Asianet Suvarna News Asianet Suvarna News

Navratri 2023: ಈ ಬಾರಿ ದುರ್ಗಾ ದೇವಿ ಆಗಮನ ಮತ್ತು ನಿರ್ಗಮನದ ವಾಹನ ಯಾವ್ದು ನೋಡಿ

ನವರಾತ್ರಿಯ ಸಂಭ್ರಮ ಎಲ್ಲೆಡೆ ಗರಿಗೆದರಿದೆ. ಈ ಬಾರಿ ಜಗದಂಬೆಯು ಆನೆಯ ಮೇಲೆ ಆಗಮಿಸುತ್ತಾಳೆ. ಆದರೆ, ಹುಂಜದ ಮೇಲೆ ನಿರ್ಗಮಿಸುತ್ತಾಳೆ. ಇದನ್ನು ಅಶುಭ ಎಂದು ಹೇಳಲಾಗಿದೆ. 
 

How Durga mata will come to earth this year sum
Author
First Published Oct 14, 2023, 4:29 PM IST

ನವರಾತ್ರಿಯ ಭಕ್ತಿಭಾವದ ಸಿಂಚನ ಎಲ್ಲೆಡೆ ಹರಡಿದೆ. ಸಂಭ್ರಮದಿಂದ ಹಬ್ಬವನ್ನು ಬರಮಾಡಿಕೊಳ್ಳಲು ಎಲ್ಲರೂ ಸನ್ನದ್ಧರಾಗಿದ್ದಾರೆ. ಅಂಬಿಕೆ, ಜಗದಂಬೆ, ಪಾರ್ವತೀ ದೇವಿ, ದುರ್ಗೆ, ಕಾಳಿ .. ಮುಂತಾದ ಹಲವಾರು ನಾಮಧೇಯಗಳಿಂದ ಸ್ತುತಿಸಲ್ಪಡುವ ದುರ್ಗಾ ದೇವಿಯ ನವ ಸ್ವರೂಪಗಳನ್ನು ಆರಾಧಿಸಲು ನವರಾತ್ರಿ ಅವಕಾಶ ನೀಡುತ್ತದೆ. ಅಷ್ಟೇ ಅಲ್ಲ, ದೇವಿಗೆ ಸಂಬಂಧಿಸಿದ ವಿಶೇಷತೆಗಳನ್ನು ಅರಿಯುವ ಅವಕಾಶವನ್ನೂ ನೀಡುತ್ತದೆ. ನಮಗೆಲ್ಲ ಗೊತ್ತೇ ಇರುವಂತೆ, ದುರ್ಗಾ ದೇವಿಯ ವಾಹನ ಸಿಂಹ. ಆದರೆ, ವಿಶೇಷವೆಂದರೆ, ನವರಾತ್ರಿಯ ಸಮಯದಲ್ಲಿ ದೇವಿ ದುರ್ಗೆಯ ಆಗಮನ ಹಾಗೂ ನಿರ್ಗಮನ ಬೇರೆ ಬೇರೆ ವಿಶೇಷ ವಾಹನಗಳ ಮೂಲಕ ಆಗುತ್ತದೆ. ಹೀಗಾಗಿ, ಪ್ರತಿ ನವರಾತ್ರಿಯಲ್ಲೂ ಮಾತೆ ದುರ್ಗೆ ಸಿಂಹದ ಹೊರತಾಗಿಯೂ ಬೇರೆ ವಾಹನಗಳ ಮೂಲಕ ಆಗಮಿಸುತ್ತಾಳೆ ಹಾಗೂ ನಿರ್ಗಮಿಸುತ್ತಾಳೆ. ಈ ಬಾರಿಯ ಶಾರದೀಯ ನವರಾತ್ರಿ ನಾಳೆಯಿಂದ ಆರಂಭವಾಗಿ, 24ರವರೆಗೆ ನಡೆಯಲಿದೆ. ತಜ್ಞರ ಪ್ರಕಾರ, ಈ ಬಾರಿ ಜಗದಂಬೆ ಅಥವಾ ದುರ್ಗಾ ಮಾತೆ ಆನೆಯ ಮೇಲೆ ಆಗಮಿಸಲಿದ್ದಾಳೆ ಹಾಗೂ ಹುಂಜದ ಮೇಲೆ ನಿರ್ಗಮಿಸಿದ್ದಾಳೆ. ಇದನ್ನು ಕೇಳಿ ಅಚ್ಚರಿಯಾಗಬಹುದು. ಈ ಹಿನ್ನೆಲೆಯಲ್ಲಿ ದುರ್ಗಾ ದೇವಿಯ ವಾಹನ ಯಾವುದೆಂದು ಹೇಗೆ ನಿರ್ಧಾರವಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಅಗತ್ಯ.
ಶಾಸ್ತ್ರಗಳ ಪ್ರಕಾರ, ಯಾವ ದಿನ ಅಥವಾ ವಾರದಂದು ನವರಾತ್ರಿ ಆರಂಭವಾಗುತ್ತದೆಯೋ ಅಂದಿನ ದಿನಕ್ಕೆ ಅನುಗುಣವಾಗಿ ದೇವಿ ದುರ್ಗಾ ಮಾತೆಯ ವಾಹನ ಯಾವುದೆಂದು ಹೇಳಲಾಗುತ್ತದೆ. 

30 ವರ್ಷಗಳ ನಂತರ ನವರಾತ್ರಿಯಲ್ಲಿ ವಿಶೇಷ ಯೋಗ, ಈ ರಾಶಿಯವರಿಗೆ ಉತ್ತಮ ಸಮಯ,ಬಂಪರ್ ಲಾಟರಿ..!

ಆನೆಯ (Elephant) ಮೇಲೆ ಆಗಮನ (Entry) ಶುಭ
ದೇವಿ ಭಾಗವತದಲ್ಲಿ- ಶಶಿಸೂರ್ಯೆ ಗಜಾರೂಢಾ ಶನಿಭೌಮೆ ತುರಂಗಮೇ
ಗುರೌ ಶುಕ್ರೇ ಚದೋಲಾಯಾಂ ಬುಧೇ ನೌಕಾ ಪ್ರಕೀರ್ತಿತಾ
ಎಂದು ಹೇಳಲಾಗಿದೆ. ಇದರ ಅರ್ಥ, ಒಂದೊಮ್ಮೆ ನವರಾತ್ರಿ ರವಿವಾರ (Sunday) ಅಥವಾ ಸೋಮವಾರದಂದು ಆರಂಭವಾದರೆ, ದೇವಿ ದುರ್ಗೆ (Durga Devi) ಆನೆಯ ಮೇಲೆ ಕುಳಿತು ಆಗಮಿಸುತ್ತಾಳೆ. ಈ ಬಾರಿ ರವಿವಾರದಂದು ನವರಾತ್ರಿ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ದುರ್ಗಾ ಮಾತೆ ಆನೆಯ ಮೇಲೆ ಆಗಮಿಸುತ್ತಾಳೆ. ಹೀಗೆ, ಆನೆಯ ಮೇಲೆ ಮಾತೆಯ ಆಗಮನವಾದಾಗ ಹೆಚ್ಚು ಮಳೆಯಾಗುತ್ತದೆ (Rain) ಎನ್ನಲಾಗಿದೆ. ಇದರಿಂದಾಗಿ, ಭೂಮಿಯಲ್ಲಿ ಸುಖ-ಸಮೃದ್ಧಿ (Prosperity) ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ, ದುರ್ಗಾ ದೇವಿಯ ಆಗಮನ ಆನೆಯ ಮೇಲೆ ಆಗುವುದು ಶುಭ (Good) ಸೂಚನೆಯೆಂದು ಪರಿಗಣಿಸಲಾಗಿದೆ. 

Navaratri 2023: ದುರ್ಗಾ ಮಾತೆ ಮಹಿಷಾಸುರನನ್ನು ವಧೆ ಮಾಡಿದ ಸ್ಥಳ ಎಲ್ಲಿದೆ ಗೊತ್ತಾ?

ದೇವಿ ಭಾಗವತದಲ್ಲಿ ಹೇಳಲಾಗಿದೆ-
ಶಶಿಸೂರ್ಯ ದಿನೆ ಯದಿ ಸಾ ವಿಜಯಾ ಮಹಿಷಾಗಮನೇ ರೂಜ ಶೋಕಕರಾ
ಶನಿಭೌಮದಿನೇ ಯದಿ ಸಾ ವಿಜಯಾ ಚರಣಾಯುಧ ಯಾನಿ ಕರೀ ವಿಕಲಾ
ಬುಧಶುಕ್ರ ದಿನೇ ಯದಿ ಸಾ ವಿಜಯಾ ಜಗವಾಹನ ಗಾ ಶುಭ ವೃಷ್ಟಿಕರಾ
ಸುರರಾಜಗುರೌ ಯದಿ ಯಾ ವಿಜಯಾ ನರವಾಹನ ಗಾ ಶುಭ ಸೌಖ್ಯ ಕರಾ
ಈ ಶ್ಲೋಕದ ಅರ್ಥ ಹೀಗಿದೆ, ನವರಾತ್ರಿಯ ಅಂತಿಮ ದಿನ ಮಂಗಳವಾರ (Tuesday) ಆಗಿದ್ದರೆ ಜಗದಂಬೆ ಹುಂಜದ ಮೇಲೆ ಸಾಗುತ್ತಾಳೆ. 
ದೇವಿಯ ಆಗಮನ ಆನೆ ಮೇಲೆ ಆಗುವುದನ್ನು ಶುಭವೆಂದು ಪರಿಗಣಿಸಲಾಗಿದ್ದರೆ, ಹುಂಜದ ಮೇಲೆ ಪ್ರಯಾಣ ಬೆಳೆಸುವುದನ್ನು  ಅಶುಭ ಎಂದು ಹೇಳಲಾಗುತ್ತದೆ. ಇದರಿಂದ ಜಗತ್ತಿನಲ್ಲಿ ದುಃಖ ಮತ್ತು ಕಷ್ಟಗಳು ಹೆಚ್ಚುತ್ತವೆ ಎನ್ನಲಾಗಿದೆ. ದಿನ ಅಥವಾ ವಾರಕ್ಕೆ ಅನುಗುಣವಾಗಿ ವಾಹನದಲ್ಲಿ (Vehicle) ಬದಲಾವಣೆಯಾಗುತ್ತದೆ. ಶನಿವಾರ ಅಥವಾ ಮಂಗಳವಾರದಂದು ನವರಾತ್ರಿಯ ಆರಂಭವಾಗುತ್ತಿದ್ದರೆ ಮಾತೆ ಕುದುರೆಯ (Horse) ಮೇಲೆ ಆಗಮಿಸುತ್ತಾಳೆ. ಗುರುವಾರ ಅಥವಾ ಶುಕ್ರವಾರದಂದು ಆರಂಭವಾದರೆ ಜಗದಂಬೆಯು ಪಲ್ಲಕ್ಕಿಯ ಮೇಲೆ ಆಗಮಿಸುತ್ತಾಳೆ. ಬುಧವಾರದಂದು ಆರಂಭವಾದರೆ ಮಾತೆ ನೌಕೆಯಲ್ಲಿ (Boat) ಆಗಮಿಸುತ್ತಾಳೆ ಎಂದು ಹೇಳಲಾಗುತ್ತದೆ. 

Follow Us:
Download App:
  • android
  • ios