ಅಮಾವಾಸ್ಯೆ ದಿನ ಈ ವಸ್ತುಗಳನ್ನು ಕೊಳ್ಳೋದು ಅಶುಭ!
ಅಮಾವಾಸ್ಯೆಯ ದಿನ ಈ ವಸ್ತುಗಳನ್ನು ಕೊಳ್ಳೋದ್ರಿಂದ ನಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತೆ. ಅವು ಮನೆಗೆ ಅಶುಭ ತರುತ್ತವೆ.
ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತಿಯೊಂದು ದಿನಾಂಕ ಮತ್ತು ಘಟನೆಯೂ ಧಾರ್ಮಿಕ ಪ್ರಾಮುಖ್ಯತೆಯನ್ನು ಪೂರೈಸುವ ಯಾವುದಕ್ಕಾದರೂ ಸಂಬಂಧ ಹೊಂದಿರುತ್ತದೆ. ಅಂತೆಯೇ, ಹಿಂದೂ ಧರ್ಮಗ್ರಂಥಗಳಲ್ಲಿ ಚಂದ್ರ(Moon)ನ ವಿವಿಧ ಹಂತಗಳಾದ ಅಮವಾಸ್ಯೆ, ಪೂರ್ಣಿಮಾ, ದ್ವಾದಶಿ, ಏಕಾದಶಿ ಮತ್ತು ತ್ರಯೋದಶಿಗಳ ಉಲ್ಲೇಖವನ್ನು ಸಹ ಕಾಣಬಹುದು. ಇವುಗಳಿಗೆ ಸಾಕಷ್ಟು ಪ್ರಾಮುಖ್ಯತೆ ಇರುತ್ತದೆ. ಅಮಾವಾಸ್ಯೆ(New Moon Day)ಯನ್ನು ಪಿತೃಗಳಿಗಾಗಿ ಮೀಸಲಿಡಲಾಗಿದೆ. ಹಾಗಾಗಿ ಈ ದಿನ ತನ್ನದೇ ಆದ ನಿಯಮಗಳು ಮತ್ತು ನಿಬಂಧನೆಗಳನ್ನು ಹೊಂದಿದೆ. ಅವುಗಳಲ್ಲೊಂದೆಂದರೆ ಯಾವುದೇ ಅಹಿತಕರ ಘಟನೆಯನ್ನು ತಡೆಯಲು ಅಮವಾಸ್ಯೆಯ ಸಮಯದಲ್ಲಿ ನೀವು ಕೆಲ ವಸ್ತುಗಳ ಖರೀದಿಸುವುದನ್ನು ತಪ್ಪಿಸಬೇಕಾಗುತ್ತದೆ. ಜೂನ್ 28ರಂದು ಆಷಾಢ ಅಮಾವಾಸ್ಯೆ. ಈ ದಿನ ನೀವು ಖರೀದಿ ಮಾಡುವಾಗ ಎಚ್ಚರವಾಗಿರಿ.
ಪೊರಕೆ(broom)
ಅಮಾವಾಸ್ಯೆಯನ್ನು 'ಪಿತೃ'ಗಳಿಗೆ ಮೀಸಲಾಗಿರುವ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಜನರು ವಿಶೇಷವಾಗಿ 'ಶನಿ ದೇವ'ನನ್ನು ಪೂಜಿಸುತ್ತಾರೆ. ಧರ್ಮಗ್ರಂಥಗಳ ಪ್ರಕಾರ, ಪೊರಕೆಯು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ. ಅಮಾವಾಸ್ಯೆಯ ದಿನದಂದು ಪೊರಕೆಯನ್ನು ಖರೀದಿಸುವುದರಿಂದ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ, ಇದು ಒಳಬರುವ ಹಣವನ್ನು ಮತ್ತಷ್ಟು ನಿಲ್ಲಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ ಮತ್ತು ಆರೋಗ್ಯದ ವಿಷಯದಲ್ಲಿ ಹೆಚ್ಚಿದ ಖರ್ಚುಗಳಿಗೆ ಕಾರಣವಾಗಬಹುದು. ನಿಮ್ಮ ಮನೆಗೆ ಸರಿಯಾದ ಹಣದ ಹರಿವನ್ನು ಕಾಪಾಡಿಕೊಳ್ಳಲು ಮತ್ತು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು, ಅಮಾವಾಸ್ಯೆಯಂದು ಪೊರಕೆ ಖರೀದಿಸಬೇಡಿ.
ನಿಮ್ಮ ಮನೆಯಲ್ಲಿ ರಾಧಾ-ಕೃಷ್ಣನ ಫೋಟೋ ಸರಿಯಾದ ಜಾಗದಲ್ಲಿದ್ಯಾ?
ಮದ್ಯ(Alcohol)
ಅಮಾವಾಸ್ಯೆ ಮತ್ತು ಪೂರ್ಣಿಮಾ ಎರಡೂ ಪಿತೃಗಳ ಮತ್ತು ದೇವರ ಕೆಲಸಕ್ಕೆ ಸೂಕ್ತವಾಗಿವೆ. ಈ ಸಮಯದಲ್ಲಿ ಮದ್ಯವನ್ನು ಖರೀದಿಸುವುದು ಮತ್ತು ಸೇವಿಸುವುದನ್ನು ತಡೆಯಲು ಧರ್ಮಗ್ರಂಥಗಳು ಶಿಫಾರಸು ಮಾಡುತ್ತವೆ. ಅಮಾವಾಸ್ಯೆಯು ಶನಿ ದೇವರಿಗೆ ಸಂಬಂಧಿಸಿರುವುದರಿಂದ, ಯಾವುದೇ ರೀತಿಯ ಮದ್ಯದ ಸೇವನೆಯು ನಕಾರಾತ್ಮಕ ಶಕ್ತಿಯನ್ನು ತರುತ್ತದೆ. ಅದು ದೀರ್ಘ ಕಾಲದವರೆಗೆ ಸಕ್ರಿಯವಾಗಿರುತ್ತದೆ.
ಮಾಂಸ(Meet)
ಮದ್ಯದಂತೆಯೇ, ಅಮಾವಾಸ್ಯೆಯಂದು ಮಾಂಸವನ್ನು ಖರೀದಿಸುವುದು ಮತ್ತು ಸೇವಿಸುವುದು ಕೂಡಾ ಅಶುಭ. ಅಮಾವಾಸ್ಯೆಯ ಸಮಯದಲ್ಲಿ ಯಾವುದೇ ರೀತಿಯ ಮಾಂಸಾಹಾರಿ ಖಾದ್ಯವನ್ನು ಸವಿಯುವುದು ನಿಮ್ಮ ಕುಂಡಲಿಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಹೆಚ್ಚಿಸುತ್ತದೆ. ಲಾಲ್ ಕಿತಾಬ್ ಪ್ರಕಾರ, ಈ ದಿನದಲ್ಲಿ ಮಾಂಸಾಹಾರಿ ಆಹಾರ ಸೇವಿಸುವುದರಿಂದ ಶನಿಯಿಂದ ಉಂಟಾಗುವ ತೊಂದರೆಗಳು ಹೆಚ್ಚಾಗುತ್ತವೆ.
ಗೋಧಿ(Wheat)
ಈ ಸಮಯದಲ್ಲಿ ಗೋಧಿ ಧಾನ್ಯ ಮತ್ತು ಹಿಟ್ಟಿನಂತಹ ಆಹಾರ ಪದಾರ್ಥಗಳನ್ನು ತಪ್ಪಿಸಬೇಕು. ವಿಶೇಷವಾಗಿ ಭಾದ್ರಪದ ಮಾಸದ ಅಮಾವಾಸ್ಯೆಯ ಸಮಯದಲ್ಲಿ ನೀವು ಗೋಧಿ ಖರೀದಿಸಕೂಡದು. ಅದು ಅಶುಭ ಪರಿಣಾಮ ತರುತ್ತದೆ ಎನ್ನಲಾಗಿದೆ.
ಎಣ್ಣೆ(oil)
ಅಮಾವಾಸ್ಯೆಯಂದು ತಲೆಗೆ ಎಣ್ಣೆ ಹಚ್ಚುವುದನ್ನು ಸಹ ತಪ್ಪಿಸಬೇಕು. ಅದೇ ರೀತಿ ಸಂಕ್ರಾಂತಿಯ ಸಮಯದಲ್ಲಿ ಎಣ್ಣೆಯನ್ನು ಹಚ್ಚುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಇದರ ಬದಲಾಗಿ, ಈ ದಿನದಲ್ಲಿ ತೈಲ ದಾನ ಮಾಡುವುದು ನಿಮಗೆ ಪ್ರಯೋಜನಕಾರಿಯಾಗಿರುತ್ತದೆ. ಇದು ಶನಿಯೊಂದಿಗೆ ಸಂಪರ್ಕ ಹೊಂದಿದೆ ಮತ್ತು ನಿಮ್ಮ ಕುಂಡಲಿಯಿಂದ ಶನಿ ದೋಷ ತೊಡೆದುಹಾಕಲು ಸಹಾಯ ಮಾಡುತ್ತದೆ. ಅಮಾವಾಸ್ಯೆಯು ಪಿತೃಗಳನ್ನು ಗೌರವಿಸುವ ದಿನವೆಂದು ಪರಿಗಣಿಸಲ್ಪಟ್ಟಿರುವುದರಿಂದ, ಯಾವುದೇ ರೀತಿಯ ಅಲಂಕಾರವನ್ನು ತಪ್ಪಿಸಬೇಕು.
ಮೊಟ್ಟೆ ಒಡೆದು ಎರಡು ಹಳದಿ ಭಾಗ ಸಿಕ್ಕರೆ ಅವಳಿ-ಜವಳಿ ಮಕ್ಕಳಾಗುತ್ತಂತೆ !
ಪೂಜಾ ಸಂಬಂಧಿತ ವಸ್ತುಗಳು(Pooja articles)
ಅಮಾವಾಸ್ಯೆಯ ಸಮಯ ಪಿತೃ ಕರ್ಮಕ್ಕೆ ಸೂಕ್ತವಾಗಿದೆ. ಅದಕ್ಕಾಗಿಯೇ ಈ ದಿನದಂದು ನೀವು ಪೂಜೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಶಾಸ್ತ್ರಗಳಲ್ಲಿ ಶಿಫಾರಸು ಮಾಡಲಾಗಿದೆ. ಅಗರಬತ್ತಿಯಾಗಿರಲಿ, ಹೂವುಗಳಿರಲಿ, ಅಥವಾ ವಿಗ್ರಹಗಳಿಗೆ ಬಟ್ಟೆಯಾಗಿರಲಿ, ನೀವು ಈ ರೀತಿಯ ಯಾವುದನ್ನೂ ಖರೀದಿಸಬಾರದು.
ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.