ಮಾತು, ಮತಿ, ಮಂಥನ.. ಮಿಥುನ ರಾಶಿಯವರ ಐದು ಸಾಮಾನ್ಯ ಸ್ವಭಾವಗಳಿವು

ಮಿಥುನ ರಾಶಿಯವರನ್ನು ಸ್ನೇಹಿತರಾಗಿ ಪಡೆದಿದ್ದರೆ ಬೋರ್ ಆಗುವುದಿಲ್ಲ. ಏಕೆಂದರೆ ಅವರು ಸಖತ್ ಮಾತುಗಾರರು, ಸಾಮಾಜಿಕ ಜೀವಿಗಳು.. ಮಿಥುನ ರಾಶಿಯವರ ಸ್ವಭಾವ ನೋಡೋಣ.

Intriguing Gemini personality traits that you need to know skr

ಕುತೂಹಲ, ಬುದ್ಧಿವಂತಿಕೆ, ಮಾತುಗಾರಿಕೆ, ಸ್ನೇಹ... ಎಲ್ಲದರಲ್ಲೂ ಒಂದು ಕೈ ಮುಂದು ಇವರು. ಇವರಿಗೆ ಮಾತೆಂಬುದು ಉಸಿರಾಟದಷ್ಟೇ ಮುಖ್ಯ. ಸಂಭಾಷಣೆಯನ್ನು ಎಷ್ಟು ಬೇಕಾದರೂ ಎಳೆಯಬಲ್ಲರು. ಗಾಳಿಯ ಚಿಹ್ನೆಯಾದ ಮೇಷ ರಾಶಿಯವರ ಸಾಮಾನ್ಯ ಸ್ವಭಾವವೇನು? ಅವರ ವ್ಯಕ್ತಿತ್ವ ಹೇಗಿರುತ್ತದೆ ನೋಡೋಣ. 

1. ಕುತೂಹಲಿಗಳು(curious spirits)
ಮಿಥುನ ರಾಶಿಯವರು ಸ್ವಾಭಾವಿಕವಾಗಿ ಕುತೂಹಲದಿಂದ ಕೂಡಿರುತ್ತಾರೆ. ಸಂವಹನದ ಗ್ರಹವಾದ ಗುರು ಗ್ರಹ ಮಿಥುನಕ್ಕೆ ಬೆಂಬಲ ಹೊಂದಿರುವುದರಿಂದ ಅವರು ಯಾವುದೇ ರಾಶಿಚಕ್ರ ಚಿಹ್ನೆಗಳಿಗಿಂತ ವೇಗವಾಗಿ ಮಾಹಿತಿಯನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದ್ದಾರೆ. ನಿಮ್ಮ ಆಳವಾದ ರಹಸ್ಯವನ್ನು ನೀವು ಎಷ್ಟೇ ಮರೆ ಮಾಚಲು ಪ್ರಯತ್ನಿಸಿದರೂ, ಅವರು ಅದನ್ನು ಹೇಗಾದರೂ ನಿಮ್ಮಿಂದ ಹೊರ ಹಾಕಿಸುತ್ತಾರೆ. 

2. ಸಾಮಾಜಿಕ ಜೀವಿಗಳು(Social beings)
ಎದುರಿರುವವರು ಯಾರೇ ಆಗಲಿ, ಅವರೊಂದಿಗೆ ಸಂವಹನ ನಡೆಸುವ ಅವಕಾಶವನ್ನು ಇವರು ಎಂದಿಗೂ ಕಳೆದುಕೊಳ್ಳುವುದಿಲ್ಲ. ಬಹಳ ಉತ್ಸಾಹದಿಂದ ಮಾತಾಡುತ್ತಾರೆ. ತಮಾಷೆಯೂ ಇವರ ಮಾತಿನ ಭಾಗವಾಗಿರುತ್ತದೆ. ಹಾಸ್ಯಪ್ರಜ್ಞೆಯ ಕಾರಣದಿಂದ ಮಾತು ಆಸಕ್ತಿದಾಯಕವೆನಿಸುತ್ತದೆ. ಯಾವುದೇ ಸಾಮಾಜಿಕ ಕೂಟಗಳನ್ನು ಮಿಸ್ ಮಾಡಿಕೊಳ್ಳುವವರು ಇವರಲ್ಲ. ಮೋಜಿನ ಅನುಭವಗಳನ್ನು ಎಂದಿಗೂ ಮಿಸ್ ಮಾಡಿಕೊಳ್ಳುವವರಲ್ಲ. ಯಾವುದೇ, ಕಾರ್ಯಕ್ರಮ, ಪಾರ್ಟಿ ಎಂದರೂ ಎಲ್ಲರಿಗಿಂತ ಮೊದಲು ಹಾಜರಾಗುತ್ತಾರೆ. ಏಕೆಂದರೆ, ಜನರನ್ನು ಭೇಟಿ ಮಾಡುವುದು ಇವರಿಗೆ ಬಹಳ ಸಂತೋಷ ಕೊಡುತ್ತದೆ. ಹಾಗೆ ಜನರನ್ನು ಒಟ್ಟುಗೂಡಿಸುವ ಕೆಲಸಕ್ಕೂ ಮುಂದಾಳತ್ವ ವಹಿಸುತ್ತಾರೆ. ಹಳೆಯ ಸ್ನೇಹಿತರನ್ನು ಕಲೆ ಹಾಕುವುದರಲ್ಲಿ ಇವರು ನಿಸ್ಸೀಮರು. 

ಮಾಸ ಭವಿಷ್ಯ: ಜೂನ್‍ನಲ್ಲಿ ನಿಮ್ಮ ರಾಶಿಫಲ ಏನಿರಲಿದೆ? ಅದೃಷ್ಟದ ಸಾಥ್ ಯಾರಿಗಿದೆ?

3. ಹೊಂದಿಕೊಳ್ಳುವಿಕೆ(versatile souls)
ಮಿಥುನ ರಾಶಿಯವರು ಬಹುಮುಖಿ ಪ್ರತಿಭೆಗಳು. ಅವರು ಯಾವುದೇ ಕೋಣೆಯ ಶಕ್ತಿಗೆ ತ್ವರಿತವಾಗಿ ಹೊಂದಿಕೊಳ್ಳುತ್ತಾರೆ. ನೀರು ಶೇಖರಿಸಿದ ಪಾತ್ರೆಯ ಆಕಾರ ಹೊಂದುವಂತೆ, ಮಿಥುನ ರಾಶಿಯವರು ಹೋದ ಜಾಗಕ್ಕೆ ಹೊಂದಿಕೊಳ್ಳುತ್ತಾರೆ. ಇದು ಅವರಿಗೆ ಕಷ್ಟವೆನಿಸುವುದಿಲ್ಲ. ತಮ್ಮ ಕುಶಲತೆ, ಬುದ್ಧಿವಂತಿಕೆ, ತ್ವರಿತ ಬುದ್ಧಿಯಿಂದ ಜನರನ್ನು ಗೆಲ್ಲತ್ತಾರೆ. ಆದರೆ ಜನರೊಂದಿಗೆ ಸಂಪರ್ಕ ಸಾಧಿಸುವ ಅವರ ಉತ್ಸಾಹದಿಂದಾಗಿ ಗುಟ್ಟುಗಳು ಹೊರ ಬಂದುಬಿಡುತ್ತವೆ. ಹೊಂದಿಕೊಳ್ಳುವುದು ಇವರಿಗೆ ಕಷ್ಟವಲ್ಲದ್ದರಿಂದ ಕೆಲಸದ ಸ್ಥಳದಲ್ಲೇ ಆಗಲಿ, ಎಲ್ಲೇ ಆಗಲಿ, ಬೇಗ ಗುರುತಿಸಿಕೊಳ್ಳುತ್ತಾರೆ. ಹೆಚ್ಚು ಪಾಸಿಟಿವ್ ಆಗಿರುತ್ತಾರೆ. ಎಲ್ಲದರಲ್ಲೂ ಬೇಗನೆ ಯಶಸ್ಸನ್ನು ಸಾಧಿಸುತ್ತಾರೆ. 

4. ಹಠಾತ್ ಪ್ರವೃತ್ತಿ(impulsivity)
ಅವರ ನಿರಾತಂಕದ ವ್ಯಕ್ತಿತ್ವಕ್ಕೆ ಹಠಾತ್ ಪ್ರವೃತ್ತಿ ಜೊತೆಯಾಗುತ್ತದೆ. ಅವರು ತುಂಬಾ ಹೊಂದಿಕೊಳ್ಳುವವರಾಗಿರುವುದರಿಂದ, ಕ್ಷಣದಲ್ಲಿ ತಮ್ಮ ಮನಸ್ಸನ್ನು ಬದಲಾಯಿಸಬಲ್ಲರು. ಅವರು ಸುಲಭವಾಗಿ ಬೇಸರಗೊಳ್ಳುತ್ತಾರೆ. ಅಷ್ಟೇ ಸುಲಭವಾಗಿ ಸಂತೋಷವನ್ನೂ ಪಡುತ್ತಾರೆ. ಹಠಾತ್ ಪ್ರವೃತ್ತಿಯ ಕಾರಣದಿಂದ ಬೇಗನೆ ನಿರುತ್ಸಾಹಗೊಳ್ಳುವುದರಿಂದ ಅವರು ದೀರ್ಘಕಾಲದವರೆಗೆ ಒಂದೇ ವಿಷಯಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಿಲ್ಲ. ಹಠಾತ್ ಪ್ರವೃತ್ತಿಯು ಅವರನ್ನು ಹೆಚ್ಚಾಗಿ ಸಮಸ್ಯೆಗೆ ಸಿಲುಕುವಂತೆ ಮಾಡುತ್ತದೆ. ಆದರೆ, ಅಷ್ಟೇ ಬೇಗ ಒಳ್ಳೆಯ ಮೂಡ್‌ಗೆ ಕೂಡಾ ಹೊರಳಬಲ್ಲರು. 

ಸೃಜನಶೀಲರು, ಸ್ವತಂತ್ರಪ್ರಿಯರು, ಬುದ್ಧಿವಂತರು.. ಕುಂಭ ರಾಶಿಯ ಸ್ವಭಾವ ಬಲ್ಲಿರಾ?

5. ಬುದ್ದಿವಂತರು(intelligent)
ಪ್ರಪಂಚದ ಬಗ್ಗೆ ಅವರ ಜಿಜ್ಞಾಸೆ ಮತ್ತು ಕುತೂಹಲಕಾರಿ ವರ್ತನೆ ಅವರನ್ನು ಬುದ್ಧಿವಂತರನ್ನಾಗಿ ಮಾಡುತ್ತದೆ. ಅವರು ಹೊಸ ವಿಷಯಗಳನ್ನು ಕಲಿಯಲು ಇಷ್ಟ ಪಡುತ್ತಾರೆ. ಅವರ ರಕ್ಷಕ ಗ್ರಹವಾದ ಬುಧಕ್ಕೆ ಧನ್ಯವಾದಗಳು, ಅವರು ತಮ್ಮ ಮೌಖಿಕ ಕೌಶಲ್ಯಗಳನ್ನು ತಮ್ಮ ಅನುಕೂಲಕ್ಕೆ ಹೇಗೆ ಬಳಸಿಕೊಳ್ಳಬೇಕೆಂದು ತಿಳಿದಿದ್ದಾರೆ. ಯಾವಾಗ ಹೇಗೆ ವರ್ತಿಸಬೇಕು ಎಂಬುದು ಅವರಿಗೆ ತಿಳಿದಿದೆ. ಅವರು ಪರಿಪೂರ್ಣ ಸಂವಹನಕಾರರಾಗಿರುವುದರಿಂದ, ಸನ್ನಿವೇಶಗಳಿಂದ ಭಾವನಾತ್ಮಕವಾಗಿ ತಮ್ಮನ್ನು ಬೇರ್ಪಡಿಸಲು ಅವರಿಗೆ ಯಾವುದೇ ತೊಂದರೆಗಳಿಲ್ಲ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios