Asianet Suvarna News Asianet Suvarna News

Holi 2024 : ಪ್ರತಿಯೊಂದು ಬಣ್ಣಕ್ಕೂ ಅರ್ಥವಿದೆ… ಯಾರಿಗೆ ಯಾವ ಕಲರ್ ಸೂಕ್ತ?

ಹೋಳಿ ಹಬ್ಬ ಹತ್ತಿರ ಬರ್ತಿದೆ. ಬಣ್ಣಗಳನ್ನು ಪರಸ್ಪರ ಹಚ್ಚಿ ಜನರು ಸಂಭ್ರಮಿಸುತ್ತಾರೆ. ನೀವು ಹಚ್ಚುವ ಬಣ್ಣ ನಿಮಗೂ ಬಣ್ಣ ಹಚ್ಚಿಸಿಕೊಳ್ಳುವವರಿಗೂ ಶುಭ ನೀಡ್ಬೇಕು ಅಂದ್ರೆ ಈ ಸುದ್ದಿ ಓದಿ. 
 

Holi Every Color Has Its Meaning which color suits for zodiac sign roo
Author
First Published Mar 20, 2024, 4:29 PM IST

ಬಣ್ಣದ ಹಬ್ಬವೆಂದೇ ಪ್ರಸಿದ್ಧಿ ಪಡೆದ ಹಬ್ಬ ಹೋಳಿ. ಹೋಳಿಯನ್ನು ಬಹಳ ಅದ್ಧೂರಿಯಿಂದ ಆಚರಣೆ ಮಾಡಲಾಗುತ್ತದೆ. ಈ ವರ್ಷದ ಹೋಳಿ ಹಬ್ಬಕ್ಕೆ ಭರ್ಜರಿ ತಯಾರಿ ನಡೆದಿದೆ. ಮಾರುಕಟ್ಟೆಯಲ್ಲಿ ಬಣ್ಣಗಳು ರಾರಾಜಿಸುತ್ತಿವೆ. ದ್ವೇಷವನ್ನು ಮರೆತು ಪ್ರೀತಿಯನ್ನು ಹಂಚುವ ಹಬ್ಬ ಎಂದೇ ಹೋಳಿಯನ್ನು ಕರೆಯಲಾಗುತ್ತದೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಈ ಹಬ್ಬವನ್ನು ಆಚರಿಸುತ್ತಾರೆ. ಕುಣಿದು, ಕುಪ್ಪಳಿಸುತ್ತಾರೆ. ಬಡವ, ಶ್ರೀಮಂತ, ಮೇಲು, ಕೀಳು ಎನ್ನದೆ ಈ ಹಬ್ಬವನ್ನು ಎಲ್ಲರೂ ಆಚರಿಸುತ್ತಾರೆ.  ಜ್ಯೋತಿಷ್ಯ ಶಾಸ್ತ್ರದಲ್ಲೂ ಹೋಳಿ ಹಬ್ಬಕ್ಕೆ ಬಹಳ ಮಹತ್ವವಿದೆ. ಹೋಳಿಯಲ್ಲಿ ನಾವೆಲ್ಲ ಮಿಂದೇಳುವ ಬಣ್ಣಗಳಿಗೂ ಅರ್ಥವಿದೆ. ಎಲ್ಲ ಬಣ್ಣವನ್ನು ಎಲ್ಲರಿಗೂ ಹಚ್ಚುವಂತಿಲ್ಲ. ಯಾವ ಬಣ್ಣವನ್ನು ಯಾರಿಗೆ ಹಚ್ಚಬೇಕು ಎಂಬುದನ್ನು ತಿಳಿದಿರಿ. ಇದ್ರಿಂದ ಸಾಕಷ್ಟು ಲಾಭವಿದೆ. ನಾವಿಂದು ಯಾವ ಬಣ್ಣವನ್ನು ಯಾರಿಗೆ ಹಚ್ಚಬೇಕು ಎನ್ನುವ ಮಾಹಿತಿ ನೀಡ್ತೇವೆ. 

ವಯಸ್ಸು – ಲಿಂಗಕ್ಕೆ ತಕ್ಕಂತೆ ಬಣ್ಣ (Color) ಹಚ್ಚಿ :

ಮಕ್ಕಳಿಗೆ ಯಾವ ಬಣ್ಣ ಹಚ್ಚಬೇಕು? : ಹೋಳಿ (Holi) ಹಬ್ಬದಲ್ಲಿ ಬಹುತೇಕ ಎಲ್ಲರ ಕೈನಲ್ಲಿರುವ ಬಣ್ಣ ಅಂದ್ರೆ ಕೆಂಪು. ಈ ಬಣ್ಣವನ್ನು ಉತ್ಸಾಹ, ಕೋಪ, ಶೌರ್ಯ,  ಧೈರ್ಯ ಮತ್ತು ಮಹತ್ವಾಕಾಂಕ್ಷೆಯ ಸಂಕೇತವಾಗಿದೆ. ಕೆಂಪು ಬಣ್ಣ ಪ್ರೀತಿ (Love) ಯ ಸಂಕೇತವಾಗಿದೆ. ಧಾರ್ಮಿಕ ಕಾರ್ಯಗಳಲ್ಲೂ ಕೆಂಪು ಬಣ್ಣವನ್ನು ಬಳಸಲಾಗುತ್ತದೆ. ಈ ಬಣ್ಣವನ್ನು ಯುವಕರು ಮತ್ತು ಮಕ್ಕಳಿಗೆ ಹಚ್ಚಬೇಕು. 

 

ಹೋಳಿ 2024 ಮಾರ್ಚ್ 24 ಅಥವಾ ಮಾರ್ಚ್ 25? ದಿನಾಂಕ, ಮಹತ್ವ, ಸಮಯ, ಇತಿಹಾಸ ಮತ್ತು ಹೆಚ್ಚಿನದನ್ನು ತಿಳಿಯಿರಿ

ಹಳದಿ (Yellow) ಬಣ್ಣವನ್ನು ಇವರಿಗೆ ಹಚ್ಚಿ : ಹಳದಿಯನ್ನು ಗೌರವ ಮತ್ತು ಸಂತೋಷದ ಸಂಕೇತವಾಗಿದೆ. ಮಹಿಳೆಯರಿಗೆ ಈ ಹಳದಿ ಬಣ್ಣವನ್ನು ಹಚ್ಚಬೇಕು. ಹಳದಿ ಬಣ್ಣವನ್ನು ಹಚ್ಚಿದ ಮುಖ ಸುಂದರವಾಗಿ ಕಾಣುತ್ತದೆ ಅನ್ನೋದು ಕೂಡ ಸತ್ಯ. ನಿಮ್ಮ ಸಹೋದರಿಯರು, ಮನೆಯಲ್ಲಿರುವ ಮಹಿಳೆಯರಿಗೆ ಹಳದಿ ಬಣ್ಣವನ್ನು ಹಚ್ಚಿ. 

ಸ್ನೇಹಿತರಿಗೆ ಈ ಬಣ್ಣ ಬಳಿಯಿರಿ : ಹೋಳಿ ಎಂದ್ಮೇಲೆ ಖುಷಿ ಇರಲೇಬೇಕು. ಖುಷಿ ಇದ್ದಾಗ ಸ್ನೇಹಿತರು ಜೊತೆಗಿರಬೇಕು. ಸ್ನೇಹಿತರ ಗುಂಪು ಹೋಳಿಯ ಸಂಭ್ರಮವನ್ನು ದುಪ್ಪಟ್ಟು ಮಾಡುತ್ತದೆ. ನೀವೂ ನಿಮ್ಮ ಸ್ನೇಹಿತರ ಜೊತೆ ಹೋಳಿಯನ್ನು ಸಂಭ್ರಮಿಸುತ್ತಿದ್ದರೆ ಅವರಿಗೆ ಕೇಸರಿ ಬಣ್ಣವನ್ನು ಹಚ್ಚಿ. ಕೇಸರಿ ಸಂತೋಷ ಮತ್ತು ಸಾಮರಸ್ಯದ ಸಂಕೇತವಾಗಿದೆ. 

ಹಿರಿಯರಿಗೆ ಹಸಿರು ಬಣ್ಣ ಹಚ್ಚಲು ಮರೆಯಬೇಡಿ : ಹಸಿರು ಬಣ್ಣ ಸಕಾರಾತ್ಮಕತೆಯ ಸಂಕೇತವಾಗಿದೆ. ಪ್ರಕೃತಿ ಜೊತೆ ಇದು ಸಂಬಂಧ ಹೊಂದಿದೆ. ವಿಶ್ರಾಂತಿ, ಶಾಂತತೆ, ತಾಜಾತನವನ್ನು ಕೂಡ ಇದು ಸೂಚಿಸುತ್ತದೆ. ಹಸಿರು ಬಣ್ಣವು ಮಾನಸಿಕ ಮತ್ತು ದೈಹಿಕ ನೆಮ್ಮದಿಯನ್ನು ನೀಡುತ್ತದೆ. ಇದಲ್ಲದೆ ಈ ಹಸಿರು ಅದೃಷ್ಟವನ್ನು ತರುವ ಬಣ್ಣವಾಗಿದೆ. ಸಮೃದ್ಧಿಯನ್ನು ನೀಡುತ್ತದೆ. ನಿಮ್ಮ ಮನೆಯಲ್ಲಿರುವ ಹಿರಿಯರು, ಹಿರಿಯ ಸಹೋದರ ಸಂಬಂಧಿಕರು, ಸ್ನೇಹಿತರಿಗೆ ಹಸಿರು ಬಣ್ಣವನ್ನು ಹಚ್ಚಿ. 

ಈ ರಾಶಿಯವರು (Zodiac Sign) ಈ ಬಣ್ಣ ಬಳಸಬೇಡಿ : ಮೇಷ (Aeries) ರಾಶಿಯವರು ಕಪ್ಪು ಮತ್ತು ನೀಲಿ (Blue) ಬಣ್ಣಗಳಿಂದ ದೂರವಿರಬೇಕು. ವೃಷಭ (Taurus) ರಾಶಿಯವರು ಕೆಂಪು ಮತ್ತು ಕಂದು ಬಣ್ಣದಿಂದ ದೂರವಿರಿ. ಮಿಥುನ (Gemini) ರಾಶಿಯ ಜನರು ಬೂದು, ಕಿತ್ತಳೆ, ಕಪ್ಪು ಮತ್ತು ಕೆಂಪು ಬಣ್ಣದಿಂದ ದೂರವಿರಿ. ಕರ್ಕ ರಾಶಿಯವರು ಕಪ್ಪು, ನೀಲಿ ಮತ್ತು ಬೂದು ಬಣ್ಣ ಬಳಸಬೇಡಿ. ಸಿಂಹ ರಾಶಿಯ ಜನರು ನೀಲಿ, ಗುಲಾಬಿ, ಕಪ್ಪು ಬಣ್ಣ ಬಳಸಬೇಡಿ. 

ಹೋಳಿಯಲ್ಲಿ ಗ್ರಹಣವಷ್ಟೇ ಅಲ್ಲ, ಸೂರ್ಯ ಮತ್ತು ರಾಹುವಿನ ಸಂಯೋಗವೂ ಅಪಾಯಕಾರಿ, ಈ ರಾಶಿಯವರು ಎಚ್ಚರ

ಕನ್ಯಾ (Virgo) ರಾಶಿಯ ಜನರು ಕೆಂಪು ಬಣ್ಣವನ್ನು ಹೆಚ್ಚಾಗಿ ಬಳಸಬಾರದು. ತುಲಾ ರಾಶಿಯ ಜನರು ಕಿತ್ತಳೆ, ಕೆಂಪು ಮತ್ತು ಕಂದು ಬಣ್ಣದಿಂದ ದೂರವಿರಿ. ವೃಶ್ಚಿಕ (Scorpio) ರಾಶಿಯ ಜನರು ಬಿಳಿ ಮತ್ತು ಗುಲಾಬಿ ಬಣ್ಣ ಬಳಸಬೇಡಿ.  ಧನು (Sagittarius) ರಾಶಿಯವರು ಬೂದು ಮತ್ತು ಕಪ್ಪು ಬಣ್ಣ ತ್ಯಜಿಸಿ, ಮಕರ ರಾಶಿಯವರಿಗೆ ಗುಲಾಬಿ, ಹಳದಿ, ಕೆಂಪು ಬಣ್ಣ ಅಶುಭ. ಕುಂಭ ರಾಶಿಯ ಜನರಿಗೆ ಹಳದಿ, ಕೆಂಪು ಮತ್ತು ಕಂದು ಬಣ್ಣ ಅಶುಭ. ಮೀನ ರಾಶಿಯ ಜನರು ಗಾಢ ಕೆಂಪು ಮತ್ತು ಕಪ್ಪು ಬಣ್ಣದಿಂದ ದೂರವಿರಿ. 

Follow Us:
Download App:
  • android
  • ios