ಕೃಷ್ಣನ ಮನದರಸಿ ರಾಧೆಯು ಸಾಕ್ಷಾತ್ ಲಕ್ಷ್ಮೀ ಸ್ವರೂಪ. ಕೃಷ್ಣ ಜನ್ಮಾಷ್ಟಮಿಯ ನಂತರ ಭಾದ್ರಪದ ಮಾಸದ ಶುಕ್ಲಪಕ್ಷದ ಅಷ್ಟಮಿಯಂದು ರಾಧಾಷ್ಟಮಿಯಂದು ಆಚರಿಸಲಾಗುತ್ತದೆ. ಈ ಬಾರಿ ಇದೇ ಆಗಸ್ಟ್ 26 ಬುಧವಾರ ರಾಧಾಷ್ಟಮಿಯಾಗಿದೆ. ಹಾಗಾಗಿ ಈ ದಿನ ರಾಧೆಯನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಿದಲ್ಲಿ ಸಕಲ ಸಂಕಷ್ಟಗಳು ನಿವಾರಣೆಯಾಗುವುದಲ್ಲದೆ, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯನ್ನು ಕಾಣಬಹುದಾಗಿದೆ.

ರಾಧೆಯು ಲಕ್ಷ್ಮೀಯ ಸ್ವರೂಪವಾದ ಕಾರಣ, ಸಂಪತ್ತಿನ ಅಧಿದೇವತೆಯನ್ನು ಭಕ್ತಿಯಿಂದ ಪೂಜಿಸಿದರೆ ಸಂಪತ್ ಸಮೃದ್ಧಿಯನ್ನು ನೀಡುತ್ತಾಳೆ. ಧನ ಸಂಪತ್ತು, ಅಷ್ಟೈಶ್ವರ್ಯ, ಸಮೃದ್ಧಿಗಾಗಿ ರಾಧಾಷ್ಟಮಿಯಂದು ರಾಧೆಯನ್ನು ಪ್ರಸನ್ನಗೊಳಿಸಲು ಕೆಲವು ನಿಯಮಗಳನ್ನು ತಿಳಿಸಲಾಗಿದೆ. ಅವು ಯಾವುವೆಂದು ನೋಡೋಣ..ರಾಧಾ ಅಷ್ಟಮಿಯಂದು ಹೀಗೆ ಮಾಡಬೇಕು
ರಾಧಾಷ್ಟಮಿಯಂದು ವಿಶೇಷ ಪೂಜೆ ಮತ್ತು ವ್ರತವನ್ನು ಕೈಗೊಳ್ಳಬಹುದು. ಪ್ರಾತಃಕಾಲದಲ್ಲಿ ಶುದ್ಧರಾಗಿ ಮೊದಲು ರಾಧೆದೇವಿಗೆ ಪಂಚಾಮೃತ ಅಭಿಷೇಕ ಮಾಡಬೇಕು. ನಂತರ ಶೃಂಗಾರವನ್ನು ಮಾಡಿ ರಾಧೆಯನ್ನು ಸ್ಥಾಪಿಸಿ. ಧೂಪ ದೀಪ, ಪುಷ್ಪಗಳಿಂದ ಪೂಜಿಸಿ ಆರತಿ ಮಾಡಬೇಕು ನಂತರ ನೈವೇದ್ಯವನ್ನು ಸಮರ್ಪಿಸಬೇಕು. ವ್ರತ ಮಾಡುವವರು ಅಂದು ಉಪವಾಸವಿದ್ದರೆ ಉತ್ತಮ.

ಇದನ್ನು ಓದಿ: ಇದು ಮಹಿಳೆಯರಿಗೆ ಮಾತ್ರ, ಪ್ರಣಯಕ್ಕೆ ಇಲ್ಲಿವೆ ಜ್ಯೋತಿಷ್ಯ ಟಿಪ್ಸ್!

ಧನಪ್ರಾಪ್ತಿಗೆ ಸಪ್ತಾಕ್ಷರ ರಾಧಾ ಮಂತ್ರ
ರಾಧಾಷ್ಟಮಿಯಂದು ಪಾತ್ರಃಕಾಲದಲ್ಲಿ ಎದ್ದು ರಾಧೆಯನ್ನು ಪೂಜಿಸಿ ನಂತರ ಧನಪ್ರಾಪ್ತಿಗೆ ರಾಧಾ ಸಪ್ತಾಕ್ಷರ ಮಂತ್ರವನ್ನು ಪಠಿಸಬೇಕು. ಇದನ್ನು ಪಠಿಸುವುದು ಶುಭದಾಯಕ ಮತ್ತು ಧನಸಂಪತ್ತನ್ನು ವೃದ್ಧಿಸುವ ಮಂತ್ರ ಇದಾಗಿದೆ. ಗ್ರಂಥಗಳಲ್ಲಿ ಉಲ್ಲೇಖಿಸಿದಂತೆ ಒಂದೂಕಾಲು ಲಕ್ಷ ಬಾರಿ ಈ ಮಂತ್ರವನ್ನು ಪಠಿಸಿದಲ್ಲಿ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳೆಲ್ಲ ದೂರವಾಗುವುದಲ್ಲದೆ, ಮನೆಯಲ್ಲಿ ನೆಮ್ಮದಿ ಮತ್ತು ಸಂಪತ್ತು ನೆಲೆಸುತ್ತದೆ.

ಬೀಜ ಮಂತ್ರದಿಂದ ಧನವೃದ್ಧಿ
ರಾಧಾಷ್ಟಮಿಯಂದು ಬೀಜಮಂತ್ರವನ್ನು ಜಪಿಸುವುದರಿಂದ ಧನವೃದ್ಧಿಯಾಗುತ್ತದೆ. ಕುಬೇರ ಸಹಿತ ಲಕ್ಷ್ಮೀ ದೇವಿಯ ಆರಾಧನೆಯನ್ನು ರಾಧಾಷ್ಟಮಿಯಂದು ಮಾಡಿದರೆ ಉತ್ತಮ. ರಾಧಾಷ್ಟಮಿಯಿಂದ ಹದಿನಾರು ದಿನಗಳ ಕಾಲ ಒಂದು ಹೊತ್ತು ಮಾತ್ರ ಭೋಜನ ಮಾಡಬೇಕು. ಸಾಧ್ಯವಾಗದೇ ಇದ್ದವರು ಉಪ್ಪನ್ನು ತ್ಯಜಿಸಬೇಕು. ಜೊತೆಗೆ ಕುಬೇರ ಮತ್ತು ಲಕ್ಷ್ಮೀ ಮಂತ್ರವನ್ನು ಜಪಿಸಬೇಕು. ಓಂ ಹ್ರೀಂ ಶ್ರೀಂ ಲಕ್ಷ್ಮೀಭಯೋ ನಮಃ ಎಂಬ ಲಕ್ಷ್ಮೀ ಬೀಜಮಂತ್ರವನ್ನು ಜಪಿಸುವುದರಿಂದ ಧನಸಮೃದ್ಧಿ ಲಭಿಸುತ್ತದೆ.

ನೈವೇದ್ಯಕ್ಕೆ ಪಾಯಸ
ರಾಧಾ ಅಷ್ಟಮಿಯಂದು ರಾಧೆಯನ್ನು ಒಲಿಸಿಕೊಳ್ಳಲು ಪಾಯಸ ಅಥವಾ ಕೀರನ್ನು ಮಾಡಿ ನೈವೇದ್ಯ ಮಾಡಿದಲ್ಲಿ ರಾಧೆಯ ಕೃಪೆ ನಿಮ್ಮಮೇಲಾಗುತ್ತದೆ. ಜೇನುತುಪ್ಪ, ಸಕ್ಕರೆ ಸೇರಿಸಿ ಪಾಯಸ ಮಾಡಿ ರಾಧಾ ಸಹಿತ ಕೃಷ್ಣನಿಗೆ ನೇವೇದ್ಯ ಮಾಡಿದರೆ ಲಕ್ಷ್ಮೀ ಕೃಪೆ ಲಭಿಸುತ್ತದೆ.

ಇದನ್ನು ಓದಿ: ಗಣೇಶ ಚತುರ್ಥಿಯಲ್ಲಿ ಈ ರಾಶಿಯವರಿಗೆ ಇದೆ ಲಾಭ..!

ರಾಧಾ ದೇವಿಯ ಕಥೆಯನ್ನು ಪಠಣ
ರಾಧಾಷ್ಟಮಿಯಂದು ರಾಧಾ ದೇವಿಯ ಕಥೆಯ ಪಠಿಸುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗಿ ಸುಖ ಮತ್ತು ಶಾಂತಿ ಲಭಿಸುತ್ತದೆ.

ಅಷ್ಟಾಕ್ಷರಿ ರಾಧಾ ಮಂತ್ರ
ದೇವಿ ರಾಧೆಯ ಸಿದ್ಧ ಅಷ್ಟಾಕ್ಷರಿ ಮಂತ್ರವನ್ನು ಪಠಿಸುವುದರಿಂದ ಮನೋಕಾಮನೆಗಳೆಲ್ಲ ಪೂರ್ಣವಾಗುತ್ತದೆ ಎಂಬ ನಂಬಿಕೆ ಇದೆ. ಈ ಮಂತ್ರವನ್ನು ರಾಧಾಷ್ಟಮಿಯಂದು ಆರಂಭಿಸಿ ಹದಿನಾರು ಲಕ್ಷ ಜಪವಾಗುವವರೆಗೆ ಪಠಿಸಬೇಕು. ಮಂತ್ರ ಪಠಿಸಿ ಮುಗಿದ ನಂತರ ಹೋಮ ಮಾಡಿ ಕೀರನ್ನು ಸಮರ್ಪಿಸಬೇಕು. ಇದೊಂದು ಸರ್ವಸಿದ್ಧಿ ಕಾರಕ ಮಂತ್ರವಾಗಿದ್ದು, ಇದನ್ನು ಪಠಿಸುವುದರಿಂದ ಸಕಲ ಇಷ್ಟಾರ್ಥಗಳು ಪೂರ್ಣವಾಗುತ್ತವೆ.

ಇದನ್ನು ಓದಿ: ಹಲ್ಲಿನ ಮಧ್ಯೆ ಅಕ್ಕಿಕಾಳಿನಷ್ಟು ಜಾಗ ಬಿಟ್ಟಿದ್ದರೆ ಏನು ಅರ್ಥ ಅಂತ ಗೊತ್ತಾ..!?

ಪುರಾಣಗಳ ಪ್ರಕಾರ
ಸ್ಕಂದಪುರಾಣದ ಪ್ರಕಾರ ರಾಧೆಯೇ ಶ್ರೀಕೃಷ್ಮನ ಆತ್ಮ. ಹಾಗಾಗಿ ರಾಧಾರಮಣ ಎಂದು ಸಹ ಕರೆಯುತ್ತಾರೆ. ರಾಧೆಯನ್ನು ಭಕ್ತಿಯಿಂದ ಆರಾಧಿಸಿದಲ್ಲಿ ಕೃಷ್ಣನು ಒಲಿಯುತ್ತಾನೆ. 

ಪದ್ಮಪುರಾಣದ ಪ್ರಕಾರ ಪರಮಾನಂದದ ಅನುಭವ ಪಡೆಯಲು ರಾಧಾಕೃಷ್ಣ ಸ್ವರೂಪವನ್ನು ಆರಾಧಿಸಬೇಕು. ಜೀವನದಲ್ಲಿ ಮುಕ್ತಿಯನ್ನು ಕಾಣಲು ರಾಧಾ-ಕೃಷ್ಣನ ಸ್ಮರಣೆಯಿಂದ ಸಾಧ್ಯವೆಂದು ಇಲ್ಲಿ ಹೇಳಲಾಗಿದೆ.

ನಾರದ ಪುರಾಣದ ಪ್ರಕಾರ ರಾಧಾಷ್ಣಮಿಯಂದು ವ್ರತವನ್ನು ಮಾಡಿದವರ ಮನೋಕಾಮನೆಗಳೆಲ್ಲ ಪೂರ್ಣವಾಗುವುದಾಗಿ ಹೇಳಲಾಗಿದೆ.