ಮಾಟ-ಮಂತ್ರ ಅಂದಾಕ್ಷಣ ಭಯ ಪಡ್ಬೇಕಾಗಿಲ್ಲ, ಕೆಟ್ಟ ಪ್ರಭಾವದಿಂದ ದೂರವಿರೋಕೆ ದಾರಿ ಇವೆ
ಮಾಟ-ಮಂತ್ರಗಳು ಎಂದಾಕ್ಷಣ ಸಾಮಾನ್ಯವಾಗಿ ಎಲ್ಲರೂ ಭಯಭೀತರಾಗುತ್ತಾರೆ. ಮಾಟ-ಮಂತ್ರಗಳು ಜೀವನದ ಹದವನ್ನು ತಪ್ಪಿಸುತ್ತವೆ ಎನ್ನುವುದು ನಿಜವಾದರೂ ಸೂಕ್ತವಾದ ಜ್ಯೋತಿಷ್ಯ ಶಾಸ್ತ್ರದ ಮಾರ್ಗಗಳನ್ನು ಅನುಸರಿಸುವ ಮೂಲಕ ಅವುಗಳ ಪ್ರಭಾವದಿಂದ ದೂರವಿರಬಹುದು.

ಬ್ರಹ್ಮಾಂಡದಲ್ಲಿ ನಮ್ಮ ಅರಿವಿಗೆ ಬಾರದ ಅದೆಷ್ಟೋ ಸಂಗತಿಗಳಿವೆ. ಕಣ್ಣಿಗೆ ಕಾಣದ ಪ್ರಭಾವಗಳು ನಮ್ಮ ಮೇಲೆ ಉಂಟಾಗುತ್ತಿರುತ್ತವೆ. ಅವುಗಳಿಂದಾಗಿ ಅನಿರೀಕ್ಷಿತ ಮಾರ್ಗದಲ್ಲಿ ನಾವು ಸಾಗುವಂತಾಗುತ್ತದೆ. ಶತಶತಮಾನಗಳಿಂದಲೂ ಮನುಷ್ಯನನ್ನು ಹೆದರಿಸುತ್ತಿರುವ ಒಂದು ಸಂಗತಿಯಿದೆ. ಅದು, ಮಾಟ-ಮಂತ್ರಗಳು. ತಂತ್ರ ವಿದ್ಯೆ ಎನ್ನುವ ಪ್ರಕಾರವೇ ಇರುವುದರಿಂದ ಅದನ್ನು ಸಹಜವಾಗಿ ಆರಾಧಿಸುವವರು, ಕರಗತ ಮಾಡಿಕೊಳ್ಳುವವರಿದ್ದಾರೆ. ತಮ್ಮ ವಿರೋಧಿಗಳನ್ನು ಹಣಿಯಲು ಬಹಳಷ್ಟು ಜನರು ತಂತ್ರ ವಿದ್ಯೆಗಳು ಅಥವಾ ಮಾಟ-ಮಂತ್ರಗಳ ಮೊರೆ ಹೋಗುತ್ತಾರೆ. ಅವುಗಳ ಪ್ರಭಾವದಿಂದ ಜೀವನದಲ್ಲಿ ಸಾಕಷ್ಟು ಏರಿಳಿತಗಳು ಸಂಭವಿಸಬಹುದು. ಮಾಟಮಂತ್ರಗಳ ಶಕ್ತಿಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ, ಅವುಗಳ ಪ್ರಭಾವ ನಮ್ಮ ಮೇಲೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದಾದರೆ ಹಲವು ಮಾರ್ಗಗಳಿವೆ. ಜ್ಯೋತಿಷ್ಯ ಶಾಸ್ತ್ರದ ಪರಿಹಾರಗಳನ್ನು ಅಳವಡಿಸಿಕೊಂಡು ಮಾಟ-ಮಂತ್ರಗಳ ಸುಳಿಯಲ್ಲಿ ಸಿಲುಕದಂತೆ ಮಾಡಿಕೊಳ್ಳಬಹುದು. ಕೆಲವು ನೆಗೆಟಿವ್ ಕಾಸ್ಮಿಕ್ ಶಕ್ತಿಗಳಿಗೆ ಹೆಚ್ಚಿನ ಚೈತನ್ಯ ತುಂಬುವ ಮೂಲಕ ಮನುಷ್ಯನ ಜೀವನ, ಸುಖ, ನೆಮ್ಮದಿ, ಆರೋಗ್ಯ, ಆರ್ಥಿಕ ಹಾನಿ ಉಂಟಾಗುವಂತೆ ಮಾಡುವ ಕ್ರಿಯೆಯೇ ಮಾಟ. ಆಗ ಜೀವನದಲ್ಲಿ ಸೌಹಾರ್ದತೆ, ಸಾಮರಸ್ಯ ಇಲ್ಲವಾಗುತ್ತದೆ. ಈ ಸಮಸ್ಯೆಯಿಂದ ಪಾರಾಗಲು ಜ್ಯೋತಿಷ್ಯ ಶಾಸ್ತ್ರವನ್ನು ಗುರಾಣಿಯಂತೆ ಬಳಕೆ ಮಾಡಿಕೊಳ್ಳಬಹುದು.
ಮಾಟವನ್ನು (Black Magic) ಹೇಗೆ ಅರ್ಥೈಸಿಕೊಳ್ಳಬೇಕು?
ಮಾಟ-ಮಂತ್ರದ ಋಣಾತ್ಮಕ ಪ್ರಭಾವ (Negative Effect) ಇದ್ದಾಗ ಹಣಕಾಸಿನ (Financial) ನಷ್ಟ, ಆರೋಗ್ಯ (Health) ಸಮಸ್ಯೆಗಳು ಉಂಟಾಗುತ್ತವೆ. ವ್ಯಕ್ತಿತ್ವದಲ್ಲಿ ಹಠಾತ್ ಬದಲಾವಣೆ, ಉದ್ಯೋಗ ನಷ್ಟ, ಸಂಬಂಧಗಳಲ್ಲಿ ಸಮಸ್ಯೆ ಹೆಚ್ಚಬಹುದು. ತಜ್ಞ ಜ್ಯೋತಿಷಿಗಳು (Astrologers) ಜನ್ಮಕುಂಡಲಿಯನ್ನು (Birth Chart) ನೋಡಿ ಮಾಟದ ಪ್ರಭಾವವನ್ನು ಅರಿಯಬಲ್ಲರು. ಕುಂಡಲಿಯಲ್ಲಿ ಸ್ಥಿತವಾಗಿರುವ ಶನಿ ಮತ್ತು ರಾಹು ಗ್ರಹಗಳ ನಿರ್ದಿಷ್ಟ ಸ್ಥಾನವನ್ನು ಗ್ರಹಿಸಿ ಅವರು ತಿಳಿಸುತ್ತಾರೆ. ಜೀವನದಲ್ಲಿ ಏರಿಳಿತಗಳು, ನೋವು, ದುಃಖ ಉಂಟಾಗುವುದು ಸಹಜ. ಅವೆಲ್ಲವೂ ಮಾಟಕ್ಕೆ ಸಂಬಂಧಿಸಿಲ್ಲ. ಆದರೆ, ನಿರಂತರವಾಗಿ ಹೀಗಾದರೆ ಎಚ್ಚೆತ್ತುಕೊಳ್ಳಬೇಕು.
ಶುಕ್ರ ಗೋಚಾರ, ಇಂದಿನಿಂದ ಈ ರಾಶಿಗೆ ಅದೃಷ್ಟ
ಪರಿಹಾರಗಳು (Remedies)
• ಮಂತ್ರಗಳು, ಶ್ಲೋಕಗಳು
ನಿರ್ದಿಷ್ಟ ಮಂತ್ರ (Mantra) ಮತ್ತು ಶ್ಲೋಕಗಳು (Chants) ಮಾಟ-ಮಂತ್ರದ ನಕಾರಾತ್ಮಕ ಪ್ರಭಾವವನ್ನು ದೂರವಿಟ್ಟು ರಕ್ಷಿಸುತ್ತವೆ. ನಿಯಮಿತವಾಗಿ ಅವುಗಳನ್ನು ಪಠಿಸುವುದರಿಂದ ಧನಾತ್ಮಕ ವಲಯ (Positive Aura) ರಚನೆಯಾಗಿ ಮಾಟದಿಂದಾಗುವ ಹಾನಿ ನಾಶವಾಗುತ್ತದೆ. ಇವುಗಳನ್ನು ಅವರವರ ಕುಂಡಲಿಯನ್ನು ಪರಿಗಣಿಸಿ ಜ್ಯೋತಿಷ್ಯ ಶಾಸ್ತ್ರಜ್ಞರು ತಿಳಿಸಿಕೊಡಬಲ್ಲರು.
• ರತ್ನಗಳ (Gemstones) ಬಳಕೆ
ನಿರ್ದಿಷ್ಟ ಹರಳು, ರತ್ನಗಳನ್ನು ಬಳಕೆ ಮಾಡುವುದರಿಂದ ಮಾಟದ ಪ್ರಭಾವದಿಂದ ಮುಕ್ತರಾಗಲು ಸಾಧ್ಯ. ಜ್ಯೋತಿಷ್ಯ ಶಾಸ್ತ್ರಜ್ಞರೇ ಇದನ್ನು ಸೂಚಿಸಬಲ್ಲರು. ನಿಮ್ಮ ಗ್ರಹಗಳಿಗೆ (Planet) ಅನುಗುಣವಾಗಿ ಇವುಗಳನ್ನು ಧರಿಸಬೇಕು. ಧನಾತ್ಮಕ ಪ್ರಭಾವ ಹೆಚ್ಚಿಸುವಲ್ಲಿ ರತ್ನಗಳ ಕೊಡುಗೆ ಅಪಾರ.
• ಯಂತ್ರಗಳು (Yantra)
ಯಂತ್ರಗಳು ನಿಗೂಢ ಶಕ್ತಿಯನ್ನು ಆವಾಹನೆ ಮಾಡಿಕೊಂಡಿರುವ ಸಂಕೇತವಾಗಿವೆ. ಧನಾತ್ಮಕ ಎನರ್ಜಿಯನ್ನು (Energy) ಸೆಳೆಯಲು, ನಕಾರಾತ್ಮಕತೆಯನ್ನು ದೂರ ಮಾಡಲು ಇವು ಸಹಕಾರಿ. ಮನೆ, ಕಚೇರಿಯಲ್ಲಿ ಯಂತ್ರಗಳನ್ನು ಇಟ್ಟುಕೊಳ್ಳುವುದರಿಂದ ರಕ್ಷಣಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ.
ಗಂಡನ ಮೇಲೆ ಮಾಟ-ಮಂತ್ರ ಮಾಡಿ ಜೀವ ಭಯ ಹುಟ್ಟಿಸಿದ ಪತ್ನಿ: ಠಾಣೆಗೆ ಪತಿ ದೂರು
• ಧಾರ್ಮಿಕ ಆಚರಣೆ (Rituals)
ಗ್ರಹಗಳಿಂದ ನಮ್ಮ ಮೇಲಾಗುವ ಸಕಾರಾತ್ಮಕ ಪ್ರಭಾವವನ್ನು ಹೆಚ್ಚಿಸಲು ಕೆಲವು ಧಾರ್ಮಿಕ ಆಚರಣೆಗಳು, ಪೂಜೆ, ಪುನಸ್ಕಾರಗಳನ್ನು ಮಾಡಲಾಗುತ್ತದೆ. ವ್ಯಕ್ತಿಗತ ಪರಿಸ್ಥಿತಿಗೆ ತಕ್ಕಂತೆ ಇವು ಭಿನ್ನವಾಗಿದ್ದು, ಮಾಟಗಳ ದುಷ್ಟ ಪ್ರಭಾವವು ಇಲ್ಲವಾಗುವಂತೆ ಮಾಡುತ್ತವೆ.
• ದಾನ (Donations)
ಸಾಮಾನ್ಯವಾಗಿ ಮಾಟಕ್ಕೆ ಒಳಗಾದವರಿಗೆ ದಾನ ಮಾಡಲು ಸೂಚಿಸಲಾಗುತ್ತದೆ. ಕರುಣೆಯಿಂದ ದಾನ ಮಾಡುವ ಕ್ರಿಯೆಯಿಂದಾಗಿ ನಮ್ಮ ಕರ್ಮ (Karma) ಮತ್ತು ಮಾಟದ ನೆಗೆಟಿವ್ ಪ್ರಭಾವದ ನಡುವೆ ಸಮತೋಲನ ಸೃಷ್ಟಿಯಾಗುತ್ತದೆ.
• ಧ್ಯಾನ ಮತ್ತು ಯೋಗ (Meditation and Yoga)
ದಿನವೂ ಧ್ಯಾನ ಮತ್ತು ಯೋಗವನ್ನು ಅಭ್ಯಾಸ ಮಾಡುವವರಿಗೆ ಮಾಟ-ಮತ್ರದ ಕೆಟ್ಟ ಪ್ರಭಾವ ತಟ್ಟುವುದಿಲ್ಲ. ಇವು ಸಕಾರಾತ್ಮಕ ಶಕ್ತಿಯನ್ನು ಜಾಗೃತಗೊಳಿಸುವ, ಚೈತನ್ಯ, ಪ್ರಭೆಯನ್ನು ಹೆಚ್ಚಿಸುವ, ಮನಸ್ಸನ್ನು ಸದೃಢಗೊಳಿಸುವ ಮಾರ್ಗವಾಗಿವೆ. ಇವುಗಳ ಅಭ್ಯಾಸದಿಂದ ಮನಸ್ಸಿನ ದುರ್ಬಲತೆ ನಾಶವಾಗುತ್ತದೆ. ದೇಹದ ಎಲ್ಲ ಏಳು ಚಕ್ರಗಳ (Chakras) ನಡುವೆ ಸಮನ್ವಯತೆ ಹೆಚ್ಚುತ್ತದೆ ಹಾಗೂ ಇಡೀ ದೇಹ ಧನಾತ್ಮಕ ಶಕ್ತಿಯ ಆಕರವಾಗುತ್ತದೆ.