Asianet Suvarna News Asianet Suvarna News

ಮನೆಯಲ್ಲಿ 'ಅಶುಭ' ಉಂಟಾಗಲು ಕಾರಣವೇನು?

ವಾಸ್ತು ಪ್ರಕಾರ, ಸಂತೋಷ, ಸಮೃದ್ಧಿ ಮತ್ತು ಶಾಂತಿಗಾಗಿ ಕೆಲವು ಪ್ರಮುಖ ವಿಷಯಗಳನ್ನು ಗಮನಿಸ ಬೇಕು. ಎಕೆಂದರೆ ಮನೆಯಲ್ಲಿ ಜಗಳ, ಕೌಟುಂಬಿಕ ಘರ್ಷಣೆ ಇತ್ಯಾದಿಗಳು ನಡೆದರೆ ಅದಕ್ಕೆ ವಾಸ್ತು ದೋಷಗಳು ಕಾರಣವಾಗಿರಬಹುದು. 

home vastu tips doing these things in home brings inauspiciousness and negativity suh
Author
First Published Feb 5, 2024, 12:56 PM IST

ವಾಸ್ತು ಪ್ರಕಾರ, ಸಂತೋಷ, ಸಮೃದ್ಧಿ ಮತ್ತು ಶಾಂತಿಗಾಗಿ ಕೆಲವು ಪ್ರಮುಖ ವಿಷಯಗಳನ್ನು ಗಮನಿಸ ಬೇಕು. ಎಕೆಂದರೆ ಮನೆಯಲ್ಲಿ ಜಗಳ, ಕೌಟುಂಬಿಕ ಘರ್ಷಣೆ ಇತ್ಯಾದಿಗಳು ನಡೆದರೆ ಅದಕ್ಕೆ ವಾಸ್ತು ದೋಷಗಳು ಕಾರಣವಾಗಿರಬಹುದು. 

ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿಗಾಗಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ಪ್ರತಿಯೊಬ್ಬ ವ್ಯಕ್ತಿಯು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಧಾರ್ಮಿಕ ಗ್ರಂಥಗಳಲ್ಲಿ, ಮಾನವ ಜೀವನವನ್ನು ಸಂತೋಷ ಮತ್ತು ಆರೋಗ್ಯಕರವಾಗಿಸಲು ಅಸಂಖ್ಯಾತ ಮಾರ್ಗಸೂಚಿಗಳನ್ನು ನೀಡಲಾಗಿದೆ, ಅದನ್ನು ಅನುಸರಿಸುವ ಮೂಲಕ ಮನುಷ್ಯನು ಸರಿಯಾದ ಕಾರ್ಯಗಳನ್ನು ಮಾಡುವ ಮೂಲಕ ತನ್ನ ಭವಿಷ್ಯವನ್ನು ಸುಧಾರಿಸಬಹುದು. 

ನಿರಂತರವಾಗಿ ಜಗಳವಾಡುವ ಮನೆಯಲ್ಲಿ, ಸಂತೋಷ ಮತ್ತು ಸಮೃದ್ಧಿ ದೂರವಾಗುತ್ತೆ. ಹೀಗಾಗಿ ಮನೆಯಲ್ಲಿ ದುಃಖ ಮತ್ತು ಬಡತನವು ಮನೆಯಲ್ಲಿ ವಾಸಿಸಲು ಪ್ರಾರಂಭಿಸುತ್ತದೆ. ದಕ್ಷಿಣಾಭಿಮುಖವಾಗಿ ಅಡುಗೆ ಮಾಡುವುದು ಒಳ್ಳೆಯದಲ್ಲ . ಮನೆಯ ಯಾವುದೇ ಭಾದಲ್ಲಿ ಯಾವುದೇ ನಲ್ಲಿಯಲ್ಲಿ ನೀರು ತೊಟ್ಟಿಕ್ಕುವುದು ಶುಭವಲ್ಲ. ಸದಸ್ಯರು ಪಶ್ಚಿಮ ಅಥವಾ ಉತ್ತರದ ಕಡೆಗೆ ತಲೆಯಿಟ್ಟು ಮಲಗುವುದರಿಂದ ಕೆಟ್ಟ ಪರಿಣಾಮ ಬೀರುತ್ತದೆ.

ಪೂಜಾ ಕೋಣೆಯಲ್ಲಿ ಸತ್ತ ಸಂಬಂಧಿಕರ ಚಿತ್ರಗಳನ್ನು ಇಡುವುದು. ಪೊರಕೆಯನ್ನು ಒದೆಯುವುದು. ಮಲಗುವ ಕೋಣೆಯಲ್ಲಿಯೇ ದೇವರಿಗೆ ಪೂಜೆ ಮಾಡುವುದು.ಮನೆಯ ಹೆಂಚುಗಳು ಒಡೆದ ಸ್ಥಿತಿಯಲ್ಲಿರುವುದು.
ಮುರಿದ ವಸ್ತುಗಳು ಮತ್ತು ನಿತ್ತ ಗಡಿಯಾರಗಳನ್ನು ಮನೆಯಲ್ಲಿ ಇಡುವುದು. ಸ್ನಾನಗೃಹ ಮತ್ತು ಶೌಚಾಲಯದ ಬಾಗಿಲುಗಳು ಯಾವಾಗಲೂ ತೆರೆದಿರುವುದು. ಈಶಾನ್ಯ ಮೂಲೆಯಲ್ಲಿ ದೋಷವಿರುವುದು.
ಜನರು ಮಲಗುವ ಕೋಣೆಯಲ್ಲಿ ಊಟ ಮಾಡಿ ಪಾತ್ರೆಗಳನ್ನು ಅಲ್ಲೇ ಬಿಟ್ಟು ಮಲಗುವುದು ಮನೆಗೆ ಶುಭವನ್ನು ತರುವುದಿಲ್ಲ.

ದಿನವೂ ದೇವರ ಸ್ಮರಣೆ ಮಾಡದಿರುವುದು. ದಿನವೂ ದೇವರಿಗೆ ದೀಪ ಹಚ್ಚದಿರುವುದು.ಸದಾ ಸುಳ್ಳು ಮೋಸವನ್ನು ಮಾಡುವುದು. ಆತ್ಮೀಯರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು.  ನಿರಂತರವಾಗಿ ಕತ್ತಲೆಯಲ್ಲಿ ಮುಳುಗಿರುವುದು.  ಜೇಡರ ಬಲೆ ಇರುವುದು .ಗಂಡನನ್ನು ಅಗೌರಿಸುವ ಹೆಂಡತಿ. ಗೆದ್ದಲುಗಳು, ಜೇನುನೊಣಗಳು, ಬಾವಲಿಗಳು ಮನೆಯಲ್ಲಿ ಇರುವುದು ಮನೆಗೆ ಸಂತೋಷವನ್ನು ತರುವುದಿಲ್ಲ.

ಒಣಗಿದ ಹೂವುಗಳನ್ನು ಇಡುವ ಮನೆ.ಡಸ್ಟ್ ಬಿನ್ ಯಾವಾಗಲೂ ತೆರೆದಿರುವ ಮನೆ.  ರಾತ್ರಿ ಬಟ್ಟೆಗಳನ್ನು ಒಣಗಿಸುವ ಮನೆ.ಮುರಿದ ಪಾತ್ರೆಗಳು ಅಥವಾ ಮುರಿದ ಮಂಚ ಇರುವ ಮನೆ.ಮುಖ್ಯ ಬಾಗಿಲಿನ ಮುಂದೆ ಬೂಟುಗಳು ಮತ್ತು ಚಪ್ಪಲಿಗಳನ್ನು ಇಡುವ ಮನೆಯಲ್ಲಿ ಯಾವಾಗಲು ನಕಾರಾತ್ಮ ಶಕ್ತಿ ತುಂಬಿರುತ್ತದೆ.

Follow Us:
Download App:
  • android
  • ios