ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿಯ ಮಹತ್ವ ಹಾಗೂ ಮುಹೂರ್ತ
ಶ್ರಾವಣ ಮಾಸ ಶುರುವಾಯಿತು ಅಂದರೆ ಹಬ್ಬಗಳ ಸಾಲು. ಈ ಮಾಸದ ಮೊದಲ ಹಬ್ಬ ನಾಗರ ಪಂಚಮಿ. ಹಾವಿನ ಹಬ್ಬ. ಹಿಂದೂ ಕ್ಯಾಲೆಂಡರ್ ಪ್ರಕಾರ, ಹಾವಿನ ದೇವರಿಗೆ ಪ್ರಾರ್ಥನೆ ಸಲ್ಲಿಸಲು ಮೀಸಲಾಗಿರುವ ದಿನ ಇದು. ಇಲ್ಲಿದೆ ಹಾವಿನ ಹಬ್ಬದ ಆಚರಣೆ ಹಾಗೂ ಈ ಬಾರಿ ಮುಹೂರ್ತದ ವಿವರ.
ಶ್ರಾವಣ ಮಾಸದಲ್ಲಿ ಬರುವ ನಾಗ ಪಂಚಮಿ ಹಿಂದೂಗಳ ಶ್ರೇಷ್ಟ ಹಬ್ಬಗಳಲ್ಲಿ ಒಂದಾಗಿದೆ.
ಈ ವರ್ಷ, ನಾಗ ಪಂಚಮಿ ಜುಲೈ 25, 2020 ರಂದು ಶನಿವಾರ ಆಚರಿಸಲಾಗುವುದು.
ಆದಾಗ್ಯೂ, ರಾಜಸ್ಥಾನ ಮತ್ತು ಗುಜರಾತಿನ ಸ್ಥಳಗಳಲ್ಲಿ, ನಾಗ್ ಪಂಚಮಿಯನ್ನು ಅದೇ ತಿಂಗಳ ಕೃಷ್ಣ ಪಕ್ಷದಲ್ಲಿಯೂ ಆಚರಿಸುತ್ತಾರೆ.
ಪಂಚಮಿ ತಿಥಿ ಜುಲೈ 24, 2020 ರಂದು 06:04 PM ಪ್ರಾರಂಭವಾಗಿ ಜುಲೈ 25, 2020 ರಂದು 03:32 PM ಕೊನೆಗೊಳ್ಳುತ್ತದೆ.
ನಾಗಪಂಚಮಿ ಪೂಜಾ ಮೂಹರ್ತ - 05:24 AM ರಿಂದ 08:19 AM
ಮಹಿಳೆಯರು ಹಾವಿನ ದೇವರನ್ನು ಅಥವಾ ನಾಗ ದೇವತೆಯನ್ನು ಪೂಜಿಸುತ್ತಾರೆ. ಹಾವಿಗೆ ಹಾಲನ್ನು ಸಹ ಅರ್ಪಿಸುತ್ತಾರೆ. ಇದು ಹಾವಿನ ದೇವರುಗಳಿಗೆ ಹಾಲು ಅರ್ಪಿಸುವುದನ್ನು ಸಂಕೇತಿಸುತ್ತದೆ.
ಮಹಿಳೆಯರು ತಮ್ಮ ಸಹೋದರರು ಮತ್ತು ಕುಟುಂಬ ಸದಸ್ಯರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾರೆ ಈ ಹಬ್ಬದಂದು.
ಈ ದಿನ 12 ಸರ್ಪ ದೇವರುಗಳನ್ನು ಪೂಜಿಸುವುದು ಶುಭವೆಂದು ನಂಬಲಾಗಿದೆ.
ಭಕ್ತರು ಅನಂತ, ವಾಸುಕಿ, ಶೇಷ, ಪದ್ಮ, ಕಂಬಳ, ಕಾರ್ಕೋಟಕಾ, ಅಶ್ವತಾರ, ಧೃತರಾಷ್ಟ್ರ, ಶಂಖಪಾಲ, ಕಲಿಯ, ತಕ್ಷಕ ಮತ್ತು ಪಿಂಗಲಾ ದೇವರುಗಳನ್ನು ಪ್ರಾರ್ಥಿಸುತ್ತಾರೆ.
ಹಾವಿನ ಹುತ್ತಗಳಿಗೆ ಆರಿಶಿನ , ಕುಂಕುಮ ಹಾಗೂ ಹೂವುಗಳನ್ನು ಅರ್ಪಿಸಿ ಪೂಜೆ ಸಲ್ಲಿಸುವುದು ಈ ಹಬ್ಬದ ಸಾಮಾನ್ಯ ಕ್ರಮವಾಗಿದೆ.
ಈ ಹಬ್ಬದ ಆಚರಣೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಿಭಿನ್ನವಾಗಿ ಕಂಡುಬರುತ್ತದೆ. ಹಬ್ಬದ ಒಂದು ದಿನ ಮೊದಲು ಅನೇಕ ಮಹಿಳೆಯರು ಉಪವಾಸ ಆಚರಿಸಿದರೆ, ಇನ್ನೂ ಕೆಲವರು ಹಬ್ಬದ ದಿನದಂದೇ ಉಪವಾಸ ಮಾಡುತ್ತಾರೆ. ಕೆಲವು ಕಡೆ ಉಪ್ಪು ಹಾಕದ ಆಹಾರವನ್ನು ಸೇವಿಸುತ್ತಾರೆ.
ಹಾವಿನ ದೇವರು ಅಥವಾ ಶಿವನಿಗೆ ಹಾಲು ಅಥವಾ ಖೀರಿನ ನೇವದ್ಯ ಮಾಡಲಾಗುತ್ತದೆ.
ನಮ್ಮ ಓದುಗರಿಗೆ ನಾಗರ ಪಂಚಮಿ ಶುಭಾಶಯಗಳು!