ಈ ಸರ್ಪದೋಷಕ್ಕೂ ನಾಗರಹಾವಿಗೂ ಸಂಬಂಧವಿಲ್ಲ! ಇದ್ಯಾಕೆ ಬರುತ್ತೆ?

ರಾಹು ಮತ್ತು ಕೇತುವನ್ನು ಕ್ರಮವಾಗಿ ಸರ್ಪದ ತಲೆ ಮತ್ತು ಬಾಲ ಎಂದು ಹೇಳಲಾಗುತ್ತದೆ. ಇವುಗಳಿಂದ ಆಗಮವಾಗುವ ದೋಷಗಳೇ ಸರ್ಪದೋಷಗಳು.

Know about this Sarpa Dosha which can come by Rahu and Ketu bni

ಸರ್ಪದೋಷ ಎಂದರೆ ನಾಗರಹಾವಿಗೆ ಸಂಬಂಧಿಸಿದ ದೋಷ ಎಂದು ಬಹಳ ಮಂದಿ ನಂಬುತ್ತಾರೆ. ಮಕ್ಕಳಿಲ್ಲದ ದಂಪತಿಗಳಿಗೆ ಸರ್ಪ ದೋಷವಿದೆ ಎಂದು ಹೇಳುವುದುಂಟು. ಆದರೆ ಇನ್ನೊಂದು ಬಗೆಯ ಸರ್ಪದೋಷವಿದೆ. ಇದು ರಾಹು ಮತ್ತು ಕೇತುವಿಗೆ ಸಂಬಂಧಿಸಿದ್ದು.

ಸರ್ಪ ಸುರುಳಿಯಾಗಿ ಮಲಗಿರುವುದನ್ನು ನೀವು ನೋಡಿದ್ದೀರಾ ತಾನೆ? ಇದು ನಮ್ಮ ಪೂರ್ವಜನ್ಮದ ಕರ್ಮಫಲದ ಸಂಕೇತ. ನಾವು ಈ ಜನ್ಮದಲ್ಲಿ ಏನೇನು ಅನುಭವಿಸುತ್ತೇವೋ ಎಲ್ಲವೂ ಹಿಂದಿನ ಜನ್ಮದ ಕರ್ಮಫಲ. ರಾಹು ಮತ್ತು ಕೇತುವನ್ನು ಕ್ರಮವಾಗಿ ಸರ್ಪದ ತಲೆ ಮತ್ತು ಬಾಲ ಎಂದು ಪುರಾಣಗಳು ಹೇಳುತ್ತವೆ. ಮನುಷ್ಯನಿಗೆ ಕಷ್ಟ ತರುವ, ಪೂರ್ವ ಜನ್ಮದ ಕರ್ಮ ಫಲಗಳನ್ನು ಅನುಭವಿಸುವಂತೆ ಮಾಡುವ ಈ ಎರಡೂ ಗ್ರಹಗಳು ಅನೇಕ ಸಂಕಷ್ಟಗಳನ್ನು ತಂದೊಡ್ಡುತ್ತವೆ. ಹಾಗಾಗಿ ಇಂತಹ ಪರಿಸ್ಥಿತಿಯನ್ನು ಸರ್ಪ ದೋಷ ಎಂದು ಕರೆಯುತ್ತಾರೆ. ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ರಾಹು ಕೇತು ಎಲ್ಲಿದ್ದಾರೆ ಎಂಬುದರ ಮೇಲೆ ಸರ್ಪ ದೋಷ ನಿರ್ಧರಿಸಲಾಗುತ್ತದೆ.

ಸರ್ಪ ದೋಷವಿರುವ ವ್ಯಕ್ತಿಯ ಲಗ್ನದ ಮೊದಲ, ಎರಡನೇ, 5, 7 ಹಾಗೂ ಎಂಟನೆಯ ಮನೆಯಲ್ಲಿ ರಾಹು ಅಥವಾ ಕೇತು ಇರುತ್ತಾರೆ. ಇದನ್ನು ಮನುಷ್ಯನ ಸಂಕಷ್ಟದ ಸಂದರ್ಭ ಎಂದು ಕರೆಯಲಾಗುತ್ತದೆ. ಇಂತಹ ವ್ಯಕ್ತಿಯ ವೈವಾಹಿಕ ಸಂಬಂಧದಲ್ಲಿ ಬಿರುಕು, ಹೆಂಡತಿ ಮನೆ ಬಿಟ್ಟು ಹೋಗುವುದು, ಸಾವು, ತಂದೆ ತಾಯಿಂದ ದೂರವಾಗುವುದು, ಮಕ್ಕಳಾಗದಿರುವುದು, ಅಪಘಾತ (Accident), ನಷ್ಟ (Loss), ಆತಂಕ ಈ ಸಮಸ್ಯೆಗಳು ಇರುತ್ತವೆ ಎಂದು ಜ್ಯೋತಿಷ್ಯ ಹೇಳುತ್ತದೆ.

ಸೂರ್ಯ (Sun) ಚಂದ್ರರು (Moon) ರಾಹು ಕೇತುವಿನ ಸ್ಥಾನಕ್ಕೆ ಬಂದಾಗ ಭೂಮಿಯಲ್ಲಿ ಗ್ರಹಣ (Eclipse) ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. ರಾಹು ಮತ್ತು ಕೇತು ಎರಡೂ ಗ್ರಹಗಳ ನಡುವೆ 1800 ಜ್ಯೋತಿರ್ವರ್ಷಗಳಷ್ಟು ಅಂತರವಿದ್ದು ಹಾಗಾಗಿ ಎರಡೂ ಗ್ರಹಗಳ ನಡುವೆ ಆರು ಮನೆಗಳ ವ್ಯತ್ಯಾಸ ಇರುತ್ತದೆ.

ಸರ್ಪ ದೋಷ ಇರುವ ವ್ಯಕ್ತಿಗೆ ರಾಹು ಕೇತುಗಳು ಬೇರೆ ಬೇರೆ ಮನೆಯಲ್ಲಿದ್ದಾಗ ಬೇರೆ ಬೇರೆ ತೊಂದರೆಗಳನ್ನು ನೀಡುತ್ತವೆ. ರಾಹುವು ಜನ್ಮಕುಂಡಲಿಯ 7ನೇ ಮನೆಯಲ್ಲಿದ್ದು ಕೇತು ಲಗ್ನದಲ್ಲಿದ್ದರೆ ಅದನ್ನು ಮಾಂಗಲ್ಯ ಸಾರ ದೋಷ ಎಂದು ಕರೆಯುತ್ತಾರೆ. ಅಂತಹ ವ್ಯಕ್ತಿಗಳಿಗೆ ಬೇಗನೆ ಮದುವೆಯಾಗುವುದಿಲ್ಲ. 

ರಾಹು ಎಂಟನೇ ಮನೆಯಲ್ಲಿದ್ದು ಕೇತುವು ಎರಡನೇ ಮನೆಯಲ್ಲಿದ್ದರೆ ಆಯುರ್ಭವ ಸರ್ಪ ದೋಷ ಎಂದು ಕರೆಯುತ್ತಾರೆ. ಇದು ವ್ಯಕ್ತಿಯ ಆಯಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅಂತಹ ವ್ಯಕ್ತಿಯು ಚಿಕ್ಕ ವಯಸ್ಸಿನಲ್ಲೇ ಸಾವಿಗೀಡಾಗಬಹುದು, ಅಪಘಾತಗಳು ಸಂಭವಿಸಬಹುದು, ಜೀವಕ್ಕೇ ಅಪಾಯವಾಗುವ ದೊಡ್ಡ ದೊಡ್ಡ ಸವಾಲುಗಳು ಎದುರಾಗುತ್ತವೆ.

ಒಂದು ವೇಳೆ ರಾಹು ಮತ್ತು ಕೇತುವು ಕ್ರಮವಾಗಿ 5 ಮತ್ತು 11ನೇ ಮನೆಯಲ್ಲಿದ್ದರೆ ಅದನ್ನು ಪುತ್ರಭವ ಸರ್ಪ ದೋಷ ಎಂದು ಕರೆಯುತ್ತಾರೆ. ಅಂತಹ ವ್ಯಕ್ತಿಯು ಸಂತಾನವಿಲ್ಲದ ಸಮಸ್ಯೆ ಎದುರಾಗುತ್ತದೆ. ಅಥವಾ ಹುಟ್ಟಿದ ಮಕ್ಕಳು ಸಾಯುವ ಅಪಾಯವಿರುತ್ತದೆ.

​​ಸರ್ಪ ದೋಷ ಪರಿಹಾರಗಳು
ಕೆಲವೊಂದು ಆಚರಣೆಗಳು, ಮಂತ್ರ ಪಠಣೆ, ಪೂಜೆ, ಶಾಂತಿ ಮಾಡಿಸುವ ಮೂಲಕ ಸರ್ಪ ದೋಷದಿಂದ ಮುಕ್ತರಾಗಬಹುದು. ಇದರಿಂದ ನಿಮಗೆ ಆಗುವ ತೊಡಕುಗಳು ನಿವಾರಣೆಯಾಗುತ್ತದೆ. ಜೊತೆಗೆ ಛಾಯಾಗ್ರಹಗಳ ಕೆಡುಕುಗಳು ಕಡಿಮೆಯಾಗುತ್ತವೆ.

ನಾಗರ ಪಂಚಮಿ ಅಥವಾ ನಾಗಪಂಚಮಿ ಹಬ್ಬವನ್ನು ಸರ್ಪಗಳಿಗೆಂದೇ ಮೀಸಲಿಡಲಾಗಿದೆ. ಆ ದಿನ ನಾಗ ಪಂಚಮಿ ವ್ರತ ಕೈಗೊಳ್ಳುವ ಮೂಲಕ ಸರ್ಪ ದೋಷದಿಂದ ಮುಕ್ತರಾಗಬಹುದಾಗಿದೆ. ವ್ರತ ಆಚರಿಸುವ ವೇಳೆ ನಾಗರ ಪಂಚಮಿ ಕುರಿತ ಕತೆ ಕೇಳುವುದರಿಂದಲೂ ಸರ್ಪ ದೋಷ ಪರಿಹಾರವಾಗುತ್ತದೆ. ಮಕ್ಕಳಿಲ್ಲದ ದಂಪತಿಗೆ ಸಂತಾನ ಪ್ರಾಪ್ತಿಯಾಗುತ್ತದೆ.

ನಿಮ್ಮ ಮನೆಯಲ್ಲಿ ಈ ಗಿಡಗಳನ್ನು ನೆಡಿ, ನೀವು ಶ್ರೀಮಂತರಾಗುತ್ತೀರಿ!

ಸರ್ಪ ದೋಷ ನಿವಾರಣೆಗಾಗಿ ಈ ಕೆಳಗಿನ ಮಂತ್ರವನ್ನು ದಿನವೂ 108 ಸಾರಿ ಪಠಿಸಿ, ನಾಗ ದೇವತೆಗಳ ಕೃಪೆಗೆ ಪಾತ್ರರಾಗಿ.

ಅನಂತೋ ವಾಸುಕೀ ಶೇಷ ಪದ್ಮನಾಭಸ್ಚ ಕಂಬಲಾಹ
ಸಂಕಲ್ಪಲೋಧಾತರಾಷ್ಟ್ರಃ ತಕ್ಷ್ಯ ಕಾಳಿಯಾಷ್ಟತಾ
ಯಥಾನಿ ನವನಾಮಾನಿ ನಿಗ್ರಹಂ ಚಾ ಮಹಾತ್ಮನಾಂ
ಸಾಯಂಕಾಲೆ ಪಠೇತ್‌ ನಿತ್ಯಂ ಪ್ರಾತಃಕಾಲೇ''

ಬೇರೇನು ಮಾಡಬೇಕು? 
- ತಿಂಗಳಿಗೊಮ್ಮೆಯಾದರೂ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಪೂಜಿಸಿ
- ನಂಬಿಕೆ ಮತ್ತು ಭಕ್ತಿಯಿಂದ ಸುಬ್ರಮಣ್ಯ ಅಷ್ಟಕಂ ಪಠಿಸಿ
- ಪ್ರತಿ ವರ್ಷ ಗರುಡ ಪಂಚಮಿ ವ್ರತ ಆಚರಿಸಿ.
- ಮಂಗಳವಾರ ಹಾಗೂ ಶನಿವಾರ ಐದು ತಲೆ ಎರಡು ದೇಹವುಳ್ಳ ನಾಗ ದೇವನ ಬೆಳ್ಳಿ ಪ್ರತಿಮೆಯನ್ನು ಪೂಜಿಸಿ (18 ವಾರ).
- ಬುಧವಾರ ಬಡವರಿಗೆ ಬೇಳೆಯನ್ನು ದಾನವಾಗಿ ನೀಡಿ

ಈ 5 ರಾಶಿಗೆ ಮಕ್ಕಳೆಂದರೆ ಪ್ರೀತಿ, ಅವರಿಗಾಗಿ ಮಿಡಿಯುತ್ತೆ ಹೃದಯ
 

Latest Videos
Follow Us:
Download App:
  • android
  • ios