Jupiter transit effects on zodiac signs: ಅಕ್ಟೋಬರ್ ಕೊನೆಯ ದಿನದಂದು ನಡೆಯುವ ಗುರುವಿನ ಅತಿದೊಡ್ಡ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಈ ಗುರು ಸಂಚಾರದಿಂದ ಮೂರು ರಾಶಿಯವರಿಗೆ ಜನವರಿ 2027ರವರೆಗೆ ಆರ್ಥಿಕ ಲಾಭ ಮತ್ತು ವೃತ್ತಿ ಪ್ರಗತಿ ಸಿಗಲಿದೆ.
Kannada Astrology : ಅಕ್ಟೋಬರ್ ತಿಂಗಳ ಕೊನೆಯ ದಿನವಾದ ಇಂದು ಗುರುವಿನ ಅತಿದೊಡ್ಡ ಸಂಚಾರವಾಗಲಿದೆ. ಈ ಗುರು ಸಂಚಾರವು ಎಲ್ಲಾ 12 ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ. ಆದರೆ 12ರಲ್ಲಿ 3 ರಾಶಿಚಕ್ರದವರಿಗೆ ಜನವರಿ-2027ರವರೆಗೆ ಹಣದ ಸುರಿಮಳೆಯಾಗಲಿದೆ. ಗುರು ಗ್ರಹವನ್ನು ಜ್ಞಾನ, ಸಂಪತ್ತು, ಶಿಕ್ಷಣ, ಅದೃಷ್ಟ ಮತ್ತು ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಮೂರು ರಾಶಿಯವರು ಈ ಸಮಯದಲ್ಲಿ ಆರ್ಥಿಕ ಭದ್ರತೆಯನ್ನು ಕಂಡುಕೊಳ್ಳುತ್ತಾರೆ.
ಈ ಸಮಯದಲ್ಲಿ ಗುರು ಚಲನೆ ಹೇಗಿರಲಿದೆ?
ಇಂದು ಗುರು ಗ್ರಹ ಕಟಕ ರಾಶಿಯನ್ನು ಬಿಟ್ಟು ಸಿಂಹ ರಾಶಿಯುನ್ನು ಪ್ರವೇಶಿಸಲಿದ್ದಾನೆ. ನಂತರ 13ನೇ ಡಿಸೆಂಬರ್ 2026ರಂದು ಸಿಂಹ ರಾಶಿ ಹಿಮ್ಮುಖವಾಗುತ್ತಾನೆ. ಇದಾದ ಬಳಿಕ 2027ನೇ ಜನವರಿ 25ರಂದು ಕಟಕ ರಾಶಿಗೆ ಹಿಮ್ಮುಖವಾಗುತ್ತಾನೆ. ಅಂದ್ರೆ ಸಿಂಹರಾಶಿಯಲ್ಲಿ ಗುರು ಮೂರು ತಿಂಗಳಿರುತ್ತಾನೆ. ಈ ಮೂರು ತಿಂಗಳು ಮೂರು ರಾಶಿಯವರಿಗೆ ಧನಾತ್ಮಕ ಜೊತೆ ಶೈಕ್ಷಣಿಕ ಲಾಭವನ್ನು ನೀಡಲಿದ್ದಾನೆ.
ಮೇಷ ರಾಶಿ: ವೃತ್ತಿ ಪ್ರಗತಿ, ಕೆಲಸಗಳು ಪುನಾರರಂಭ
ಗುರು ಸಂಚಾರದಿಂದ ಮೇಷ ರಾಶಿಯವರು ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಸಬಲರಾಗುತ್ತಾರೆ. ವೃತ್ತಿಯಲ್ಲಿ ಭದ್ರತೆಯಿಂದಾಗಿ ಹಲವು ಒತ್ತಡಗಳು ನಿವಾರಣೆಯಾಗಲಿದ್ದು, ಹೊಸ ಜವಾಬ್ದಾರಿಗಳು ನಿಮ್ಮದಾಗಲಿವೆ. ಹಾಗೆಯೇ ದೀರ್ಘಕಾಲದಿಂದ ಸ್ಥಗಿತಗೊಂಡು ಕೆಲಸದಲ್ಲಿ ಪ್ರಗತಿ ಸಾಧಿಸಲಿದೆ.
ಕಟಕ/ಕರ್ಕಾಟಕ ರಾಶಿ: ಆರ್ಥಿಕ ಪರಿಸ್ಥಿತಿ ಸುಧಾರಣೆ
ಈ ಮೂರು ತಿಂಗಳು ಕಟಕ ರಾಶಿಯವರಿಗೆ ಆರ್ಥಿಕ ವಿಷಯಗಳಲ್ಲಿ ನಿರ್ಣಯ ತೆಗೆದುಕೊಳ್ಳಲು ಸೂಕ್ತ ಸಮಯವಾಗಿದೆ. ವ್ಯವಹಾರಗಳಲ್ಲಿ ನಿಮ್ಮ ಪ್ರಯತ್ನಕ್ಕೆ ಸಕಾರಾತ್ಮಕ ಫಲಿತಾಂಶ ಸಿಗಲಿದೆ. ಆದಾಯ ಏರಿಕೆಯಾಲಿದ್ದು, ವೆಚ್ಚದ ಮೇಲೆ ಹಿಡಿತ ಕಾಪಾಡಿಕೊಳ್ಳಿ. ಹಾಗೆಯೇ ದೀರ್ಘಕಾಲದ ಆರ್ಥಿಕ ಸಮಸ್ಯೆಗಳಿಂದ ದೂರ ಬರುವಲ್ಲಿ ಗುರುವಿನ ಸಂಚಾರ ಸಹಾಯ ಮಾಡುತ್ತೆ.
ಧನು ರಾಶಿ: ಸಕಾರಾತ್ಮಕ ಫಲಿತಾಂಶಗಳು
ಈ ಮೂರು ತಿಂಗಳಲ್ಲಿ ಉದ್ಯೋಗ ಬದಲಾಯಿಸಲು ಯೋಚಿಸುವ ಜನರಿಗೆ ಒಳ್ಳೆಯ ಅವಕಾಶಗಳು ಬರಲಿವೆ. ಗುರು ಗ್ರಹವನ್ನು ಶಿಕ್ಷಣ, ಅದೃಷ್ಟ ಮತ್ತು ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿರೋ ವಿದ್ಯಾರ್ಥಿಗಳ ಶ್ರಮಕ್ಕೆ ಉತ್ತಮ ಫಲಿತಾಂಶ ಸಿಗಲಿದೆ. ಆದ್ರೆ ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮವನ್ನು ಮುಂದುರಿಸಬೇಕಾಗುತ್ತದೆ.
ಗುರು ಗ್ರಹದ ಈ ಸಂಚಾರ ಉದ್ಯೋಗ, ವ್ಯವಹಾರ ಮತ್ತು ಆರ್ಥಿಕ ವಿಷಯಗಳಲ್ಲಿ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಸಾಧ್ಯತೆಗಳಿವೆ. ಹುಲ್ಲುಕಡ್ಡಿ ಆಸರೆ ಹುಡುಕುತ್ತಿರೋರಿಗೆ ಮಹಾಆಶ್ರಯ ಲಭ್ಯವಾಗಲಿದೆ.
ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.






