Asianet Suvarna News Asianet Suvarna News

ಉತ್ತರ ಭಾರತದಲ್ಲಿರುವಂತೆಯೇ ಕರ್ನಾಟಕದಲ್ಲಿಯೂ ಕೇದಾರನಾಥ!

ಉತ್ತರ ಭಾರತದಲ್ಲಿ ಇರುವ ಕೇದಾರನಾಥ ದೇವಸ್ಥಾನ ರೀತಿಯಲ್ಲಿ ಕರ್ನಾಟಕದಲ್ಲಿಯೂ ದಕ್ಷಿಣ ಕೇದಾರನಾಥ ಎನ್ನುವ ಹೆಸರಿನಲ್ಲಿ ಅದರಲ್ಲೂ ದಾವಣಗೆರೆಯ  ದಕ್ಷಿಣ ಕೇದಾರ ವೈರಾಗ್ಯಧಮದಲ್ಲಿ ಶ್ರೀಹಿಮಗಿರಿ ಭವನದ ನೂತನ ಕಟ್ಟಡದ ಉದ್ಘಾಟನೆಯನ್ನು ಇದೇ 27ರಂದು ಆಯೋಜಿಸಲಾಗಿದೆ.

karnataka kedarnath in davangere gow
Author
First Published Jan 23, 2023, 7:20 PM IST

ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಜ.23): ಉತ್ತರ ಭಾರತದಲ್ಲಿ ಇರುವ ಕೇದಾರನಾಥ ದೇವಸ್ಥಾನ ರೀತಿಯಲ್ಲಿ ಕರ್ನಾಟಕದಲ್ಲಿಯೂ ದಕ್ಷಿಣ ಕೇದಾರನಾಥ ಎನ್ನುವ ಹೆಸರಿನಲ್ಲಿ ಅದರಲ್ಲೂ ದಾವಣಗೆರೆ ಜಿಲ್ಲೆಯಲ್ಲಿ ದಕ್ಷಿಣ ಕೇದಾರ ವೈರಾಗ್ಯಧಮದಲ್ಲಿ ಶ್ರೀಹಿಮಗಿರಿ ಭವನದ ನೂತನ ಕಟ್ಟಡದ ಉದ್ಘಾಟನೆಯನ್ನು ಇದೇ 27ರಂದು ಆಯೋಜಿಸಲಾಗಿದೆ ಎಂದು ಜಗಳೂರು ತಾಲೂಕಿನ ಕಣ್ವ ಕುಪ್ಪೆ ಗವಿಮಠದ ಮಠಾಧ್ಯಕ್ಷ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಶ್ರೀಗಳು ಹೇಳಿದರು.

ದಾವಣಗೆರೆಯಲ್ಲಿ  ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿಯೂ ಅದರಲ್ಲೂ ದಾವಣಗೆರೆ ಜಿಲ್ಲೆಯ ದಾವಣಗೆರೆ ಹರಿಹರ ಮಧ್ಯ ಬರುವ ಹಳೆಬಾತಿ ಗ್ರಾಮದ ಸಮೀಪ ಇರುವ ಸರ್ವಿಸ್ ರಸ್ತೆಯಲ್ಲಿ ತೆರೆದರೆ ಶಂಷೀಪುರ ಗ್ರಾಮದಲ್ಲಿ ಈ ಧಾರ್ಮಿಕ ಕ್ಷೇತ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜ. 27ರಂದು ಬೆಳಗ್ಗೆ 3ಗಂಟೆಯಿಂದ ವಿವಿಧ ಪೂಜಾ ವಿಧಿ ವಿಧಾನ ಕಾರ್ಯಗಳು ನಡೆಯಲಿದ್ದು, ಬೆಳಗ್ಗೆ 8 ಗಂಟೆಯಿಂದ ಧರ್ಮ ಕಂಕಣ ಧಾರಣೆ ಕಾರ್ಯಕ್ರಮ ನಡೆಯಲಿದೆ.  ನಂತರ ಬೆಳಗ್ಗೆ 8.45 ರಿಂದ ಶ್ರೀಮದ್ ರಂಭಾಪುರಿ ಹಾಗೂ ಶ್ರೀಮದ್ ಕೇದಾರನಾಥ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಸನಾತನ ಧರ್ಮ ಜಾಗೃತಿ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ನಂತರ ಬೆಳಗ್ಗೆ 11 ಗಂಟೆಗೆ ಧರ್ಮಸಭೆ ನಡೆಯಲಿದ್ದು, ಈ ಸಮಾರಂಭದಲ್ಲಿ ನಾಡಿನ ವಿವಿಧ ಮಠಾಧೀಶರು, ಪಂಡಿತರು, ಸಾಮಾಜಿಕ ಗಣ್ಯರು, ರಾಜಕೀಯ ಧುರೀಣರು, ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ನಿಧಿ ಆಸೆಗೆ ಪುರಾತನ ಕಾಲದ ಆಂಜನೇಯ ದೇವಾಲಯದ ಗರ್ಭಗುಡಿ ಅಗೆದ ದುಷ್ಕರ್ಮಿಗಳು!

ಜಾಗತಿಕ ಮಟ್ಟದಲ್ಲಿ ಇರುವ ಅನೇಕ ಸಂಸ್ಕೃತಿಗಳಲ್ಲಿ ಭಾರತೀಯ ಸನಾತನ ಸಂಸ್ಕೃತಿ, ಸಂಸ್ಕಾರಗಳು ಇಂದಿಗೂ ತನ್ನತನವನ್ನು ಉಳಿಸಿಕೊಂಡಿರುವ ಬಂದಿವೆ.ಭಾರತೀಯ ಸನಾತನ ಸಂಸ್ಕೃತಿಯು ಜಗತ್ತಿನಾದ್ಯಂತ ಏನೆಲ್ಲಾ ವೈರುಧ್ಯಗಳು ನಡೆದರೂ ಸಹ ತನ್ನತನವನ್ನು ಕಾಯ್ದುಕೊಂಡಿದೆ. ಇಂತಹ ಸಂಸ್ಕೃತಿಯನ್ನು ಹೊಂದಿರುವ ಸಂಸ್ಕಾರವನ್ನು ಹೊಂದಿರುವ ಉತ್ತರ ಭಾರತದ ಪೀಠದ ಕೇದಾರನಾಥ ದೇವಸ್ಥಾನದಲ್ಲಿ ಕೇವಲ ಆರು ತಿಂಗಳು ಪೂಜಾ ಕಾರ್ಯಕ್ರಮಗಳು ನಡೆಯಲಿದೆ.

ಗುರು​ವಾ​ಯೂರು ದೇಗು​ಲ ಬಳಿ 260 ಕೆಜಿ ಚಿನ್ನ, 6605 ಕೆಜಿ ಬೆಳ್ಳಿ

ನಂತರ ಆರು ತಿಂಗಳು ಶೀತ ಮತ್ತು ಮಳೆಯ ಕಾರಣ ಅಲ್ಲಿ ಯಾವುದೇ ವಿಧಾನಗಳು ನಡೆಯುವುದಿಲ್ಲ. ಕಾರಣ ದಾವಣಗೆರೆಯ ಜಿಲ್ಲೆಯ ಶಂಶಿಪುರದಲ್ಲಿರುವ ಹಿಮಗಿರಿ ಭವನದಲ್ಲಿ ಭಕ್ತರಿಗೆ ದರ್ಶನ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಶಿವಯೋಗಿ ಕಂಬಾಳಿ ಮಠ,  ಕೆ.ಎಂ.ಸುರೇಶ್ ಕೆ.ಎಂ.ವೀರೇಶ್,  ಎನ್.ರಾಜಶೇಖರ, ಎ. ಎಸ್. ಮೃತ್ಯುಂಜಯ ಇತರರು ಇದ್ದರು.

Follow Us:
Download App:
  • android
  • ios