ಕೇಂದ್ರ ಸರ್ಕಾರವು ಮಾ.15ರಿಂದ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಿದ್ದು ಕೆವೈಸಿ ಪೂರ್ಣಗೊಳಿಸಿದ ಗ್ರಾಹಕರಿಗೆ ಮಾತ್ರ ಗ್ಯಾಸ್ ಸೇವೆಗಳು ಮತ್ತು ಸಬ್ಸಿಡಿ ಲಭ್ಯವಾಗಲಿದೆ.

ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಬಯೋಮೆಟ್ರಿಕ್ ಆಧಾ‌ರ್ ದೃಢೀಕರಣ ಕಡ್ಡಾಯ

ನವದೆಹಲಿ: ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದಿಂದಾಗಿ ದೇಶದಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ನಡುವೆಯೇ ಮಾ.15ರಿಂದ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಬಯೋಮೆಟ್ರಿಕ್ ಆಧಾ‌ರ್ ದೃಢೀಕರಣ ಅಥವಾ ಕೈವೈಸಿ ಕಡ್ಡಾಯ ಮಾಡಿ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.

ಕೆವೈಸಿ ಪೂರ್ಣಗೊಳಿಸಿದ ಗ್ರಾಹಕರಿಗಷ್ಟೇ ಆ ಬಳಿಕ ಎಲ್‌ಪಿಜಿ ಸೇವೆಗಳು ಮತ್ತು ಸಬ್ಸಿಡಿ ದೊರೆಯಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ. ಈ ಕೆವೈಸಿ ಪ್ರಕ್ರಿಯೆಯನ್ನು ಸಂಬಂಧಪಟ್ಟ ಗ್ಯಾಸ್ ವಿತರಣಾ ಕಂಪನಿಗಳ ಆ್ಯಪ್ ಮೂಲಕ ಮನೆಯಲ್ಲಿ ಕುಳಿತೇ ಆಧಾರ್ ಕಾರ್ಡ್ ಹಾಗೂ ಫೇಸ್‌ಆರ್‌ಡಿ ಆ್ಯಪ್ ಬಳಸಿ ಸುಲಭವಾಗಿ ಪೂರ್ಣಗೊಳಿಸಬಹುದು ಎಂದು ಸಚಿವಾಲಯ ಗ್ರಾಹಕರಿಗೆ ಮಾಹಿತಿ ನೀಡಿದೆ.

ಇದನ್ನೂ ಓದಿ: RSS ಸಂಘಟನೆಗೆ ನಿರ್ಬಂಧ ಹೇರಿ, ಆಸ್ತಿ ಜಪ್ತಿ ಮಾಡಿ: ಅಮೆರಿಕ ಧಾರ್ಮಿಕ ಸ್ವಾತಂತ್ರ್ಯ ಆಯೋಗದಿಂದ ಸರ್ಕಾರಕ್ಕೆ ಶಿಫಾರಸು

ಪ್ರಮುಖ ಸರ್ಕಾರಿ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊ ರೇಷನ್ ಲಿ. ಮತ್ತು ಹಿಂದೂಸ್ತಾನ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. ಕಂಪನಿಗಳ ಗ್ರಾಹಕರಿಗೆ ಕೇಂದ್ರದ ಈ ಹೊಸ ನಿಯಮ ಅನ್ವಯವಾಗಲಿದೆ.

ಹೀಗೆ ಕೆವೈಸಿ ಪ್ರಕ್ರಿಯೆ ಮಾಡಿ

  • 1 ಸರ್ಕಾರಿ ನೋಟಿಸ್‌ನಲ್ಲಿ ನೀಡಲಾದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಅಥವಾ ಅಧಿಕೃತ ಲಿಂಕ್ https://www.pmuy.gov.in/e&kyc.html ಮೂಲಕ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.
  • 2 ನಂತರ ಆಧಾ‌ರ್ ಫೇಸ್‌ಆರ್‌ಡಿ ಆ್ಯಪ್ ಜತೆಗೆ ತೈಲ ಪೂರೈಕೆ ಕಂಪನಿಯ ಮೊಬೈಲ್ ಆ್ಯಪ್ ಗಳನ್ನು (ಐಒಸಿಎಲ್, ಬಿಪಿಸಿಎಲ್ ಅಥವಾ ಎಚ್‌ಪಿಸಿಎಲ್‌) ಡೌನ್ ಲೋಡ್ ಮಾಡಿಕೊಳ್ಳಬೇಕು
  • 3 ಕಂಪನಿಯ ಆ್ಯಪ್‌ನಲ್ಲಿ ನೀಡಲಾದ ಸೂಚನೆಗಳನ್ನು ಪಾಲಿಸಿ, ಆಧಾರ್ ಫೇಸ್ ಆರ್‌ಡಿ ಆ್ಯಪ್ ಬಳಸಿ ಮುಖ ವನ್ನು ಸ್ಕ್ಯಾನ್ ಮಾಡುವ ಮೂಲಕ ಬಯೋಮೆಟ್ರಿಕ್ ದೃಢೀಕರಣ ನೀಡಬೇಕು.
  • ಈ ಪ್ರಕ್ರಿಯೆ ಬಳಿಕ ನಿಮ್ಮ 4 ಕೆವೈಸಿ ದೃಢೀಕರಣ ಪೂರ್ಣಗೊಳ್ಳುತ್ತದೆ.

ಇದನ್ನೂ ಓದಿ: ಬಾರಾಮತಿ ಕ್ಷೇತ್ರದ ಉಪ ಚುನಾವಣೆ: ಅತ್ತಿಗೆ ಸುನೇತ್ರಾ ಪವಾರ್ ವಿರುದ್ಧ NCP ಅಭ್ಯರ್ಥಿ ಕಣಕ್ಕಿಳಿಸಲ್ಲ ಎಂದ ಸುಪ್ರಿಯಾ ಸುಳೆ