Asianet Suvarna News Asianet Suvarna News

Astrology Tips: ಪಾರಿವಾಳಕ್ಕೆ ಇಂದೇ ಈ ಆಹಾರ ತಿನ್ನಿಸಿದ್ರೆ ಹಣದ ಹೊಳೆ ಹರಿಯೋದು ಗ್ಯಾರಂಟಿ

ಜೀವನದಲ್ಲಿ ಬರುವ ದುಃಖ, ಆರ್ಥಿಕ ಸಮಸ್ಯೆಗೆ ಗ್ರಹ ದೋಷ ಮುಖ್ಯ ಕಾರಣವಾಗುತ್ತದೆ. ಗ್ರಹವನ್ನು ಶಾಂತವಾಗಿಸಿದ್ರೆ ಸಮಸ್ಯೆ ಬಗೆಹರಿಯುತ್ತದೆ. ಕೆಲ ಕಷ್ಟಕ್ಕೆ ನಮ್ಮ ಸುತ್ತಮುತ್ತಲೇ ಸುಲಭ ಪರಿಹಾರವಿದೆ. ಪಾರಿವಾಳ ಕೂಡ ನಮ್ಮ ನೆಮ್ಮದಿ ಜೀವನಕ್ಕೆ ನೆರವಾಗುತ್ತೆ.

Jyotish Tips And Pigeon In Home Vastu
Author
First Published May 12, 2023, 1:09 PM IST

ಹಿಂದೂ ಧರ್ಮದಲ್ಲಿ ಕರ್ಮಕ್ಕೆ ಹೆಚ್ಚಿನ ಆದ್ಯತೆಯಿದೆ. ದೇವರ ಕೃಪೆಗೆ ಪಾತ್ರರಾಗಬೇಕು ಎಂದಾದ್ರೆ ನಮ್ಮ ಕೆಲಸವನ್ನು ನಾವು ಮಾಡ್ಬೇಕು. ಯಾವುದೇ ಫಲಾಫಲವನ್ನು ಅಪೇಕ್ಷಿಸದೆ ಕರ್ಮ ಮಾಡಿದ್ರೆ ದೇವರ ಕೃಪೆಗೆ ಪಾತ್ರರಾಗಬಹುದು ಎಂದು  ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ದೇವರ ಪೂಜೆ ಮಾಡುವುದು ಮಾತ್ರವಲ್ಲ ಪ್ರಕೃತಿ, ಪ್ರಾಣಿ, ಪಕ್ಷಿ ಎಲ್ಲರ ಸೇವೆಗೂ ಇಲ್ಲಿ ಮಹತ್ವ ಕೊಡಲಾಗಿದೆ. ದಾನಕ್ಕೂ ಇಲ್ಲಿ ಪ್ರಾಮುಖ್ಯತೆಯಿದೆ.

ಯಾವುದೇ ವ್ಯಕ್ತಿ, ಗ್ರಹದೋಷಕ್ಕೆ ಒಳಗಾಗಿದ್ದರೆ ಆತ ದಾನ ಮಾಡ್ಬೇಕು. ನಿರ್ಗತಿಕ ವ್ಯಕ್ತಿ ಅಥವಾ ಪ್ರಾಣಿ-ಪಕ್ಷಿಗಳಿಗೆ ಆಹಾರ (Food), ನೀರು ದಾನ ಮಾಡಬೇಕು. ಪ್ರಾಣಿ-ಪಕ್ಷಿಗಳಿಗೆ ಅಥವಾ ಭಿಕ್ಷುಕರಿಗೆ ಮತ್ತು ಅಂಗವಿಕಲರಿಗೆ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ದಾನ ಮಾಡಿದ್ರೆ ನೋವು ದೂರವಾಗುತ್ತದೆ. ನಿಮ್ಮೆಲ್ಲ ಸಮಸ್ಯೆಗೆ ಪರಿಹಾರ ಸಿಗುತ್ತದೆ. 

Astrology Tips : ಆರ್ಥಿಕ ಮುಗ್ಗಟ್ಟಿಗೆ ಗಣೇಶನಲ್ಲಿದೆ ಪರಿಹಾರ

ವಿವಿಧ ಗ್ರಹ (Planet) ಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಸಿಗಬೇಕೆಂದ್ರೆ ಗಿಳಿ, ಪಾರಿವಾಳ ಸೇರಿದಂತೆ ಪಕ್ಷಿಗಳಿಗೆ ಧಾನ್ಯಗಳನ್ನು ನೀಡಬೇಕು ಎಂದು ಸಲಹೆ ನೀಡಲಾಗುತ್ತದೆ. ಪಕ್ಷಿಗಳನ್ನು ರಾಹುವಿನ ಅಂಶಗಳು ಎಂದು ಪರಿಗಣಿಸಲಾಗುತ್ತದೆ. ರಾಹು ದೋಷವಿರುವವರು, ರಾಹು (Rahu) ವನ್ನು ಸಂತೃಪ್ತಿಗೊಳಿಸಲು ಪಕ್ಷಿಗಳಿಗೆ ಆಹಾರ ನೀಡಬೇಕು. ಮನೆ (House) ಯ ಟೆರೆಸ್ ಮೇಲೆ, ಅಲ್ಲಿ ಇಲ್ಲಿ ನೀವು ಸಾಕಷ್ಟು ಪಾರಿವಾಳಗಳನ್ನು ನೋಡ್ತೀರಿ. ಅನೇಕರ ಮನೆಯೊಳಗೆ ಪಾರಿವಾಳ ಗೂಡು ಕಟ್ಟಿರುತ್ತದೆ. ಶಾಸ್ತ್ರದಲ್ಲಿ ಪಾರಿವಾಳದ ಮಹತ್ವವನ್ನೂ ಹೇಳಲಾಗಿದೆ. ಪಾರಿವಾಳಕ್ಕೆ ಆಹಾರ ದಾನ ಮಾಡಿದ್ರೆ ಏನೆಲ್ಲ ಲಾಭ ಪಡೆಯಬಹುದು ಎಂಬುದರಿಂದ ಹಿಡಿದು ಪಾರಿವಾಳ ಮನೆಯಲ್ಲಿ ಗೂಡು ಕಟ್ಟಿದ್ರೆ ಶುಭವೇ ಎಂಬ ಪ್ರಶ್ನೆಗೂ ಉತ್ತರ ನೀಡಲಾಗಿದೆ.   

ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾರಿವಾಳಕ್ಕಿದೆ ಮಹತ್ವ : ಪುರಾಣಗಳ ಪ್ರಕಾರ, ಶಿವನು ಅಮರನಾಥದ ಗುಹೆಯಲ್ಲಿ, ತಾಯಿ ಪಾರ್ವತಿಗೆ ಅಮರವಾಗುವ ಉಪದೇಶ ನೀಡುತ್ತಿದ್ದನು. ಈ ಸಮಯದಲ್ಲಿ ಅಲ್ಲಿದ್ದ ಬಿಳಿಯ ಎರಡು ಪಾರಿವಾಳಗಳು ಕೂಡ ಈ ಉಪದೇಶವನ್ನು ಕೇಳಿ ಅಮರವಾದವು. ಆ ಎರಡೂ ಪಾರಿವಾಳಗಳು ಇಂದಿಗೂ ಅಮರನಾಥ ಗುಹೆಯಲ್ಲಿ ವಾಸಿಸುತ್ತಿವೆ ಎಂಬ ನಂಬಿಕೆಯಿದೆ. ಅಮರನಾಥ ಗುಹೆಗೆ ಹೋಗುವ ಭಕ್ತರು ಪಾರಿವಾಳದ ದರ್ಶನವನ್ನು ಪಡೆಯುತ್ತಾರೆ. ಇದೇ ಕಾರಣಕ್ಕೆ ಬಿಳಿ ಪಾರಿವಾಳಗಳನ್ನು ದೇವರಂತೆ ನೋಡಲಾಗುತ್ತದೆ. ಬಿಳಿ ಪಾರಿವಾಳ ಕಣ್ಣಿಗೆ ಬಿದ್ರೆ ಮಂಗಳಕರವೆಂದು ಪರಿಗಣಿಸಲಾಗಿದೆ.

ಮನೆಯಲ್ಲಿ ಪದೇ ಪದೇ ಹೀಗಾಗ್ತಿದ್ರೆ ಪಿತೃ ದೋಷವೇ ಕಾರಣ

ಶಾಂತಿ ಮತ್ತು ಪ್ರೀತಿಯ ಸಂಕೇತ ಪಾರಿವಾಳ : ಧರ್ಮಗ್ರಂಥಗಳಲ್ಲಿ ಪಾರಿವಾಳವನ್ನು ಕಾಮದೇವನ ಪತ್ನಿ ರತಿಯ ವಾಹನವೆಂದು ಪರಿಗಣಿಸಲಾಗಿದೆ. ಪಾರಿವಾಳಗಳು ಪ್ರೀತಿ ಮತ್ತು ಶಾಂತಿಯ ಸಂಕೇತ ಎಂದೂ ಹೇಳಲಾಗುತ್ತದೆ. ಪಾರಿವಾಳಕ್ಕೆ ವಿವಿಧ ರೀತಿಯ ಧಾನ್ಯಗಳನ್ನು ನೀಡುವುದ್ರಿಂದ ವಿವಿಧ ಗ್ರಹಗಳ ಅಶುಭ ದೋಷಗಳು ದೂರವಾಗುತ್ತವೆ ಎಂದು ನಂಬಲಾಗಿದೆ. 

ಯಾವ ದೋಷಕ್ಕೆ ಯಾವ ಪರಿಹಾರ : 

ವೈವಾಹಿಕ ಸಮಸ್ಯೆಗೆ ಪರಿಹಾರ (Family Issues) : ವೈವಾಹಿಕ ಜೀವನದಲ್ಲಿ ಯಾವುದೇ ಉದ್ವಿಗ್ನತೆ ಇದ್ದರೆ, ವಿವಾದಗಳು ನಡೆಯುತ್ತಿದ್ದರೆ, ಪಾರಿವಾಳಗಳಿಗೆ ಜೋಳವನ್ನು ತಿನ್ನಿಸಬೇಕು. ಹೀಗೆ ಮಾಡುವುದರಿಂದ ಪತಿ ಪತ್ನಿಯರ ನಡುವೆ ಪ್ರೀತಿ ಹೆಚ್ಚುತ್ತದೆ.

ಗ್ರಹ ದೋಷ : ಜಾತಕದಲ್ಲಿ ರಾಹು ಮತ್ತು ಕೇತುಗಳು ಅಶುಭ ಪರಿಣಾಮ ಕಂಡು ಬಂದ್ರೆ ಪಾರಿವಾಳಗಳಿಗೆ ರಾಗಿ ತಿನ್ನಬೇಕು. ಈ ಎರಡು ಗ್ರಹಗಳ ಅಶುಭ ಪರಿಣಾಮಗಳು ಇದ್ರಿಂದ ದೂರವಾಗುತ್ತವೆ. ಶುಭ ಫಲ ಪ್ರಾಪ್ತಿಯಾಗುತ್ತದೆ. 

ಹಣದ ಸಮಸ್ಯೆಗೆ ಈ ಆಹಾರ ನೀಡಿ (Financial Crisis) : ಆರ್ಥಿಕ ಬಿಕ್ಕಟ್ಟನ್ನು ಹೋಗಲಾಡಿಸಲು ಏಳು ವಿವಿಧ ಧಾನ್ಯಗಳನ್ನು ಪಾರಿವಾಳಕ್ಕೆ ನೀಡಬೇಕು. ಏಳು ಧಾನ್ಯಗಳು ಲಭ್ಯವಿಲ್ಲದಿದ್ದರೆ, ನಿಮಗೆ ಸಾಧ್ಯವಿದ್ದಷ್ಟು ಧಾನ್ಯಗಳನ್ನು ನೀವು ನೀಡಬಹುದು. ಹೀಗೆ ಮಾಡಿದ್ರೆ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. 
 

Follow Us:
Download App:
  • android
  • ios