Chanakya Niti: ಲೈಫಲ್ಲಿ ಕೆಟ್ಟ ಟೈಂ ನಡೀತಿದ್ಯಾ? ಹೀಗೆ ಎದುರಿಸಿ..

ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರ ಚಾಣಕ್ಯ ನೀತಿಯಲ್ಲಿ ಹೇಳಿರುವ ಕೆಲ ನೀತಿಗಳು ವ್ಯಕ್ತಿಗೆ ಕಷ್ಟದ ಸಮಯವನ್ನು ಧೈರ್ಯವಾಗಿ ಎದುರಿಸಲು ಸಹಾಯ ಮಾಡುವುದಲ್ಲದೆ, ಅನೇಕ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುತ್ತದೆ.

If Bad Times Come In Life Keep These Things In Mind By Acharya Chanakya skr

ಆಚಾರ್ಯ ಚಾಣಕ್ಯರನ್ನು ಪ್ರಸಿದ್ಧ ರಾಜತಾಂತ್ರಿಕ ಎಂದು ಕರೆಯಲಾಗುತ್ತದೆ. ಅವರ ನೀತಿಗಳನ್ನು ಅನುಸರಿಸಿ ಅನೇಕ ಜನರು ಜೀವನದಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ. ಅವರ ಅನುಭವಗಳ ಸಂಗ್ರಹವೇ ‘ಚಾಣಕ್ಯ ನೀತಿ’. ಇದರಲ್ಲಿ ಜೀವನಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಚಾಣಕ್ಯ ನೀತಿಯ ಪ್ರಕಾರ, ವ್ಯಕ್ತಿಯ ಜೀವನದಲ್ಲಿ ಏರಿಳಿತಗಳು, ಸಂತೋಷ, ದುಃಖಗಳು ಇರುತ್ತವೆ. ಆ ವಾಸ್ತವವನ್ನು ಒಪ್ಪಿಕೊಂಡು, ಅಪ್ಪಿಕೊಂಡು ಬದುಕಬೇಕು.

ಆದರೂ ನಾವು ಒಳ್ಳೆಯ ಸಮಯ ಬಂದಾಗ ಹಿಗ್ಗುತ್ತೇವೆ, ಕೆಟ್ಟ ಸಮಯ ಬಂದಾಗ ಕುಗ್ಗುತ್ತೇವೆ. ಕೆಟ್ಟ ಸಮಯವನ್ನು ಅಲ್ಪಾಯುಷಿ ಎಂದುಕೊಂಡು ಎದುರಿಸುವ ಬದಲಿಗೆ, ಅದಕ್ಕಾಗಿ ಅಳುತ್ತಾ, ನೋಯುತ್ತಾ, ಚಿಂತೆ ಮಾಡುತ್ತಾ ಕಳೆಯುತ್ತೇವೆ. ಆದರೆ, ಕೆಟ್ಟ ಸಮಯದಲ್ಲಿ ಉದ್ವೇಗಗೊಳ್ಳುವ ಅಥವಾ ಅಸಮಾಧಾನಗೊಳ್ಳುವ ಬದಲು, ಅದನ್ನು ಎದುರಿಸುವ ಮತ್ತು ಅದರಿಂದ ಹೊರಬರುವ ಕಲೆಯನ್ನು ತಿಳಿದುಕೊಳ್ಳಬೇಕು ಎನ್ನುತ್ತಾರೆ ಚಾಣಕ್ಯ. ಏಕೆಂದರೆ ಕಷ್ಟದ ಸಮಯಗಳನ್ನು ದೃಢವಾಗಿ ಎದುರಿಸುವ ವ್ಯಕ್ತಿ ಎಂದಿಗೂ ಸೋಲುವುದಿಲ್ಲ. ಅದಕ್ಕಾಗಿಯೇ ಕೆಟ್ಟ ಸಮಯದಲ್ಲಿ ಆಚಾರ್ಯ ಚಾಣಕ್ಯರ ಕೆಲವು ವಿಷಯಗಳನ್ನು ನೆನಪಿನಲ್ಲಿಡಿ. ಇದರಿಂದ ನೀವು ಕಷ್ಟದ ಸಮಯವನ್ನು ಎದುರಿಸಲು ಧೈರ್ಯವನ್ನು ಪಡೆಯುತ್ತೀರಿ.

ಆಚಾರ್ಯ ಚಾಣಕ್ಯರ ಅಮೂಲ್ಯ ನೀತಿಗಳು
ವ್ಯಕ್ತಿಯ ಜೀವನದಲ್ಲಿ ಕೆಟ್ಟ ಸಮಯಗಳು ಎಂದಿಗೂ ಹೇಳಿ ಬರುವುದಿಲ್ಲ. ಅವು ಆಕಸ್ಮಿಕವಾಗಿಯೇ ಬರುತ್ತವೆ. ಅಂತಹ ಪರಿಸ್ಥಿತಿಯಲ್ಲಿ ನೀವು ಮೊದಲು ತಾಳ್ಮೆ ತೆಗೆದುಕೊಳ್ಳಬೇಕು. ತಾಳ್ಮೆಯಿಂದ ಕೆಲಸ ಮಾಡಬೇಕು. ಚಾಣಕ್ಯ ನೀತಿಯ ಪ್ರಕಾರ, ವ್ಯಕ್ತಿಯು ಕೆಟ್ಟ ಅಥವಾ ಬಿಕ್ಕಟ್ಟಿನ ಸಮಯದಲ್ಲಿ ಗಂಭೀರತೆಯನ್ನು ಬಿಟ್ಟುಕೊಡಬಾರದು. ಏಕೆಂದರೆ ಕಷ್ಟದ ಸಮಯದಲ್ಲಿ ಗಂಭೀರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

Ram Navami 2023: ಶ್ರೀರಾಮನಿಗೊಬ್ಬಳು ಅಕ್ಕ ಇದ್ದಳು.. ಅವಳಿಗಾಗಿ ದೇವಾಲಯವೂ ಇದೆ!

ಕೆಟ್ಟ ಕಾಲದಲ್ಲಿ ತನ್ನ ಕುಟುಂಬ ಮತ್ತು ಹಿತೈಷಿಗಳ ಸಹವಾಸವನ್ನು ಬಿಡಬಾರದು ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಎಷ್ಟೇ ಕಷ್ಟ ಬಂದರೂ ಕುಟುಂಬ ನಿಮ್ಮೊಂದಿಗಿದ್ದರೆ ಎಲ್ಲ ಕಷ್ಟಗಳನ್ನೂ ನಗುಮೊಗದಿಂದ ಜಯಿಸಬಹುದು. ಬಿಕ್ಕಟ್ಟಿನ ಸಮಯದಲ್ಲಿ ಕುಟುಂಬದೊಂದಿಗೆ ಒಗ್ಗಟ್ಟಿನಿಂದ ಇರುವುದು ವ್ಯಕ್ತಿಗೆ ಶಕ್ತಿಯನ್ನು ನೀಡುತ್ತದೆ. ಹೀಗಾಗಿ, ಕುಟುಂಬವನ್ನು ಸದಾ ಚೆನ್ನಾಗಿಟ್ಟುಕೊಳ್ಳಬೇಕು. ಕುಟುಂಬವೇ ನಿಮ್ಮ ಶಕ್ತಿ ಎಂಬುದನ್ನು ಅರಿತಿರಬೇಕು. ಕುಟುಂಬದ ಇತರೆ ಸದಸ್ಯರಿಗೆ ಕಷ್ಟ ಬಂದಾಗಲೂ ಅವರಿಗೆ ಹೆಗಲು ಕೊಟ್ಟು ಧೈರ್ಯ ತುಂಬಬೇಕು. 

ಜೀವನದಲ್ಲಿ ಎಷ್ಟೇ ದೊಡ್ಡ ಕಷ್ಟಗಳು ಬಂದರೂ ನಿಮ್ಮ ಆಲೋಚನೆಗಳನ್ನು ಸದಾ ಧನಾತ್ಮಕವಾಗಿ ಇಟ್ಟುಕೊಳ್ಳಿ. ಆಚಾರ್ಯ ಚಾಣಕ್ಯ ಹೇಳುತ್ತಾರೆ, ಕೆಟ್ಟ ಸಮಯದಲ್ಲಿ ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳನ್ನು ಇಟ್ಟುಕೊಳ್ಳುವ ವ್ಯಕ್ತಿಯು ನಷ್ಟವನ್ನು ಎದುರಿಸಬೇಕಾಗಿಲ್ಲ. ಬದಲಿಗೆ, ಧನಾತ್ಮಕ ಆಲೋಚನೆಗಳಿಂದಾಗಿ ಅವನು ಕೆಟ್ಟ ಸಮಯದಿಂದ ಹೊರಬರುವ ಮಾರ್ಗವನ್ನು ಕಂಡುಕೊಳ್ಳುತ್ತಾನೆ.

ಚಾಣಕ್ಯ ಹೇಳುತ್ತಾರೆ, ಕೆಟ್ಟ ಸಮಯ ಬಂದಾಗ, ತಾಳ್ಮೆಯಿಂದ ಕೆಲಸ ಮಾಡಿ ಮತ್ತು ಅದರಿಂದ ಹೊರಬರಲು ತಂತ್ರವನ್ನು ಸಿದ್ಧಪಡಿಸಿ. ಇದರಿಂದ ನೀವು ಕಷ್ಟದ ಸಮಯದಲ್ಲಿ ಹೆಚ್ಚಿನ ನಷ್ಟವನ್ನು ಎದುರಿಸಬೇಕಾಗುವುದಿಲ್ಲ. ತಂತ್ರವನ್ನು ಮಾಡುವ ಮೂಲಕ, ಒಬ್ಬ ವ್ಯಕ್ತಿಯು ಕಡಿಮೆ ನಷ್ಟವನ್ನು ಎದುರಿಸಬೇಕಾಗುತ್ತದೆ ಮತ್ತು ಕೆಟ್ಟ ಸಮಯವನ್ನು ದಾಟಲು ಸುಲಭವಾಗುತ್ತದೆ.

700 ವರ್ಷಗಳ ಬಳಿಕ ಮಹಾಷ್ಟಮಿಯಂದು 5 ರಾಜಯೋಗಗಳ ಸೃಷ್ಟಿ; 4 ರಾಶಿಗಳಿಗೆ ಮಿತಿಯೇ ಇಲ್ಲದ ಅದೃಷ್ಟ

ಕೆಟ್ಟ ಸಮಯವು ತಮ್ಮನ್ನು ಪರೀಕ್ಷಿಸಲು ಬಂದಿದೆ ಎಂದು ತಿಳಿದು, ಅದಕ್ಕಾಗಿ ಮೊದಲು ಮಾನಸಿಕ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ನಂತರ ಕೆಟ್ಟ ಸಮಯ ಹೋಗಲಾಡಿಸಲು ಇರುವ ಪರಿಹಾರಗಳೇನು. ತಾನೇನು ಮಾಡಬಹುದು, ಶತ್ರುಗಳದ್ದರೆ ಅವರಿಗೆ ಗೆಲುವಿನ ಮೂಲಕ ಉತ್ತರ ಕಳುಹಿಸುವುದು ಹೇಗೆ ಎಂಬ ಬಗ್ಗೆ ಯೋಜನೆ ರೂಪಿಸಿ. ಹೆಚ್ಚು ಸಮಯ ವ್ಯರ್ಥ ಮಾಡದೆ ಪರಿಹಾರ ಕಾರ್ಯ ಕೈಗೊಳ್ಳಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios