ಪೌಶ್ ಅಮವಾಸ್ಯೆ
ಡಿಸೆಂಬರ್ 26, ಸೋಮವಾರ - ವಿನಾಯಕ ಚತುರ್ಥಿ ಉಪವಾಸ

December Planet Transit 2022: ಡಿಸೆಂಬರ್‌ನಲ್ಲಿ 3 ಗ್ರಹಗಳ ರಾಶಿ ಬದಲಾವಣೆ

ಗೀತಾ ಜಯಂತಿ 
ಧಾರ್ಮಿಕ ಗ್ರಂಥಗಳ ಪ್ರಕಾರ, ಕುರುಕ್ಷೇತ್ರದಲ್ಲಿ ಕೌರವರು ಮತ್ತು ಪಾಂಡವರ ಸೈನ್ಯವು ಮುಖಾಮುಖಿಯಾಗಿ ನಿಂತಾಗ, ಶತ್ರು ಸೈನ್ಯದಲ್ಲಿ ಭೀಷ್ಮ ಪಿತಾಮಹ ಸೇರಿದಂತೆ  ನೋಡಿದ ನಂತರ ಅರ್ಜುನನು ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದನು. ಆ ಸಮಯದಲ್ಲಿ ಶ್ರೀಕೃಷ್ಣನು ಅವನಿಗೆ ಗೀತೆಯನ್ನು ಉಪದೇಶಿಸಿದನು. ಇಂದಿಗೂ ಈ ದಿನಾಂಕದಂದು ಗೀತಾ ಜಯಂತಿಯ ಹಬ್ಬವನ್ನು ಆಚರಿಸಲಾಗುತ್ತದೆ. ಗೀತೆಯಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ, ಆದ್ದರಿಂದ ಈ ದಿನಾಂಕದಂದು ಮೋಕ್ಷದ ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ.

ಹನುಮ ಜಯಂತಿ
ಡಿಸೆಂಬರ್ 5ರಂದು ಕರ್ನಾಟಕದಲ್ಲಿ ಹನುಮ ಜಯಂತಿ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಈ ದಿನವನ್ನು ಹನುಮಾನ್ ವ್ರತ ಎಂದು ಆಚರಿಸಲಾಗುತ್ತದೆ. ಎಲ್ಲ ಹನುಮಾನ್ ದೇವಾಲಯಗಳಿಗೆ ಭಕ್ತರು ತೆರಳಿ ಪೂಜೆ ಸಲ್ಲಿಸುತ್ತಾರೆ. 

ದತ್ತ ಜಯಂತಿ(ಡಿ.7)
ತ್ರಿಮೂರ್ತಿಗಳ ಸ್ವರೂಪವಾದ ದತ್ತಾತ್ರೇಯರು ಜನಿಸಿದ ದಿನವನ್ನು ಈ ವರ್ಷ ಡಿ.7ರಂದು ಆಚರಿಸಲಾಗುತ್ತದೆ. 

ಧನು ಸಂಕ್ರಾಂತಿ (Dhanu Sankranti 2022)
ಸೂರ್ಯ ಸಂಕ್ರಮಣವನ್ನು ಪ್ರತಿ ತಿಂಗಳ ಮಹತ್ವದ ಸಂದರ್ಭವಾಗಿ ನೋಡಲಾಗುತ್ತದೆ. ಡಿಸೆಂಬರ್‌ನಲ್ಲಿ 16ರಂದು ಸೂರ್ಯನು ಧನು ರಾಶಿಗೆ ಪ್ರವೇಶಿಸುತ್ತಿದ್ದಾನೆ. 

Christmas 2022: ಕ್ರಿಸ್‌ಮಸ್‌ ದಿನ ರಹಸ್ಯ ದಾನ ಮಾಡಿದ್ರೆ ಏನು ಫಲ? ಯೇಸು ನೀಡಿದ್ದ ಸಂದೇಶವೇನು?

ಸಫಲಾ ಏಕಾದಶಿ(Saphala Ekadashi)
ಡಿಸೆಂಬರ್ 19ರಂದು ಸೋಮವಾರ ಕೃಷ್ಣ ಏಕಾದಶಿಯಾಗಿದ್ದು, ಇದು ವರ್ಷದ ಕೊನೆಯ ಏಕಾದಶಿಯಾಗಿದೆ. ಏಕಾದಶಿಯು ಮೋಕ್ಷಸಾಧನೆಗೆ ಉತ್ತಮ ದಿನವಾಗಿದೆ. 

ಇವೇ ಅಲ್ಲದೆ, ಡಿಸೆಂಬರ್ 25ರಂದು ಜಗತ್ತಿನಾದ್ಯಂತ ಆಚರಿಸುವ ಕ್ರಿಸ್ಮಸ್ ಹಬ್ಬ ಇರಲಿದೆ. ಡಿ.29ರಂದು ಗುರು ಗೋಬಿಂದ್ ಸಿಂಗ್ ಜಯಂತಿ ಆಚರಿಸಲಾಗುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios