Asianet Suvarna News Asianet Suvarna News

Gautam buddha: ಬದುಕಿನಲ್ಲಿ ಈ ತಪ್ಪುಗಳನ್ನೆಂದೂ ಮಾಡಬೇಡಿ, ಸಂತೋಷ ಕಳೆದುಕೊಳ್ಳುತ್ತೀರಿ!

ಗೌತಮ ಬುದ್ಧ ಯಾವಾಗಲೂ ಒಳ್ಳೆಯ ಕಾರ್ಯಗಳನ್ನು ಮಾಡಿ ಸಂತೋಷವಾಗಿರಲು ಸಲಹೆ ನೀಡುತ್ತಾನೆ. ಯಾವ ತಪ್ಪುಗಳಿಂದ ವ್ಯಕ್ತಿಯ ಜೀವನ ಹಾಳಾಗುತ್ತದೆ ಎಂಬುದನ್ನು ತಿಳಿಸಿರುವ ಅವನು, ಆ ಕಾರ್ಯಗಳಿಂದ ದೂರವಿರಲು ಸಲಹೆ ನೀಡಿದ್ದಾನೆ. 

If you want to be happy then repent from these things says Gautam Buddha skr
Author
First Published Apr 5, 2023, 12:47 PM IST | Last Updated Apr 5, 2023, 12:47 PM IST

ಬೌದ್ಧ ಧರ್ಮದ ಸಂಸ್ಥಾಪಕ ಮಹಾತ್ಮ ಗೌತಮ ಬುದ್ಧರು ತಮ್ಮ ಜೀವನದುದ್ದಕ್ಕೂ ಜನರಿಗೆ ಅಹಿಂಸೆ ಮತ್ತು ಸಹಾನುಭೂತಿಯನ್ನು ಕಲಿಸಿದರು. ಅವರು ನೀಡಿದ ಬೋಧನೆಗಳು ಮತ್ತು ಆಲೋಚನೆಗಳೊಂದಿಗೆ, ಒಬ್ಬ ವ್ಯಕ್ತಿಯು ಯಶಸ್ವಿ ಜೀವನದ ಕಡೆಗೆ ಸಾಗಲು ಸಾಧ್ಯವಾಗುತ್ತದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಬುದ್ಧನ ಅನುಯಾಯಿಗಳಿದ್ದಾರೆ.

ಗೌತಮ ಬುದ್ಧನು ಜೀವನದ ಸಂತೋಷವನ್ನು ಹಾಳು ಮಾಡುವ ತಪ್ಪುಗಳ ಬಗ್ಗೆ ಹೇಳಿದ್ದಾನೆ. ಆ ತಪ್ಪುಗಳು ವ್ಯಕ್ತಿಯ ಸಂತೋಷ ಹಾಳುಗೆಡುವುತ್ತವೆ. ನೀವೇನಾದರೂ ಇಂಥ ತಪ್ಪುಗಳನ್ನು ಮಾಡುತ್ತಿದ್ದರೆ ಕೂಡಲೇ ನಿಲ್ಲಿಸಿ. ಆ ತಪ್ಪುಗಳು ಯಾವೆಲ್ಲ ನೋಡೋಣ. 

ಅಗತ್ಯವಿರುವವರಿಗೆ ಸಲಹೆ ಮತ್ತು ಜ್ಞಾನವನ್ನು ನೀಡಿ
ಅನೇಕ ಬಾರಿ ನಾವು ಇತರರ ದೃಷ್ಟಿಯಲ್ಲಿ ಬುದ್ಧಿವಂತರಾಗಿ ತೋರಿಸಲು ಸಲಹೆ ನೀಡಲು ಪ್ರಾರಂಭಿಸುತ್ತೇವೆ. ಎದುರಿಗಿರುವ ವ್ಯಕ್ತಿಗೆ ನಮ್ಮ ಸಲಹೆ ಬೇಕೋ ಬೇಡವೋ ಎಂದು ಯೋಚಿಸುವುದೇ ಇಲ್ಲ. ಆಗ ನಾವು ಬುದ್ಧಿವಂತರ ಬದಲಿಗೆ ಮೂರ್ಖರು ಎಂದು ಸಾಬೀತುಪಡಿಸುತ್ತಿರುತ್ತೇವೆ. 
ಸಲಹೆ ನೀಡುವವರಲ್ಲಿ ಎರಡು ವಿಧ. ಒಬ್ಬರು ದೊಡ್ಡ ದೊಡ್ಡ ಮಾತುಗಳನ್ನಾಡುವವರು- ಆದರೆ ಅವರ ಮಾತು ಎದುರಿಗಿರುವವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮತ್ತೊಂದೆಡೆ, ಒಂದೇ ಒಂದು ಪದವನ್ನು ಹೇಳಿದರೆ ಜನರ ಹೃದಯ ಕಂಪಿಸುವಂಥ ಸ್ಟ್ರಾಂಗ್ ಸಂದೇಶ ರವಾನಿಸುವವರೂ ಇದ್ದಾರೆ. ಅದಕ್ಕಾಗಿಯೇ ಜ್ಞಾನವನ್ನು ನೀಡುವ ಮೊದಲು ನೀವು ನಿಮ್ಮ ಮಾತುಗಳನ್ನು ಅಮೂಲ್ಯವಾಗಿಸಬೇಕು.

Evil Zodiac Signs: ಅತ್ಯಂತ ದುಷ್ಟ ರಾಶಿಗಳಿವು.. ಯಾರಿಗಾದರೂ ಅಪಾಯ ಮಾಡಲು ಹಿಂಜರಿಯದವರು

ಒಮ್ಮೆ ಬುದ್ಧನು ದಾರಿಯಲ್ಲಿ ಹೋಗುತ್ತಿದ್ದಾಗ ಒಬ್ಬ ಸನ್ಯಾಸಿ ಅವನನ್ನು ಕಂಡು ಅವನ ಮಹಿಮೆಯಿಂದ ಆಕರ್ಷಿತನಾದನು. ಆ ವ್ಯಕ್ತಿ ಬುದ್ಧನಿಗೆ, 'ಮುನಿವರ್ಯ ನೀವು ದೇವರೇ?' ಎಂದು ಕೇಳಿದನು.

'ಇಲ್ಲ, ನಾನು ನಿಮ್ಮಂತೆಯೇ ಸರಳ ಮನುಷ್ಯ. ಆದರೆ ವ್ಯತ್ಯಾಸವೆಂದರೆ ನಾನು ಎಚ್ಚರವಾಗಿದ್ದೇನೆ ಮತ್ತು ನೀವು ಇನ್ನೂ ಮಲಗಿದ್ದೀರಿ.' ಎನ್ನುತ್ತಾನೆ ಬುದ್ಧ. 

ಸನ್ಯಾಸಿ ಬುದ್ಧನಿಗೆ ಹೇಳುತ್ತಾನೆ, 'ನಿಮ್ಮ ಮುಖದ ಹೊಳಪನ್ನು ನೋಡಿ, ನೀವು ಪರಿಪೂರ್ಣ ವ್ಯಕ್ತಿ ಎಂದು ಅನಿಸಿತು. ಅದಕ್ಕಾಗಿಯೇ ನಿಮ್ಮ ಮಾರ್ಗದರ್ಶಕ ಅಥವಾ ಗುರು ಯಾರು ಎಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ.'

ಬುದ್ಧ ಹೇಳುತ್ತಾನೆ, 'ಆರಂಭದಲ್ಲಿ ನನಗೆ ಅನೇಕ ಗುರುಗಳಿದ್ದರು. ಆದರೆ ನಾನು ಜ್ಞಾನದ ಹಾದಿಯಲ್ಲಿ ಏಕಾಂಗಿಯಾಗಿ ನಡೆದು ನೂರಾರು ತಪ್ಪುಗಳನ್ನು ಮಾಡಿದೆ, ನಂತರ ನಾನೇ ಜ್ಞಾನೋದಯವನ್ನು ಪಡೆದುಕೊಂಡೆ.'

ಇದನ್ನು ಕೇಳಿದ ಸನ್ಯಾಸಿ ಬುದ್ಧನನ್ನು ಕಪಟಿ ಮತ್ತು ಸೊಕ್ಕಿನವನೆಂದು ಭಾವಿಸಲು ಪ್ರಾರಂಭಿಸುತ್ತಾನೆ. ಅವನು ಬುದ್ಧನಿಗೆ ಹೇಳುತ್ತಾನೆ. 'ನಿಮ್ಮ ಶಿಕ್ಷಕರ ಶ್ರೇಯವನ್ನು ನೀವು ಕಸಿದುಕೊಳ್ಳುತ್ತಿದ್ದೀರಿ'. 

ಬುದ್ಧ ಹೇಳಿದ್ದು ಸರಿ, ಆದರೆ ಸನ್ಯಾಸಿ ಬುದ್ಧನ ಉತ್ತರವನ್ನು ತಪ್ಪಾಗಿ ಅರ್ಥೈಸಿಕೊಂಡನು. ಇದಾದ ನಂತರ ಬುದ್ಧನು ಆ ಸನ್ಯಾಸಿಗೆ ಒಂದೇ ಒಂದು ಮಾತನ್ನೂ ಹೇಳಲಿಲ್ಲ. ಏಕೆಂದರೆ ಸನ್ಯಾಸಿಯ ಮನವೊಲಿಸಲು ಬುದ್ಧನು ತನ್ನ ಶಕ್ತಿ ಮತ್ತು ಸಮಯವನ್ನು ವ್ಯರ್ಥ ಮಾಡಲು ಬಯಸಲಿಲ್ಲ. ಸಲಹೆ ಅಥವಾ ಜ್ಞಾನವನ್ನು ಅಗತ್ಯವಿರುವವರಿಗೆ ಮಾತ್ರ ನೀಡಬೇಕು ಎಂದು ಈ ಕಥೆ ನಮಗೆ ಕಲಿಸುತ್ತದೆ.

ಜಾತಕದಲ್ಲಿದ್ರೆ ದರಿದ್ರ ಯೋಗ, ಕೂಡಲೇ ಈ ಪರಿಹಾರ ಮಾಡಿ!

ತಾಯಿಯನ್ನು ಪ್ರೀತಿಸಿ, ಅವಮಾನಿಸಬೇಡ
ಜಗತ್ತಿನಲ್ಲಿ ತಾಯಿಯ ಪ್ರೀತಿ ಮಾತ್ರ ನಿಸ್ವಾರ್ಥವಾಗಿದೆ. ಪ್ರತಿಯೊಬ್ಬರೂ ತಮ್ಮ ತಾಯಿಯನ್ನು ಪ್ರೀತಿಸಬೇಕು ಮತ್ತು ಅವಳನ್ನು ನೋಡಿಕೊಳ್ಳಬೇಕು ಎಂದು ಗೌತಮ ಬುದ್ಧನು ತನ್ನ ಬೋಧನೆಗಳಲ್ಲಿ ಆಗಾಗ್ಗೆ ಹೇಳುತ್ತಾನೆ. ನೀವು ಏನಾದರೂ ದೊಡ್ಡದನ್ನು ಮಾಡಲು ಬಯಸಿದರೆ, ಅದನ್ನು ನಿಮ್ಮ ತಾಯಿಗಾಗಿ ಮಾಡಿ. ಅವರಿಗೆ ಅರ್ಹವಾದ ಜೀವನವನ್ನು ನೀಡಿ. 
ಗೌತಮ ಬುದ್ಧನ ತಾಯಿಯ ಹೆಸರು ಮಹಾಮಾಯೆ. ಆದರೆ ಬುದ್ಧನಿಗೆ ಜನ್ಮ ನೀಡಿದ ಒಂದು ವಾರದಲ್ಲಿ ಅವಳು ಸತ್ತಳು. ಇದಾದ ನಂತರ ಬುದ್ಧನ ಚಿಕ್ಕಮ್ಮ ರಾಣಿ ಪ್ರಜಾಪತಿ ಅವನನ್ನು ಬೆಳೆಸಿದಳು.

ಭವಿಷ್ಯಕ್ಕೆ ಅಡ್ಡಿ ಬೇಡ
ಜೀವನವು ಎರಡು ಬದಿಗಳನ್ನು ಹೊಂದಿದೆ. ಒಂದು ಪ್ರಗತಿಗೆ ಮತ್ತು ಇನ್ನೊಂದು ವಿನಾಶಕ್ಕೆ. ಅದರಂತೆ ನಿಮ್ಮೆಲ್ಲ ನಡೆಗಳು ಒಂದೇ ನಿಮ್ಮನ್ನು ಪ್ರಗತಿಯೆಡೆಗೆ ಇಲ್ಲವೇ  ವಿನಾಶದತ್ತ ಕೊಂಡೊಯ್ಯುತ್ತಿರುತ್ತವೆ. ಆದ್ದರಿಂದ, ನಿಮ್ಮ ಭವಿಷ್ಯಕ್ಕೆ ಅಡ್ಡಿಯಾಗುವ ವಿಷಯಗಳನ್ನು ನಿಧಾನವಾಗಿ ತ್ಯಜಿಸಲು ಪ್ರಯತ್ನಿಸಿ ಮತ್ತು ಉತ್ತಮವಾದುದನ್ನು ಅಳವಡಿಸಿಕೊಳ್ಳಿ. ಈ ರೀತಿಯಲ್ಲಿ ನೀವು ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ಪಡೆಯುತ್ತೀರಿ.

Latest Videos
Follow Us:
Download App:
  • android
  • ios