Asianet Suvarna News Asianet Suvarna News

ಯಾವುದೋ ಹೊಸ ಸ್ಥಳಕ್ಕೆ ಹೋದಾಗ, ಅಲ್ಲಿಗೆ ಆಗಲೇ ಬಂದ ಹಾಗೆ ಅನಿಸೋದು ಯಾಕೆ?

 ಸಹಜವಾಗಿ ಹಿಂದಿನ ಜೀವನದಲ್ಲಿ ನಾವೇನು ಆಗಿದ್ದಿರಬಹುದು ಎನ್ನುವ ಕುತೂಹಲ ಇದ್ದೇ ಇರುತ್ತದೆ. ಅದನ್ನು ಅರಿಯಲು ಕೆಲವು ಮಾರ್ಗಗಳನ್ನು ಅನುಸರಿಸಬಹುದು. ಇದರಿಂದ ಇಂದಿನ ಜೀವನವನ್ನು ಹೆಚ್ಚು ಅರ್ಥ ಮಾಡಿಕೊಳ್ಳಲು, ನಿಭಾಯಿಸಲು ಸಾಧ್ಯ.

 

How to know about previous life tips to know previous life sum
Author
First Published Oct 31, 2023, 5:02 PM IST

ಸನಾತನ ಧರ್ಮ ಮರುಜನ್ಮದಲ್ಲಿ ನಂಬಿಕೆ ಇಟ್ಟಿದೆ. ಹೀಗಾಗಿ, ಜನ್ಮಾಂತರಗಳ ಪಾಪ-ಪುಣ್ಯಗಳನ್ನು ನಾವು ನಂಬುತ್ತೇವೆ. ಮುಂದಿನ ಜನ್ಮದಲ್ಲಿ ಉತ್ತಮ ಜೀವನ ಬೇಕು ಎಂದಾದರೆ ಈ ಜನ್ಮದಲ್ಲಿ ಉತ್ತಮ ಕೆಲಸಗಳನ್ನೇ ಮಾಡಬೇಕು ಎಂದು ಹಿರಿಯರು ನಮಗೆಲ್ಲ ಕಿವಿಮಾತು ಹೇಳುತ್ತಲೇ ಇರುತ್ತಾರೆ. ಹಿಂದಿನ ಜನ್ಮದ ಪ್ರಭಾವದಿಂದಲೇ ನಾವು ಇಂದಿನ ಬದುಕನ್ನು ಬಾಳುತ್ತಿದ್ದೇವೆ ಎಂದು ಹೇಳಲಾಗುತ್ತದೆ. ಸಹಜವಾಗಿ ನಮ್ಮೆಲ್ಲರಿಗೂ ಹಿಂದಿನ ಜನ್ಮದಲ್ಲಿ ನಾವೇನು ಆಗಿದ್ದಿರಬಹುದು, ಮುಂದಿನ ಜನ್ಮದಲ್ಲಿ ಏನಾಗಬಹುದು ಎನ್ನುವ ಕುತೂಹಲ ಇದ್ದೇ ಇರುತ್ತದೆ. ಮುಂದಿನ ಜನ್ಮದಲ್ಲಿ ಏನಾಗುತ್ತೇವೆಯೋ ಗೊತ್ತಿಲ್ಲ. ಆದರೆ, ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದಿನ ಹಲವು ಸಂಗತಿಗಳನ್ನು ಆಧರಿಸಿ ಹಿಂದಿನ ಜನ್ಮದಲ್ಲಿ ನಾವೇನು ಆಗಿದ್ದೆವು ಎನ್ನುವುದನ್ನು ಅಂದಾಜು ಮಾಡಬಹುದು. ತೀರ ಅಪರಿಚಿತ ಸ್ಥಳಕ್ಕೆ ಹೋದಾಗಲೂ ಪರಿಚಿತ ಭಾವನೆ ಮೂಡುವುದು, ಅದೇ ಮೊದಲ ಬಾರಿ ಭೇಟಿಯಾದ ವ್ಯಕ್ತಿಗಳ ಬಗ್ಗೆ ಏನೋ ಅರಿಯದ ಆತ್ಮೀಯತೆ ಕಾಣುವುದೆಲ್ಲ ಹಿಂದಿನ ಜನ್ಮಗಳ ಪ್ರಭಾವ ಎನ್ನಲಾಗುತ್ತದೆ. ನಮ್ಮ ಆತ್ಮ ಹಲವು ದೇಹಗಳಲ್ಲಿ ವಾಸಿಸುತ್ತದೆ. ಹೀಗಾಗಿ, ಪ್ರಸ್ತುತ ವ್ಯಕ್ತಿತ್ವ, ಸಂಬಂಧಗಳು, ಆರೋಗ್ಯ, ಅನಾರೋಗ್ಯ ಮತ್ತು ನಾವು ಎದುರಿಸುವ ಸವಾಲುಗಳು ಸಹ ಹಿಂದಿನ ಜನ್ಮದ ನೆರಳಿಗೆ ಒಳಪಟ್ಟಿವೆ. ಕೆಲವು ಮಾರ್ಗಗಳ ಮೂಲಕ ಹಿಂದಿನ ಜನ್ಮದಲ್ಲಿ ನಾವೇನಾಗಿದ್ದೆವು ಎನ್ನುವುದರ ಪರಿಜ್ಞಾನ ಹೊಂದಬಹುದು ಎನ್ನಲಾಗುತ್ತದೆ. 

•    ಧ್ಯಾನ (Meditation) ಮತ್ತು ಹಿಂಚಲನೆ (Regression)
ಹಿಂದಿನ ಜನ್ಮದ ಬಗ್ಗೆ ಅರಿತುಕೊಳ್ಳಲು ಧ್ಯಾನ ಮತ್ತು ಹಿಂಚಲನೆ ಅಥವಾ ನಿವರ್ತನ ಅತ್ಯಂತ ಪರಿಣಾಮಕಾರಿ ಮಾರ್ಗಗಳಾಗಿವೆ. ಆಳವಾದ ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಂಡವರಿಗೆ ಹಿಂದಿನ ಜನ್ಮದ (Past Life) ಸ್ಥೂಲವಾದ ಅಂದಾಜು ದೊರೆಯುತ್ತದೆ. ಹಲವರು ಹಿಂದಿನ ಅನುಭವಗಳಿಗೆ (Experience) ಒಳಗಾಗುವುದಿದೆ. ಹಿಂದಿನ ಜನ್ಮದ ಪುನಃಸ್ಮರಣೆ ಮಾಡಿಕೊಳ್ಳಲು ಥೆರಪಿಸ್ಟ್ (Therapist) ಗಳು ನೆರವಾಗಬಲ್ಲರು. 

ಈ ರಾಶಿಯವರಷ್ಟು ಅದೃಷ್ಟ ಯಾರಿಗೂ ಇಲ್ಲ, ವಿಶೇಷ ಯೋಗದಿಂದ ಹರಿದು ಬರುವುದು ಧನ ಸಂಪತ್ತು

•    ಕನಸುಗಳು (Dreams)
ನಿಮ್ಮ ಕನಸುಗಳು ಮತ್ತು ದೃಷ್ಟಿಕೋನವನ್ನು ಸೂಕ್ಷ್ಮವಾಗಿ ಪರಿಗಣಿಸಿ. ಇವು ನಿಮ್ಮ ಹಳೆಯ ಜನ್ಮದ ಕುರಿತು ಸುಳಿವು (Clue) ನೀಡಬಲ್ಲವು ಎನ್ನಲಾಗುತ್ತದೆ. ಕನಸುಗಳ ಅನುಭವಗಳು ಹಿಂದಿನ ಸ್ಮರಣೆಯ (Memory) ಪರಿಣಾಮವಾಗಿವೆ ಎನ್ನಲಾಗುತ್ತದೆ. 

•    ಪರಿಚಿತ (Known) ಭಾವನೆ
ಎಲ್ಲೋ ಹೊಸ ಸ್ಥಳಕ್ಕೆ (Place) ಹೋಗಿದ್ದೀರಿ, ಯಾರನ್ನೋ ಮೊದಲ ಬಾರಿ ಭೇಟಿಯಾಗಿದ್ದೀರಿ ಎಂದರೂ ಆ ಸ್ಥಳದ ಬಗ್ಗೆ, ಆ ವ್ಯಕ್ತಿಗಳ ಬಗ್ಗೆ ಪರಿಚಿತ ಭಾವನೆ, ಆತ್ಮೀಯತೆ (Intimacy) ಮೂಡುವುದು ಸಹ ಹಿಂದಿನ ಜನ್ಮದ ಪ್ರಭಾವವಾಗಿದೆ. ಅಂತಹ ಕ್ಷಣಗಳಲ್ಲಿ ನಿಮಗೇನು ಅನಿಸುತ್ತಿದೆ ಎನ್ನುವುದನ್ನು ನಿಖರವಾಗಿ, ಸೂಕ್ಷ್ಮವಾಗಿ ಅವಲೋಕನ ಮಾಡಿಕೊಳ್ಳಿ.

•    ಹಿಪ್ನಾಸಿಸ್ (Hypnosis) 
ಚಲನಚಿತ್ರಗಳಲ್ಲಿ ಹಿಪ್ನಾಟಿಸಂ ಅನ್ನು ನಾಟಕೀಯವಾಗಿ ತೋರಿಸಲಾಗುತ್ತದೆ. ಆದರೆ, ಇದೊಂದು ಅಪ್ಪಟ ಸೈನ್ಸ್. ತಜ್ಞ ಹಿಪ್ನಾಟಿಸ್ಟ್ ನಿಮ್ಮ ಸುಪ್ತಪ್ರಜ್ಞೆಯಲ್ಲಿರುವ (Subconscious) ಸ್ಮರಣೆಗಳನ್ನು ಹೊರತೆಗೆಯಬಲ್ಲರು. 

•    ಆಸಕ್ತಿಯೇನು?
ಮನುಷ್ಯನ ಪ್ರತಿಭೆ (Talent), ಆಸಕ್ತಿ, ಹವ್ಯಾಸಗಳಿಗೆ ಹಿಂದಿನ ಹುಟ್ಟಿನ ನಂಟಿದೆ. ಹಿಂದಿನ ಜೀವನದ ಪ್ರಭಾವದಿಂದ ನಿರ್ದಿಷ್ಟ ಸಂಸ್ಕೃತಿ, ವೃತ್ತಿಯ ಬಗ್ಗೆ ಒಲವು (Love) ಉಂಟಾಗಬಹುದು.

ಮನೆಯಲ್ಲಿ ಮರೆತೂ ಈ ಹೂವುಗಳನ್ನು ಇಡಬೇಡಿ..!

•    ಸಂಬಂಧಗಳು (Relations)
ನಿಮಗೆ ಯಾರೊಂದಿಗೆ ಭಾವನಾತ್ಮಕವಾಗಿ ಆಳವಾದ ಮೈತ್ರಿ ಉಂಟಾಗಿದೆ ಎಂದು ಚೆಕ್ ಮಾಡಿಕೊಳ್ಳಿ. ಆ ವ್ಯಕ್ತಿಗಳು ಹಿಂದಿನ ಜನ್ಮಕ್ಕೆ ಸಂಬಂಧಿಸಿದವರಾಗಿರಬಹುದು. ಆತ್ಮೀಯ ಭಾವನೆಯಿಂದ ಅನುಭವಗಳನ್ನು ಹಂಚಿಕೊಳ್ಳುವುದು ಎಲ್ಲರ ಜತೆಗೆ ಸಾಧ್ಯವಾಗುವುದಿಲ್ಲ. 

•    ಆಧ್ಯಾತ್ಮಿಕ ಗುರುವಿನ ಮಾರ್ಗದರ್ಶನ, ಆತ್ಮಾವಲೋಕನ (Introspect)
ಆಧ್ಯಾತ್ಮಿಕ ಗುರುವಿನ ಮಾರ್ಗದರ್ಶನದಲ್ಲಿ ಹಿಂದಿನ ಸ್ಮರಣೆಯನ್ನು  ಹೊಂದಬಹುದು. ಹಾಗೆಯೇ, ಆತ್ಮಾವಲೋಕನದ ಮೂಲಕವೂ ಹಿಂದಿನ ಜೀವನದ ಬಗ್ಗೆ ಅಂದಾಜು ಹೊಂದಬಹುದು. ನಿಮಗೆ ಯಾವ ವಿಚಾರದ ಬಗ್ಗೆ ಭಯವಿದೆ, ಯಾರನ್ನು ಕಂಡರೆ ಆಗುವುದಿಲ್ಲ, ಯಾರನ್ನು ಕಂಡರೆ ಇಷ್ಟವಾಗುತ್ತದೆ, ಯಾವ ಸ್ಥಳಗಳು ಖುಷಿ ನೀಡುತ್ತವೆ ಎನ್ನುವುದನ್ನು ಅರಿತುಕೊಳ್ಳಿ. ಇವೂ ಸಹ ಹಿಂದಿನ ಜೀವನಕ್ಕೆ ಸಂಬಂಧಪಟ್ಟಿರಬಹುದು.

Follow Us:
Download App:
  • android
  • ios