ಸಂಸಾರದಲ್ಲಿ ಜಗಳ ಹೆಚ್ಚಾಯ್ತಾ? ಜ್ಯೋತಿಷ್ಯ ಶಾಸ್ತ್ರದ ಪರಿಹಾರ ಇಲ್ಲಿವೆ ನೋಡಿ

ಸಂಸಾರದಲ್ಲಿ ಪದೇ ಪದೇ ಭಿನ್ನಾಭಿಪ್ರಾಯಗಳು, ಜಗಳ, ಕಿರಿಕಿರಿ ಉಂಟಾಗುತ್ತಿದ್ದರೆ ಜ್ಯೋತಿಷ್ಯ ಶಾಸ್ತ್ರದ ಮೊರೆ ಹೋಗುವುದು ಉಚಿತ. ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ಸಂಸಾರದಲ್ಲಿ ಸುಖ, ಸಾಮರಸ್ಯ ಹೆಚ್ಚುತ್ತದೆ. ಇವುಗಳಿಂದ ದಾಂಪತ್ಯ ದೀರ್ಘಕಾಲ ಚೆನ್ನಾಗಿರುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
 

How to find remedy for marital conflicts according to astrology sum

ಸಂಸಾರದಲ್ಲಿ ಭಿನ್ನಾಭಿಪ್ರಾಯಗಳಿರುವುದು ಸಹಜ. ಇಬ್ಬರು ಭಿನ್ನ ವ್ಯಕ್ತಿಗಳು ಜತೆಯಾಗಿ ಜೀವನ ನಡೆಸುವಾಗ ಬಿಕ್ಕಟ್ಟು, ಸಂಘರ್ಷ, ತಿಕ್ಕಾಟಗಳು ನಡೆಯುವುದು ಸಾಮಾನ್ಯ. ಏಕೆಂದರೆ, ಸಂಪೂರ್ಣ ವಿಭಿನ್ನ ದೃಷ್ಟಿಕೋನ ಹೊಂದಿರುವ ವ್ಯಕ್ತಿಗಳು ದೀರ್ಘಕಾಲ ಜತೆಯಾಗಿರುವುದು ಸುಲಭವೇನೂ ಅಲ್ಲ. ಆದರೆ, ಸಂಸಾರದಲ್ಲಿ ಆಗಾಗ ಹುಟ್ಟುವ ಈ ಬಿಕ್ಕಟ್ಟುಗಳು ಬಹುಮಟ್ಟಿಗೆ ನಿರುಪದ್ರವಿಯಾಗಿರುತ್ತವೆ. ಅಂದರೆ, ಅವು ಸಂಸಾರವನ್ನು ಛಿದ್ರಗೊಳಿಸುವ ಮಟ್ಟಿಗೆ ಇರುವುದಿಲ್ಲ. ಅಥವಾ ಅಷ್ಟು ಬೆಳೆಯಲು ನಾವೇ ಬಿಡುವುದಿಲ್ಲ. ಸಂಸಾರವನ್ನು ಜೀವಂತಿಕೆಯಿಂದ ಇರುವಂತೆ ಪ್ರಯತ್ನಿಸುತ್ತಲೇ ಇರುತ್ತೇವೆ. ಇಲ್ಲಿ ನಮ್ಮ ಪ್ರಯತ್ನ ಅತ್ಯಗತ್ಯವಾಗಿರುತ್ತದೆ ಎಂದರೆ ತಪ್ಪಿಲ್ಲ. ಮದುವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹಗುರವಾಗಿ ತೆಗೆದುಕೊಂಡರೆ ಸಂಗಾತಿಯಿಂದ ದೂರವಾಗಬೇಕಾದ ಪರಿಸ್ಥಿತಿ ಏರ್ಪಡಬಹುದು. ಹೀಗಾಗಿ, ಎಲ್ಲ ರೀತಿಯಲ್ಲೂ ಪ್ರಯತ್ನ ನಡೆಸಬೇಕಾಗುತ್ತದೆ. ಇತ್ತೀಚೆಗೆಂತೂ ಆಪ್ತಸಮಾಲೋಚಕರಲ್ಲಿ ಸಲಹೆ ಪಡೆಯುವುದು ಸಾಮಾನ್ಯವಾಗಿದೆ. ಜತೆಗೆ, ಜ್ಯೋತಿಷ್ಯದ ಪ್ರಯೋಜನವನ್ನೂ ಪಡೆದುಕೊಳ್ಳುವುದು ಉತ್ತಮ. ಏಕೆಂದರೆ, ಗ್ರಹಗತಿ ಮತ್ತು ಕೆಲವು ಲೋಪದೋಷಗಳಿಂದ ಸಂಸಾರದಲ್ಲಿ ನಮಗೆ ಗೊತ್ತಿಲ್ಲದೇ ಬಿಕ್ಕಟ್ಟು ಉಂಟಾಗಬಹುದು. ಹೀಗಾಗಿ, ಅವುಗಳ ನಿವಾರಣೆಗೆ ಜ್ಯೋತಿಷ್ಯದ ಮೊರೆ ಹೋಗಬೇಕಾಗುತ್ತದೆ. ಕೆಲವು ಪರಿಹಾರೋಪಾಯಗಳನ್ನು ಅನುಸರಿಸುವುದರಿಂದ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. 

•    ಪ್ರೀತಿ, ಸಾಮರಸ್ಯ ಹೆಚ್ಚಿಸಲು ಶುಕ್ರನಿಗೆ (Venus) ಸಂಬಂಧಿಸಿದ ಪರಿಹಾರ
ಶುಕ್ರ ಗ್ರಹ (Planet) ಪ್ರೀತಿ (Love) ಮತ್ತು ಸಂಬಂಧಗಳನ್ನು (Relationship) ಬಿಂಬಿಸುವ ಗ್ರಹ. ವೈವಾಹಿಕ ಜೀವನದಲ್ಲಿ (Marital Life) ಬಹುಮುಖ್ಯ ಪಾತ್ರ ವಹಿಸುತ್ತದೆ. ಪರಸ್ಪರ ಬಾಂಧವ್ಯ ದೃಢವಾಗಿರಲು ವಜ್ರ (Diamond) ಅಥವಾ ಬಿಳಿ ಹರಳನ್ನು ಧರಿಸಬೇಕು. ಇದರಿಂದ ಶುಕ್ರ ಗ್ರಹದ ಧನಾತ್ಮಕ ಪರಿಣಾಮ ಉಂಟಾಗುತ್ತದೆ. ಹಾಗೆಯೇ, ದೇವರಿಗೆ ಬಿಳಿ ಹೂವು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಬೇಕು, ಇದರಿಂದ ಸಾಮರಸ್ಯ (Harmony) ಹೆಚ್ಚುತ್ತದೆ.

ಈ ನಕ್ಷತ್ರಗಳಲ್ಲಿ ಜನಿಸಿದ ಮಕ್ಕಳಿಂದ ಹೆತ್ತವರಿಗೆ ಕಂಟಕ; ಕೆಲವು ಹಂತಗಳಲ್ಲಿ ಅದೃಷ್ಟ..!

•    ಬಿಕ್ಕಟ್ಟು (Conflicts) ಕಡಿಮೆಗೊಳಿಸಲು ಮಂಗಳವನ್ನು ಶಾಂತಗೊಳಿಸುವುದು
ಮಂಗಳ (Mars) ಗ್ರಹದ ಶಕ್ತಿಯ ಪ್ರಭಾವದಿಂದ ಎಷ್ಟೋ ಬಾರಿ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಮಂಗಳ ಗ್ರಹವನ್ನು ಶಾಂತಗೊಳಿಸಲು ಕೆಂಪು ಧಾನ್ಯ (Red Lentils) ಮತ್ತು ಕೆಂಪು ಬಟ್ಟೆಯನ್ನು ಅಗತ್ಯವುಳ್ಳವರಿಗೆ ದಾನ ಮಾಡಬೇಕು. ಮಂಗಳ ಮಂತ್ರವನ್ನು ಜಪಿಸುವುದು ಸಹ ಸಹಕಾರಿ. ಇದರಿಂದ ಹಠಮಾರಿ (Aggressive) ಪ್ರವೃತ್ತಿ ಕಡಿಮೆಯಾಗಿ ಸಂಗಾತಿಯನ್ನು (Partner) ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

•    ದೀರ್ಘ ಸಂಬಂಧ, ಬದ್ಧತೆಗೆ (Commitment) ಗುರು ಗ್ರಹದ ಅನುಗ್ರಹ ಬೇಕು
ಗುರು (Jupiter) ಗ್ರಹ ಬುದ್ಧಿವಂತಿಕೆ ಮತ್ತು ಬದ್ಧತೆಯ ಪ್ರತೀಕವಾಗಿದೆ. ಸಂಬಂಧ ದೀರ್ಘವಾದ ಬದ್ಧತೆ ಹೊಂದಿರಲು ಗುರು ಪೂಜೆಯನ್ನು ಕೈಗೊಳ್ಳಬೇಕು. ಗುರುವಾರದಂದು ಹಳದಿ (Yellow) ವಸ್ತುಗಳನ್ನು ದಾನ ಮಾಡಬೇಕು. ಇದರಿಂದ ದಂಪತಿಯಲ್ಲಿ ಪರಸ್ಪರ ನಂಬಿಕೆ, ವಿಶ್ವಾಸ (Trust) ಹೆಚ್ಚುತ್ತದೆ. ವೈವಾಹಿಕ ಜೀವನ ಸದೃಢವಾಗುತ್ತದೆ.

•    ಭಾವನಾತ್ಮಕ ಬಾಂಧವ್ಯಕ್ಕೆ (Emotional Connection) ಚಂದ್ರನ ಪರಿಹಾರ
ಚಂದ್ರ (Moon) ಗ್ರಹ ಭಾವನೆಗಳು ಮತ್ತು ಸೂಕ್ಷ್ಮತೆಯನ್ನು ಆಳುತ್ತದೆ. ಭಾವನಾತ್ಮಕ ಬಾಂಧವ್ಯ ಗಟ್ಟಿಯಾಗಲು ಸೋಮವಾರದಂದು ಹಾಲು (Milk) ಅಥವಾ ಬಿಳಿ ಅಕ್ಕಿಯನ್ನು ಶಿವ-ಪಾರ್ವತಿಗೆ ಅರ್ಪಿಸಬೇಕು. ಹುಣ್ಣಿಮೆಯಂದು ಜತೆಯಾಗಿ ಧ್ಯಾನ (Meditation) ಮಾಡಿದರೆ ಸಂಬಂಧ ಆಳವಾಗುತ್ತದೆ.

ಹೆಣ್ಣಿಗೆ ಈ ಗುಣವಿದ್ದರೆ ಮಾತ್ರ ಮದುವೆಯಾಗಿ; ಹುಡುಗರೇ ಎಚ್ಚರ ಎಂದಿದ್ದಾರೆ ಚಾಣಕ್ಯ..!

•    ಸ್ಥಿರತೆಗೆ (Stability) ರಾಹು-ಕೇತು ಸಮತೋಲನ
ರಾಹು ಮತ್ತು ಕೇತುಗಳ (Rahu-Ketu) ಸ್ಥಾನವು ವೈವಾಹಿಕ ಜೀವನದಲ್ಲಿ ಸವಾಲುಗಳನ್ನು ಸೃಷ್ಟಿಸಬಹುದು. ನೀವು ಆರಾಧಿಸುವ ದೇವರ ಎದುರು ಸಾಸಿವೆ ಎಣ್ಣೆಯಿಂದ ದೀಪ ಬೆಳಗಿಸಬೇಕು. ರಾಹು ಮತ್ತು ಕೇತು ಮಂತ್ರ ಪಠಿಸುವುದರಿಂದ ಸಂಬಂಧದಲ್ಲಿ ಸ್ಥಿರತೆ ಲಭ್ಯವಾಗುತ್ತದೆ. ಹಾಗೆಯೇ, ಬೆಳ್ಳಿಯ (Silver) ಆಭರಣಗಳನ್ನು ಧರಿಸುವುದರಿಂದಲೂ ದಂಪತಿಯ ಶಕ್ತಿಗಳಲ್ಲಿ ಸಮತೋಲನ (Energy Balance) ಮೂಡುತ್ತದೆ. ಪರಸ್ಪರ ಮೂಡುವ ತಪ್ಪು ತಿಳಿವಳಿಕೆಗಳನ್ನು ಕಡಿಮೆಗೊಳಿಸಲು ಇದರಿಂದ ಸಾಧ್ಯ. 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂತಹ ಕ್ರಮಗಳಿಂದ ವೈವಾಹಿಕ ಜೀವನ ಸುಖ ಮತ್ತು ಸಾಮರಸ್ಯದಿಂದ ಕೂಡಿರುತ್ತದೆ. ಜತೆಯಾಗಿ ಬೆಳೆಯಬೇಕಾದರೆ ಇಬ್ಬರೂ ಪ್ರಯತ್ನಿಸಬೇಕು. 

Latest Videos
Follow Us:
Download App:
  • android
  • ios