ಅಗ್ನಿ ಗಾಯತ್ರಿ ಮಂತ್ರದ ಅದ್ಭುತ ಕಂಪನವು ನಮ್ಮೊಳಗೆ ಬೆಂಕಿಯ ಘಟಕವನ್ನು ಚೇತರಿಸಲು ಸಹಾಯ ಮಾಡುತ್ತದೆ.

ಹಿಂದೂಗಳ ವೈದಿಕ ಮಂತ್ರಗಳ ಪಟ್ಟಿಯಲ್ಲಿ ಅಗ್ನಿ ಗಾಯತ್ರಿ ಮಂತ್ರಕ್ಕೆ ವಿಶೇಷ ಸ್ಥಾನವಿದೆ. ಆರೋಗ್ಯ, ಆಯುಷ್ಯ ಮತ್ತು ಸಂಪತ್ತನ್ನು ಪಡೆಯುವ ಬಯಕೆಯಿಂದ ಈ ಮಂತ್ರವನ್ನು ಪಠಿಸಲಾಗುತ್ತದೆ. ಅಗ್ನಿ ಗಾಯತ್ರಿ ಮಂತ್ರವನ್ನು ಅಗ್ನಿಗೆ ಸಮರ್ಪಿಸಲಾಗಿದೆ. ಬೆಂಕಿಯ ದೇವರನ್ನು ತೇಜಸ್ಸಿನ ದೇವರು ಎಂದು ಪರಿಗಣಿಸಲಾಗುತ್ತದೆ. ಈತ ವೇದಗಳ ಮೂರು ದೇವರಲ್ಲಿ ಒಬ್ಬನು. 

Add Asianetnews Kannada as a Preferred SourcegooglePreferred

ಋಗ್ವೇದದಲ್ಲಿ ಅಗ್ನಿ ದೇವನನ್ನು ವರುಣ ಮತ್ತು ಇಂದ್ರನಿಗೆ ಸಮಾನವೆಂದು ಪರಿಗಣಿಸಲಾಗಿದೆ. ಪ್ರಾಚೀನ ಕಾಲದಿಂದಲೂ ಅವನನ್ನು ಪೂಜಿಸಲಾಗುತ್ತದೆ. ನಂಬಿಕೆಗಳ ಪ್ರಕಾರ, ಈ ಮಂತ್ರವನ್ನು ಪಠಿಸುತ್ತಾ, ಯಾವುದೇ ವಸ್ತುವನ್ನು ಸಂಪೂರ್ಣ ಭಕ್ತಿಯಿಂದ ಬೆಂಕಿ(Fire)ಗೆ ಅರ್ಪಿಸಿದರೆ ಅದು ನೇರವಾಗಿ ಪಿತೃಗಳಿಗೆ ಹೋಗುತ್ತದೆ.

ಅಗ್ನಿ ಗಾಯತ್ರಿ ಮಂತ್ರ ಮತ್ತು ಅದರ ಅರ್ಥ
"ಓಂ ಮಹಾಜ್ವಲಯ ವಿದ್ಮಹೇ ಅಗ್ನಿ ಮಧ್ಯೇ ಧೀಮಹೀ
ತನ್ನೋ: ಅಗ್ನಿ ಪ್ರಚೋದಯಾತ್"

'ನಾನು ನನ್ನ ಗಮನವನ್ನು ದೊಡ್ಡ ಬೆಳಕಿನ ಕಡೆಗೆ ತಿರುಗಿಸುತ್ತಿದ್ದೇನೆ, ಅಗ್ನಿದೇವನು ನನಗೆ ಜ್ಞಾನವನ್ನು ನೀಡಲಿ, ಓ ಅಗ್ನಿದೇವನೇ! ಬೆಂಕಿಯ ಕೃಪೆಯುಳ್ಳ ದೇವರೇ ನಿನ್ನ ಬೆಳಕಿನಿಂದ ನನ್ನ ಮನಸ್ಸನ್ನು ಬೆಳಗಿಸು.'

Dog Astrology: ನಾಯಿಗೆ ಬ್ರೆಡ್ ನೀಡಿದ್ರೆ 3 ಗ್ರಹಗಳ ಕಾಟದಿಂದ ಮುಕ್ತಿ!

ಈ ಮಂತ್ರಗಳನ್ನೂ ಒಮ್ಮೆ ನೋಡಿ

'ಓಂ ಸಪ್ತಜಿಹ್ವಾಯ ವಿದ್ಮಹೇ ಅಗ್ನಿ ದೇವಾಯ ಧೀಮಹಿ ತನ್ನ ಅಗ್ನಿಃ ಪ್ರಚೋದಯಾತ್'

'ವೈಶ್ವಾನರಾಯ ವಿದ್ಮಹೇ ಲಲೀಲಾಯ ಧೀಮಃ ತನ್ನ ಅಗ್ನಿಃ ಪ್ರಚೋದಯಾತ್ ।'

ಮಂತ್ರವನ್ನು ಹೀಗೆ ಪಠಿಸಿ
ಈ ಅದ್ಭುತವಾದ ಮಂತ್ರವನ್ನು ಪಠಿಸುವಾಗ, ಕೆಟ್ಟ ಆಲೋಚನೆಗಳನ್ನು ಮನಸ್ಸಿನಿಂದ ದೂರವಿಡಬೇಕು. ಹವನವನ್ನು ಮಾಡುವಾಗ, ಜನರು 'ಸ್ವಾಹಾ' ಅಥವಾ 'ಓಂ ಸ್ವಾಹಾ' ಎಂದು ಹೇಳುವ ಮೂಲಕ ಅಗ್ನಿಗೆ ಬಲಿ ನೀಡಬೇಕು. ಅಗ್ನಿ ದೇವರ ಪತ್ನಿ ಸ್ವಾಹಾ ಜಿ, ಈ ಕಾರಣಕ್ಕಾಗಿ, ಬೆಂಕಿಯಲ್ಲಿ ಹವನದ ವಸ್ತು ಅಥವಾ ಇತರ ಯಾವುದೇ ವಸ್ತುವನ್ನು ಅರ್ಪಿಸುವಾಗ ಅದನ್ನು ಸ್ವಾಹಾ ಎಂದು ಕರೆಯಲಾಗುತ್ತದೆ.

ಪ್ರತಿ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಬೇಕು. ಅದರ ನಂತರ ಅಗ್ನಿದೇವನ ವಿಗ್ರಹ ಅಥವಾ ಚಿತ್ರದ ಮುಂದೆ ಕುಳಿತುಕೊಳ್ಳಬೇಕು. ಈ ಅದ್ಭುತ ಮಂತ್ರವನ್ನು ಬಳಸಿ ಪೂಜೆ ಮಾಡುವ ಮೊದಲು, ಅದರ ಅರ್ಥವನ್ನು ತಿಳಿದುಕೊಳ್ಳಬೇಕು. ಇದು ಮಂತ್ರದ ಪರಿಣಾಮವನ್ನು ಹೆಚ್ಚಿಸುತ್ತದೆ.

ಅಗ್ನಿ ಗಾಯತ್ರಿ ಮಂತ್ರದ ಪ್ರಯೋಜನಗಳು(benefits)
ಈ ಮಂತ್ರವು ಅತ್ಯಂತ ಶಕ್ತಿಶಾಲಿ ಮಂತ್ರವಾಗಿದೆ. ಭಗವಾನ್ ಅಗ್ನಿಯು ಶೀಘ್ರದಲ್ಲೇ ಅದರ ಪಠಣದಿಂದ ಪ್ರಸನ್ನನಾಗುತ್ತಾನೆ ಮತ್ತು ಭಕ್ತರಿಗೆ ತನ್ನ ಆಶೀರ್ವಾದವನ್ನು ನೀಡುತ್ತಾನೆ. ಯಾವುದೇ ಯಾಗವನ್ನು ಪ್ರಾರಂಭಿಸಲು ಅಗ್ನಿಯನ್ನು ಪೂಜಿಸುವುದು ಬಹಳ ಅವಶ್ಯಕ. ಈ ಪರಿಣಾಮಕಾರಿ ಮಂತ್ರದ ಪಠಣವು ಆರೋಗ್ಯಕರ ಜೀವನಕ್ಕೆ ಕಾರಣವಾಗುತ್ತದೆ.

Best Kissers: ಈ ನಾಲ್ಕು ರಾಶಿಯವರು ಕಿಸ್ಸಿಂಗ್‌ನಲ್ಲಿ ನಿಸ್ಸೀಮರು..

ದೇಹ ಮತ್ತು ಮನಸ್ಸಿಗೆ ಕಾಂತಿಯನ್ನು ತರಲು ಅನೇಕರು ಮಂತ್ರಗಳನ್ನು ಪಠಿಸುತ್ತಾರೆ. ಶೀಘ್ರದಲ್ಲೇ ತಮ್ಮ ಇಷ್ಟಕಾಮನೆಯ ಫಲ ಪಡೆಯಲು ಅನೇಕರು ಇದನ್ನು ಪಠಿಸುತ್ತಾರೆ. ಈ ಮಂತ್ರವನ್ನು ಪ್ರತಿನಿತ್ಯ ಪಠಿಸುವುದರಿಂದ ಮಾನವನ ಜೀವನದಲ್ಲಿ ಬರುವ ತೊಂದರೆಗಳು ದೂರವಾಗುತ್ತವೆ. ಈ ಮಂತ್ರವನ್ನು ಮನಸ್ಸಿನ ಶಾಂತಿಗಾಗಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ಮಂತ್ರದಿಂದ ವ್ಯಕ್ತಿಯ ಎಲ್ಲಾ ಇಂದ್ರಿಯಗಳೂ ಚುರುಕಾಗುತ್ತವೆ.

ಅಗ್ನಿ ಗಾಯತ್ರಿ ಮಂತ್ರದ ಮಹತ್ವ(significance)
ಸನಾತನ ಧರ್ಮದಲ್ಲಿ, ಬೆಂಕಿಯನ್ನು ಶುದ್ಧತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪ್ರತಿದಿನ ಅಗ್ನಿ ಗಾಯತ್ರಿ ಮಂತ್ರವನ್ನು ಪಠಿಸಿದರೆ, ಅಗ್ನಿ ದೇವನು ತನ್ನ ಭಕ್ತರಿಗೆ ತನ್ನ ಆಶೀರ್ವಾದವನ್ನು ಶೀಘ್ರದಲ್ಲಿ ನೀಡುತ್ತಾನೆ. ಈ ಪರಿಣಾಮಕಾರಿ ಮಂತ್ರವನ್ನು ನಿರಂತರವಾಗಿ ಜಪಿಸುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಪುರಾಣಗಳಲ್ಲಿ, ಈ ದೇವರನ್ನು ಎರಡು ಮುಖದ ದೇವರು ಎಂದು ವಿವರಿಸಲಾಗಿದೆ. ಕುರಿಯು ಅಗ್ನಿಯ ವಾಹನ. ಅವನ ಹೆಂಡತಿಯ ಹೆಸರು ಸ್ವಾಹಾ. ಅಗ್ನಿ ಗಾಯತ್ರಿ ಮಂತ್ರದಿಂದ, ವ್ಯಕ್ತಿಯ ದೇಹ ಮತ್ತು ಮನಸ್ಸಿನಲ್ಲಿ ಧನಾತ್ಮಕ ಶಕ್ತಿಯು ಹರಿಯುತ್ತದೆ. ಹಿಂದೂ ಧರ್ಮದ ಅನುಯಾಯಿಗಳಿಗೆ ಈ ಮಂತ್ರ ಬಹಳ ಮುಖ್ಯ.