Asianet Suvarna News Asianet Suvarna News

ಕನಸಲ್ಲಿ ದೀಪ ಕಂಡ್ರೆ ಶುಭವೋ? ಅಶುಭವೋ?

ಪ್ರತಿಯೊಬ್ಬರೂ ರಾತ್ರಿ ಮಲಗಿದಾಗ ಕನಸು ಕಾಣ್ತಾರೆ. ಈ ಕನಸಿಗೂ  ನಮ್ಮ ಭವಿಷ್ಯಕ್ಕೂ ಒಂದು ನಂಟಿದೆ. ಮುಂದೆ ನಡೆಯಬಹುದಾದ ಘಟನೆಗಳನ್ನು ಕನಸು ಹೇಳುತ್ತದೆ ಎಂದು ನಂಬಲಾಗಿದೆ. ಕನಸಿನಲ್ಲಿ  ಬರುವ ಕೆಲ ವಿಷ್ಯವನ್ನು ನಿರ್ಲಕ್ಷ್ಯಿಸಬಾರದು ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ.
 

Know What Does Seeing A Lamp Of Worship In A Dream Indicate
Author
First Published Aug 29, 2022, 5:37 PM IST

ಸ್ವಪ್ನ ಶಾಸ್ತ್ರದಲ್ಲಿ ಬೆಳಗುತ್ತಿರುವ ದೀಪ ಕಂಡ್ರೆ ಅದನ್ನು ಶುಭವೆಂದು ಹೇಳಲಾಗಿದೆ.  ನೀವು ಕನಸಿನಲ್ಲಿ ಬೆಳಗುತ್ತಿರುವ ದೀಪವನ್ನು ನೋಡಿದ್ರೆ ನಿಮ್ಮ ಮಾನ, ಸನ್ಮಾನ, ಗೌರವದಲ್ಲಿ ವೃದ್ಧಿಯಾಗುತ್ತದೆ. ಸಮಾಜ ಹಾಗೂ ಕುಟುಂಬದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ತಾನು ಸ್ವಂತ ಉರಿದು, ಸುತ್ತಮುತ್ತಿನವರಿಗೆ ಬೆಳಕು ನೀಡುವ ಸ್ವಭಾವ ದೀಪದ್ದಾಗಿದೆ. ಹಾಗೆ ನಿಮ್ಮ ಕನಸಿನಲ್ಲಿ ನೀವು ಬೆಳಗುವ ದೀಪ ನೋಡಿದ್ರೆ ನೀವೂ ಕೂಡ ಸಮಾಜದಲ್ಲಿ ಪ್ರಕಾಶಿಸುತ್ತೀರಿ ಎಂದರ್ಥ. ಮನಸ್ಸಿನಲ್ಲಿ ದೊಡ್ಡ ಮಟ್ಟದ ಪರಿವರ್ತನೆಯಾಗುತ್ತದೆ. ಹಾಗೆಯೇ ಸುತ್ತಮುತ್ತಲಿನ ಜನರು ನಿಮ್ಮ ಬಗ್ಗೆ ಒಳ್ಳೆ ಮಾತನಾಡ್ತಾರೆ. ರಾಜಯೋಗಕ್ಕೆ ಇದು ಸೂಚನೆ ಎನ್ನಬಹುದು. ರಾಜಕೀಯ (politics) ಕ್ಷೇತ್ರಕ್ಕೆ ಕಾಲಿಡಲು ಬಯಸಿದ್ದರೆ ನೀವು ದಾರಾಳವಾಗಿ ಹೋಗ್ಬಹುದು ಎಂಬುದರ ಸೂಚನೆ ಇದಾಗಿದೆ. ಎಲ್ಲ ಕ್ಷೇತ್ರದಲ್ಲೂ ನಿಮಗೆ ಸಫಲತೆ ಪ್ರಾಪ್ತಿಯಾಗುತ್ತದೆ. 

ಕನಸಿ (Dream) ನಲ್ಲಿ ದೀಪ (Lamp) ಕಾಣುವುದು ಆಯಾ ಸಂದರ್ಭವನ್ನು ಅವಲಂಬಿಸಿದೆ. ಕೆಲ ಅಶುಭ ಫಲಗಳನ್ನೂ ನೀಡುತ್ತವೆ.  ಕನಸಿನಲ್ಲಿ ಯಾವ ದೀಪ ಕಂಡ್ರೆ ಶುಭ ಗೊತ್ತಾ?

ಸ್ವಪ್ನದಲ್ಲಿ ದೀಪ ಬೆಳಗುತ್ತಿದ್ದಂತೆ ಕಂಡ್ರೆ ಏನು ಸಂಕೇತ? : ಕನಸಿನಲ್ಲಿ ನಿಮ್ಮ ಮುಂದೆ ಒಂದು ದೀಪವಿದೆ, ಅದು ಬೆಳಗ್ತಿದೆ ಎಂದಾದ್ರೆ ಇದು ಶುಭ ಫಲವನ್ನು ನೀಡುತ್ತದೆ. ತಾಯಿ ಜ್ವಾಲೆಯ ಕೃಪೆ ನಿಮ್ಮ ಮೇಲಾಗಿದೆ ಎಂದರ್ಥ. ತಾಯಿ ಲಕ್ಷ್ಮಿ ಕೂಡ ನಿಮ್ಮ ಮೇಲೆ ಕೃಪೆ ತೋರುತ್ತಾಳೆ. ಶೀರ್ಘದಲ್ಲಿಯೇ ಆರ್ಥಿಕ ಸಮಸ್ಯೆ ಬಗೆಹರಿಯುತ್ತದೆ. ದಿಡೀರ್ ಹಣ ಬರುವ ಸಾಧ್ಯತೆಯಿದೆ ಎಂಬ ಸೂಚನೆಯಿದಾಗಿದೆ.

ವಾಸ್ತು ಪ್ರಕಾರ, ಮನೆಯಲ್ಲಿ ಟಿವಿ, ಫ್ರಿಡ್ಜ್, ಎಸಿ ಎಲ್ಲಿಡಬೇಕು?

ಕನಸಿನಲ್ಲಿ ಆರಿದ ದೀಪ : ಸ್ವಪ್ನದಲ್ಲಿ ಆರಿದ ದೀಪ ಕಂಡ್ರೆ ಅದು ಅಶುಭ ಸಂಕೇತ ನೀಡುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ ಇಂಥ ಕನಸು ಬೀಳುವುದು ಒಳ್ಳೆಯದಲ್ಲ. ನಿಮ್ಮ ಇಚ್ಛಾಶಕ್ತಿ ಕ್ಷೀಣಿಸಿದೆ, ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ತಿದ್ದೀರಿ, ಎಷ್ಟೇ ಕಷ್ಟಪಟ್ರೂ ನಿಮಗೆ ಕೆಲಸದಲ್ಲಿ ಯಶಸ್ಸು ಸಿಗ್ತಿಲ್ಲ ಎಂಬುದರ ಸೂಚನೆ ಇದಾಗಿದೆ.  ಕನಸಿನಲ್ಲಿ ಆರಿದ ದೀಪ ಕಂಡ್ರೆ ನಿಮಗೆ ಎಲ್ಲ ಕ್ಷೇತ್ರದಲ್ಲೂ ನಷ್ಟವಾಗುತ್ತದೆ. ನಿಮಗೆ ಅನಾರೋಗ್ಯ ಕಾಡುವ ಸಾಧ್ಯತೆಯಿದೆ. ಇಂಥ ಕಸನು ಬಿದ್ರೆ ನೀವು ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಶತ್ರುಗಳ ಸುದ್ದಿಗೆ ಹೋಗಬಾರದು. ಹಾಗೆಯೇ ಕಚೇರಿಯಲ್ಲಿ ಅಥವಾ ವ್ಯಾಪಾರದಲ್ಲಿ ಯಾವುದೇ ಕೆಲಸ ಮಾಡುವ ಮೊದಲು ಲಾಭ- ನಷ್ಟಗಳ ಬಗ್ಗೆ ಆಲೋಚನೆ ಮಾಡೋದು ಸೂಕ್ತ. ಪ್ರಯಾಣಕ್ಕೆ ಯೋಗ ಕೂಡಿ ಬಂದ್ರೆ ಪ್ರಯಾಣವನ್ನು ತಡೆಯುವ ಪ್ರಯತ್ನ ಮಾಡಿ. ಸಾಧ್ಯವಾದಷ್ಟು ದೂರದ ಪ್ರಯಾಣವನ್ನು ತಪ್ಪಿಸಿ. ಏಕಾಂಗಿಯಾಗಿ ಪ್ರಯಾಣ ಬೆಳೆಸಬೇಡಿ. ಅವಶ್ಯಕವಾಗಿ ನಿಮ್ಮ ಜೊತೆ ಇನ್ನೊಬ್ಬರನ್ನು ಕರೆದುಕೊಂಡು ಹೋಗಿ. ಆರಿಹೋದ ದೀಪ ನಿಮ್ಮ ಜೀವನ ಜ್ಯೋತಿಯನ್ನೂ ಆರಿಸುವ ಸಾಧ್ಯತೆಯಿದೆ. ಹಾಗಾಗಿ ಎಚ್ಚರಿಕೆಯಿಂದ ಇರಬೇಕು ಎನ್ನುತ್ತದೆ ಸ್ವಪ್ನಶಾಸ್ತ್ರ.

ಅನೇಕ ದೀಪಗಳು ಬೆಳಗುವುದು ಕನಸಿನಲ್ಲಿ ಕಂಡ್ರೆ : ಕನಸಿನಲ್ಲಿ ಅನೇಕ ದೀಪಗಳು ಬೆಳಗುತ್ತಿರುವಂತೆ ಕಾಣಿಸುವುದು ಕೂಡ ಮಂಗಳಕರ ಸೂಚನೆಯಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸು ಲಭಿಸುತ್ತದೆ. ನೀವು ಶ್ರಮವಹಿಸಿ ದುಡಿದ್ರೆ ನಿಮ್ಮ ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ ಎಂಬ ಸಂಕೇತವಾಗಿದೆ. ಅಲ್ಲದೆ ನಿಮ್ಮ ಸುತ್ತಮುತ್ತಲಿನ ಜನರು, ಸ್ನೇಹಿತರು, ಕುಟುಂಬಸ್ಥರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬುದನ್ನೂ ಇದು ಅರ್ಥೈಸುತ್ತದೆ.

ಕನಸಿನಲ್ಲಿ ತುಪ್ಪದ ದೀಪ : ಕನಸಿನಲ್ಲಿ ತುಪ್ಪದ ದೀಪ ಹಚ್ಚಿದಂತೆ ಕಂಡ್ರೆ ಆರ್ಥಿಕ ವೃದ್ಧಿಯಾಗುತ್ತದೆ ಎಂದರ್ಥ. ನೀವು ತುಪ್ಪದ ದೀಪ ಹಚ್ಚಿದಂತೆ ಕಂಡ್ರೆ ಆಕಸ್ಮಿಕ ಧನ ಲಾಭವಾಗುತ್ತದೆ ಎಂದರ್ಥ. ನೀವು ಶೀಘ್ರವೇ ಶ್ರೀಮಂತರಾಗಲಿದ್ದೀರಿ ಎಂಬುದನ್ನು ಈ ಕನಸು ಹೇಳುತ್ತದೆ. 

ಮನೆಯ ವಾಸ್ತು ಸಮಸ್ಯೆ ಬಗೆಹರಿಸುತ್ತೆ ಇದೊಂದು ಮೂರ್ತಿ

ದೀಪಗಳ ಖರೀದಿ : ಕನಸಿನಲ್ಲಿ ದೀಪಗಳನ್ನು ನೀವು ಖರೀದಿಸಿದಂತೆ ಕಂಡ್ರೂ ಶುಭಕರ. ಮನೆಗೆ ಹೊಸ ಅತಿಥಿಗಳ ಗಮನವಾಗಲಿದೆ ಎಂಬ ಸೂಚನೆ.  
 

Follow Us:
Download App:
  • android
  • ios