Asianet Suvarna News Asianet Suvarna News

ಸಾವಿರ ವರ್ಷಗಳ ಬಳಿಕ ಖಗೋಳದಲ್ಲಿ ವಿಸ್ಮಯ; ಆಗಸ್ಟ್'ನಲ್ಲೇ ನಾಲ್ಕು ಕೌತುಕಗಳು..!

ಆಗಸವು ಸದಾ ಕೌತುಕದ ಕಣಜ. ಅಲ್ಲಿ ನಡೆಯುವ ಅನೇಕ ಬೆಳವಣಿಗೆಗಳು ನಮಗೆ ಅಚ್ಚರಿ ಮೂಡಿಸುತ್ತವೆ. ಅದೇ ರೀತಿಯ ಘಟನೆಗಳಿಗೆ ಆಗಸ್ಟ್ ತಿಂಗಳು ಸಾಕ್ಷಿಯಾಗಲಿದೆ. ಆಗಸ್ಟ್ ತಿಂಗಳಲ್ಲಿ ನಾಲ್ಕು ವಿಸ್ಮಯಗಳು ನಡೆಯಲಿದ್ದು, ಈ ಕುರಿತು ಇಲ್ಲಿದೆ ಮಾಹಿತಿ.

keep a close watch on the august night sky for these astronomical events suh
Author
First Published Aug 4, 2023, 10:59 AM IST

ಆಗಸವು ಸದಾ ಕೌತುಕದ ಕಣಜ. ಅಲ್ಲಿ ನಡೆಯುವ ಅನೇಕ ಬೆಳವಣಿಗೆಗಳು ನಮಗೆ ಅಚ್ಚರಿ ಮೂಡಿಸುತ್ತವೆ. ಅದೇ ರೀತಿಯ ಘಟನೆಗಳಿಗೆ ಆಗಸ್ಟ್ ತಿಂಗಳು ಸಾಕ್ಷಿಯಾಗಲಿದೆ. ಆಗಸ್ಟ್ ತಿಂಗಳಲ್ಲಿ ನಾಲ್ಕು ವಿಸ್ಮಯಗಳು ನಡೆಯಲಿದ್ದು, ಈ ಕುರಿತು ಇಲ್ಲಿದೆ ಮಾಹಿತಿ.

ಇದೀಗ ಆಗಸ್ಟ್ ಆರಂಭವಾಗಿದ್ದು, ಇಡೀ ತಿಂಗಳು ಖಗೋಳದಲ್ಲಿ ಅಪರೂಪದ ವಿಸ್ಮಯಗಳು ನಡೆಯಲಿವೆ. ಆಕಾಶದಲ್ಲಿ ಬ್ಲೂ ಮೂನ್ ಹಾಗೂ ಸೂಪರ್ ಮೂನ್ ಆಕಾಶದಲ್ಲಿ ಬ್ಲೂ ಮೂನ್‌ಗಳನ್ನು ಕಾಣಬಹುದಾಗಿದೆ. ಶನಿ ಗ್ರಹವು ಸೂರ್ಯನ ನೇರಕ್ಕೆ ಬರಲಿದೆ. ಹಾಗೂ ಶೂನ್ಯ ನೆರಳಿನ ದಿನವು ಕೂಡ ಇದೇ ತಿಂಗಳಲ್ಲಿ ಇದೆ. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.

ಭೂಮಿಯ ಮೇಲೆ ಚಂದ್ರನ ಬೆಳಕು..!

ನಮ್ಮ ಗ್ರಹದ ಸುತ್ತ ದೀರ್ಘವೃತ್ತದ ಹಾದಿಯಲ್ಲಿ ಹುಣ್ಣಿಮೆಯ ಕಕ್ಷೆಯು ಭೂಮಿಗೆ ಹತ್ತಿರವಾದಾಗ ಸೂಪರ್‌ಮೂನ್ ಸಂಭವಿಸುತ್ತದೆ. ಅಂದರೆ ಚಂದ್ರನು ತನ್ನ ಗಾತ್ರಕ್ಕಿಂತ ದೊಡ್ಡದಾಗಿ ಕಾಣಿಸುತ್ತಾನೆ. ಇದು ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ. ಚಂದ್ರ ಭೂಮಿಯ ಸಮೀಪ ಬರುತ್ತಾನೆ. ಚಂದ್ರನು ಭೂಮಿಯ ಪರಿಧಿಯ ಶೇ. 90ರಷ್ಟು ಹತ್ತಿರ ಬಂದಾಗ ಈ ಖಗೋಳ ವಿಸ್ಮಯವನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ.

ಈ ತಿಂಗಳಲ್ಲಿ ಕಾಣಿಸಿಕೊಳ್ಳುವ ಸೂಪರ್ ಮೂನ್'ಗಳ ಪೈಕಿ ಮೊದಲ ಸೂಪರ್ ಮೂನ್ ಮಂಗಳವಾರ ರಾತ್ರಿ ಆಗಸ್ಟ್ 01ರಂದು ಗೋಚರವಾಗಿದೆ. ಭಾರತದ ಹಲವು ಪ್ರದೇಶಗಳಲ್ಲಿ ಬೆಳದಿಂಗಳ ಚಂದಿರ ಕಾಣಿಸಿಕೊಂಡಿದ್ದಾನೆ.

ಎರಡನೇ ಬ್ಲೂ ಮೂನ್ ಆಗಸ್ಟ್ 31 ರಂದು ಗೋಚರಿಸುತ್ತದೆ. ಬೆಳಿಗ್ಗೆ 7:05 ಕ್ಕೆ ಇದು ಸ್ಪಷ್ಟವಾಗಿ ಕಾಣಿಸಲಿದ್ದು, ಈ ನಿರ್ದಿಷ್ಟ ಬ್ಲೂಮೂನ್ ಕೂಡ ಸೂಪರ್‌ಮೂನ್ ಆಗಿರುತ್ತದೆ. ಇದು ಇಡೀ ವರ್ಷದಲ್ಲಿ ಭೂಮಿಗೆ ಅತ್ಯಂತ ಸಮೀಪದಲ್ಲಿ ಕಾಣಿಸುವ ಹುಣ್ಣಿಮೆಯಾಗಿದೆ.

ಆಗಸ್ಟ್‌ನಲ್ಲಿ 4 ಗ್ರಹಗಳ ಸಂಚಾರ; ಈ ರಾಶಿಯವರಿಗೆ ಶುಭ-ಅಶುಭ, ಪೃಕೃತಿ ವಿಕೋಪ..!

 

ಶೂನ್ಯ ನೆರಳಿನ ದಿನ

ಪ್ರತಿವರ್ಷ ಎಪ್ರಿಲ್, ಮೇ ಹಾಗೂ ಆಗಸ್ಟ್‌ ತಿಂಗಳಿನಲ್ಲಿ ಶೂನ್ಯ ನೆರಳು ಎಂಬ ಖಗೋಳ ವಿಸ್ಮಯದ ಚಮತ್ಕಾರ ನಡೆಯುತ್ತಿದ್ದು, ನಮ್ಮ ನೆರಳು ನಮಗೆ ಕಾಣದಂತೆ ಆಗುವುದನ್ನು ಶೂನ್ಯ ನೆರಳಿನ ದಿನ ಅಂತ ಕರೆಯಲಾಗುತ್ತದೆ.

ಸೂರ್ಯ ಆಕಾಶದಲ್ಲಿ ಉತ್ತರ ದಿಕ್ಕಿನತ್ತ ಚಲಿಸುವಾಗ ನಮ್ಮ ನೆತ್ತಿಯ ನೇರದಲ್ಲಿ ಹಾದು ಹೋಗುತ್ತಾನೆ. ಸೂರ್ಯನು ನಮ್ಮ ತಲೆಯ ಮೇಲೆ ನಿಖರವಾಗಿ ಇರುವಾಗ ನಮ್ಮ ನೆರಳು ನೇರವಾಗಿ ಕಾಲ ಕೆಳಗಿರುತ್ತದೆ. ನಾವು ನಮ್ಮ ನೆರಳಿನ ಮೇಲೆಯೇ ನಿಂತಿರುವುದರಿಂದ ಈ ನೆರಳು ಗೋಚರಿಸುವುದಿಲ್ಲ. ಇದನ್ನು ಖಗೋಳ ವಿಜ್ಞಾನದಲ್ಲಿ 'ಶೂನ್ಯ ನೆರಳು' ಎನ್ನಲಾಗುತ್ತದೆ. ಇದೇ ತಿಂಗಳ 18 ರಂದು ಶೂನ್ಯ ನೆರಳಿನ ದಿನವಾಗಿದ್ದು, ಆ ದಿನ ನಮ್ಮ ನೆರಳು ಗೋಚರ ಆಗಲ್ಲ.

ಸೂರ್ಯನ ನೇರಕ್ಕೆ ಶನಿ ಗ್ರಹ

ಇದೇ ಆಗಸ್ಟ್ 27ರಂದು ಶನಿಗ್ರಹವು ಸೂರ್ಯನ ನೇರಕ್ಕೆ ಬರಲಿದೆ. ಇದು ತುಂಬಾ ಅಪರೂಪ ಆಗಿದ್ದು, ಹಾಗೂ ಭೂಮಿಯಿಂದ ಶನಿಗ್ರಹವನ್ನು ನೋಡಬಹುದು. ಶನಿಯ ರಿಂಗ್ ಕೂಡ ಕಣ್ಣಿಗೆ ಕಾಣಲಿದೆ.

ಬುಧ ಹಿಮ್ಮೆಟ್ಟುವಿಕೆ; ಈ ಮೂರು ರಾಶಿಗಳಿಗೆ ಹೊಡೆಯುತ್ತೆ ಜಾಕ್‌ಪಾಟ್..!

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios