Asianet Suvarna News Asianet Suvarna News

Dog Astrology: ನಾಯಿಗೆ ಬ್ರೆಡ್ ನೀಡಿದ್ರೆ 3 ಗ್ರಹಗಳ ಕಾಟದಿಂದ ಮುಕ್ತಿ!

ಶನಿ ಮತ್ತು ದುಷ್ಟ ಗ್ರಹ ರಾಹು ಕೇತುಗಳು ಅಶುಭವಾಗಿದ್ದರೆ, ಅವು ವ್ಯಕ್ತಿಗೆ ಬಹಳಷ್ಟು ತೊಂದರೆಗಳನ್ನು ನೀಡುತ್ತವೆ. ಅದಕ್ಕಾಗಿಯೇ ಅವರನ್ನು ಶಾಂತವಾಗಿರಿಸುವುದು ಮುಖ್ಯ. ಇದಕ್ಕಾಗಿ ಸುಲಭೋಪಾಯವೊಂದಿದೆ..

Does Keeping A Dog Make Shani And Ketu Strong skr
Author
First Published Sep 8, 2022, 1:23 PM IST

ಅನೇಕ ಜನರು ತಮ್ಮ ಮನೆಯಲ್ಲಿ ನಾಯಿಗಳನ್ನು ಸಾಕುತ್ತಾರೆ. ನಾಯಿ ಎಂದರೆ ಕೆಲವರಿಗೆ ತಮ್ಮ ಮನೆಯ ಮಕ್ಕಳಂತೆಯೋ ಆಗಿರುತ್ತವೆ. ಅಷ್ಟು ಪ್ರೀತಿಯಿಂದ ಕಾಣುತ್ತಾರೆ. ಕೆಲವರು ಸಹಜ ಪ್ರೀತಿಯಿಂದ ನಾಯಿ ಸಾಕಿದರೆ ಮತ್ತೆ ಕೆಲವರು ಜ್ಯೋತಿಷ್ಯ ಕಾರಣಗಳಿಂದ ಸಾಕುತ್ತಾರೆ. ಹೌದು, ಜ್ಯೋತಿಷ್ಯದಲ್ಲಿ ನಾಯಿಗಳಿಗೆ ಉತ್ತಮ ಸ್ಥಾನವಿದೆ. ಅದು ನಾಯಿಗಳನ್ನು ಸಾಕಲು ಸಲಹೆ ನೀಡುತ್ತದೆ. ಹೌದು, ನಾಯಿಯನ್ನು ಕೇತುವಿನ ಮಂಗಳಕ್ಕಾಗಿ ಸಾಕಲು ಸಲಹೆ ನೀಡಲಾಗುತ್ತದೆ ಮತ್ತು ಇದು ಶನಿ ಗ್ರಹವನ್ನು ಬಲಪಡಿಸುತ್ತದೆ. ನಾಯಿಯನ್ನು ಸಾಕುವ ಇತರ ಪ್ರಯೋಜನಗಳು ಯಾವುವು ಮತ್ತು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು ಯಾವುವು ಎಂಬುದನ್ನು ನಾವಿಲ್ಲಿ ತಿಳಿಸುತ್ತೇವೆ.

ಜ್ಯೋತಿಷ್ಯದಲ್ಲಿ, ಶನಿ(Shani)ಯನ್ನು ಕ್ರೂರ ಗ್ರಹ ಎಂದು ವಿವರಿಸಲಾಗಿದೆ. ಅಂತೆಯೇ ರಾಹು ಮತ್ತು ಕೇತುವನ್ನು ಪಾಪ ಗ್ರಹಗಳ ವರ್ಗದಲ್ಲಿ ಇರಿಸಲಾಗಿದೆ. ಈ ಮೂರು ಗ್ರಹಗಳು ವ್ಯಕ್ತಿಯ ಜಾತಕ(Horoscope)ದಲ್ಲಿ ಅಶುಭ ಸ್ಥಾನದಲ್ಲಿದ್ದರೆ ಜೀವನದ ಸಂಪಾದನೆ ಕ್ಷಣ ಮಾತ್ರದಲ್ಲಿ ನಾಶವಾಗುತ್ತದೆ. ಉದ್ಯೋಗ, ವ್ಯಾಪಾರ, ವೈವಾಹಿಕ ಜೀವನ ಎಲ್ಲದರಲ್ಲೂ ಸಮಸ್ಯೆಗಳು ಬರಲಾರಂಭಿಸುತ್ತವೆ. ಹಾಗಾಗಿ ಈ 3 ಗ್ರಹಗಳನ್ನು ಶಾಂತವಾಗಿಟ್ಟುಕೊಳ್ಳಬೇಕು. 

ಶನಿ, ರಾಹು ಮತ್ತು ಕೇತುಗಳನ್ನು ಹೇಗೆ ಶಾಂತವಾಗಿ ಇಡಬೇಕು?
ಈ ಮೂರು ಗ್ರಹಗಳನ್ನು ಶಾಂತವಾಗಿಡುವುದು ಸುಲಭ. ಅನೇಕ ಬಾರಿ ಮಾಹಿತಿಯ ಕೊರತೆಯಿಂದಾಗಿ, ಜನರು ಸಮಯಕ್ಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಇದರ ಫಲಿತಾಂಶವು ಜೀವನದಲ್ಲಿ ದುಃಖವನ್ನು ಕಡಿಮೆ ಮಾಡುವ ಬದಲು ಹೆಚ್ಚಾಗುತ್ತದೆ. ಈ ಮೂರೂ ಗ್ರಹಗಳನ್ನು ಶಾಂತವಾಗಿಸಲು ಸುಲಭ ಪರಿಹಾರವೊಂದಿದೆ. ಅದೇ ಪ್ರಾಣಿಗಳ ಸಾಕಣೆ ಮತ್ತು ಸೇವೆ. 

Best Kissers: ಈ ನಾಲ್ಕು ರಾಶಿಯವರು ಕಿಸ್ಸಿಂಗ್‌ನಲ್ಲಿ ನಿಸ್ಸೀಮರು..

ನಾಯಿ ಭೈರವನ ಸೇವಕ
ನಾಯಿ(Dog)ಯನ್ನು ಭೈರವನ ಸೇವಕ ಎಂದು ಪರಿಗಣಿಸಲಾಗುತ್ತದೆ. ನಾಯಿಗೆ ಆಹಾರವನ್ನು ನೀಡುವುದರಿಂದ ಭೈರವ ಸಂತೋಷಪಡುತ್ತಾನೆ ಮತ್ತು ಆಕಸ್ಮಿಕ ತೊಂದರೆಗಳಿಂದ ನಾಯಿ ಸೇವೆ ಮಾಡುವವನನ್ನು ರಕ್ಷಿಸುತ್ತಾನೆ ಎಂದು ಹೇಳಲಾಗುತ್ತದೆ. 

ಶನಿ ಸಾಡೇ ಸಾತಿ ಉಪಾಯ
ಜ್ಯೋತಿಷ್ಯದಲ್ಲಿ, ಕಪ್ಪು ನಾಯಿಯನ್ನು ಸಾಕುವುದು ಉತ್ತಮವೆಂದು ಪರಿಗಣಿಸಲಾಗಿದೆ. ಕಪ್ಪು ಬಣ್ಣದ ನಾಯಿಯಿಂದ ಶನಿ ಮತ್ತು ಕೇತು ಎರಡೂ ಪ್ರಭಾವಿತವಾಗಿವೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಶನಿಯನ್ನು ಮೆಚ್ಚಿಸಲು ಕಪ್ಪು ನಾಯಿ(black dog)ಯನ್ನು ಸಾಕಲು ಹೇಳಲಾಗುತ್ತದೆ.

ಶನಿ ಮತ್ತು ಕೇತುವಿಗೆ ಪರಿಹಾರ
ನೀವು ಮನೆಯಲ್ಲಿ ಕಪ್ಪು ನಾಯಿಯನ್ನು ಸಾಕಿದರೆ, ಹಾಗೆ ಮಾಡುವುದರಿಂದ ಶನಿ ಮತ್ತು ಕೇತು ಗ್ರಹಗಳು ಶಾಂತವಾಗಿರುತ್ತವೆ. ಮನೆಯಲ್ಲಿ ಕಪ್ಪು ನಾಯಿಯನ್ನು ಸಾಕುವುದರಿಂದ ಮನೆಯ ನಕಾರಾತ್ಮಕ ಶಕ್ತಿ(negative energy)ಯೂ ನಾಶವಾಗುತ್ತದೆ. ಈ ಎರಡೂ ಗ್ರಹಗಳ ಅಶುಭವು ನಾಶವಾಗುತ್ತದೆ.

Budhaditya Yoga: ಇನ್ನೊಂದು ವಾರದಲ್ಲಿ ಈ ರಾಶಿಗಳ ಅದೃಷ್ಟದ ಬಾಗಿಲು ತೆರೆಯುತ್ತದೆ..

ಶನಿಯನ್ನು ಸಂತೋಷಪಡಿಸಿ
ನಾಯಿಗಳಿಗೆ ರೊಟ್ಟಿಯನ್ನು ತಿನ್ನಿಸುವುದರಿಂದ ಶನಿಯನ್ನು ಸಂತೋಷಪಡಿಸಬಹುದು. ಶನಿದೋಷ, ಶನಿಯ ಅರ್ಧ, ಸಾಡೇಸಾತಿ(Sadesati) ಮತ್ತು ಶನಿಯ ಧೈಯ ಇರುವವರು ನಾಯಿಗಳ ಸೇವೆ ಮಾಡಬೇಕು, ಹೀಗೆ ಮಾಡುವುದರಿಂದ ತೊಂದರೆಗಳು ಮತ್ತು ಅಡೆತಡೆಗಳು ದೂರವಾಗುತ್ತವೆ.
ನಾಯಿಗೆ ಸಾಸಿವೆ ಎಣ್ಣೆಯಲ್ಲದ್ದಿದ ರೊಟ್ಟಿ ತಿನ್ನಿಸುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ ಮಕ್ಕಳ ಸಂತೋಷದಲ್ಲಿನ ಅಡೆತಡೆಯೂ ದೂರವಾಗುತ್ತದೆ. ಅಷ್ಟೇ ಅಲ್ಲ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳೂ ದೂರವಾಗುತ್ತವೆ.

ನಾಯಿಯನ್ನು ಸಾಕುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳು
ಜ್ಯೋತಿಷ್ಯ ಕಾರಣಗಳಿಗಾಗಿ ನಾಯಿಯನ್ನು ಇಟ್ಟುಕೊಳ್ಳುವಾಗ, ನಾಯಿಯು ಕಪ್ಪು ಅಥವಾ ಕಪ್ಪು-ಬಿಳಿ ಬಣ್ಣವನ್ನು ಹೊಂದಿರಬೇಕು ಎಂಬುದನ್ನು ನೆನಪಿನಲ್ಲಿಡಬೇಕು. ಅಲ್ಲದೆ, ಅವುಗಳನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಹಿಂಸಿಸಬಾರದು. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios