ಭೂಮಿಯಲ್ಲಿ ಪ್ರಳಯವಾಗುತ್ತೆ, ಅದರಿಂದ ಎಲ್ಲರೂ ನಾಶವಾಗ್ತಾರೆ ಅನ್ನುವ ಮಾತು ಎರಡು ಸಾವಿರನೇ ಇಸವಿಯಲ್ಲೂ ಇತ್ತು. ಆದರೆ ಆಗಲಿಲ್ಲ. ಆದರೆ ಒಂದಲ್ಲ ಒಂದು ದಿನ ಭೂಮಿ ಖಂಡಿತ ನಾಶವಾಗುತ್ತೆ ಅನ್ನುವುದರಲ್ಲಿ ಸುಳ್ಳಿಲ್ಲ. ಆದರೆ ಹೇಗೆ? ಇದಕ್ಕೆ ಹಲವಾರು ಜನ ಹಲವಾರು ಥಿಯರಿಗಳನ್ನು ಹೇಳ್ತಾರೆ. ಯಾವುದು ನಿಜವೋ ತಿಳಿಯದು, ಆದರೆ ಇವುಗಳನ್ನು ತಿಳಿದುಕೊಂಡಿರೋದಂತೂ ಒಳ್ಳೆಯದಲ್ವೇ?

ಸೂರ್ಯನ ಜ್ವಾಲೆಗಳು
ಈ ಬಾರಿ ಬೇಸಿಗೆಯ ಸೆಕೆ ಭಯಂಕರವಾಗಿದೆ. ಇದಕ್ಕೆ ಕಾರಣವೇನು? ಸೂರ್ಯನ ಜ್ವಾಲೆಗಳು ಸಿಕ್ಕಾಪಟ್ಟೆ ಹೆಚ್ಚಾಗಿರೋದು, ಇವು ದಿಕ್ಕುದಿಕ್ಕಿಗೆ ಝಳವನ್ನುಹರಡುತ್ವೆ. ಸೂರ್ಯ ಸ್ವಲ್ಪ ಹೆಚ್ಚು ಸುಟ್ಟುರಿದರೂ ಭೂಮಿ ಕರಟಿಹೋಗುವುದು ತಪ್ಪಿದ್ದಲ್ಲ. ಹಾಗಾದರೆ ಇಡೀ ಸೃಷ್ಟಿ ಶಾಖದಿಂದಲೇ ಬೆಂದುಹೋಗುತ್ತೆ. ಮುಂದೇನಾಗುತ್ತೆ ಅಂತ ನೋಡೋಕೆ ನಾವಿರೋದಿಲ್ಲ. ಈ ಹಿಂದೆ ಮಿಲಿಯಾಂತರ ವರ್ಷಗಳ ಹಿಂದೆ ಸೂರ್ಯ ಭೂಮಿಯನ್ನು ಸುಟ್ಟಿದ್ದಾನೆ ಎನ್ನುತ್ತಾರೆ ವಿಜ್ಞಾನಿಗಳು.

ಪರಮಾಣು ಬಾಂಬ್
ಅಮೆರಿಕ, ಚೀನಾ, ರಷ್ಯಾಗಳ ಬಳಿ ಇರುವ ಎಲ್ಲ ನ್ಯೂಕ್ಲಿಯರ್ ಬಾಂಬ್‌ಗಳನ್ನು ಒಮ್ಮೆಗೇ ಬಳಸಿದರೆ, ಐವತ್ತು ಭೂಮಿಗಳನ್ನು ಸರ್ವನಾಶ ಮಾಡಬಹುದು. ಹಾಗಿರುವಾಗ, ಯಾರೋ ತಿಕ್ಕಲು ಅಧ್ಯಕ್ಷನೊಬ್ಬ ಒಂದು ಪರಮಾಣು ಬಾಂಬ್ ಎಲ್ಲಾದರೂ ಎಸೆದ ಎಂದಿಟ್ಟುಕೊಳ್ಳಿ, ಪ್ರತಿಕ್ರಿಯೆಯಾಗಿ ಇನ್ನೊಂದು ಬಾಂಬ್ ಬಿದ್ದೇ ಬೀಳುತ್ತದೆ. ಭುಮಿಯನ್ನು ಹೊಗೆ, ವಿಕಿರಣ ಮುಸುಕುತ್ತದೆ. ನಾವೆಲ್ಲ ಉಸಿರುಗಟ್ಟಿ ಸಾಯುತ್ತೇವೆ.

ರೌಡಿ ಬ್ಲ್ಯಾಕ್ ಹೋಲ್
ಬ್ಲ್ಯಾಕ್ ಹೋಲ್ ಅಥವಾ ಕಪ್ಪು ಕುಳಿಗಳು ಬಾಹ್ಯಾಕಾಶದ ವಿಸ್ಮಯ. ತನ್ನ ಗುರುತ್ವದ ಆಕರ್ಷಣೆಗೆ ಸಿಕ್ಕಿ ಬಳಿಗೆ ಬಂದದ್ದನ್ನೆಲ್ಲ ನುಂಗಿ ಮಾಯ ಮಾಡುವುದು ಈ ಕುಳಿಗಳ ಸ್ವಭಾವ. ತಜ್ಞರು ಹೇಳುವಂತೆ ಇಂಥ ಕುಳಿಗಳು ವಿಶ್ವದಲ್ಲಿ ಸಕ್ರಿಯವಾಗಿವೆ ಹಾಗೂ ವಿಸ್ತರಿಸುತ್ತಿವೆ. ಒಂದಲ್ಲ ಒಂದು ದಿನ ಭೂಮಿಯನ್ನೂ ಇದು ನುಂಗಿ ನೀರು ಕುಡಿಯಲಿದೆ. ಯಾವಾಗ? ತಿಳಿಯದು.

ಈಗ ನೀವು ಹೆಂಡತಿ/ ಗಂಡನ ಮೇಲೂ ಸ್ಪೈ ನಡೆಸಬಹುದು! ...

ಭೂಮಿಯ ತಿರುಳು ತಣ್ಣಗಾದರೆ
ಸದ್ಯ ಭೂಮಿಯ ಒಳತಿರುಳು ಕೆಂಪಗೆ ಕೆಂಡದಂತೆ ಜ್ವಲಿಸುತ್ತಾ ಸುಟ್ಟುರಿಯುತ್ತಾ ಇದೆ. ಸಮುದ್ರದ ಆಳದಲ್ಲೂ ಬೆಂಕಿಯಿದೆ. ಇದು ಭೂಮಿಯ ಮೇಲಿನ ಶಾಖ, ಗುರುತ್ವ ಶಕ್ತಿ ಎಲ್ಲದಕ್ಕೂ ಕಾರಣವಾಗಿದೆ. ಈ ಭೂಜ್ವಾಲೆ ತಣ್ಣಗಾತೊಡಗಿದಾಗ ಭುಮಿಯ ಮೇಲಿರುವ ಎಲ್ಲವೂ ಮರಗಟ್ಟಿ ಹೋಗುತ್ತವೆ. ಸೂರ್ಯನ ಜ್ವಾಲೆಯೂ ನಮ್ಮನ್ನು ಕಾಯಲಾರದು.

ಕ್ಷುದ್ರಗ್ರಹಗಳ ಡಿಕ್ಕಿ
ಮಿಲಿಯಾಂತರ ವರ್ಷಗಳ ಹಿಂದೆ ಭೂಮಿಯ ಮೇಲೆ ಬಾಳಿ ಬದುಕಿದ್ದ ಡೈನೋಸಾರ್‌ಗಳ ನಾಶಕ್ಕೆ ಕಾರಣವೇನು? ಒಂದು ಕ್ಷುದ್ರಗ್ರಹ ಡಿಕ್ಕಿ ಹೊಡೆದದ್ದೇ ಕಾರಣವಂತೆ. ಒಂದೇ ಒಂದು ಕ್ಷುದ್ರಗ್ರಹವೂ ಭುಮಿಯ ಮೇಲಿನ ಎಲ್ಲವೂ ಸರ್ವನಾಶ ಆಗುವುದಕ್ಕೆ ಕಾರಣ ಆಗಬಹುದು. ಈಗಲೂ ಹತ್ತಾರು ಕ್ಷುದ್ರಗ್ರಹಗಳು ಭೂಮಿಯ ಪಕ್ಕದಲ್ಲೇ ಹಾದುಹೋಗುತ್ತಿದ್ದರೂ ಒಂದೂ ಡಿಕ್ಕಿ ಹೊಡೆದಿಲ್ಲ. ಯಾವಾಗ ಹೊಡೆಯುತ್ತದೋ ಗೊತ್ತಿಲ್ಲ.

ಪ್ಲಾಸ್ಟಿಕ್ ಮುಕ್ತ ಪ್ರಪಂಚ ಸಾಧ್ಯವಿದೆ, ಸೌತೆಕಾಯಿ ಸಿಪ್ಪೆಯೇ ಸಾಕು! ...

ಸಮುದ್ರ ನಾಶ
ನಮ್ಮ ಸಮುದ್ರಗಳು ನಿಧಾನವಾಗಿ ಆಮ್ಲೀಯವಾಗುತ್ತಿವೆಯಂತೆ. ಅಂದರೆ ಅವು ಆಸಿಡ್ ಆಗುತ್ತಿವೆ. ಹಾಗಾದರೆ ಏನಾಗಬಹುದು ಊಹಿಸಿಕೊಳ್ಳಿ. ಈಗ ನಾವು ಸಮುದ್ರಕ್ಕೆ ಊಹಿಸಲಸಾಧ್ಯ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯ ಸೇರಿಸುತ್ತಿದ್ದೇವೆ. ಸಮುದ್ರಗಳು ಆಮ್ಲೀಯವಾದ ದಿನ ನಮಗೆ ಆಮ್ಲಜನಕ ಸಿಗೋಲ್ಲ. ಸಸ್ಯಗಳು ಇರೋಲ್ಲ. ನಾವೆಲ್ಲ ಉಸಿರುಗಟ್ಟಿ ಸಾಯಬೇಕಾಗುತ್ತದೆ.

ಮೀನ ರಾಶಿಯಿಂದ ಮೇಷ ರಾಶಿಗೆ ಸೂರ್ಯನ ಚಲನೆ: ನಿಮ್ಮ ರಾಶಿಗೆ ಏನು ಫಲ? ...

ಕೃತಕ ಬುದ್ಧಿಮತ್ತೆ
ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಯಾವ ಪರಿಯಲ್ಲಿ ವೃದ್ಧಿಯಾಗುತ್ತಿದೆ ಎಂದರೆ, ಮುಂದೊಂದು ದಿನ ಅದು ಮಾನವನನ್ನು ತನ್ನ ಅಡಿಯಾಳಾಗಿ ಇಟ್ಟುಕೊಂಡು ತಾನೇ ಭೂಮಿಯನ್ನು ಆಳುತ್ತದೆ. ಆಗ ಮನುಷ್ಯರು ನಿಧಾನವಾಗಿ ಅಳಿಯುತ್ತಾರೆ.