Navaratri : ನವರಾತ್ರಿ ಎರಡನೇ ದಿನ ಬ್ರಹ್ಮಚಾರಿಣಿಯ ಆರಾಧನೆಯ ಮಹತ್ವ ಹಾಗೂ ಪೂಜಾ ವಿಧಿ-ವಿಧಾನ

ನವರಾತ್ರಿಯ ಎರಡನೇ ದಿನ ದೇವಿಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಬ್ರಹ್ಮಚಾರಿಣಿಯೆಂದರೆ ಇನ್ನೂ ಮದುವೆಯಾಗದಿರುವ ಯುವತಿ ಎಂದರ್ಥ ಸೌಮ್ಯಳೂ, ಶಾಂತ ಸ್ವಭಾವವನ್ನು ಧರಿಸಿರುವ ಬ್ರಹ್ಮಚಾರಿಣಿಯು ಮನಸ್ಸನ್ನು ಪ್ರಶಾಂತಗೊಳಿಸಿ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾಳೆ.

here is the pooja vidhi vidhana for navaratri second day suh

ನವರಾತ್ರಿಯ ಎರಡನೇ ದಿನ ದೇವಿಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಬ್ರಹ್ಮಚಾರಿಣಿಯೆಂದರೆ ಇನ್ನೂ ಮದುವೆಯಾಗದಿರುವ ಯುವತಿ ಎಂದರ್ಥ ಸೌಮ್ಯಳೂ, ಶಾಂತ ಸ್ವಭಾವವನ್ನು ಧರಿಸಿರುವ ಬ್ರಹ್ಮಚಾರಿಣಿಯು ಮನಸ್ಸನ್ನು ಪ್ರಶಾಂತಗೊಳಿಸಿ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾಳೆ. ಕೈಯಲ್ಲಿ ಗುಲಾಬಿ ಧರಿಸಿರುವ ಈಕೆಯು ಒಂದು ಕೈಯಲ್ಲಿ ಜಪಮಾಲೆ ಹಾಗೂ ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದುಕೊಂಡಿರುತ್ತಾಳೆ. ಶ್ವೇತವಸ್ತ್ರಧಾರಿಣಿಯಾಗಿರುವ ಬ್ರಹ್ಮಚಾರಿಣಿಯು ತನ್ನ ಭಕ್ತರಿಗೆ ಸಂತೋಷ ಹಾಗೂ ಜ್ಞಾನವನ್ನು ನೀಡುವವಳೂ ಆಗಿದ್ದಾಳೆ.

ಬ್ರಹ್ಮಚಾರಿಣಿಯ ಮಹತ್ವ

ಬ್ರಹ್ಮಚಾರಿಣಿಯು ಮಂಗಳ ಗ್ರಹದ ಅಧಿಪತಿ. ತನ್ನ ಭಕ್ತರಿಗೆ ಅದೃಷ್ಟವನ್ನು ನೀಡುವವಳು ಹಾಗೂ ಮಾನಸಿಕ ಕ್ಷೋಭೆಯನ್ನು ಪರಿಹರಿಸಿ ನೆಮ್ಮದಿಯನ್ನು ದಯಪಾಲಿಸುವವಳೂ ಬ್ರಹ್ಮಚಾರಿಣಿ. ಜನ್ಮ ಕುಂಡಲಿಯಲ್ಲಿ ಮಂಗಳ ಗ್ರಹವು ಕೆಟ್ಟ ಸ್ಥಾನದಲ್ಲಿದ್ದರೆ ಹಾಗೂ ಮಂಗಳ ದೋಷವಿದ್ದರೆ ಬ್ರಹ್ಮಚಾರಿಣಿಯನ್ನು ಪೂಜಿಸುವುದು ಒಳ್ಳೆಯದು.

ಬ್ರಹ್ಮಚಾರಿಣಿಗೆ ಬಹಳ ಇಷ್ಟವಾದ ಹೂವು ಮಲ್ಲಿಗೆ. ಹಾಗಾಗಿ ನವರಾತ್ರಿಯ ಎರಡನೇ ದಿನ ಮಲ್ಲಿಗೆಯಿಂದ ಈಕೆಯನ್ನು ಅಲಂಕರಿಸಿ. ಪೂಜಿಸಿ, ಮಾತೆಯ ಆಶೀರ್ವಾದವನ್ನು ಪಡೆದುಕೊಳ್ಳಿ. ಬ್ರಹ್ಮಚಾರಿಣಿಯ ಪೂಜೆಯನ್ನು ಮಾಡುವಾಗ 16 ವಿಧದ ಅರ್ಪಣೆಗಳನ್ನು ಮಾಡಿ, ಆರತಿಯೊಂದಿಗೆ ಪೂಜೆಯನ್ನು ಅಂತ್ಯಗೊಳಿಸಿ. 

ಬ್ರಹ್ಮಚಾರಿಣಿಯ ಆರಾಧನೆಯು ತಪಸ್ಸಿಗೆ ಸಮವಾಗಿರುತ್ತದೆ. ಭಕ್ತರಲ್ಲಿರುವ ದುರ್ಗುಣಗಳು ಕಳೆದು ಉದಾತ್ತತೆ, ಸದ್ಗುಣಗಳು ಬೆಳೆಯುತ್ತದೆ. ಯಶಸ್ಸಿಗೆ ಅಡ್ಡಲಾಗಿರುವ ಎಲ್ಲಾ ತೊಡಕುಗಳೂ ಸರಿದು ಮನಸ್ಸಿಗೆ ಶಾಂತಿ ಹಾಗೂ ಮಾಡುವ ಎಲ್ಲಾ ಕೆಲಸದಲ್ಲೂ ನೆಮ್ಮದಿ ದೊರೆಯುವುದು. 

ಪಾದದಲ್ಲಿ ಈ ರೇಖೆಗಳಿದ್ದರೆ ಅದೃಷ್ಟ ಹುಡುಕಿಕೊಂಡು ಬರುತ್ತದೆ

ಬ್ರಹ್ಮಚಾರಿಣಿ ಅರ್ಚನೆಯ ಮಂತ್ರ

ಓಂ ದೇವಿ ಬ್ರಹ್ಮಚಾರಿಣಿಯೇ ನಮಃ
ಓಂ ದೇವಿ ಬ್ರಹ್ಮಚಾರಿಣಿಯೇ ನಮಃ
ದಾಧನಾ ಕರ್‌ ಪದ್ಮಭಯಮಕ್ಷಾಮಾಲಾ ಕಮಂಡಲೋ
ದೇವೀ ಪ್ರಸಾದಿತು ಮಯಿ ಬ್ರಹ್ಮಚಾರಿಣಿಯನುತ್ತಮ

ಪೂಜೆ ಮಾಡುವ ವಿಧಾನ

ಈ ದಿನ ಬೇಗ ಸ್ನಾನ ಮಾಡಿ  ಶೂಭ್ರವಾದ ಮಡಿ ಬಟ್ಟೆಗಳನ್ನು ಧರಿಸಬೇಕು. ದೇವಿಯ ವಿಗ್ರಹ ಇಡುವ ಅಭ್ಯಾಸವಿದ್ದರೆ ವಿಗ್ರಹ ಅಥವಾ ಕಲಶವನ್ನು ಸ್ಥಾಪನೆ ಮಾಡಬೇಕು. ಕಲಶ ಸ್ಥಾಪನೆಯ ನಂತರ ದೇವಿಗೆ  ವೀಳ್ಯದೆಲೆ ಮತ್ತು ಅಡಿಕೆಯನ್ನು  ಸಮರ್ಪಣೆ ಮಾಡಿ. ನಂತರ ದೇವಿಗೆ ತಪ್ಪದೇ ಮಲ್ಲಿಗೆ ಹೂವನ್ನು ಅರ್ಪಿಸುವುದು ಈ ದಿನ ಬಹಳ ಮುಖ್ಯ. ನಂತರ ತುಪ್ಪದ  ದೀಪ ಬೆಳಗಿಸಿ  ಶ್ರೀ ದುರ್ಗಾ ಸಪ್ತಶತಿಯನ್ನು  ಪಠಿಸುವುದರಿಂದ ದೇವಿಯ ಆಶಿರ್ವಾದ ಲಭಿಸುತ್ತದೆ. ಜೊತೆಗೆ ಈ ದಿನ  ಬ್ರಹ್ಮಚಾರಿಣಿ ಮಂತ್ರವನ್ನು ತಪ್ಪದೇ ಈ ದಿನ ಓದಬೇಕು, ಆಗ ದೇವಿ ಸಂತುಷ್ಟಳಾಗಿ ನಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ ಇದೆ. ನವರಾತ್ರಿಯ ಎರಡನೇ ದಿನ ದೇವಿಗೆ ಬೆಳಿಗ್ಗೆ ಮತ್ತು ಸಂಜೆ ಎರಡೂ ಹೊತ್ತು ನೈವೇದ್ಯವನ್ನು ಅರ್ಪಿಸಿ ಆರತಿ ಮಾಡಬೇಕು.
 

Latest Videos
Follow Us:
Download App:
  • android
  • ios