ಈ ರಾಶಿಯ ಪುರುಷರಿಗೆ ಮಕ್ಕಳ ಭವಿಷ್ಯದ್ದೇ ಚಿಂತೆ, ಕನಸು!
ಇಲ್ಲಿರುವ ಕೆಲವು ಪುರುಷರು ಜೀವನದಲ್ಲಿ ಅವರು ಹೊಂದಿರಬಹುದಾದ ಮುಂದಿನ ಭವಿಷ್ಯದ ಮತ್ತು ಮಕ್ಕಳ ಬಗ್ಗೆ ಆಗಾಗ್ಗೆ ಹಗಲುಗನಸು ಮಾಡುತ್ತಾರೆ ಎಂದು ತಿಳಿದರೆ ಆಶ್ಚರ್ಯವಾಗಬಹುದು. ಇದೂ ಕೂಡಾ ಒಂದು ರೀತಿಯ ಫೋಬಿಯಾ ಅಂದರೆ ತಪ್ಪಾಗಲಾರದು. ಆದ್ದರಿಂದ, ರಾಶಿಚಕ್ರ ಚಿಹ್ನೆಗಳ ಪುರುಷರನ್ನು ಒಮ್ಮೆ ನೋಡಿ, ಸಂತೋಷದಿಂದ ಮಕ್ಕಳನ್ನು ಹೊಂದಲು ಮತ್ತು ಅವರು ತಮ್ಮ ಚಿಕ್ಕ ಮಕ್ಕಳೊಂದಿಗೆ ತಾವು ಹೇಗೆಲ್ಲಾ ಸಂತೋಷದ ದಿನಗಳನ್ನು ಕಳೆಯಬಹುದು, ಅವರ ಮುಂದಿನ ಜೀವನಕ್ಕೆ ತಾವು ಏನು ಮಾಡಬೇಕು ಎಂದು ಎದುರು ನೋಡುತ್ತಿರುವ ಎಲ್ಲಾ ವಿಷಯಗಳನ್ನು ಸಂತೋಷದಿಂದ ಊಹಿಸುತ್ತಾ ಕನಸು ಕಾಣುತ್ತಾರೆ.
ಜನರು ನಿದ್ರಿಸಿದಾಗ ಕನಸು ಕಾಣುವುದು ಒಂದು ಕಡೆಯಾದರೆ, ಮಲಗದೆಯೇ ಹಗಲು ಗನಸು ಕಾಣುವ ಜನರು ಇನ್ನೊಂದು ಕಡೆ. ಬಹಳಷ್ಟು ಜನರು, ತಮ್ಮ ಮುಂದಿನ ಜೀವನದ ಕುರಿತು ಹಲವಾರು ಕನಸುಗಳನ್ನು ಕಾಣುತ್ತಾರೆ. ಇಲ್ಲಿ ನೀಡಿರುವ ರಾಶಿ ನಕ್ಷತ್ರದ ಪುರುಷರು ಅವರ ಜೀವನದಲ್ಲಿ ಭವಿಷ್ಯದಲ್ಲಿ ಹೊಂದಬಹುದಾದ ಮಕ್ಕಳ ಕುರಿತಾಗಿ ಆಗಾಗ ಹಗಲುಗನಸು ಕಾಣುತ್ತಾರೆ.
ವೃಷಭ ರಾಶಿ (Taurus)
ಭೂಮಿಯ (Earth) ಚಿಹ್ನೆಯಾಗಿ, ವೃಷಭ ರಾಶಿಯು ಆಳವಾಗಿ ತಳಹದಿಯಾಗಿರುತ್ತದೆ ಅಂದರೆ, ಇವರು ತಾವು ಬೆಳೆದು ಬಂದಿರುವ ರೀತಿಯ ಬಗ್ಗೆ ಹೆಚ್ಚು ಗೌರವವನ್ನು (Respect) ಹೊಂದಿರುತ್ತಾರೆ ಹಾಗಾಗಿ ಆಗಾಗ್ಗೆ ತಮ್ಮ ಬೇರುಗಳಿಗೆ ಸಂಪರ್ಕವನ್ನು ಹೊಂದುತ್ತದೆ. ಆದ್ದರಿಂದ, ತಮ್ಮ ಸಂಗಾತಿಯ (Partner) ಜೊತೆಗೆ ತಮ್ಮ ತವರು ಮನೆಗೆ ಭೇಟಿ ನೀಡಿದರೆ, ಅವರು ಬಹುಶಃ ತಾವು ಬಾಲ್ಯದಲ್ಲಿ ಓದಿದ ಹೈಸ್ಕೂಲ್ ಅನ್ನು ತುಂಬಾ ಹೆಮ್ಮೆಯಾಗಿ ತೋರಿಸುತ್ತಾರೆ ಮತ್ತು ಅವರ ಭವಿಷ್ಯದ ಮಕ್ಕಳು ಸ್ವಲ್ಪ ದಿನ ಅಲ್ಲಿಗೆ ಹೋಗಬಹುದು ಎಂದು ಭಾವಿಸುತ್ತಾರೆ. ಅವರು ತಮ್ಮ ನೆರೆಹೊರೆಯಲ್ಲಿ ಮಾಡಿದ ಎಲ್ಲಾ ಕಿಡಿಗೇಡಿತನ ನೆನಪಿಸಿಕೊಳ್ಳುತ್ತಾರೆ ಮತ್ತು ಅವರು ತಮ್ಮ ಮಗುವನ್ನು (Child) ಅದೇ ರೀತಿಯಲ್ಲಿ ಬೆಳೆಸಲು ಬಯಸುತ್ತಾರೆ. ತಮ್ಮ ಈ ಬಯಕೆಯನ್ನು ಸಂಗಾತಿಯ ಬಳಿ ಬಹಿರಂಗಪಡಿಸುತ್ತರೆ.
ಇದನ್ನೂ ಓದಿ:Married Life ಚೆಂದವಾಗಿರಬೇಕೆಂದರೆ ಈ ಗುಟ್ಟನ್ನು ಅರ್ಥ ಮಾಡ್ಕೊಳ್ಳಿ!
ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಯ ಚಿಹ್ನೆಯಡಿಯಲ್ಲಿ ಜನಿಸಿದ ಪುರುಷರು ಸಾಮಾನ್ಯವಾಗಿ ಸಂಸಾರದ ಪ್ರವೃತ್ತಿಯನ್ನು ಹೊಂದಿರುತ್ತಾರೆ, ಆದರೆ ಸಂವೇದನಾಶೀಲ ಪುರುಷರು (Men) ತಮ್ಮ ಬಗ್ಗೆ ತಮ್ಮ ಕುಟುಂಬವು ಹೆಮ್ಮೆಪಡಬೇಕು, ಅಂತಹ ಕುಟುಂಬವನ್ನು (Family) ತಾವು ಹೊಂದಿರಬೇಕು ಎಂಬುದಾಗಿ ತಮ್ಮ ಜೀವನದ ಉದ್ದೇಶವನ್ನು ಕನಸು ಕಾಣುತ್ತಾರೆ. ಅವರು ಪ್ರೀತಿಯ ಸಂಬಂಧದಲ್ಲಿ ತಮ್ಮನ್ನು ಕಂಡುಕೊಂಡಾಗ, ಅವರು ಆಗಾಗ್ಗೆ ಭವಿಷ್ಯದ (Future) ಬಗ್ಗೆ ಯೋಚಿಸುತ್ತಾರೆ ಮತ್ತು ಅವರ ಸಂಭಾವ್ಯ ಸಂಗಾತಿಯು ತಮ್ಮ ಭವಿಷ್ಯದ ಮಕ್ಕಳಿಗೆ ತಮ್ಮ ಸ್ವಂತ ತಾಯಂದಿರಂತೆ (Mother) ಉತ್ತಮ ತಾಯಿಯಾಗಬಹುದೇ ಎಂದು ಆಶ್ಚರ್ಯ ಪಡುತ್ತಾರೆ. ಈ ನಕ್ಷತ್ರ ಚಿಹ್ನೆಯು ಅಮ್ಮನ ಮಗನಂತಹ ಪ್ರವೃತ್ತಿಯನ್ನು ಹೊಂದಿರುವುದು ಸಹ ಇದಕ್ಕೆ ಕಾರಣ. ಹೀಗೆ ತಮ್ಮ ಮಕ್ಕಳ ಕುರಿತಾಗಿ ಆಗಾಗ ಹಗಲು ಗನಸು ಕಾಣುತ್ತಲೇ ಇರುತ್ತಾರೆ.
ಇದನ್ನೂ ಓದಿ: Zodiac signs: ಸ್ವಾವಲಂಬಿ ಬದುಕು ನಡೆಸುವ ಮಹಿಳೆಯರು ಇವರು!
ಮೀನ ರಾಶಿ (Pisces)
ಮೀನ ರಾಶಿಯ ಜನರು ಹೆಚ್ಚು ಚಿಂತನಶೀಲ ವ್ಯಕ್ತಿಗಳಾಗಿರುತ್ತರೆ. ಅದಕ್ಕಾಗಿ ಅವರು ಪ್ರಸಿದ್ದಿ (Famous) ಹೊಂದಿರುತ್ತಾರೆ. ಏಕೆಂದರೆ ಈ ನೀರಿನ ಚಿಹ್ನೆಯಡಿಯಲ್ಲಿ ಜನಿಸಿದ ಪುರುಷರು ಅಸಾಧಾರಣ ಸಂಗಾತಿಯಾಗಿರುತ್ತಾರೆ, ಅವರು ತಮ್ಮ 20 ಮತ್ತು 30 ರ ದಶಕದಲ್ಲಿ ಸ್ನಾತಕೋತ್ತರ (PG) ಅಥವಾ ಯುವ ವಯಸ್ಕರಾದಾಗಲೂ (Youth) ಅವರು ತಂದೆಯಾಗಿ ಬದುಕುವ ಕುರಿತು ಸಾಕಷ್ಟು ತಯಾರಿ ನಡೆಸಿರುತ್ತಾರೆ. ಜೊತೆಗೆ ತಾವು ಒಬ್ಬ ಉತ್ತಮ ತಂದೆ ಆಗಬಹುದೇ ಅಥವಾ ಇಲ್ಲವೇ ಎಂಬ ಬಗ್ಗೆ ಚಿಂತಿಸುತ್ತಾರೆ. ಅವರು ಭುಜದ ಮೇಲೆ ಬೀಳುವ ಸಂಸಾರದ ಜವಾಬ್ದಾರಿ ನಿಭಾಯಿಸುವುದಕ್ಕೆ ಸಿದ್ಧರಾಗಿರಬೇಕು ಮತ್ತು ತಮ್ಮ ಸಾಮರ್ಥ್ಯವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು (Use) ಎಂಬುದಾಗಿ ಮೊದಲೇ ತಯಾರಾಗುತ್ತಾರೆ. ತಮ್ಮ ಭವಿಷ್ಯದಲ್ಲಿ ತಮ್ಮ ಮಕ್ಕಳ ಜೀವನ ಹೇಗಿರಬೇಕು ಎಂಬುದಾಗಿ ಆಗಾಗ ಹಗಲು ಗನಸು (Day dream) ಕಾಣುತ್ತಾರೆ.
ನಿಮ್ಮ ಸಂಗಾತಿಯು ಕೂಡ ಈ ರಾಶಿ ನಕ್ಷತ್ರಗಳ ಸಾಲಿನಲ್ಲಿ ಸೇರಿದ್ದರೆ ಅವರು ಒಳ್ಳೆಯ ತಂದೆ (Father) ಆಗುವುದರಲ್ಲಿ ತಮ್ಮ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾರೆ..