ಹೋಳಿಯ ಬಳಿಕ ಜೀವನದಲ್ಲಿ ಏನಾದರೂ ಬದಲಾವಣೆ ಆಗಬಹುದೇ? ಎನ್ನುವುದು ನಿಮ್ಮ ಪ್ರಶ್ನೆಯಾಗಿದ್ದರೆ ನಮ್ಮ ಜ್ಯೋತಿಷಿಗಳು ಏನು ಹೇಳಿದ್ದಾರೆ ನೋಡಿ. ರಾಶಿಗೆ ಅನುಗುಣವಾಗಿ ನಿಮ್ಮಲ್ಲಿ ಏನು ಬದಲಾವಣೆ ಬರಬಹುದು ಎನ್ನುವುದನ್ನು ಅರಿತುಕೊಳ್ಳಿ. 

ಹೋಳಿ (Holi) ಹಬ್ಬ (Festival) ಮುಗಿದಿದೆ. ಎಲ್ಲೆಡೆ ಬಿಸಿಲಿನ ಝಳ ಜೋರಾಗಿದೆ. ಹೋಳಿಯ ಬಳಿಕ ವಾತಾವರಣದಲ್ಲಿ ಸಾಕಷ್ಟು ಬದಲಾವಣೆ (Change) ಕಂಡುಬರುತ್ತಿದೆ. ಏನಾದರೂ ಹೊಸತರ ಆರಂಭಕ್ಕೆ ಇದು ಸೂಕ್ತ ಸಮಯ. ಜ್ಯೋತಿಷಿಗಳ ಪ್ರಕಾರ, ಹೋಳಿಯ ಬಳಿಕ ಎಲ್ಲ ರಾಶಿಗಳಲ್ಲೂ ಒಂದಿಷ್ಟು ಬದಲಾವಣೆ ಬಂದಿದೆ. ಅದನ್ನು ತಿಳಿದುಕೊಳ್ಳೋಣ. ನಮ್ಮ ರಾಶಿಗೆ ಅನುಗುಣವಾಗಿ ಏನು ಸೂಕ್ತ, ಯಾವುದನ್ನು ಮಾಡಲು ಬಯಸುತ್ತೇವೆ ಎನ್ನುವುದನ್ನು ಜ್ಯೋತಿಷಿಗಳು ಹೀಗೆ ಅಂದಾಜಿಸಿದ್ದಾರೆ ನೋಡಿಕೊಳ್ಳಿ.

• ಮೇಷ (Aries)
ನಿಮಗೆ ಹೊರಗೆ ಹೋಗುವ ಇಚ್ಛೆಯಾಗಬಹುದು. ಜನರನ್ನು ಭೇಟಿಯಾಗುವ ಆಸಕ್ತಿ ಮೂಡಬಹುದು. ಹಾಗೆಯೇ ಇದು ನಿಮ್ಮ ಜೀವನದಲ್ಲಿ ಉತ್ತಮ ಸಮಯವೂ ಆಗಿದೆ. ಸಾಮಾಜಿಕವಾಗಿ ಬೆರೆಯುವುದು ನಿಮ್ಮ ಮುಂದಿನ ದಾರಿ.
• ವೃಷಭ (Taurus)
ನೀವು ನಿಮ್ಮ ಕುಟುಂಬದೊಂದಿಗೆ ಸಾಕಷ್ಟು ಸಮಯವನ್ನು ಕಳೆಯುತ್ತಿರುವಿರಿ. ನಿಮ್ಮ ಜೀವನದಲ್ಲಿ ನೀವು ನಿಭಾಯಿಸುತ್ತಿರುವ ಜವಾಬ್ದಾರಿಯ ಬಗ್ಗೆ ಜನರ ಮೆಚ್ಚುಗೆಗೆ ನೀವು ಪಾತ್ರರಾಗುತ್ತೀರಿ.
• ಮಿಥುನ (Gemini)
ನೀವು ನಿಮ್ಮ ಕುಟುಂಬದ ಅಸ್ತಿತ್ವವನ್ನು ಮಿಸ್‌ ಮಾಡಿಕೊಳ್ಳುತ್ತೀರಿ. ಏನಾದರೂ ಮುಖ್ಯವಾದುದ್ದನ್ನು ಮಾಡುವಾಗ ಈ ಭಾವನೆ ಹೆಚ್ಚು ಜಾಗೃತವಾಗುತ್ತದೆ. ಜೀವನದ ಕುರಿತಾಗಿ ನಿರಾಸಕ್ತಿ ಮೂಡಬಹುದು. ಆದರೆ, ಇದು ನಿಮಗೆ ಹೊಸದೇನೂ ಅಲ್ಲವಾಗಿರುವುದರಿಂದ ಅಚ್ಚರಿ ಪಡುವ ಅಗತ್ಯವಿಲ್ಲ. 
• ಕರ್ಕಾಟಕ (Cancer)
ಸ್ನೇಹಿತರು ಮತ್ತು ಕುಟುಂಬದವರು ಸೇರುವಂತೆ ಯೋಜನೆ ರೂಪಿಸುತ್ತಿದ್ದೀರಿ. ಎಲ್ಲರನ್ನೂ ಒಂದೆಡೆ ಸೇರುವಂತೆ ಮಾಡುವುದು ನಿಮ್ಮ ಈ ಹೊತ್ತಿನ ಆದ್ಯತೆಯಾಗಿದೆ. ಅಲ್ಲಲ್ಲಿ ಒಮ್ಮೊಮ್ಮೆ ಏನಾದರೂ ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗಬಹುದು. ಆದರೆ, ವಸಂತ ಮಾಸದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ.
• ಸಿಂಹ (Leo)
ನಿಮ್ಮ ಖಾಸಗಿ ಬದುಕು ಈ ಸಮಯದಲ್ಲಿ ಸ್ವಲ್ಪ ಏರಿಳಿತದಿಂದ ಕೂಡಿದೆ. ನೀವು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಬೇಕಾಗಿ ಬರುವುದರಿಂದ ನಿಮಗೆ ಕಷ್ಟವಾಗಬಹುದು. ಮನೆಯವರಲ್ಲಿ ನಿಮ್ಮಿಂದ ಕೆಲವು ನಿರೀಕ್ಷೆಗಳೂ ಇರಬಹುದು. ಹೀಗಾಗಿ, ನಿಯಂತ್ರಣದಲ್ಲಿ ಇರಬೇಕಾಗುತ್ತದೆ. 

ಆಧ್ಯಾತ್ಮದ ಘಮಲಿನ ಈ ಸಸ್ಯಗಳು ಮನೆಗೆ ತರುತ್ತವೆ positivity

• ಕನ್ಯಾ (Vigro)
ಈ ವಸಂತ ಮಾಸದಲ್ಲಿ ನಿಮ್ಮ ಎಂದಿನ ಶಾಂತ ಸ್ವಭಾವವನ್ನು ಬಿಡಬೇಡಿ. ಇದು ಎಷ್ಟೇ ಕಷ್ಟದ ಕಾಲವಾಗಿದ್ದರೂ ನಿಮ್ಮ ಸಹನೆಯನ್ನು ಬಿಡಬಾರದು. ನಿಮ್ಮ ಮಾತಿನಿಂದ ಬೇರೆಯವರಿಗೆ ನೋವಾಗಬಹುದು. ನಿಮ್ಮ ಉದ್ದೇಶ ಇತರರನ್ನು ನೋಯಿಸುವುದಾಗಿರದಿದ್ದರೂ ಕೆಲವು ಬಾರಿ ಅಭಾಸವುಂಟಾಗಬಹುದು.
• ತುಲಾ (Libra)
ಕುಟುಂಬದಲ್ಲಿ ನಿಮ್ಮ ಸಹಭಾಗಿತ್ವ ಹೆಚ್ಚುವುದು. ನಿಮ್ಮ ಮಾತುಕತೆಗಳು ಮನೆಯಲ್ಲಿ ಮೆಚ್ಚುಗೆಗೆ ಪಾತ್ರವಾಗಬಹುದು. ಕೆಲವು ವ್ಯಕ್ತಿಗಳ ವಿಭಿನ್ನ ಮುಖವನ್ನು ನೀವು ಅರಿಯುತ್ತೀರಿ. ಈ ಉತ್ತಮ ಅಂಶವನ್ನು ಈ ಸಮಯದಲ್ಲಿ ಬಳಕೆ ಮಾಡಿಕೊಳ್ಳಿ.
• ವೃಶ್ಚಿಕ (Scorpio)
ಪ್ರವಾಸದ ಮೂಡಿನಲ್ಲಿದ್ದೀರಿ. ಚಿಕ್ಕಪುಟ್ಟ ಪ್ರವಾಸ ಕೈಗೊಳ್ಳಬೇಕಾಗಿ ಬರಬಹುದು. ಈ ಸಮಯದಲ್ಲಿ ಖುಷಿ ಪಡಿ.

Dream Astrology: ಕನಸಲ್ಲಿ ದೆವ್ವ ಕಂಡರೆ ಏನರ್ಥ?

• ಧನು (Sagittarius)
ಅನಗತ್ಯವಾದ ವಾಗ್ವಾದಗಳಲ್ಲಿ ತೊಡಗಬೇಡಿ. ಅದರಿಂದಾಗಿ ನಿಮ್ಮ ಸಂಬಂಧದಲ್ಲಿ ಶಾಶ್ವತವಾದ ಗಾಯವಾಗಬಹುದು. ಶಾಶ್ವತವಾಗಿ ಬಿರುಕೊಂದು ನಿಮ್ಮ ಸಂಬಂಧಗಳಲ್ಲಿ ಮೂಡಬಹುದು. ಎಂದಿನಂತೆ ಸದಾಕಾಲ ಶಾಂತವಾಗಿದ್ದರೆ ಚೆನ್ನಾಗಿರುತ್ತೀರಿ. 
• ಮಕರ (Capricorn)
ನಿಮ್ಮ ಕುಟುಂಬ ಮತ್ತು ವೃತ್ತಿಪರ ಜೀವನ ಎಲ್ಲವೂ ಚೆನ್ನಾಗಿಯೇ ಇದೆ. ಆದರೆ, ಅನಗತ್ಯವಾಗಿ ಒತ್ತಡ ಮಾಡಿಕೊಳ್ಳಬೇಡಿ. ಇದರಿಂದಾಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು. ಆರೋಗ್ಯದಲ್ಲಿ ಏರುಪೇರು ಕಾಣಬಹುದು.
• ಕುಂಭ (Aquarius)
ಹಳೆಯ ಸ್ನೇಹಿತರನ್ನು ಭೇಟಿಯಾಗಿ. ವರ್ಷಗಳ ಹಿಂದೆ ನೀವು ಜಗಳ ಮಾಡಿಕೊಂಡು ದೂರವಾದ ಸ್ನೇಹಿತರೊಂದಿಗೆ ಮರುಸ್ನೇಹ ಮಾಡಿಕೊಳ್ಳಿ. ಸಂಬಂಧದಲ್ಲಿ ಮಾಡಿಕೊಳ್ಳುವ ಇಂಥದ್ದೊಂದು ತಿದ್ದುಪಡಿಯಿಂದ ನಿಮಗೆ ಸಹಕಾರಿಯಾಗುತ್ತದೆ.
• ಮೀನ (Pisces)
ಕೆಲಸ ಮಾಡಲು ಮುಂದಾಗಿ. ಕೆಲಸ ಮುಂದೂಡುವುದನ್ನು ಬಿಡಿ. ಈ ವಸಂತ ಮಾಸ ನಿಮಗೆ ಉತ್ತೇಜನಕಾರಿಯಾಗಿದೆ. ನಿಮಗಾಗಿ ಕೆಲಸ ಮಾಡಿಕೊಳ್ಳುವ ಸಮಯ ಇದು. ನಿಮ್ಮ ಪ್ರತಿಭೆಯನ್ನು ಬಳಕೆ ಮಾಡಿಕೊಳ್ಳಿ.