ಶಾಸೊತ್ರೕಕ್ತ ಪೂಜಾ ವಿಧಾನ

ಜುಲೈ 25ರ ಶುಕ್ರವಾರ ಬೆಳಿಗ್ಗೆ 5 ಗಂಟೆ 38 ನಿಮಿಷದಿಂದ 8 ಗಂಟೆ 22 ನಿಮಿಷದ ಒಳಗೆ ನಾಗಪೂಜೆ ಮಾಡಲು ಒಳ್ಳೆಯ ಮುಹೂರ್ತವಿದೆ.

ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿಯ ಮಹತ್ವ ಹಾಗೂ ಮುಹೂರ್ತ

ಶುಚಿರ್ಭೂತರಾಗಿ, ಮಡಿ ವಸ್ತ್ರ ಧರಿಸಿ, ಗರಿಕೆ, ಗಂಧ, ಅಕ್ಷತೆ, ಹೂವು, ಅರಿಶಿಣ, ಮೋದಕ ಅಥವಾ ನಾಗದೇವನಿಗೆ ನೈವೇದ್ಯಕ್ಕೆ ಇನ್ನಿತರ ಖಾದ್ಯಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ. ದೇವರ ಕೋಣೆಯಲ್ಲಿ ಒಂದು ಬೆಳ್ಳಿ ಬಟ್ಟಲಿನಲ್ಲಿ ಬೆಳ್ಳಿಯ ನಾಗರ ಪ್ರತಿಮೆ ಅಥವಾ ಹಸುವಿನ ಸಗಣಿಯಿಂದ ಮಾಡಿದ ನಾಗರ ಪ್ರತಿಮೆಯನ್ನು ಇರಿಸಿಕೊಳ್ಳಿ. ನಂತರ ಈ ಕೆಳಗಿನ ಮಂತ್ರವನ್ನು ಹೇಳುತ್ತಾ ಹಾಲಿನ ಅಭಿಷೇಕ ಮಾಡಿ.

ಓಂ ಭುಜಂಗೇಶಾಯ ವಿದ್ಮಹೇ ಸರ್ಪರಾಜಾಯ ಧೀಮಹಿ

ತನ್ನೋ ನಾಗಃ ಪ್ರಚೋದಯಾತ್‌

ನಂತರ ಈ ಕೆಳಗಿನ ಮಂತ್ರವನ್ನು ಹೇಳುತ್ತಾ ನಾಗ ಪ್ರತಿಮೆಗೆ ಗರಿಕೆ, ಗಂಧ, ಅಕ್ಷತೆಯಿಂದ ಪೂಜಿಸಿ.

ನಮೋ ಅಸ್ತು ಸರ್ಪೇಭ್ಯೋ ಯೇಕೇಚ ಪೃಥಿವೀ ಮನು

ಯೇ ಅಂತರಿಕ್ಷಂ ಯೇ ದಿವಿ ತೇಭ್ಯ ಸರ್ಪೇಭ್ಯೋ ನಮಃ

ಯೇ ದೋ ರೋಚನೇ ದಿವೋ ಯೇ ವಾ ಸೂರ್ಯಸ್ಯ ರಶ್ಮಿಷು

ಯೇಷಾಮಪ್ಸುಸದಃ ಕೃತಂ ತೇಭ್ಯಃ ಸರ್ಪೇಭ್ಯೋ ನಮಃ

ನಂತರ ಕೆಳಗಿನ ನಾಗ ಅಷ್ಟೋತ್ತರ ಶತನಾಮಾವಳಿಯನ್ನು ಪಠಿಸುತ್ತಾ ನಾಗರಾಜನಿಗೆ ಅರಿಶಿಣ ಹಾಗೂ ಹೂವನ್ನು ಸಮರ್ಪಿಸಿ.

ಓಂ ಅನಂತಾಯ ನಮಃ

ಓಂ ವಾಸುದೇವಾಯ ನಮಃ

ಓಂ ತಕ್ಷಕಾಯ ನಮಃ

ಓಂ ವಿಶ್ವತೋಮುಖಾಯ ನಮಃ

ಓಂ ಕರ್ಕೋಟಕಾಯ ನಮಃ

ಓಂ ಮಹಾಪದ್ಮಾಯ ನಮಃ

ಓಂ ಪದ್ಮಾಯ ನಮಃ

ಓಂ ಶಂಖಾಯ ನಮಃ

ಓಂ ಶಿವಪ್ರಿಯಾಯ ನಮಃ

ಓಂ ಧೃತರಾಷ್ಟಾ್ರಯ ನಮಃ

ಓಂ ಶಂಖಪಾಲಾಯ ನಮಃ

ಓಂ ಕುಳಿಕಾಯ ನಮಃ

ಓಂ ಸರ್ಪನಾಥಾಯ ನಮಃ

ಓಂ ಇಷ್ಟದಾಯಿನೇ ನಮಃ

ಓಂ ನಾಗರಾಜಾಯ ನಮಃ

ಓಂ ಪುರಾಣಾಯ ನಮಃ

ಓಂ ಪುರುಷಾಯ ನಮಃ

ಓಂ ಅನಘಾಯ ನಮಃ

ಓಂ ವಿಶ್ವರೂಪಾಯ ನಮಃ

ಓಂ ಮಹೀಧಾರಿಣೇ ನಮಃ

ಓಂ ಕಾಮದಾಯಿನೇ ನಮಃ

ಓಂ ಸುರಾರ್ಚಿತಾಯ ನಮಃ

ಓಂ ಕುಂಡಪ್ರಭಾಯ ನಮಃ

ಓಂ ಬಹುಶಿರಸೇ ನಮಃ

ಓಂ ದಕ್ಷಾಯ ನಮಃ

ಓಂ ದಾಮೋದರಾಯ ನಮಃ

ಓಂ ಅಕ್ಷರಾಯ ನಮಃ

ಓಂ ಗಣಾಧಿಪಾಯ ನಮಃ

ಓಂ ಮಹಾಸೇನಾಯ ನಮಃ

ಓಂ ಪುಣ್ಯಮೂರ್ತಯೇ ನಮಃ

ಓಂ ಗಣಪ್ರಿಯಾಯ ನಮಃ

ಓಂ ವರಪ್ರದಾಯ ನಮಃ

ಓಂ ವಾಯುಭಕ್ಷಕಾಯ ನಮಃ

ಓಂ ವಿಶ್ವಧಾರಿಣೇ ನಮಃ

ಓಂ ವಿಹಂಗಮಾಯ ನಮಃ

ಓಂ ಪುತ್ರಪ್ರದಾಯ ನಮಃ

ಓಂ ಪುಣ್ಯರೂಪಾಯ ನಮಃ

ಓಂ ಬಿಲೇಶಾಯ ನಮಃ

ಓಂ ಪರಮೇಷ್ಟಿನೇ ನಮಃ

ಓಂ ಪಶುಪತಯೇ ನಮಃ

ಓಂ ಪವನಾಶಿನೇ ನಮಃ

ಓಂ ಬಲಪ್ರದಾಯ ನಮಃ

ಓಂ ದಾಮೋದರಾಯ ನಮಃ

ಓಂ ದೈತ್ಯಹಂತ್ರೇ ನಮಃ

ಓಂ ದಯಾರೂಪಾಯ ನಮಃ

ಓಂ ಧನಪ್ರದಾಯ ನಮಃ

ಓಂ ಮತಿದಾಯಿನೇ ನಮಃ

ಓಂ ಮಹಾಮಾಯಿನೇ ನಮಃ

ಓಂ ಮಧುವೈರಿಣೇ ನಮಃ

ಓಂ ಮಹೋರಗಾಯ ನಮಃ

ಓಂ ಭುಜಂಗೇಶಾಯ ನಮಃ

ಓಂ ಭೂಮರೂಪಾಯ ನಮಃ

ಓಂ ಭೀಮಕಾಮಾಯ ನಮಃ

ಓಂ ಭಯಾಪಹತೇ ನಮಃ

ಓಂ ಸಕಲರೂಪಾಯ ನಮಃ

ಓಂ ಶುದ್ಧದೇಹಾಯ ನಮಃ

ಓಂ ಶೋಕಹಾರಿಣೇ ನಮಃ

ಓಂ ಶುಭಪ್ರದಾಯ ನಮಃ

ಓಂ ಸಂತಾನದಾಯಿನೇ ನಮಃ

ಓಂ ಸರ್ಪೇಶಾಯ ನಮಃ

ಓಂ ಸವದಾಯನೇ ನಮಃ

ಓಂ ಸರೀಸೃಪಾಯ ನಮಃ

ಓಂ ಲಕ್ಷ್ಮೀಕರಾಯ ನಮಃ

ಓಂ ಲಾಭದಾಯಿನೇ ನಮಃ

ಓಂ ಲಲಿತಾಯ ನಮಃ

ಓಂ ಲಕ್ಷಣಾಕೃತಯೇ ನಮಃ

ಓಂ ದಯಾರಾಶಯೇ ನಮಃ

ಓಂ ದಾಶರಥಾಯ ನಮಃ

ಓಂ ದೈತ್ಯಹಂತ್ರೇ ನಮಃ

ಓಂ ದಮಾಶ್ರಮಾಯ ನಮಃ

ಓಂ ರಮ್ಯರೂಪಾಯ ನಮಃ

ಓಂ ರಾಮಭಕ್ತಾಯ ನಮಃ

ಓಂ ರಾಮಭಕ್ತಾಯ ನಮಃ

ಓಂ ರಣಧೀರಾಯ ನಮಃ

ಓಂ ರತಿಪ್ರದಾಯ ನಮಃ

ಓಂ ಸೌಮಿತ್ರಿಯೇ ನಮಃ

ಓಂ ಸೋಮಸಂಕಾಶಾಯ ನಮಃ

ಓಂ ಸರ್ಪರಾಜಾಯ ನಮಃ

ಓಂ ಸತಾಂಪ್ರಿಯಾಯ ನಮಃ

ಓಂ ಕರ್ಬುರಾಯ ನಮಃ

ಓಂ ಕಾಮಫಲಪ್ರದಾಯ ನಮಃ

ಓಂ ಕಿರೀಟಿನೇ ನಮಃ

ಓಂ ಕಿನ್ನರಾರ್ಚಿತಾಯ ನಮಃ

ಓಂ ಪಾತಾಳವಾಸಿನೇ ನಮಃ

ಓಂ ಪರಾಯ ನಮಃ

ಓಂ ಫಣಿಮಂಡಲಮಂಡಿತಾಯ ನಮಃ

ಓಂ ಆಶೀವಿಷಾಯ ನಮಃ

ಓಂ ವಿಷಧರಾಯ ನಮಃ

ಓಂ ಭಕ್ತನಿಧಯೇ ನಮಃ

ಓಂ ಭೂಮಿಧಾರಿಣೇ ನಮಃ

ಓಂ ಭವಪ್ರಿಯಾಯ ನಮಃ

ಓಂ ನಾಗರಾಜಾಯ ನಮಃ

ಓಂ ನಾನಾರೂಪಾಯ ನಮಃ

ಓಂ ಜನಪ್ರಿಯಾಯ ನಮಃ

ಓಂ ಕಾಕೋದರಾಯ ನಮಃ

ಓಂ ಕಾವ್ಯರೂಪಾಯ ನಮಃ

ಓಂ ಕಲ್ಯಾಣಾಯ ನಮಃ

ಓಂ ಕಾಮಿತಾರ್ಥದಾಯಿನೇ ನಮಃ

ಓಂ ಹತಾಸುರಾಯ ನಮಃ

ಓಂ ಹಲ್ಯಹೀನಾಯ ನಮಃ

ಓಂ ಹರ್ಷದಾಯನೇ ನಮಃ

ಓಂ ಹರಭೂಷಣಾಯ ನಮಃ

ಓಂ ಜಗದಾಧಾರಯೇ ನಮಃ

ಓಂ ಜರಾಹೀನಾಯ ನಮಃ

ಓಂ ಜಗನ್ಮಯಾಯ ನಮಃ

ಓಂ ವಂಧ್ಯಾತ್ವದೋಷ ಶಮನಾಯ ನಮಃ

ಓಂ ವರಪುತ್ರಫಲಪ್ರದಾಯ ನಮಃ

ಓಂ ಶ್ರೀ ಸುಬ್ರಹ್ಮಣ್ಯಾಯ ನಮಃ

ಇತಿ ನಾಗರಾಜ ಅಷ್ಟೋತ್ತರಶತನಾಮ ಪೂಜಾಂ ಸಮರ್ಪಯಾಮಿ

ನಂತರ ಗಂಧದ ಕಡ್ಡಿ ಹಚ್ಚಿ, ದೀಪ ಬೆಳಗಿ, ತೆಂಗಿನ ಕಾಯಿ ಒಡೆದು, ವಿವಿಧ ಖಾದ್ಯಗಳನ್ನು ನಾಗರಾಜನಿಗೆ ನೈವೇದ್ಯ ಮಾಡಿ. ಕರ್ಪೂರದಿಂದ ಮಂಗಳಾರತಿ ಮಾಡಿ. ನಂತರ ಕೈಲಿ ಹೂವು, ಅಕ್ಷತೆ ಹಾಗೂ ಅರಿಶಿಣವನ್ನು ಹಿಡಿದುಕೊಂಡು ಈ ಕೆಳಗಿನ ಮಂತ್ರ ಹೇಳುತ್ತಾ ಪ್ರಾರ್ಥನೆ ಮಾಡಿ.

ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್‌

ಶಂಖಪಾಲಂ ಧಾರ್ತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ

ಏತಾನಿ ನವ ನಾಮಾನಿ ನಾಗಾನಾಂ ಯಃ ಪಠೇನ್ನರಃ

ತಸ್ಯ ನಾಗಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್‌

ನಂತರ ಮನೆ-ಮಂದಿಯೊಂದಿಗೆ ಪ್ರಸಾದ ಸೇವಿಸಿ. ಇಲ್ಲಿಗೆ ನಾಗಪೂಜೆ ಸಮಾಪ್ತಿ.