ಏ. 26ರಂದು Varuthini Ekadashi, ಆಚರಣೆ ಹೇಗೆ? ವ್ರತ ಕತೆಯೇನು?
ನಾಳೆ ಅಂದರೆ ಏ.26ರಂದು ವರುದಿನಿ ಏಕಾದಶಿ. ಈ ವ್ರತ ಆಚರಿಸುವುದರಿಂದ ವಿಷ್ಣುವಿನ ಆಶೀರ್ವಾದ ಫಲ ಹೊರೆತು ಸಕಲವೂ ಒಳಿತಾಗಲಿದೆ.
ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿ ತಿಥಿಯಂದು ವರುದಿನಿ ಏಕಾದಶಿ(Varuthini Ekadashi) ಆಚರಿಸಲಾಗುತ್ತದೆ. ಈ ಬಾರಿ ಈ ಶುಭದಿನವು ಏಪ್ರಿಲ್ 26ರಂದು ಬರಲಿದೆ. ಈ ದಿನ ಭಕ್ತರು ವಿಷ್ಣುವಿನ ಪೂಜೆ ಮಾಡಿ ಸುಖ ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಭಕ್ತರು ದಶಮಿಯ ಸಂಜೆಯಿಂದಲೇ ಉಪವಾಸ ಆರಂಭಿಸಿ ದ್ವಾದಶಿಯ ಬೆಳಗಿನವರೆಗೂ ಮುಂದುವರೆಸುತ್ತಾರೆ. ದ್ವಾದಶಿ(12ನೇ ದಿನ)ಯ ಬೆಳಗ್ಗೆ ಸೂರ್ಯೋದಯದ ಬಳಿಕ ಉಪವಾಸ ಮುರಿಯುತ್ತಾರೆ.
ಹೀಗೆ ಉಪವಾಸ ಮುರಿಯುವುದಕ್ಕೆ ಪರಾನಾ ಎನ್ನಲಾಗುತ್ತದೆ.
ಪರಾನಾ ಮುಹೂರ್ತ
ಏಪ್ರಿಲ್ 26ರ ಮಧ್ಯರಾತ್ರಿ 1.37ಕ್ಕೆ ಏಪ್ರಿಲ್ 27ರ ಮಧ್ಯರಾತ್ರಿ12.47ರವರೆಗೆ ಏಕಾದಶಿ ತಿಥಿ ಇರಲಿದೆ. ವರುದಿನ ಏಕಾದಶಿ ಆಚರಿಸುವವರು ಈ ಸಮಯದಲ್ಲಿ ಸಂಪೂರ್ಣ ಉಪವಾಸ ಆಚರಿಸಿ ವಿಷ್ಣು(Lord Vishnu) ಪೂಜೆಯಲ್ಲಿ ತೊಡಗುತ್ತಾರೆ. ಏಪ್ರಿಲ್ 27ರ ಬೆಳಗ್ಗೆ 06:41ರಿಂದ 08:31ರ ಅಧಿಯಲ್ಲಿ ಉಪವಾಸ ಮುರಿಯಬಹುದಾಗಿದೆ.
ವರುದಿನಿ ಏಕಾದಶಿ ಪೂಜಾ ವಿಧಿ(pooja vidhi)
- ಏಕಾದಶಿ ತಿಥಿಯಂದು ಬ್ರಹ್ಮ ಮುಹೂರ್ತಕ್ಕೆ ಮೊದಲು ಏಳಬೇಕು.
- ಬಕೆಟ್‌ನಲ್ಲಿ ಗಂಗಾಜಲದ ಕೆಲವು ಹನಿಗಳನ್ನು ಸೇರಿಸಿ ಸ್ನಾನ ಮಾಡಿ, ಶುದ್ಧ ಬಟ್ಟೆಗಳನ್ನು ಧರಿಸಿ.
- ಬಳಿಕ ಸಂಕಲ್ಪ ಮಾಡಿ (ಸಂಪೂರ್ಣ ಸಮರ್ಪಣೆಯೊಂದಿಗೆ ಉಪವಾಸವನ್ನು ಆಚರಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಿ).
- ನಿಮ್ಮ ಮನೆಯ ಪೂಜಾಕೋಣೆಯಲ್ಲಿ (ಎಳ್ಳು ಅಥವಾ ಸಾಸಿವೆ ಎಣ್ಣೆ ಅಥವಾ ತುಪ್ಪದಿಂದ) ದೀಪವನ್ನು ಬೆಳಗಿಸಿ.
- ನಂತರ ವಿಷ್ಣುವನ್ನು ಆವಾಹಿಸಿ. ಬಳಿಕ ಪೂಜೆ ಮಾಡಿ.
- ನೀವು ಜಲ (ನೀರು), ಪುಷ್ಪಂ (ಹೂವುಗಳು), ಗಂಧ (ನೈಸರ್ಗಿಕ ಸುಗಂಧ ದ್ರವ್ಯ), ಎಣ್ಣೆ ದೀಪ, ಧೂಪ ಮತ್ತು ನೈವೇದ್ಯ (ಯಾವುದೇ ಹಣ್ಣು ಅಥವಾ ಬೇಯಿಸಿದ ಆಹಾರ) ಭಗವಾನ್ ವಿಷ್ಣುವಿಗೆ ಅರ್ಪಿಸುವಾಗ 'ಓಂ ನಮೋ ಭಗವತೇ ವಾಸುದೇವಾಯ' ಎಂದು ಜಪಿಸಿ. ನೈವೇದ್ಯವಾಗಿ ಪಾಯಸ ಇಲ್ಲವೇ ಯಾವುದೇ ಸಸ್ಯಾಹಾರಿ ಸಿಹಿಯನ್ನು ನೀಡಬಹುದು.
- ನಂತರ ಎಲೆ ಅಡಕೆ, ತೆಂಗಿನಕಾಯಿ, ಬಾಳೆಹಣ್ಣುಗಳು ಹಾಗೂ ಇತರೆ ಹಣ್ಣುಗಳು, ಚಂದನ, ಅರಿಶಿನ ಕುಂಕುಮ, ಅಕ್ಷತೆ, ದಕ್ಷಿಣೆಯನ್ನೊಳಗೊಂಡ ತಾಂಬೂಲವನ್ನು ಸಮರ್ಪಿಸಿ.
Solar Eclipse 2022: ಶನಿ ಅಮಾವಾಸ್ಯೆ ದಿನ ಈ 3 ರಾಶಿಯವರು ಅಲರ್ಟ್ ಆಗಿರಿ!
- ಬಳಿಕ ವಿಷ್ಣುವಿನಲ್ಲಿ ಪ್ರಾರ್ಥನೆ ಮಾಡಿ ವ್ರತ ಆರಂಭಿಸಿ.
- ವ್ರತದ ಸಂದರ್ಭದಲ್ಲಿ ಸ್ವಚ್ಛ ಮನಸ್ಸಿನಿಂದ ಭಕ್ತಿಯಲ್ಲಿ ತೊಡಗಿಕೊಳ್ಳಿ. ವರುದಿನಿ ವ್ರತ ಕತೆಯನ್ನು ಓದಿ. ವಿಷ್ಣು ಸಹಸ್ರನಾಮ ಜಪ ಮಾಡಿ.
- ಅಂದು ಅಗತ್ಯವಿರುವವರಿಗೆ ಆಹಾರ ದಾನ ಮಾಡಿ.
- ಸಂಜೆಯ ಹೊತ್ತಿನಲ್ಲಿ ದೀಪ ಹಚ್ಚಿ, ವಿಷ್ಣುವಿಗೆ ಆರತಿ ಬೆಳಗಿ. ಮತ್ತೊಮ್ಮೆ ನೈವೇದ್ಯ ಅರ್ಪಿಸಿ.
ವರುದಿನಿ ಏಕಾದಶಿ ವ್ರತ ಕಥಾ(Varuthini Ekadashi Vrat Katha)
ವರುದಿನಿ ಏಕಾದಶಿ ವ್ರತದ ಪ್ರಾಮುಖ್ಯತೆಯನ್ನು ವಿವರಿಸುವಂತೆ ಪಾಂಡವ ರಾಜ ಯುಧಿಷ್ಠಿರನು ಶ್ರೀ ಕೃಷ್ಣನಲ್ಲಿ ಕೇಳಿದಾಗ ಆತ ವಿವರಿಸಿದ್ದು ಹೀಗೆ:
ಒಂದಾನೊಂದು ಕಾಲದಲ್ಲಿ ನರ್ಮದಾ ನದಿಯ ದಡದಲ್ಲಿ ಮಂಧಾತ ಎಂಬ ರಾಜನು ರಾಜ್ಯವನ್ನು ಆಳುತ್ತಿದ್ದನು. ಅವನು ಪರೋಪಕಾರಿಯಷ್ಟೇ ಅಲ್ಲದೆ ಆಧ್ಯಾತ್ಮಿಕ ವಿಷಯಗಳಲ್ಲಿ ಒಲವು ಹೊಂದಿದ್ದನು. ಒಂದು ದಿನ ಅವನು ಕಾಡಿನಲ್ಲಿ ಧ್ಯಾನ ಮಾಡುತ್ತಿದ್ದಾಗ, ಕಾಡು ಕರಡಿ ಅವನ ಮೇಲೆ ದಾಳಿ ಮಾಡಿತು. ಆದರೆ ಅವನು ತನ್ನ ಧ್ಯಾನವನ್ನು ಮುರಿಯಲು ಇಷ್ಟಪಡದ ಕಾರಣ, ದಾಳಿಯಿಂದ ತನ್ನನ್ನು ರಕ್ಷಿಸಲು ಭಗವಾನ್ ವಿಷ್ಣುವನ್ನು ಪ್ರಾರ್ಥಿಸಿದನು. ಅವನ ಭಕ್ತಿಯಿಂದ ಮನವಿ ಮಾಡಿದ್ದರಿಂದ ಮತ್ತು ಉದ್ದೇಶ ಒಳ್ಳೆಯದಾದ್ದರಿಂದ ವಿಷ್ಣುವು ಕಾಣಿಸಿಕೊಂಡು ತನ್ನ ಸುದರ್ಶನ ಚಕ್ರದಿಂದ ಕರಡಿಯನ್ನು ಕೊಂದನು. ಮಂಧಾತನು ತನ್ನನ್ನು ರಕ್ಷಿಸಿದ್ದಕ್ಕಾಗಿ ಭಗವಾನ್ ವಿಷ್ಣುವಿಗೆ ಧನ್ಯವಾದ ಹೇಳಿದನು. ಆದರೆ ಕರಡಿ ತನ್ನ ಮೇಲೆ ಏಕೆ ದಾಳಿ ಮಾಡಿತು ಎಂದು ಆಶ್ಚರ್ಯಪಟ್ಟನು.
Camphor Remedies: ಸಮಸ್ಯೆಗಳಿಗೆ ಪರಿಹಾರ ತರುವ ಕರ್ಪೂರ
ಇದಕ್ಕೆ ಕಾರಣ ವಿವರಿಸಿದ ಭಗವಾನ್ ವಿಷ್ಣುವು ಮಂಧಾತನು ಹಿಂದಿನ ಜನ್ಮದಲ್ಲಿ ಮಾಡಿದ ಒಂದು ತಪ್ಪಿಗೆ ಈ ಶಿಕ್ಷೆಯನ್ನು ಅನುಭವಿಸಿದನೆಂದು ತಿಳಿಸಿದನು. ನಂತರ ವಿಷ್ಣುವು ಮಂಧಾತಗೆ ಗಾಯಗಳಿಗೆ ಚಿಕಿತ್ಸೆ ಪಡೆಯಲು ಮಥುರಕ್ಕೆ ಭೇಟಿ ನೀಡಿ ವರುದಿನಿ ವ್ರತ ಆಚರಿಸುವಂತೆ ಸಲಹೆ ನೀಡುತ್ತಾನೆ. ವಿಷ್ಣುವಿನ ಮಾತಿನಂತೆ ಮಂಧಾತನು ಮಥುರಾ ನಗರಿಗೆ ಹೋಗಿ ವರುದಿನಿ ಏಕಾದಶಿ ವ್ರತ ಆಛರಿಸುತ್ತಾನೆ.
ಮಥುರಾಗೆ ಭೇಟಿ ನೀಡಲು ಮತ್ತು ಅವರ ಗಾಯಗಳಿಗೆ ಚಿಕಿತ್ಸೆ ನೀಡಲು ವರುತಿನಿ ವ್ರತವನ್ನು ಆಚರಿಸಲು ಸಲಹೆ ನೀಡಿದರು. ರಾಜನು ಭಗವಂತನಿಗೆ ಧನ್ಯವಾದ ಹೇಳಿದನು ಮತ್ತು ಪವಿತ್ರ ನಗರವಾದ ಮಥುರಾದಲ್ಲಿ ಉಪವಾಸವನ್ನು ಆಚರಿಸಿದನು. ನಂತರದಲ್ಲಿ ರಾಜನಿಗೆ ಎಲ್ಲವೂ ಒಳಿತೇ ಆಯಿತು.