Asianet Suvarna News Asianet Suvarna News

Holi ದಿನ ಈ ವಸ್ತು ಅಗ್ನಿಗೆ ನೀಡಿ ಲಾಭ ನೋಡಿ

 ಹೋಳಿ ಹಬ್ಬದಂದು ಕಾಮ ದಹನಕ್ಕೆ ಮಹತ್ವದ ಸ್ಥಾನವಿದೆ. ಒಂದೊಂದು ಪ್ರದೇಶದಲ್ಲಿ ಇದನ್ನು ಒಂದೊಂದು ಹೆಸರಿನಿಂದ ಕರೆಯಲಾಗುತ್ತದೆ. ದುಷ್ಟಶಕ್ತಿಯನ್ನು ಸುಡುವ ದಿನವಾದ ಅಂದು ಅಗ್ನಿಗೆ ಕೆಲ ವಸ್ತುಗಳನ್ನು ಅರ್ಪಿಸಿ ನೀವು ಸುಖ, ಶಾಂತಿ ಕಾಣಬಹುದಾಗಿದೆ.
 

India Holika Dahan Remedies For Money And Happiness
Author
First Published Feb 27, 2023, 5:31 PM IST | Last Updated Feb 27, 2023, 5:31 PM IST

ಅಗ್ನಿಯೆಂದರೆ ಪವಿತ್ರ. ದೇವರಿಗೆ ಮಾಡುವ ಆರತಿ, ಹೋಮ, ಹವನಗಳಲ್ಲಿ ಕೂಡ ಅಗ್ನಿಗೆ ಪವಿತ್ರ ಸ್ಥಾನವಿದೆ. ಹೋಮ ಹವನಗಳಲ್ಲಿ ಅನೇಕ ರೀತಿಯ ಹವಿಸ್ಸನ್ನು ಅಗ್ನಿಗೆ ಆಹುತಿ ಹಾಕುತ್ತಾರೆ. ಹೋಳಿ ಹುಣ್ಣಿಮೆಯ ದಿನದಂದು ಕೂಡ ಹೋಲಿಕಾ ದಹನ ನಡೆಯುತ್ತದೆ. ಹೋಳಿ ಹಬ್ಬದ ದಿನ ಎಂದರೆ ಕೆಟ್ಟದ್ದನ್ನು ಸುಟ್ಟು ಹಾಕಿ ಒಳ್ಳೆಯದನ್ನು ಅಳವಡಿಸಿಕೊಳ್ಳುವ ಸಂಕೇತವಾಗಿದೆ.

ಈ ವರ್ಷ ಮಾರ್ಚ್ 8ರಂದು ಹೋಳಿ (Holi) ಹುಣ್ಣಿಮೆಯನ್ನು ಪ್ರತಿವರ್ಷದಂತೆ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಹೋಲಿಕಾ (Holika ) ಕಾಮದಹನದ ಜೊತೆಗೆ ಕೆಲವು ವಿಧಿ ವಿಧಾನಗಳನ್ನು ಮಾಡುವ ಮೂಲಕ ಜೀವನದಲ್ಲಿರುವ ಕಷ್ಟಗಳನ್ನು, ಸಮಸ್ಯೆಗಳನ್ನು ದೂರಮಾಡಿಕೊಳ್ಳಬಹುದು.  ಅಗ್ನಿಯಲ್ಲಿ ನಮ್ಮ ಸಮಸ್ಯೆಗಳು ಕೂಡ ಸುಟ್ಟು ಭಸ್ಮವಾಗುತ್ತದೆ ಎಂಬ ನಂಬಿಕೆಯಿದೆ.

ಹೋಳಿ ಹಬ್ಬ (Festival) ದಂದು ಇವುಗಳನ್ನು ಅಗ್ನಿಗೆ ಆಹುತಿ ಮಾಡಿ :

ದೀರ್ಘ ಆಯುಷ್ಯಕ್ಕಾಗಿ ಹೀಗೆ ಮಾಡಿ : ನೀವು ನಿಮ್ಮ ಆಯುಷ್ಯ ವೃದ್ಧಿಯಾಗಲು ಅಥವಾ ನೀವು ಪ್ರೀತಿಸುವ ವ್ಯಕ್ತಿಗಳ ಆಯುಷ್ಯ ವೃದ್ಧಿಗಾಗಿ ಅವರ ಎತ್ತರಕ್ಕೆ ಸಮನಾದ ಅಳತೆಯ ದಾರವನ್ನು ತೆಗೆದುಕೊಂಡು ಅದನ್ನು ಎರಡು ಅಥವಾ ಮೂರು ಬಾರಿ ಸಮಾನವಾಗಿ ಸುತ್ತಿ ಅದನ್ನು ಕತ್ತರಿಸಿ. ಹೀಗೆ ಕತ್ತರಿಸಿದ ದಾರವನ್ನು ಹೋಳಿ ಹುಣ್ಣಿಮೆಯ ದಿನದಂದು ಬೆಂಕಿಗೆ ಹಾಕಿ. ಇದನ್ನು ಮಾಡುವುದರಿಂದ ಎಲ್ಲ ದುಷ್ಟ ಶಕ್ತಿಗಳು ದೂರವಾಗುತ್ತದೆ ಮತ್ತು ಇದರಿಂದ ಆಯುಷ್ಯ ವೃದ್ಧಿಯಾಗುತ್ತದೆ.

Holi Remedy: ಕನಸುಗಳು ನನಸಾಗ್ಬೇಕಂದ್ರೆ ಹೋಳಿ ದಿನ ಹೀಗೆ ಮಾಡಿ..

ಶೀಘ್ರ ವಿವಾಹ ಯೋಗಕ್ಕಾಗಿ ಹೀಗೆ ಮಾಡಿ : ಕೆಲವೊಮ್ಮೆ ಮದುವೆಗೆ ಅನೇಕ ಅಡ್ಡಿ ಆತಂಕಗಳು ಉದ್ಭವವಾಗುತ್ತದೆ. ಯಾವುದೋ ಕ್ಷುಲ್ಲಕ ಕಾರಣಕ್ಕೆ ಮದುವೆ ಮುರಿದುಬೀಳುತ್ತದೆ. ಇಂತಹ ವಿಘ್ನಗಳು ದೂರವಾಗಲು ಹವನಕ್ಕೆ ಬಳಸುವ ಪದಾರ್ಥಗಳನ್ನು ತುಪ್ಪದಲ್ಲಿ ಬೆರೆಸಿ ಅಗ್ನಿಗೆ ಆಹುತಿ ಹಾಕಿ. ಇದರಿಂದ ಮದುವೆಯಲ್ಲಿನ ತೊಡಕುಗಳು ದೂರವಾಗಿ ಬೇಗ ಮದುವೆ ನಿಶ್ಚಯವಾಗುತ್ತದೆ.

ಹೀಗೆ ಮಾಡಿದ್ರೆ ವೈವಾಹಿಕ ಜೀವನ ಸುಖವಾಗಿರುತ್ತೆ :  ಮನೆಯಲ್ಲಿ ಪ್ರತಿನಿತ್ಯ ಜಗಳ ಮನಸ್ತಾಪಗಳು ಆಗುತ್ತಿದ್ದರೆ ಗಂಡ ಹೆಂಡತಿಯ ನಡುವಿನ ಸಂಬಂಧಕ್ಕೆ ಧಕ್ಕೆ ಬರುತ್ತದೆ. ಗಂಡ ಹೆಂಡತಿಯ ನಡುವೆ ಸಾಮರಸ್ಯ ಹೆಚ್ಚಲು 108 ಹತ್ತಿಯ ಬತ್ತಿಗಳನ್ನು ತುಪ್ಪದಲ್ಲಿ ನೆನೆಸಿ ಮತ್ತು ಅಗ್ನಿಗೆ ಪ್ರದಕ್ಷಿಣೆ ಹಾಕುತ್ತಾ ಬತ್ತಿಗಳನ್ನು ಬೆಂಕಿಗೆ ಹಾಕಿ. ಹೀಗೆ ಮಾಡುವುದರಿಂದ ದಾಂಪತ್ಯ ಜೀವನ ಸುಖಮಯವಾಗಿರುತ್ತೆ.

ಆರ್ಥಿಕ ಸಮಸ್ಯೆಗಳ ನಿವಾರಣೆ : ಆರ್ಥಿಕ ಸಮಸ್ಯೆಗಳಿಂದ ಕೆಲವೊಮ್ಮೆ ಯಾವ ಕೆಲಸವೂ ಸರಿಯಾಗಿ ಆಗುವದಿಲ್ಲ. ಸುಧಾರಿತ ಜೀವನ ಶೈಲಿಯಲ್ಲಿ ಆರ್ಥಿಕ ಸಮಸ್ಯೆಗಳು ತಲೆದೋರಿದರೆ ಜೀವನವೇ ಬೇಡ ಎನ್ನುವಷ್ಟು ಜಿಗುಪ್ಸೆ ಮೂಡಬಹುದು. ಆದ್ದರಿಂದ ಹೋಳಿ ಹುಣ್ಣಿಮೆಯ ದಿನದಂದು ಬತ್ತಾಸು (ಒಂದು ಬಗೆಯ ಸಿಹಿ), ಎರಡು ಲವಂಗ, ಒಂದು ವೀಳ್ಯದೆಲೆಯನ್ನು ತುಪ್ಪದಲ್ಲಿ ನೆನೆಸಿ ಹೋಳಿಯ ಅಗ್ನಿಗೆ ಹಾಕಿ. ಈ ಪದಾರ್ಥಗಳನ್ನು ಅಗ್ನಿಗೆ ಹಾಕುವುದರಿಂದ ನಿಮ್ಮ ಆರ್ಥಿಕ ಸಂಕಷ್ಟಗಳೆಲ್ಲ ದೂರವಾಗುತ್ತವೆ.

ಆರೋಗ್ಯವಾಗಿರಲು ಇದನ್ನು ಮಾಡಿ : ನಗರಗಳಲ್ಲಿ ಹೆಚ್ಚುತ್ತಿರುವ ಕಲ್ಮಶ, ವಿವಿಧ ರೀತಿಯ ವೈರಸ್ ನಿಂದಾಗಿ ಆರೋಗ್ಯ ಸಮಸ್ಯೆ ಸಾಮಾನ್ಯವಾಗಿದೆ. ಕುಟುಂಬದಲ್ಲಿ ಒಬ್ಬರ ಆರೋಗ್ಯ ಕೆಟ್ಟರೂ ಸಾಕು ಮಿಕ್ಕವರಿಗೂ ಅದು ವ್ಯಾಪಿಸುತ್ತದೆ. ಆದ್ದರಿಂದ ಮನೆಯಲ್ಲಿನ ಆರೋಗ್ಯ ಸಮಸ್ಯೆಗಳನ್ನು ದೂರಮಾಡಲು ಒಂದು ಮುಷ್ಟಿ ಸಾಸಿವೆ, ಒಂದು ಲವಂಗ, ಎಳ್ಳು, ಒಂದು ತೆಂಗಿನಕಾಯಿ, ಕಲ್ಲುಸಕ್ಕರೆಯನ್ನು ತೆಗೆದುಕೊಂಡು ರೋಗಿಯ ತಲೆಯ ಸುತ್ತ ಅದನ್ನು ತಿರುಗಿಸಿ ಅದನ್ನು ಅಗ್ನಿಗೆ ಆಹುತಿ ಹಾಕಿ. ಅಗ್ನಿಗೆ ಇವುಗಳನ್ನೆಲ್ಲ ಆಹುತಿ ಹಾಕಿದರೆ ರೋಗಗಳೆಲ್ಲ ಶೀಘ್ರ ಗುಣಮುಖವಾಗುತ್ತವೆ.

ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬರುವುದೇ? ಸಿಟ್ಟಲ್ಲಿ ಸಂಬಂಧ ಹಾಳು ಮಾಡ್ಕೊಳೋ ರಾಶಿಗಳಿವು..

ಇದರಿಂದ ಸುಖ ಸಮೃದ್ಧಿ ವೃದ್ಧಿಯಾಗುತ್ತದೆ :  ಹೋಳಿ ಹುಣ್ಣಿಮೆಯಂದು ವಿವಿಧ ಧಾನ್ಯಗಳನ್ನು ಆಹುತಿ ಹಾಕುವ ಸಂಪ್ರದಾಯ ಮೊದಲಿನಿಂದಲೂ ನಡೆದು ಬಂದಿದೆ. ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ನೆಲೆಸಲೆಂದು ಹೀಗೆ ಮಾಡಲಾಗುತ್ತದೆ. ನೀವು ಕೂಡ ಹೋಳಿ ಹುಣ್ಣಿಮೆಯ ದಿನ ಬೇಳೆ, ಅಕ್ಕಿ, ಗೋಧಿ, ಜೋಳವನ್ನು ಅಗ್ನಿಗೆ ಹಾಕುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ಹೆಚ್ಚುತ್ತದೆ.
 

Latest Videos
Follow Us:
Download App:
  • android
  • ios